Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯಲ್ಲಿಯೇ ಶಿವಲಿಂಗ ಅಭಿಷೇಕ ಮಾಡುವುದು ಹೇಗೆ? ನಿಯಮಗಳೇನು?
ಶಿವನನ್ನು ಆರಾಧಿಸುವಾಗ ಅಭಿಷೇಕ ಮಾಡುತ್ತೇವೆ. ಶಿವನಿಗೆ ಮಾಡುವ ಅಭಿಷೇಕಕ್ಕೆ ತುಂಬಾನೇ ಮಹತ್ವವಿದೆ. ಶಿವನಿಗೆ ಅಭಿಷೇಕ ಮಾಡುವುದರಿಂದ ನಮ್ಮ ಕಷ್ಟಗಳು ದೂರಾಗುವುದು, ಸಂಕಲ್ಪ ನೆರವೇರುವುದು.

ಶಿವನ ದೇವಾಲಯಕ್ಕೆ ಹೋಗಿ ಅಭಿಷೇಕ ಮಾಡಿಸಬಹುದು ಅಥವಾ ಪೂಜಾ ವಿಧಿ-ವಿಧಾನಗಳು ಗೊತ್ತಿದ್ದರೆ ಮನೆಯಲ್ಲಿಯೇ ಮಾಡಬಹುದು. ಶಿವನಿಗೆ ಅಭಿಷೇಕ ಮಾಡುವಾಗ ನೀರು, ಹಾಲು, ತುಪ್ಪ, ಜೇನು ತುಪ್ಪ, ಮೊಸರು, ಕಬ್ಬಿನ ಹಾಲು ಇವುಗಳನ್ನು ಹೆಚ್ಚಾಗಿ ಬಳಸಲಾಗುವುದು.
ಶಿವನಿಗೆ ಅಭಿಷೇಕ ಮಾಡುವುದು ಹೇಗೆ?
* ನಿಮ್ಮ ಮನೆಯಲ್ಲಿ ಶಿವನಿಗೆ ಅಭಿಷೇಕ ಮಾಡುವಾಗ ಪವಿತ್ರವಾದ ಸ್ಥಳದಲ್ಲಿ ಒಂದು ಮರದ ಟೇಬಲ್ ಅಥವಾ ಟೀಪಾಯಿ, ಟೇಬಲ್ ಚಿಕ್ಕದಾಗಿದ್ದರೂ ತೊಂದರೆಯಿಲ್ಲ.
* ನಂತರ ಶಿವಲಿಂಗವನ್ನು ಟೇಬಲ್ ಮೇಲೆ ಇಡುವಾಗ ಅದರ ಯೋನಿ ಪೂರ್ವಕ್ಕೆ ಇರುವಂತೆ ಇಡಬೇಕು.
* ಲಿಂಗ ಚಿಕ್ಕದಾಗಿದ್ದರೆ ಲಿಂಗವನ್ನು ದೊಡ್ಡ ತಟ್ಟೆಯ ಮೇಲೆ ಇಡಬೇಡಿ. ಇಲ್ಲದಿದ್ದರೆ ಅಭಿಷೇಕ ಮಾಡಿದ ನೀರು ಅಥವಾ ತುಪ್ಪ ಎಲ್ಲವೂ ಒಂದು ಪಾತ್ರೆಗೆ ಬೀಳುವಂತಿರಬೇಕು.
* ನೀವು ಅಭಿಷೇಕ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ನಿಂತು ಪೂಜೆಯನ್ನು ಮಾಡಬೇಕು.
* ಶಿವನಿಗೆ ಅಭಿಷೇಕಕ್ಕೆ ಬೇಕಾದ ವಸ್ತುಗಳನ್ನು ಮೊದಲೇ ಸಿದ್ಧತೆ ಮಾಡಿ ಇಡಿ.
