Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೇ.16ಕ್ಕೆ ರಕ್ತ ಚಂದ್ರಗ್ರಹಣ: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹೇಗಿದೆ ನೋಡಿ
ಮೇ.16ಕ್ಕೆ 2022 ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು ಅದು ರಕ್ತ ಚಂದ್ರಗ್ರಹಣವಾಗಿದೆ. ಭಾರತದ ಕಾಲಮಾನ ಪ್ರಕಾರ ಮೇ. 16ಕ್ಕೆ ಚಂದ್ರಗ್ರಹಣ ಬೆಳಗ್ಗೆ 07:02ಕ್ಕೆ ಪ್ರಾರಂಭವಾಗಿ 12:20ಕ್ಕೆ ಮುಕ್ತಾಯವಾಗುತ್ತದೆ. ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದಿಲ್ಲ, ಆದರೆ ಜ್ಯೋತಿಷ್ಯ ಪ್ರಕಾರ ಇದರ ಪ್ರಭಾವ ರಾಶಿಗಳ ಮೇಲೆ ಇದ್ದೇ ಇರುತ್ತದೆ.

ಮೇ. 16ರ ರಕ್ತಚಂದ್ರಗ್ರಹಣ ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವ ಹೇಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯ ಜನರು ಹಣದ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಈ ಅವಧಿಯಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ಬಗ್ಗೆ ಉತ್ಸಾಹ ಹೆಚ್ಚುವುದು.

ವೃಷಭ ರಾಶಿ:
ಈ ಸಮಯದಲ್ಲಿ, ಗೊಂದಲದ ಪರಿಸ್ಥಿತಿ ಉಂಟಾಗಬಹುದು, ಇದರಿಂದಾಗಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವ ಮೂಲಕ ಒತ್ತಡದಿಂದ ನಿಮ್ಮನ್ನು ದೂರವಿರಿಸಲು ಪ್ರಯತ್ನಿಸಿ. ಧನಾತ್ಮಕತೆಯನ್ನು ಹೆಚ್ಚಿಸಲು ನೀವು ಯೋಗ-ಧ್ಯಾನವನ್ನು ಮಾಡುವುದು ಒಳ್ಳೆಯದು.

ಮಿಥುನ ರಾಶಿ:
ಮಿಥುನ ರಾಶಿಯವರು ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಪಡೆಯುವ ನಿರೀಕ್ಷೆಯಿದೆ. ಆದಾಯಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ. ವಾಹನವನ್ನು ಎಚ್ಚರಿಕೆಯಿಂದ ಬಳಸಿ.

ಕರ್ಕ ರಾಶಿ :
ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ವಿಶೇಷವಾಗಿರುವುದಿಲ್ಲ. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ನಿಮ್ಮ ಬಜೆಟ್ ಅನ್ನು ಗೊಂದಲಗೊಳಿಸುತ್ತದೆ ಮತ್ತು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ಮಗುವಿನ ಆರೋಗ್ಯದ ಚಿಂತೆ ಕಾಡಬಹುದು.

ಸಿಂಹ ರಾಶಿ :
ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಳಿತಗಳು ಉಂಟಾಗುತ್ತವೆ, ಇದರಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ವೈವಾಹಿಕ ಜೀವನದಲ್ಲಿ ವಿಷಯಗಳು ಅನುಕೂಲಕರವಾಗಿರುವುದಿಲ್ಲ. ಯಾವುದೇ ರೀತಿಯ ವಿವಾದವನ್ನು ತಪ್ಪಿಸಲು ಪ್ರಯತ್ನಿಸಿ. ಅಲ್ಲದೆ, ಮಾನಸಿಕ ಆರೋಗ್ಯಕ್ಕಾಗಿ ಒತ್ತಡದಿಂದ ದೂರವಿರಲು ಪ್ರಯತ್ನಿಸಿ.

ಕನ್ಯಾ ರಾಶಿ:
ಮನಸ್ಸಿನಲ್ಲಿ ಕೆಲವು ಅಜ್ಞಾತ ಭಯ ಇರುತ್ತದೆ. ನೀವು ನಿಮ್ಮ ಶತ್ರುಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಉದ್ಯೋಗಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಜಾಗರೂಕರಾಗಿರಬೇಕು.

