Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಬಂಧದ ವಿಚಾರದಲ್ಲಿ ಮೀನ ರಾಶಿಯ ಬಗ್ಗೆ ನೀವು ತಿಳಿಯಲೇಬೇಕಾದ ಸತ್ಯಗಳಿವು
ಪ್ರತಿಯೊಂದು ರಾಶಿಯು ವಿಭಿನ್ನ ಗುಣ, ಸ್ವಭಾವ, ವರ್ತನೆಗಳನ್ನು ಹೊಂದಿರುತ್ತದೆ. ಎಲ್ಲ ರಾಶಿಯವರು ಎಲ್ಲ ವಿಚಾರಗಳಲ್ಲೂ ಒಳ್ಳೆತನಗಳನ್ನೇ ಹೊಂದಿರುವುದಿಲ್ಲ, ಹಾಗೆಂದು ಕೆಟ್ಟವರು ಸಹ ಅಲ್ಲ. ಎಲ್ಲದರ ಮಿಶ್ರಣ ಆಗಿರುತ್ತದೆ.
ಇನ್ನು ಮೀನ ರಾಶಿಯವರ ವಿಚಾರಕ್ಕೆ ಬಂದರೆ ಇವರು ಸಾಕಷ್ಟು ವಿಚಾರಗಳಲ್ಲಿ ಮೃದು ಸ್ವಭಾವದವರು, ಭಾವನಾತ್ಮಕರು, ಪ್ರೀತಿಯನ್ನು ಆರಾಧಿಸುವವರು ಹೀಗೆ ಹಲವು ಸಕಾರಾತ್ಮಕ ವಿಚಾರಗಳಿವೆ. ಇವರಲ್ಲೂ ನಕಾರಾತ್ಮಕ ವಿಷಯಗಳು ಇದ್ದರೂ ನಾವಿಂದು ಮೀನ ರಾಶಿಯವರು ಸಂಬಂಧವನ್ನು ಹೇಗೆ ಸ್ವೀಕರಿಸುತ್ತಾರೆ, ಯಾವ ಯಾವ ಪಾತ್ರಗಳಲ್ಲಿ ಹೇಗೇ ವರ್ತಿಸುತ್ತಾರೆ ಹಾಗೂ ನಿಭಾಯಿಸುತ್ತಾರೆ, ಯಾವುದರಲ್ಲಿ ಉತ್ತ, ಯಾವುದರಲ್ಲಿ ಅತ್ಯುತ್ತಮ ಎಂಬುದನ್ನು ಮುಂದೆ ತಿಳಿಯೋಣ:

ಮೀನ ರಾಶಿಯ ಮಕ್ಕಳು ಬಹಳ ಸೃಜನಶೀಲರು
ಮೀನ ರಾಶಿಯ ಮಕ್ಕಳು ಅದ್ಭುತವಾದ ಸೃಜನಶೀಲ ಕಲ್ಪನೆಯನ್ನು ಹೊಂದಿದ್ದು ಅದು ಅವರ ಜೀವನವನ್ನು ಇನ್ನಷ್ಟು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಹಾಗೆಯೇ, ನಿಮ್ಮ ಪುಟ್ಟ ಮಗುವನ್ನು ವಯಸ್ಸಿಗಿಂತ ಮಿಗುಲಾಗಿ ಕೆಲಸ ಮಾಡುವುದು, ಚಿಂತಿಸುವುದನ್ನು ಕಂಡು ಆಶ್ಚರ್ಯಪಡಬೇಡಿ! ಅವರು ತರ್ಕಕ್ಕಿಂತ ಹೆಚ್ಚಾಗಿ ತಮ್ಮ ಪ್ರವೃತ್ತಿಯೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಅಲ್ಲದೆ ನಿಜವಾದ ವಾಸ್ತವಕ್ಕಿಂತ ಅವರ ಕನಸುಗಳು ಅಥವಾ ಕಲ್ಪನೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಲ್ಲದೆ, ಮೀನ ರಾಶಿಯ ಮಕ್ಕಳು ಆಟದ ಮೈದಾನದಲ್ಲಿ ಅಥವಾ ಶಾಲೆಯಲ್ಲಿ ಒಳ್ಳೆಯವರಾಗಿರುತ್ತಾರೆ. ಯಾವಾಗಲೂ ನೊಂದ ಹಾಗೂ ಹಿಂಸೆಗೆ ಒಳಗಾಗುವ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವವರ ಬಗ್ಗೆ ಕಾಳಜಿ ವಹಿಸುತ್ತಾರೆ. ಇದು ಮೀನ ರಾಶಿಯ ಮಕ್ಕಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಗುಣವಾಗಿದೆ.

ಮೀನ ರಾಶಿಯವರು ಅದ್ಭುತ ಪ್ರೇಮಿ
ಪ್ರೀತಿಯ ವಿಚಾರದಲ್ಲಿ ಮೀನ ರಾಶಿಯವರು ಇತರೆ ರಾಶಿಚಕ್ರಗಳಿಗಿಂತ ಅತ್ಯಂತ ಭಾವನಾತ್ಮಕರು. ಅತ್ಯಂತ ಅರ್ಥಗರ್ಭಿತ ಮತ್ತು ಸೂಕ್ಷ್ಮಮತಿಗಳು. ಅವರು ಪ್ರಣಯ ಪ್ರೀತಿಯನ್ನು ಬಯಸುತ್ತಾರೆ ಮತ್ತು ಅವರಿಗೆ ಅವರನ್ನು ಅರ್ಥಮಾಡಿಕೊಳ್ಳಬಲ್ಲ, ಹೆಚ್ಚು ಪ್ರೀತಿಯನ್ನು ನೀಡುವ ಆತ್ಮ ಸಂಗಾತಿಯ ಅಗತ್ಯವಿದೆ. ಮೀನ ರಾಶಿಯವರ ಆಳವಾದ ಪ್ರೀತಿ ಮತ್ತು ಸಹಾನುಭೂತಿಯು ವಿಶೇಷವಾದ ಬಂಧವನ್ನು ಉಂಟುಮಾಡುತ್ತದೆ.
ಮೀನ ರಾಶಿಯವರೊಂದಿಗಿನ ಪ್ರೇಮ ಜೀವನವು ರೋಲರ್-ಕೋಸ್ಟರ್ ಸವಾರಿಯಾಗಿದ್ದು ಅದು ನಿಮಗೆ ಭಾವನೆಗಳ ಶ್ರೇಣಿಯನ್ನು ಅನುಭವಿಸುವಂತೆ ಮಾಡುತ್ತದೆ ಮತ್ತು ಉತ್ತಮ ಮತ್ತು ಹೆಚ್ಚು ಪ್ರಾಮಾಣಿಕ ವ್ಯಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.

ಸ್ನೇಹಿತರಾಗಿ ಮೀನ ರಾಶಿಯವರು
ಮೀನ ರಾಶಿಯ ಸ್ನೇಹಿತರನ್ನು ಹೊಂದಿರುವವರು ನಿಜಕ್ಕೂಅದೃಷ್ಟವಂತರು ಎನ್ನಬಹುದು. ಮೀನ ರಾಶಿಯವರು ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ ಮತ್ತು ಸೂಕ್ಷ್ಮವಾಗಿರುತ್ತಾರೆ. ತಮ್ಮ ಸ್ನೇಹಿತರಿಗೆ ಅಗತ್ಯವಿದ್ದಾಗ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ನೊಂದ ಸ್ನೇಹಿತರಿಗೆ ಮೀನ ರಾಶಿಯವರು ಸದಾ ಜತೆಗಿರುತ್ತಾರೆ. ಅವರು ಅಳಲು ಭುಜದ ಅಗತ್ಯವಿದ್ದಾಗ ಅವರ ಸ್ನೇಹಿತರು ಕರೆ ಮಾಡುವ ವ್ಯಕ್ತಿ. ಅನೇಕ ಮೀನ ರಾಶಿಗಳು ಅಂತರ್ಮುಖಿಗಳಾಗಿದ್ದರೂ, ಅವರು ಸಾಮಾಜಿಕ ಕೂಟಗಳನ್ನು ಇಷ್ಟಪಡುತ್ತಾರೆ. ಅವರು ನಿಮ್ಮ ಸ್ನೇಹಿತರ ವಲಯದಲ್ಲಿ ಅತ್ಯಂತ ಬಹಿರ್ಮುಖ ವ್ಯಕ್ತಿಯಾಗದಿರಬಹುದು, ಆದರೆ ನೀವು ಅವರ ಅಭಿಪ್ರಾಯವನ್ನು ಕೇಳಿದರೆ ಅವರ ಅನನ್ಯ ದೃಷ್ಟಿಕೋನದಿಂದ ನೀವು ಆಶ್ಚರ್ಯಚಕಿತರಾಗುವಿರಿ.

ಮೀನ ರಾಶಿಯ ವಾತ್ಸಲ್ಯಯುತ ತಾಯಿ, ಕಾಳಜಿಯ ತಂದೆ
ಮೀನ ರಾಶಿಯವರು ತುಂಬಾ ಶ್ರದ್ಧೆ, ಅವರು ತಮ್ಮ ಕಾಳಜಿಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯ ಅಪ್ಪಂದಿರು ತಮ್ಮ ಭಾವನಾತ್ಮಕತೆಯನ್ನು ತೋರಿಸಲು ಹೆದರುವುದಿಲ್ಲ. ಅವರು ಪ್ರಾಯೋಗಿಕರಾಗಿದ್ದಾರೆ ಮತ್ತು ತಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೆಮ್ಮೆ ಪಡುತ್ತಾರೆ.
ಮೀನ ರಾಶಿಯ ತಾಯಿ ಚಿನ್ನದ ಹೃದಯ ಹೊಂದಿರುವ ಸೂಕ್ಷ್ಮ ಮತ್ತು ಎಲ್ಲವನ್ನು ಅರ್ಥಮಾಡಿಕೊಳ್ಳುವ ತಾಯಿ. ಅವಳು ತನ್ನ ಮಗುವನ್ನು ಪ್ರೇರೇಪಿಸಲು, ಸ್ಫೂರ್ತಿ ನೀಡಲು ಮತ್ತು ಪೋಷಿಸಲು ತನ್ನ ತಾಯಿಯ ಗುಣಗಳನ್ನು ರೂಪಿಸಬಹುದು. ಮೀನ ರಾಶಿಯವರು ಶ್ರೇಷ್ಠ ತಾಯಂದಿರು, ತಮ್ಮ ಮಕ್ಕಳು ಬೆಳೆಯುತ್ತಿರುವಾಗ ಅವರಿಗೆ ಬೇಕಾದ ಎಲ್ಲಾ ಪ್ರೀತಿಯನ್ನು ನೀಡುತ್ತಾರೆ.



Click it and Unblock the Notifications