For Quick Alerts
ALLOW NOTIFICATIONS  
For Daily Alerts

ಬ್ಲಾಸ್ಟಿಕ್ ಬಾಟಲಿನಿಂದ ನಿರ್ಮಿತವಾದ ಮನೆ: ಭೂಕಂಪಕ್ಕೂ ಬಗ್ಗಲ್ಲ ಈ ಮನೆ

|

ನೀರು, ಜ್ಯೂಸ್‌ ತಂದ ಪ್ಲಾಸ್ಟಿಕ್‌ ಬಾಟಲಿಗಳು ನಂತರ ಸೇರುವುದು ಕಸದ ಬುಟ್ಟಿಯನ್ನು. ಹೀಗೆ ದಿನನಿತ್ಯ ಕಸದ ಬುಟ್ಟಿ ಸೇರುವ ಪ್ಲಾಸ್ಟಿಕ್‌ಗಳ ಸಂಖ್ಯೆ ಲಕ್ಷಕ್ಕೂ ಮಿಗಿಲು. ಕಸದಿಂದ ರಸ ಎಂಬಂತೆ ನೈಜೀರಿಯದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದಲೇ ಸುಂದರವಾದ ಮನೆಯನ್ನು ಕಟ್ಟಲಾಗಿದೆ. ಇದೀಗ ಅವರು ಕಟ್ಟಿರುವ ಪ್ಲಾಸ್ಟಿಕ್ ಮನೆ ವಿಶ್ವದ ಗಮನವನ್ನುಸೆಳೆದಿದೆ ಅಷ್ಟು ಮಾತ್ರವಲ್ಲ ಭೂಕಂಪನವಾದರೂ ಈ ಮನೆ ಏನೂ ಆಗಲ್ವಂತೆ. ಈ ಪ್ಲಾಸ್ಟಿಕ್‌ ಮನೆಯ ಕುರಿತು ಒಂದಿಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ:

ಬಾಟಲ್‌ ಬ್ರಿಕ್ ಟೆಕ್ನಾಲಾಜಿ ಬಳಸಿ ಕಟ್ಟಲಾಗುತ್ತಿರುವ ಮನೆ

ಬಾಟಲ್‌ ಬ್ರಿಕ್ ಟೆಕ್ನಾಲಾಜಿ ಬಳಸಿ ಕಟ್ಟಲಾಗುತ್ತಿರುವ ಮನೆ

ಟಲ್‌ ಬ್ರಿಕ್‌ ಟೆಕ್ನಾಲಾಜಿ ಬಳಸಿ ಕಟ್ಟಿರುವ ಮನೆ ಪ್ರವಾಸಿಗರನ್ನು ಸೆಳೆಯುತ್ತಿದ್ದು ಅಲ್ಲಿ ಇದೇ ರೀತಿಯ ಮನೆಗಳು ನಿರ್ಮಾಣವಾಗುತ್ತಿವೆ.

ಬಾಟಲಿನಿಂದಲೇ ನಿರ್ಮಾಣ ಮಾಡಿರುವ ಮನೆಯನ್ನು ನೋಡಲು ತುಂಬಾ ಪ್ರವಾಸಿಗರು ಬರುತ್ತಿದ್ದಾರೆ. ನೈಜೀರಿಯ ಸರ್ಕಾರದ ಅನೇಕ ಆಫೀಸರ್‌ಗಳು ಕೂಡ ಈ ಮನೆಯನ್ನು ಬಂದು ನೋಡಿ ಹೋಗಿ ಈ ಮನೆಯ ಅಂದ ಚೆಂದ ಹೊಗಳಿದ್ದಾರೆ.

ಪ್ಲಾಸ್ಟಿಕ್ ಬಾಟಲಿ ಬಳಸ ಕಟ್ಟಲಾದ ಮನೆಯ ವಿನ್ಯಾಸ ಆಕರ್ಷಕವಾಗಿದೆ

ಪ್ಲಾಸ್ಟಿಕ್ ಬಾಟಲಿ ಬಳಸ ಕಟ್ಟಲಾದ ಮನೆಯ ವಿನ್ಯಾಸ ಆಕರ್ಷಕವಾಗಿದೆ

ಪ್ಲಾಸ್ಟಿಕ್‌ ಬಾಟಲಿ ಹಾಗೂ ಮಣ್ಣು ಬಳಸಿ ಈ ಮನೆಯನ್ನು ಕಟ್ಟಲಾಗಿದ್ದು, ಬಾಟಲಿ ತಳ ಭಾಗ ಮನೆಯ ಹೊರಗಡೆ ಕಾಣುವಂತೆ ಜೋಡಿಸಲಾಗಿದೆ,ಬಾಟಲಿನ ಒಳಗಡೆ ಕೂಡ ಮರಳು ತುಂಬಲಾಗಿದೆ, ನಂತರ ಮಣ್ಣು ಬಳಸಿ ಕಟ್ಟಲಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟಲು ಅದ್ಭುತ ಐಡಿಯಾ

ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟಲು ಅದ್ಭುತ ಐಡಿಯಾ

ದಿನಿತ್ಯ ಎಷ್ಟೋ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಿಸಾಡುತ್ತೇವೆ, ಇದರಿಂದ ಪರಿಸರ ಮಾಲಿನ್ಯ ಉಂಟಾಗುವುದು. ಆದರೆ ಈಗ ಬಾಟಲಿ ಮನೆಗಳ ನಿರ್ಮಾಣ ಶುರುವಾದ ಮೇಲೆ ಪ್ಲಾಸ್ಟಿಕ್‌ ಬಾಟಲಿಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ.

ಕಡಿಮೆ ಖರ್ಚಿನಲ್ಲಿ ಸುಂದರ ಮನೆ

ಕಡಿಮೆ ಖರ್ಚಿನಲ್ಲಿ ಸುಂದರ ಮನೆ

ನೈಜೀರಿಯನ್‌ನವರು ಆಯತಾಕಾರದ ಮನೆಗಿಂತ ರೌಂಡ್‌ ಆಗಿರುವ ಮನೆಯನ್ನು ಕಟ್ಟುತ್ತಾರೆ. ಆ ರೀತಿಯ ಮನೆಯ ವಿನ್ಯಾಸಕ್ಕೆ ಈ ಪ್ಲಾಸ್ಟಿಕ್‌ ಬಾಟಲಿ ತುಂಬಾನೇ ಸೊಗಸಾಗಿದೆ ಅಲ್ಲದೆ ಖರ್ಚು ಕೂಡ ಕಡಿಮೆ. ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಬಹುದು ಅಪ್ಪದೆ ಪರಿಸರ ಸ್ನೇಹಿಯಾಗಿದೆ. ಇನ್ನು ಆಗಾಗ ಭೂಕಂಪನ ಆಗುವ ಕಡೆ ಇಂಥ ಮನೆಗಳು ತುಂಬಾನೇ ಬೆಸ್ಟ್‌, ಏಕೆಂದರೆ ಭೂಕಂಪನವಾದಾಗ ಏನೂ ಆಗುವುದಿಲ್ಲ. ಈ ಎಲ್ಲಾ ದೃಷ್ಟಿಯಿಂದ ಇದೀಗ ಈ ಫ್ಲಾಸ್ಟಿಕ್‌ ಮನೆಯತ್ತ ಜನರ ಆಕರ್ಷಣೆ ಹೆಚ್ಚಾಗುತ್ತಿದೆ...

English summary

Nigerians Build Earthquake-Proof Homes from Plastic Bottles

Nigerians Builds house using plastic technology,these house have earthquake proof too, now this house is attracting tourists too, read on...
X
Desktop Bottom Promotion