* ಸ್ವಲ್ಪ ಗಂಗಾಜಲ ತೆಗೆದು ನಿಮ್ಮ ಮೇಲೆ ಚಿಮುಕಿಸಬೇಕು. ನಂತರ ಪವಿತ್ರ ಧಾರಣ ಮಂತ್ರ ಪಠಿಸಿ.
* ಗುರು ನಾಮ ಜಪಿಸಿ, ನಂತರ ಕುಟುಂಬದ ದೇವರನ್ನು ಮನಸ್ಸಿನಲ್ಲಿ ನೆನೆಯಿರಿ
* ಈ ಮಂತ್ರಗಳನ್ನು ಹೇಳುತ್ತಾ ಬಾಯಿಗೆ ಮೂರು ಬಾರಿ ನೀರು ಹಾಕಿ
ಓಂ ಕೇಶವಾಯ ನಮಃ, ಓಂ ನಾರಾಯಣಾಯ ನಮಃ, ಓಂ ಮಾಧವಾಯ್ಯ ನಮಃ ಅಂತ ಪಠಿಸಿ
* ಈ ಮಂತ್ರಗಳನ್ನು ಹೇಳನ್ನು ನೀರನ್ನು ನೆಲಕ್ಕೆ ಹಾಕಿ
ಓಂ ಗೋವಿಂದಾಯ್ಯ ನಮಃ
ನಂತರ ಶಿವನ ಮಂತ್ರಗಳನ್ನು ಹೇಳುತ್ತಾ ನೀರು, ಹಾಲು, ತುಪ್ಪ, ಮೊಸರು, ಪಂಚಾಮೃತ ಇವುಗಳ ಅಭಿಷೇಕ ಮಾಡಿ, ನಂತರ ಶುದ್ಧವಾದ ನೀರಿನಿಂದ ತೊಳೆದು, ಶುದ್ಧವಾದ ಬಟ್ಟೆಯಿಂದ ಒರೆಸಿ
* ಈಗ ಲಿಂಗಕ್ಕೆ ಅರಿಶಿಣ, ಕುಂಕುಮ, ಶ್ರೀಗಂಧ ಹಚ್ಚಿ, ಹೂಗಳಿಂದ ಅಲಂಕರಿಸಿ, ದೇವರನ್ನು ಪೂಜಿಸಿ.
ಯಾರು ಯಾವ ಅಭಿಷೇಕ ಮಾಡಿದರೆ ಒಳ್ಳೆಯದು
ಹಾಲಾಭಿಷೇಕ
ನಿಮ್ಮ ಮನೆಯಲ್ಲಿ ಸದಾ ಜಗಳವಿದ್ದರೆ ನೀವು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರಿಂದ ಮೂರ್ಖನೂ ಬುದ್ಧಿವಂತನಾಗುತ್ತಾನೆ ಎಂದು ಹೇಳಲಾಗುವುದು. ಮಕ್ಕಳ ವಿದ್ಯಾಭ್ಯಾಸದ ಏಳಿಗೆಗೆ ಹಾಲಾಭಿಷೇಕ ಮಾಡಿಸಿ.
ನೀರಾಭಿಷೇಕ
ಸಾಮಾನ್ಯವಾಗಿ ಜನರು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ವಿವಿಧ ಆಸೆಗಳು ಈಡೇರುತ್ತವೆ. ಪ್ರತಿದಿನ ಶಿವನ ಲಿಂಗಕ್ಕೆ ನೀರನ್ನು ಅರ್ಪಿಸುವುದರಿಂದ ಮನಸ್ಸು ಶಾಂತಗೊಳಿಸುತ್ತದೆ, ಶಿವ ಕೃಪೆಯಿಂದ ಕಷ್ಟಗಳು ದೂರಾಗುವುದು.
