Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಾಶಿವರಾತ್ರಿ ದಿನ ರೂಪಗೊಂಡಿದೆ ಶನಿ ಪ್ರದೋಷ ಸರ್ವಾರ್ಥ ಸಿದ್ಧಿ ಯೋಗ: ಇದರ ಮಹತ್ವವೇನು?
ಫೆಬ್ರವರಿ 18ಕ್ಕೆ ಮಹಾಶಿವರಾತ್ರಿ ಆಚರಿಸಲಾಗುವುದು. ವರ್ಷದಲ್ಲಿ 12 ಶಿವರಾತ್ರಿ ಇದ್ದರೂ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುವುದು. ಈ ದಿನ ಶಿವ ಭಕ್ತರು ಶಿವನಾಮ ಜಪಿಸುತ್ತಾ ಕಾಲ ಕಳೆಯುತ್ತಾರೆ. ಈ ವರ್ಷದ ಮಹಾಶಿವರಾತ್ರಿ ಮತ್ತಷ್ಟು ವೊಶೇಷವಾಗಿದೆ, ಕಾರಣ ಪ್ರದೋಷ ವ್ರತವೂ ಅದೇ ಇದೆ.

ಪ್ರದೋಷ ವ್ರತ ಶಿವನ ಪೂಜೆಗೆ ಮೀಸಲಾದ ದಿನವಾಗಿದೆ. ಈ ದಿನ ಶಿವಪೂಜೆ ಮಾಡಿದರೆ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು, ಈ ವಿಶೇಷ ದಿನದಂದೇ ಮಹಾಶಿವರಾತ್ರಿ ಬಂದಿರುವುದರಿಂದ ಈ ದಿನ ನೀವು ಮಾಡಿದ ಪೂಜೆಗೆ ಹೆಚ್ಚಿನ ಫಲ ಸಿಗಲಿದೆ. ಇನ್ನು ಈ ವರ್ಷ ಮಹಾಶಿವರಾತ್ರಿಯಂದು ಸರ್ವಾರ್ಥಸಿದ್ಧಿ ಯೋಗ ಕೂಡ ಇದೆ.
ಇನ್ನು ಶನಿವಾರ ಬಂದಿರುವುದರಿಂದ ಈ ದಿನ ಶಿವನ ಆರಾಧನೆ ಜೊತೆಗೆ ಶನಿಯನ್ನು ಕೂಡ ಆರಾಧಿಸಿದರೆ ಒಳ್ಳೆಯದು, ಈ ದಿನದ ವಿಶೇಷತೆ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ:

ಶನಿ ಪ್ರದೋಷ ವ್ರತ ಪೂಜೆ ಯಾವಾಗ?
ಫೆಬ್ರವರಿ 18 ರಂದು ಸಂಜೆ 06.21 ರಿಂದ 8.02 ರವರೆಗೆ ಶನಿ ಪ್ರದೋಷ ವ್ರತ ಪೂಜೆ ನೆರವೇರಲಿದೆ. ಅದೇ ದಿನ ಫೆ.18ರ ಸಂಜೆ 05.42ರಿಂದ ಫೆ.19ರ ಬೆಳಗ್ಗೆ 7ರವರೆಗೆ ಸರ್ವಾರ್ಥಸಿದ್ಧಿ ಯೋಗವಿದೆ.

ಸರ್ವಾರ್ಥಸಿದ್ಧಿ ಯೋಗ ಎಂದರೇನು?
ಕೆಲವು ನಕ್ಷತ್ರಗಳು ಜೊತೆಗೆ ಸೇರಿದಾಗ ಸರ್ವಾರ್ಥಸಿದ್ಧಿ ಯೋಗ ಏರ್ಪಡುವುದು. ಸರ್ವಾರ್ಥಸಿದ್ದಿ ಯೋಗ ಯಾವುದೇ ಹೊಸ ಕೆಲಸ ಪ್ರಾರಂಭಿಸಲು ತುಂಬಾನೇ ಶುಭ ಎಂದು ಹೇಳಲಾಗುವುದು. ಸರ್ವಾರ್ಥಸಿದ್ಧಿ ಯೋಗದಲ್ಲಿ ಪ್ರಾರಂಭಿಸಿದ ಕೆಲಸದಲ್ಲಿ ಯಶಸ್ಸು ಗಳಿಸುತ್ತೇವೆ, ಆರ್ಥಿಕ ಲಾಭ ಗಳಿಸುತ್ತೇವೆ. ನೀವು ಹೊಸ ಉದ್ಯಮ ಅಥವಾ ವ್ಯಾಪಾರ ಮಾಡುವುದಾದರೆ ಈ ಶುಭ ಮುಹೂರ್ತದಲ್ಲಿ ಮಾಡಿದರೆ ತುಂಬ ಒಳ್ಳೆಯದು.

