Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಹಾಶಿವರಾತ್ರಿ 2022: ಈ 4 ರಾಶಿಗಳಿಗೆ ಕಾದಿದೆ ಅದೃಷ್ಟದ ಬದುಕು!
ಮಾರ್ಚ್ 1 ರಂದು ಮಹಾಶಿವರಾತ್ರಿ. ಶಿವನ ಆರಾಧನೆಗೆ ಮೀಸಲಾದ ದಿನ. ಈ ದಿನದಂದು ಜನರು ಉಪವಾಸವನ್ನು ಆಚರಿಸಿ, ಶ್ರದ್ಧೆ ಹಾಗೂ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ. ಇದರಿಂದ ಜೀವನದ ಎಲ್ಲಾ ದುಃಖಗಳು ದೂರವಾಗಿ, ಸಂತೋಷ ನೆಲೆಯಾಗುವುದು ಎಂಬ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಮಹಾಶಿವರಾತ್ರಿಯಂದು ಕೆಲವು ರಾಶಿಗಳು ಬಹಳ ಅದೃಷ್ಟವನ್ನು ಗಳಿಸುತ್ತವೆಯಂತೆ. ಇವರ ಮೇಲೆ ಶಿವನ ಕೃಪೆ ಬಹಳ ಚೆನ್ನಾಗಿರಲಿದ್ದು, ಈ ದಿನದಿಂದ ಅವರ ಬದುಕು ಉತ್ತಮವಾಗಲಿದೆ ಎಂದು ಶಾಸ್ತ್ರ ಹೇಳುವುದು. ಹಾಗಾದರೆ, ಶಿವರಾತ್ರಿಯಂದು ಅದೃಷ್ಟವಿರುವ ರಾಶಿಗಳಾವುವು ನೋಡೋಣ.
ಮಹಾಶಿವರಾತ್ರಿಯಂದು, ಅದೃಷ್ಟ ಹೊಂದಿರುವ ರಾಶಿಚಕ್ರಗಳಾವವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ಈ ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ. ಈ ಮಹಾಶಿವರಾತ್ರಿಯಿಂದ, ನಿಮ್ಮ ಅದೃಷ್ಟದ ನಕ್ಷತ್ರಗಳು ಸಹ ಹೆಚ್ಚು ಉತ್ತುಂಗಕ್ಕೇರುತ್ತವೆ. ಜೀವನದಿಂದ ದುಃಖ ದೂರವಾಗುತ್ತದೆ. ಸ್ಥಗಿತಗೊಂಡ ಕೆಲಸ ನಡೆಯಲಿದೆ. ಜೊತೆಗೆ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಶಿವನ ಕೃಪೆಯಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಶಿವ ಚಾಲೀಸಾವನ್ನು ಪಠಿಸಿ ಮತ್ತು ಶಿವನಿಗೆ ಅಭಿಷೇಕ ಮಾಡಿ. ಇದರಿಂದ ಫಲಿತಾಂಶಗಳು ಮತ್ತಷ್ಟು ಹೆಚ್ಚಾಗುವುದು.

ಸಿಂಹ:
ಈ ಮಹಾಶಿವರಾತ್ರಿಯಿಂದ ಶಿವನ ಕೃಪೆಯಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ವಿಶೇಷ ಸಾಧನೆ ಮಾಡಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಅವರು ಬಯಸಿದ ಕೆಲಸ ಸಿಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಹೊಸ ದಾರಿಗಳು ತೆರೆದುಕೊಳ್ಳುತ್ತವೆ.

ತುಲಾ:
ಈ ರಾಶಿಯವರಿಗೆ ಈ ಸಮಯವು ತುಂಬಾ ಶುಭಕರವಾಗಿರುತ್ತದೆ. ಈ ಮಹಾಶಿವರಾತ್ರಿಯಿಂದ ನೀವು ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ದೊಡ್ಡ ಸ್ಥಾನವನ್ನು ಪಡೆಯಬಹುದು. ನೀವು ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ನಿಮಗೆ ತುಂಬಾ ಒಳ್ಳೆಯದು. ಜೀವನದಲ್ಲಿ ಹೊಸ ಚಿಂತನೆಯೊಂದಿಗೆ ಮುನ್ನಡೆಯುತ್ತೀರಿ.

ವೃಶ್ಚಿಕ:
ಮಹಾಶಿವರಾತ್ರಿಯು ಈ ಬಾರಿ ನಿಮಗೆ ಹೊಸ ಸಾಧನೆಗಳನ್ನು ತಂದಿದೆ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಈ ದಿನ ಶಿವನನ್ನು ಪೂಜಿಸುವುದು ಮತ್ತು ರುದ್ರಾಭಿಷೇಕ ಮಾಡಿಸುವುದು ಶ್ರೇಯಸ್ಸನ್ನು ತರುವುದು. ಜೊತೆಗೆ ಶಿವ ಚಾಲೀಸಾ ಪಠಿಸುವುದು ಶುಭಕರ.



Click it and Unblock the Notifications