ತುಲಾ ರಾಶಿ:
ಯಾವುದೇ ವಿಷಯದ ಬಗ್ಗೆ ಹೆಚ್ಚು ಉತ್ಸಾಹ ತೋರಿಸಬೇಡಿ, ಸಾವಧಾನವಾಗಿ ಪರಿಸ್ಥಿತಿ ತಿಳಿದುಕೊಳ್ಳಿ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ತಾಳ್ಮೆಯಿಂದ ಪರಿಸ್ಥಿತಿಯನ್ನು ಪರಿಹರಿಸಲು ಪ್ರಯತ್ನಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ:
ಹಣವನ್ನು ಖರ್ಚು ಮಾಡುವ ಮೊದಲು ಯೋಜನೆ ಮಾಡಿ ಅದರಂತೆ ಖರ್ಚು ಮಾಡಲು ಪ್ರಯತ್ನಿಸುವುದು ಒಳ್ಳೆಯದು. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರಬಹುದು. ಯಾವುದೇ ರೀತಿಯ ವಿವಾದಗಳಿಂದ ನಿಮ್ಮನ್ನು ದೂರವಿರಿಸಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈವಾಹಿಕ ಸಂಬಂಧಗಳಲ್ಲಿ ಏರಿಳಿತಗಳಿರಬಹುದು.

ಧನು ರಾಶಿ :
ಈ ಅವಧಿಯಲ್ಲಿ ನೀವು ಯಾವುದೇ ರೀತಿಯ ತಪ್ಪು ಕೆಲಸಗಳಿಂದ ದೂರವಿರಬೇಕು, ಇಲ್ಲದಿದ್ದರೆ ಸಮಾಜದಲ್ಲಿ ಮಾನಹಾನಿಯಾಗಬಹುದು.

ಮಕರ ರಾಶಿ :
ಚಂದ್ರಗ್ರಹಣದ ಸಮಯದಲ್ಲಿ ಮಕರ ರಾಶಿಯ ಜನರು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಈ ರಾಶಿಯವರಿಗೆ ಶನಿ ಸಾಡೇಸಾತಿ ನಡೆಯುತ್ತಿದ್ದು, ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಇರಬಹುದು. ನೀವು ತಾಳ್ಮೆಯಿಂದಿರಬೇಕು.

ಕುಂಭ ರಾಶಿ :
ಕುಂಭ ರಾಶಿಯವರೇ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಇಲ್ಲವಾದಲ್ಲಿ ಸಣ್ಣ ಅಜಾಗರೂಕತೆಗೆ ಹೆಚ್ಚಿನ ಬೆಲೆ ತೆರಬೇಕಾಗಬಹುದು. ನಿಮ್ಮ
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ಹೊಸ ಆದಾಯದ ಮೂಲಗಳನ್ನು ರಚಿಸಲು ಸ್ವಲ್ಪ ಸಮಯ ಕಾಯುವುದು ಉತ್ತಮ.

ಮೀನ ರಾಶಿ:
ನೀವು ಯಾವುದೋ ವಿಷಯದ ಬಗ್ಗೆ ಮಾನಸಿಕ ಒತ್ತಡವನ್ನು ಅನುಭವಿಸಬಹುದು. ನೀವು ಅಹಂಕಾರದಿಂದ ದೂರವಿರಿ. ಇತರರಿಗೆ ಸಹಾಯ ಮಾಡಲು ಮುಂದೆ ಬನ್ನಿ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ಯೋಗ ಮತ್ತು ಧ್ಯಾನವನ್ನು ಮಾಡುವುದು ಒಳ್ಳೆಯದು.
ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಜ್ಯೋತಿಷ್ಯ ಮಾಹಿತಿಯನ್ನು ಆಧರಿಸಿದೆ. BoldSky ಲೇಖನಕ್ಕೆ ಸಂಬಂಧಿಸಿದ ಯಾವುದೇ ಇನ್‌ಪುಟ್ ಅಥವಾ ಮಾಹಿತಿಯ ಭರವಸೆ ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಪಂಡಿತರ ಸಲಹೆ ಪಡೆಯಿರಿ.



Click it and Unblock the Notifications