ಶನಿವಾರ ಮತ್ತು ಮಂಗಳವಾರ ಸರ್ವಾರ್ಥ ಸಿದ್ಧಿ ಯೋಗ ಬಂದರೆ
ಇನ್ನು ಸರ್ವಾರ್ಥ ಸಿದ್ಧಿ ಯೋಗ ಇದ್ದರೂ ಮಂಗಳವಾರ ಮತ್ತು ಶನಿವಾರ ಕೆಲವೊಂದು ವಸ್ತುಗಳನ್ನು ಖರೀದಿಸಲು ಯೋಗ್ಯವಲ್ಲ
* ಮಂಗಳವಾರ ಹೊಸ ಗಾಡಿ ಖರೀದಿಸಬಾರದು
* ಶನಿವಾರ ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು.

ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಅಪರೂಪದ ಸಂಯೋಜನೆ
ಶನಿವಾರದಂದು ಬರುವ ಮಹಾಶಿವರಾತ್ರಿಯಂದು, ಶನಿ ಗ್ರಹವು ಕುಂಭ ರಾಶಿಯಲ್ಲಿ ಕುಳಿತಿದೆ. ಫೆಬ್ರವರಿ 13 ಸೋಮವಾರದಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಹಾಶಿವರಾತ್ರಿಯಂದು ಕುಂಭ ರಾಶಿಯಲ್ಲಿ ತಂದೆ ಸೂರ್ಯ ಮತ್ತು ಮಗ ಶನಿ ಒಟ್ಟಿಗೆ ಇರುತ್ತಾರೆ. ಕುಂಭ ರಾಶಿಯಲ್ಲಿ ತಂದೆ ಮಗ ಕುಳಿತಿರುವುದು ಕಾಕತಾಳೀಯವಾಗಿದೆ.
ಶನಿ ದೋಷ ಅಥವಾ ಜೀವನದಲ್ಲಿ ತುಂಬಾ ಕಷ್ಟ ಇದ್ದರೆ ಅದರ ನಿವಾರಣೆ ಈ ಪವಿತ್ರ ದಿನದಂದು ಹೀಗೆ ಮಾಡಿದರೆ ಮಂಗಳಕರ ಫಲವನ್ನು ಪಡೆಯುವಿರಿ.

ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ
ಶಿವರಾತ್ರಿಯಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ, ಅಭಿಷೇಕಕ್ಕೆ ಬಳಸುವ ನೀರಿಗೆ ಸ್ವಲ್ಪ ಕಪ್ಪು ಎಳ್ಳು ಹಾಕಿ ಅಭಿಷೇಕ ಮಾಡಿ. ಜಲಾಭಿಷೇಕ ಮಾಡುವಾಗ 'ಓಂ ನಮಃ ಶಿವಾಯ' ಎಂದು ಜಪಿಸುತ್ತಾ ಇರಿ, ಹೀಗೆ ಮಾಡಿದರೆ ಶಿವನ ಕೃಪೆಯಿಂದಾಗಿ ಶನಿದೋಷದಿಂದ ಸ್ವಲ್ಪ ಪರಿಹಾರ ಸಿಗುವುದು.
ಶನಿಯ ಕೆಟ್ಟ ದೃಷ್ಟಿಯಿಂದ ರಕ್ಷಣ ಪಡೆಯಲು
ಶನಿವಾರ ಶಿವರಾತ್ರಿಯನ್ನು ಶಿವ ಹಾಗೂ ಶನಿಯ ಆರಾಧನೆ ಮಾಡಿ. ಈ ದಿನ ಒಂದು ಪಾತ್ರೆ ಅಥವಾ ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿ ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ, ಆ ಎಣ್ಣೆಯನ್ನು ಶನಿ ದೇವಸ್ಥಾನದಲ್ಲಿ ಇಟ್ಟು ಬನ್ನಿ. ಸಂಜೆ ಕಪ್ಪು ನಾಯಿಗೆ ಆಹಾರ ಹಾಕಿ, ಹೀಗೆ ಮಾಡುವುದರಿಂದ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯಾ ದೋಷದ ಕಠಿಣತೆ ಕಡಿಮೆ ಮಾಡಿಕೊಳ್ಳಬಹುದು.
ಇತರ ಪರಿಹಾರಗಳು
* ಈ ದಿನ ನಿರ್ಗತಿಕರಿಗೆ ದಾನ ಮಾಡಿ.
* ಎಳ್ಳು, ಸಾಸಿವೆಯೆಣ್ಣೆ, ಕಪ್ಪು ಕಂಬಳಿ ಇವುಗಳನ್ನು ದಾನ ಮಾಡಿ.
ಶಿವರಾತ್ರಿಯಂದು ಈ ಮಂತ್ರಗಳನ್ನು ಪಠಿಸಿ
ಓಂ ನಮಃ ಶಿವಾಯ
ಓಂ ನಮೋ ಭಗವತೇ ರುದ್ರಾಯ
ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||



Click it and Unblock the Notifications
