Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
Ugadi Horoscope 2023: ಮೇಷ ರಾಶಿ ಯುಗಾದಿ ಭವಿಷ್ಯ : ಮೇಷ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಜನವರಿ 1 ಕ್ಕೆ ಹೊಸ ವರ್ಷವನ್ನು ಆಚರಿಸಿಕೊಂಡರು ಕೂಡ ಭಾರತೀಯರಿಗೆ ಹೊಸ ವರುಷ ಆರಂಭವಾಗುವುದು ಯುಗಾದಿಯ ದಿನ. ಈ ಬಾರಿ ಮಾರ್ಚ್ 22 ರಂದು ದೇಶದಾದ್ಯಂತ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗ್ತಿದೆ. ಇನ್ನೂ ಈ ಯುಗಾದಿಯ ಹೊಸ ವರುಷಕ್ಕೆ ರಾಶಿಫಲಗಳನ್ನು ತಿಳಿಯುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ ಹಾಗೂ ಕೆಲವೊಂದು ರಾಶಿಗಳಿಗೆ ಈ ಬಾರಿ ಮಿಶ್ರಫಲವು ಇದೆ.

ಮೊದಲನೇಯದಾಗಿ ನಾವು ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳೋಣ. ಮೇಷ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ. ಯಾವ ಯಾವ ಗ್ರಹಗಳು ಮೇಷ ರಾಶಿಗೆ ಈ ವರ್ಷ ಫಲವನ್ನು ಕೊಡ್ತಿದೆ ಅನ್ನೋದನ್ನ ತಿಳಿದುಕೊಳ್ಳೋಣ.
ಮೇಷ ರಾಶಿ ಯುಗಾದಿ ಭವಿಷ್ಯ
ರಾಹು :
ಮೇಷ ರಾಶಿಗೆ ಏಪ್ರಿಲ್ 22 ರಂದು ಗುರು ಬರುತ್ತಾನೆ ಹಾಗೂ ವರ್ಷಪೂರ್ತಿ ಗುರು ಮೇಷದಲ್ಲೇ ಸ್ಥಿತನಾಗಿರುತ್ತಾನೆ. ರಾಹು ಈಗಾಗಗಲೇ ಮೇಷದಲ್ಲೇ ಸ್ಥಿತನಾಗಿದ್ದಾನೆ. ರಾಹು ಅಕ್ಟೋಬರ್ 29 ಕ್ಕೆ ಮೀನರಾಶಿಗೆ ತಾತ್ಕಾಲಿಕವಾಗಿ ಪ್ರವೇಶ ಮಾಡುತ್ತಾನೆ. ಆದರೆ ಅವನು ಸಂಪೂರ್ಣವಾಗಿ ರಾಹು ಮೀನರಾಶಿ ಹೋಗುವಂತಹದ್ದು ನವೆಂಬರ್ 29 ನೇ ತಾರೀಕಿನಂದು. ನವೆಂಬರ್ 29 ರವರೆಗೂ ರಾಹುವಿನ ಪ್ರಭಾವ ಮೇಷರಾಶಿಯ ಮೇಲೆ ಇರುತ್ತದೆ.
ಕೇತು :
ಕೇತು ನವೆಂಬರ್ 29 ರಂದು ಕನ್ಯಾ ರಾಶಿಗೆ ತೆರಳುತ್ತಾನೆ. ಅಕ್ಟೋಬರ್ 29 ಕ್ಕೆ ತಾತ್ಕಾಲಿಕವಾಗಿ ಕನ್ಯಾರಾಶಿಗೆ ತೆರಳುತ್ತಾನೆ. ಆದರೆ ನವೆಂಬರ್ 29 ರ ನಂತರವೇ ಶಾಶ್ವತವಾಗಿ ಕನ್ಯಾರಾಶಿಗೆ ತೆರಳುತ್ತಾನೆ. ನವೆಂಬರ್ 29 ರವರೆಗೆ ತುಲಾರಾಶಿಯ ಮೇಲೆ ಕೇತು ಸಂಚಾರ ಮಾಡುತ್ತಾನೆ.
ಶನಿ :
ಶನಿಯು ಕುಂಭರಾಶಿಯಲ್ಲಿ ಈ ವರ್ಷ ಸ್ಥಿತನಾಗಿರುತ್ತಾನೆ. ಆದ್ದರಿಂದ ಕುಂಭರಾಶಿಯ ಫಲವನ್ನೇ ಶನೇಶ್ವರ ಕೊಡುತ್ತಾನೆ. ಹಾಗಾದ್ರೆ ಈ ನಾಲ್ಕು ಗ್ರಹಗಳಿಂದ ಯಾವ ರೀತಿ ಫಲಗಳಿದೆ ಅನ್ನೋದನ್ನ ನೋಡೋಣ.