ತುಪ್ಪದ ಅಭಿಷೇಕ
ನಿಮ್ಮ ಕುಟುಂಬದಲ್ಲಿ ಯಾರಾದರೂ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವು ಮಹಾದೇವನ ಲಿಂಗಕ್ಕೆ ತುಪ್ಪದ ಅಭಿಷೇಕ ಮಾಡಿ. ಇದರಿಂದ ಅವರಲ್ಲಿ ಚೇತರಿಕೆ ಕಂಡುಬರುವುದು. ಸಂತಾನ ಅಪೇಕ್ಷಿತ ದಂಪತಿ ತುಪ್ಪದ ಅಭಿಷೇಕ ಮಾಡಿಸಿ.
ಸುಗಂಧದ್ರವ್ಯದ ಅಭಿಷೇಕ
ನೀವು ಶಿವನ ಲಿಂಗಕ್ಕೆ ಸುಗಂಧ ದ್ರವ್ಯದಿಂದ ಅಭಿಷೇಕ ಮಾಡಿದರೆ, ಅದು ನಿಮ್ಮ ಪತಿಯೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ, ವೈವಾಹಿಕ ಜೀವನದ ತೊಂದರೆಗಳು ದೂರಾಗಲು ಶಿವನಿಗೆ ಸುಗಂಧದ್ರವ್ಯದ ಅಭಿಷೇಕ ಮಾಡಿ.
ಜೇನುತುಪ್ಪದಿಂದ ಅಭಿಷೇಕ
ನಿಮ್ಮ ಮನೆಯಲ್ಲಿ ಯಾರಿಗಾದರೂ ಟಿಬಿ ಕಾಯಿಲೆ ಇದ್ದರೆ, ನೀವು ಶಿವಲಿಂಗಕ್ಕೆ ಜೇನುತುಪ್ಪದೊಂದಿಗೆ ಅಭಿಷೇಕ ಮಾಡಬೇಕು. ಇದು ಈ ರೋಗವನ್ನು ಗುಣಪಡಿಸುತ್ತದೆ. ಹೀಗೆ ಮಾಡುವುದರಿಂದ ಇತರ ಆರೋಗ್ಯ ಸಮಸ್ಯೆ ಕೂಡ ದೂರಾಗುವುದು
ಕಬ್ಬಿನ ರಸದಿಂದ ಅಭಿಷೇಕ
ನೀವು ತುಂಬಾ ದುಃಖದಲ್ಲಿದ್ದರೆ, ಖಿನ್ನತೆ ಕಾಡುತ್ತಿದ್ದರೆ ನೀವು ಶಿವಲಿಂಗಕ್ಕೆ ಕಬ್ಬಿನ ರಸದಿಂದ ಅಭಿಷೇಕ ಮಾಡಬೇಕು. ಇದರಿಂದ ನಿಮ್ಮ ಮನಸ್ಸಿನಲ್ಲಿ ಸಂತೋಷದ ಭಾವನೆ ಮೂಡುವುದು
ಗಂಗಾಜಲ ನೀಡುತ್ತವೆ
ನೀವು ಮರಣಾನಂತರ ಮೋಕ್ಷವನ್ನು ಪಡೆಯಲು ಬಯಸಿದರೆ, ನೀವು ಶಿವಲಿಂಗವನ್ನು ಗಂಗಾಜಲದಿಂದ ಅಭಿಷೇಕ ಮಾಡಬೇಕು.
ಸೂಚನೆ: ನಾವು ದೇವರನ್ನು ಪೂಜಿಸುವ ರೀತಿ ನಮ್ಮ ನಂಬಿಕೆ, ದೇವರನ್ನು ನಂಬಿದರೆ ಯಾವತ್ತಿಗೂ ಕೈ ಬಿಡಲ್ಲ ಎಂಬುವುದು ಅವನ ಭಕ್ತರ ಅಚಲ ನಂಬಿಕೆ. ನೀವು ದೇವರ ಕೃಪೆಗೆ ಪಾತ್ರರಾಗಲು ಭಕ್ತಿಯೊಂದಿದ್ದರೆ ಸಾಕು.



Click it and Unblock the Notifications


