Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಹಾಶಿವರಾತ್ರಿ 2023: ಫೆ. 18ರ ಬಳಿಕ ಈ 6 ರಾಶಿಯವರಿಗೆ ಸುವರ್ಣಕಾಲ, ಶಿವಕೃಪೆಯಿಂದ ಅಪಾರ ಯಶಸ್ಸು ದೊರೆಯಲಿದೆ
ಹಿಂದೂಗಳ ಪ್ರಮುಖ ಹಬ್ಬವಾದ ಮಹಾಶಿವರಾತ್ರಿಯನ್ನು 2023ರಲ್ಲಿ ಫೆಬ್ರವರಿ 18ರಂದು ಆಚರಿಸಲಾಗುವುದು. ಶಿವಭಕ್ತರಿಗೆ ಈ ದಿನ ತುಂಬಾನೇ ವಿಶೇಷ. ಈ ದಿನ ಉಪವಾಸವಿದ್ದು, ಜಾಗರಣೆ ಮಾಡಿ ಶಿವನ ಮಂತ್ರಗಳನ್ನು ಹೇಳುತ್ತಾ ಈ ದಿನ ಕಳೆದರೆ ಶಿವನ ಕೃಪೆಗೆ ಪಾತ್ರರಾಗುವಿರಿ.

ಶಿವ ತನ್ನ ಭಕ್ತರಿಗೆ ಬೇಗನೆ ಒಲಿಯುತ್ತಾನೆ. ಶಿವನ ಕೃಪೆಯಿದ್ದರೆ ಜೀವನದಲ್ಲಿರುವ ಕಷ್ಟಗಳು ದೂರಾಗುವುದು, ಶಿವಕೃಪೆಯಿಂದಾಗಿ ಬದುಕಿನಲ್ಲಿ ಎಲ್ಲಾ ಒಳಿತಾಗುವುದು. ಅಕಾಲಿಕ ಮರಣವನ್ನು ತಡೆಯುವ ಶಕ್ತಿ ಮೃತ್ಯುಂಜಯನಿಗಿದೆ.
ಈ ಬಾರಿ ಶಿವರಾತ್ರಿ ಮತ್ತಷ್ಟು ವಿಶೇಷವಾಗಿದೆ
ಈ ಬಾರಿ ಮಹಾಶಿವರಾತ್ರಿ ಹಾಗೂ ಪ್ರದೋಷ ಎರಡೂ ಒಟ್ಟಿಗೆ ಬಂದಿದೆ. ಈ ಎರಡೂ ಶಿವನಿಗೆ ಮೀಸಲಾಗಿರುವ ವಿಶೇಷ ದಿನಗಳು. ಈ ಬಾರಿ ಪ್ರದೋಷ ವ್ರತದಂದೇ ಶಿವರಾತ್ರಿ ಕೂಡ ಇರುವುದರಿಂದ ಪೂಜೆಯ ಫಲ 10 ಪಟ್ಟು ಹೆಚ್ಚಲಿದೆ. ಈ ದಿನ ಶಿವಭಕ್ತರು ಉಪವಾಸವಿದ್ದು, ರಾತ್ರಿ ನಿದ್ದೆ ಮಾಡದೆ ಜಾಗರಣೆ ಮಾಡಿ ಮಾರನೇಯ ದಿನ ಪಾರಣ ಮುಹೂರ್ತದಲ್ಲಿ ಆಹಾರ ಸೇವಿಸುತ್ತಾರೆ.

