Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಂಗಳವಾರ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ
ಹನುಮಂತನ ಆಶೀರ್ವಾದ ಪಡೆಯಲು ಮಂಗಳವಾರದ ದಿವಸ ಬಹಳ ಶ್ರೇಷ್ಠವಾದದ್ದು. ಮಂಗಳವಾರದ ದಿನವನ್ನು ಭಜರಂಗಬಲಿ ಆಂಜನೇಯನಿಗೆ ಅರ್ಪಣೆ ಎಂದು ನಂಬಲಾಗಿದೆ. ಈ ದಿನದಲ್ಲಿ ಆತನನ್ನು ಪೂಜಿಸುವುದರಿಂದಾಗಿ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಪಡೆಯಬಹುದು. ಕಲಿಯುಗದಲ್ಲಿ ಮನುಷ್ಯರ ಕಷ್ಟಗಳನ್ನು ನಿವಾರಿಸುವುದಕ್ಕೆ ಹನುಮಂತ ಬದುಕಿದ್ದಾನೆ ಎಂದು ನಂಬಲಾಗಿದೆ.

ಮಂಗಳವಾರದಂದು ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಕೆಲಸಗಳನ್ನು ಮಂಗಳವಾರದಂದು ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಅದ್ಯಾವ ಕೆಲಸಗಳನ್ನು ಮಂಗಳವಾರ ಮಾಡುವುದರಿಂದಾಗಿ ಅಶುಭವಾಗುತ್ತದೆ ತಿಳಿಯೋಣ ಬನ್ನಿ.

ಸೌಂದರ್ಯ ವರ್ಧಕಗಳನ್ನು ಮಂಗಳವಾರ ಖರೀದಿಸಬಾರದು
ಸೌಂದರ್ಯ ಮತ್ತು ಮೇಕ್ಅಪ್ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಂಗಳವಾರ ಖರೀದಿಸಬಾರದು. ಇದು ವೈವಾಹಿಕ ಜೀವನದಲ್ಲಿ ಕಹಿ ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೀವು ಸೌಂದರ್ಯ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ, ಸೋಮವಾರ ಮತ್ತು ಶುಕ್ರವಾರ ಇದಕ್ಕೆ ಉತ್ತಮ ದಿನಗಳು.

ಮನೆಗೆ ಲೋಹದ ಸಾಮಾನುಗಳನ್ನು ತರಬೇಡಿ
ಮಂಗಳವಾರದ ದಿನ ಲೋಹದ ವಸ್ತುಗಳ ಖರೀದಿಸುವಿಕೆಯನ್ನು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಸ್ಟೀಲಿನ ಪಾತ್ರೆಗಳು, ಚಾಕೂ, ನೈಲ್ ಕಟ್ಟರ್, ಇತ್ಯಾದಿ ಮನೆಬಳಕೆ ಲೋಹದ ವಸ್ತುಗಳನ್ನು ಈ ದಿನ ಖರೀದಿಸಬೇಡಿ. ಈ ದಿನ ಹೊಸ ವಾಹನ ಖರೀದಿಯೂ ಕೂಡ ಶುಭದಾಯಕವಲ್ಲ.

ಕಪ್ಪು ಬಣ್ಣದ ವಸ್ತ್ರಗಳು
ಮಂಗಳವಾರದ ದಿನ ಕೆಂಪು ವರ್ಣದ ವಸ್ತ್ರವನ್ನು ಧರಿಸುವುದರಿಂದಾಗಿ ಮಂಗಳ ದೋಷ ನಿವಾರಣೆಯಾಗುತ್ತದೆ. ಅದೇ ಈ ದಿನ ಕಪ್ಪು ಬಣ್ಣದ ವಸ್ತ್ರ ವನ್ನು ಈ ದಿನ ಖರೀದಿಸಲೂ ಬೇಡಿ ಮತ್ತು ಧರಿಸುವುದು ಕೂಡ ಒಳ್ಳೆಯದಲ್ಲ.