ಮೇಷ ರಾಶಿಯವರಿಗೆ ಗುರು ಚಾಂಡಾಲ ಯೋಗ
ಮೇಷ ರಾಶಿಯಲ್ಲಿ ಗುರು ಹಾಗೂ ರಾಹು ಇರೋದ್ರಿಂದ ಮೇಷ ರಾಶಿಯವರಿಗೆ ಗುರು ಚಾಂಡಾಲ ಯೋಗ ಇರುತ್ತದೆ. ಇಷ್ಟು ದಿನ ಗುರುವಿನಿಂದ ಯಾವುದೇ ರೀತಿ ಫಲ ಧಕ್ಕಿರಲಿಲ್ಲ. ಯಾಕಂದ್ರೆ ಗುರು ವ್ಯಯದಲ್ಲಿ ಕುತ್ತಿದ್ದ. ಈಗ ನಿಮ್ಮ ರಾಶಿ ಪ್ರವೇಶ ಮಾಡುತ್ತಿರೋದ್ರಿಂದ ಶುಭ ಫಲವನ್ನೇ ನೀಡುತ್ತಾನೆ. ಗುರುವು ರಾಹುವಿನ ನಿಯಂತ್ರಣದಲ್ಲಿರುವುದರಿಂದ ಸಂಪೂರ್ಣವಾಗಿ ಶುಭ ಫಲ ಕೊಡದಿದ್ದರೂ ತಕ್ಕ ಮಟ್ಟಿಗೆ ಒಳ್ಳೆಯ ಫಲ ನೀಡುತ್ತಾನೆ. 2022ಕ್ಕಿಂತಲೂ 2023 ಮೇಷರಾಶಿಯವರಿಗೆ ಉತ್ತಮವಾಗಿರಲಿದೆ.
ಆರ್ಥಿಕ ಸಮಸ್ಯೆ ನಿವಾರಣೆ
ಮೇಷರಾಶಿಯವರಿಗೆ ಯುಗಾದಿಯ ನಂತರ ಗುರುವಿನ ಅನುಗ್ರಹ ನಿಮ್ಮ ಮೇಲಿರುತ್ತದೆ. ಹೀಗಾಗಿ ಇಷ್ಟುದಿನ ಇದ್ದ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿದೆ. ನೀವು ಇದುವರೆಗೂ ಕಳೆದುಕೊಂಡ ಹಣ ಮರಳಿ ಬರುವ ಸಾಧ್ಯತೆಗಳಿದೆ. ಈ ಬಾರಿ ನಿಮ್ಮ ಅದೃಷ್ಟ ಚೆನ್ನಾಗಿರಲಿದೆ. ಇಷ್ಟು ದಿನ ಎಷ್ಟು ಕೆಲಸ ಮಾಡಿದ್ರೆ ಯಾವುದೇ ಫಲ ಸಿಗ್ತಿಲ್ಲ ಅನ್ನೋ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ಇನ್ನು ಮುಂದಿನ ದಿನಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಭಾಗ್ಯಸ್ಥಾನಕ್ಕೆ ಗುರುವಿನ ದೃಷ್ಟಿ ಇರೋದ್ರಿಂದ ಮೇಷ ರಾಶಿಯವರಿಗೆ ಯುಗಾದಿ ನಂತರ ಎಲ್ಲವೂ ಒಳ್ಳೆಯದಾಗಲಿದೆ.
ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಶುಭಫಲ
ಈ ಬಾರಿಯ ಯುಗಾದಿಯ ನಂತರ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಅದೃಷ್ಟ ಒಲಿದು ಬರಲಿದೆ. ಗುರು ನಿಮ್ಮ ರಾಶಿಗೆ ಕಾಲಿಟ್ಟಿರೋದ್ರಿಂದ ನಿಮ್ಮ ಹಣ ನಿಮಗೆ ವಾಪಾಸ್ಸ್ ಬರಲಿದೆ. ನಿಮ್ಮ ಹೂಡಿಕೆಯ ಲಾಭ ಖಂಡಿತ ನಿಮಗೆ ಧಕ್ಕಲಿದೆ. ನಿಮ್ಮ ನಿರೀಕ್ಷೆಗಿಂತ ಕಡಿಮೆ ಲಾಭವನ್ನು ನೀವು ಪಡೆಯುತ್ತೀರಿ. ಆದರೆ ಬಂದ ಹಣ ಖಂಡಿತ ನಿಮಗೆ ತೃಪ್ತಿ ಪಡಿಸುತ್ತದೆ.
ಉದ್ಯೋಗಸ್ಥರ ಭವಿಷ್ಯ ಹೇಗಿದೆ?
ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅತೀ ಹೆಚ್ಚಿನ ಕೆಲಸ, ಒತ್ತಡವು ಈ ಯುಗಾದಿಯ ನಂತರ ಕಡಿಮೆ ಆಗಲಿದೆ. ಜೀವನದಲ್ಲಿ ಕೊಂಚ ನೆಮ್ಮದಿಯನ್ನು ಕಾಣುತ್ತೀರಿ.
ಬ್ರಹ್ಮಚಾರಿಗಳಿಗೆ ವಿವಾಹ ಭ್ಯಾಗ್ಯ
ಮೇಷರಾಶಿಯವರಿಗೆ ಯುಗಾದಿ ನಂತರ ಗುರು ಬಲ ಚೆನ್ನಾಗಿ ಇರುವುದರಿಂದ ಬ್ರಹ್ಮಚಾರಿಗಳಿಗೆ ಕಂಕಣ ಭಾಗ್ಯವಿದೆ. ಇನ್ನೂ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ. ಮೇಷರಾಶಿಯವರಿಗೆ ನವೆಂಬರ್ ನಂತರ ಮತ್ತಷ್ಟು ಶುಭಫಲಗಳಿದೆ. ಪೂಜೆ, ಹೋಮ, ಹವನಗಳು ಮನೆಯಲ್ಲಿ ನೆರವೇರುತ್ತದೆ. ಹಾಗೂ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯವಿದೆ.
ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ
ಮೇಷ ರಾಶಿಯವರು ವಿದ್ಯಾಭ್ಯಾಸಕ್ಕೆ ಉತ್ತಮ ಕಾಲ. ಗುರು ಬಂದಿರೋದ್ರಿಂದ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ಆಸಕ್ತಿ ಹೆಚ್ಚಾಗುತ್ತದೆ. ಯಾರೆಲ್ಲಾ ಉನ್ನತ ವ್ಯಾಸಂಗ ಮಾಡಬೇಕು ಅಂದುಕೊಂಡಿದ್ದೀರಿ ಅವರಿಗೆಲ್ಲಾ ಒಳ್ಳೆಯದಾಗಲಿದೆ. ಉನ್ನತ ವ್ಯಾಸಂಗಕ್ಕೆ ಇದು ನಿಮಗೆ ಉತ್ತಮ ಕಾಲ. ನಿಮಗೆ ಅವಕಾಶಗಳ ಜೊತೆಗೆ ಕಲಿಯಲು ಬೇಕಾದ ಒಳ್ಳೆಯ ಸೌಕರ್ಯಗಳು ಕೂಡ ಸಿಗಲಿದೆ. ಹೆಚ್ಚಿನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೂ ತೆರಳುವ ಅವಕಾಶಗಳು ಹೆಚ್ಚಿದೆ.
ಮನೆ ಕಟ್ಟಲು ಶುಭಕಾಲ
ಮೇಷರಾಶಿಯವರು ಮನೆ ಕಟ್ಟಬೇಕು, ಸೈಟ್, ಕಾರು ತಗೋಬೇಕು ಅಂತ ಅಂದುಕೊಂಡಿದ್ದರೆ ಖಂಡಿತ ಈ ಯುಗಾದಿಯ ನಂತರ ಈ ಶುಭಕಾರ್ಯ ಮಾಡಬಹುದು. ನೀವು ಅಂದುಕೊಂಡ ಎಲ್ಲಾ ಕಾರ್ಯಗಳು ಆಗಲಿದೆ. ಏನೇ ಕೆಲಸ ಮಾಡಬೇಕು ಅಂದುಕೊಂಡಿದ್ದರೆ ಈ ವರ್ಷದೊಳಗೆ ಮುಗಿಸಿಕೊಳ್ಳಿ. ಸಾಲದ ಬಾಧೆ ನಿವಾರಣೆಯಾಗಲಿದೆ. ಕಳೆದು ಹೋದ ನೆಮ್ಮದಿ, ಶಾಂತಿ ಮತ್ತೆ ನೀವು ಕಂಡುಕೊಳ್ಳುತ್ತಿರಿ. ಸಂಗಾತಿಯೊಂದಿಗಿನ, ಸಂಬಂಧಿಕರೊಂದಿಗಿನ ಮನಸ್ತಾಪ ಎಲ್ಲವೂ ಕೂಡ ಸರಿ ಹೋಗಲಿದೆ. ಮತ್ತೆ ಜೀವನದಲ್ಲಿ ಸುಖ ಕಾಣುತ್ತೀರಿ.
ಒಟ್ಟಿನಲ್ಲಿ ಈ ವರ್ಷದ ಯುಗಾದಿ ಮೇಷ ರಾಶಿಯವರಿಗೆ ಸಂಪೂರ್ಣ ಶುಭಫಲವನ್ನೇ ನೀಡಲಿದೆ. ಈ ವರ್ಷಪೂರ್ತಿ ಸಂತೋಷವಾಗಿ ಇರಬಹುದು.



Click it and Unblock the Notifications