ಪಾರಣ ಮುಹೂರ್ತ
ಫೆಬ್ರವರಿ 19, 2023 ರಂದು ಬೆಳಗ್ಗೆ 6.57 ರಿಂದ ಮಧ್ಯಾಹ್ನ 3.25 ರವರೆಗೆ ಇದೆ.
ಜ್ಯೋತಿಷ್ಯ ಪ್ರಕಾರ ರಾಶಿಗಳ ಮೇಲೆ ಶಿವರಾತ್ರಿ ಪ್ರಭಾವ
ಜ್ಯೋತಿಷ್ಯ ಪ್ರಕಾರ ಈ ಶಿವರಾತ್ರಿ ಕೆಲವೊಂದು ರಾಶಿಗಳಿಗೆ ತುಂಬಾನೇ ಮಂಗಳಕರವಾಗಿದೆ, ಶಿವರಾತ್ರಿಯ ಬಳಿಕ ಅನೇಕ ಅದೃಷ್ಟದ ಘಟನೆಗಳು ಈ ರಾಶಿಯವರ ಜೀವನದಲ್ಲಿ ನಡೆಯಲಿದೆ, ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ಶಿವರಾತ್ರಿ ಬಳಿಕ ನಿಮ್ಮ ಜೀವನದಲ್ಲಿಅನೇಕ ಮಂಗಳಕರ ಘಟನೆ ನಡೆಯಲಿದೆ. ಶಿವರಾತ್ರಿ ಬಳಿಕ ನಿಮ್ಮ ಆದಾಯ ಹೆಚ್ಚಾಗಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಹೊಸ ಉದ್ಯೋಗ ಅವಕಾಶಗಳು ದೊರೆಯಲಿದೆ. ಶಿವನ ಕೃಪೆಯಿಂದ ನಿಮ್ಮ ಜೀವನದಲ್ಲಿ ಖುಷಿ, ನೆಮ್ಮದಿ ಇರಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಶಿವನ ಅಪಾರ ಅನುಗ್ರಹವಿದೆ. ನೀವು ತುಂಬಾ ಸಮಯದಿಂದ ಬಡ್ತಿಗಾಗಿ ಪ್ರಯತ್ನಿಸುತ್ತಿದ್ದರೆ ನೀವು ಬಡ್ತಿ ಹೊಂದುತ್ತೀರಿ, ಆದಾಯ ಹೆಚ್ಚಾಗಲಿದೆ. ಇನ್ನು ನಿಮ್ಮ ಯಾವುದೋ ಕೆಲಸ ಅಪೂರ್ಣವಾಗಿದ್ದರೆ ಶಿವರಾತ್ರಿ ಬಳಿಕ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗಸ್ಥರ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ. ನೀವು ಆಸ್ತಿ ಅಥವಾ ವಾಹನ ಖರೀದಿಸಲು ಚಿಂತಿಸುತ್ತಿದ್ದರೆ ಅದು ನೆರವೇರಲಿದೆ.

ಮಿಥುನ ರಾಶಿ :
ಶಿವನ ಕೃಪೆಯಿಂದ ಆರೋಗ್ಯ ಚೆನ್ನಾಗಿರುತ್ತದೆ. ಇನ್ನು ಏನಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಾಣುವಿರಿ. ಮಿಥುನ ರಾಶಿಯವರು ವೃತ್ತಿಯಲ್ಲಿ ಅದ್ಭುತ ಪ್ರಗತಿ ಕಂಡುಬರುವುದು ಮತ್ತು ಕೌಟುಂಬಿಕ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ.

ತುಲಾ ರಾಶಿಯವರಿಗೆ ಮಹಾದೇವನ ಆಶೀರ್ವಾದ
ತುಲಾ ರಾಶಿಯವರ ಮೇಲೂ ಮಹಾದೇವನ ಕೃಪೆ ಅಧಿಕವಿದೆ. ಆದ್ದರಿಂದ ನಿಮ್ಮ ಆದಾಯದಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಈ ಅವಧಿ ಒಳ್ಳೆಯ ಆರ್ಥಿಕ ಲಾಭ ಗಳಿಸುವಿರಿ.

ಧನು ರಾಶಿಯವರಿಗೆ ಮಹಾದೇವನ ಆಶೀರ್ವಾದ
ಶಿವರಾತ್ರಿಯ ಬಳಿಕ ಧನುರಾಶಿಯವರ ಜೀವನದಲ್ಲಿ ಅನೇಕ ಒಳ್ಳೆಯ ಬದಲಾವಣೆಯಾಗಲಿದೆ. ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ವೃತ್ತಿಜೀವನದ ವಿಷಯದಲ್ಲಿ, ನೀವು ಕೆಲವು ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ, ಅವರಿಂದ ನಿಮ್ಮ ವೃತ್ತಿಜೀವನವು ಹೊಸ ಎತ್ತರವನ್ನು ಮುಟ್ಟುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಲಾಭ ಗಳಿಸುತ್ತೀರಿ.

ಕುಂಭ ರಾಶಿ
ಈ ಮಹಾಶಿವರಾತ್ರಿ ಬಳಿ ಕುಂಭ ರಾಶಿಯವರಿಗೆ ಸುವರ್ಣಕಾಲ. ನೀವು ಮಾಡು ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ಹಣದ ಲಾಭ ಗಳಿಸುವಿರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ . ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ.
ಈ ಮಂತ್ರಗಳನ್ನು ಪಠಿಸಿ
'ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಶಿವ ಧ್ಯಾನ ಮಂತ್ರ
ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್ ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ



Click it and Unblock the Notifications