ಉಗುರು ಮತ್ತು ಕೂದಲು ಕತ್ತರಿಸುವುದು
ಉಗುರು, ಕೂದಲು, ಗಡ್ಡ, ಇತ್ಯಾದಿಗಳನ್ನು ಸುಂದರಗೊಳಿಸಲು ಈ ದಿನ ಹೊರಡಬೇಡಿ.

ಹಣದ ಕೆಲಸ
ಮಂಗಳವಾರ ಹಣದ ಲೋನ್ ಪಡೆಯುವುದಕ್ಕೆ ತೆರಳಬೇಡಿ. ಇದರಿಂದ ಧನಹಾನಿಯಾಗುವ ಸಾಧ್ಯತೆ ಇದೆ. ಈ ದಿನ ಪಡೆಯುವ ಹಣವನ್ನು ಮರುಪಾವತಿ ಮಾಡುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.

ಮಾಂಸಾಹಾರ ಮತ್ತು ಮದ್ಯದಿಂದ ದೂರವಿರಿ
ಮಂಗಳವಾರದ ದಿನ ಮರೆತೂ ಕೂಡ ಮಾಂಸಾಹಾರದ ಸೇವನೆ ಮಾಡಬೇಡಿ. ಅಷ್ಟೇ ಅಲ್ಲ ಮಧ್ಯ ಸೇವನೆ ಕೂಡಈ ದಿನ ನಿಷಿದ್ಧ. ಯಾವ ವ್ಯಕ್ತಿ ಈ ದಿನ ಇಂತಹ ಕೆಲಸ ಮಾಡುವನೋ ಅಂತಹ ವ್ಯಕ್ತಿಯ ಸಂಸಾರದಲ್ಲಿ ಸಮಸ್ಯೆಗಳೆ ತುಂಬಿಕೊಳ್ಳುತ್ತದೆ.

ಮಂಗಳವಾರ ಮೀನು ತಿನ್ನಬೇಡಿ
ಮಂಗಳವಾರದ ದಿನ ನಾನ್ ವೆಜ್ ಸೇವನೆಯಿಂದ ದೂರವಿರಿ ಮತ್ತು ಮೀನಿನ ಖರೀದಿ ಮಾಡಬೇಡಿ ಮತ್ತು ಅದನ್ನು ತಿನ್ನಬೇಡಿ. ಯಾವ ವ್ಯಕ್ತಿ ಇದನ್ನು ಪಾಲಿಸುವುದಿಲ್ಲವೋ ಅಂತಹವರಿಗೆ ಆರ್ಥಿಕ ಏಳಿಗೆ ಇರುವುದಿಲ್ಲ.

ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಡಿ
ಮಂಗಳವಾರದ ದಿನ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಖರೀದಿಸಬಾರದು. ಹಾಲನ್ನು ಚಂದ್ರನ ಕಾರಕ ಎಂದು ನಂಬಲಾಗುತ್ತದೆ ಮತ್ತು ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರ ವಿರೋಧಿಗಳಾಗಿರುತ್ತಾರೆ. ಹಾಗಾಗಿ ನೀವು ಮಂಗಳವಾರದ ದಿನ ಬೇಸನ್ ಲಾಡು ತಯಾರಿಸಿ ಅಥವಾ ಖರೀದಿಸಿ ಹನುಮಂತನಿಗೆ ನೇವೇಧ್ಯ ಅರ್ಪಿಸಬಹುದು.

ದೈಹಿಕ ಸಂಬಂಧ
ಮಂಗಳವಾರದ ದಿನ ದೈಹಿಕ ಸಂಬಂಧ ಹೊಂದುವುದರಿಂದಾಗಿ ಬಹಳ ಕೆಟ್ಟದಾಗುತ್ತದೆ. ಹಾಗಾಗಿ ಆದಷ್ಟು ಸಂಬಂಧ ಬೆಳೆಸುವುದನ್ನು ಈ ದಿನ ತಪ್ಪಿಸಿ.



Click it and Unblock the Notifications
