Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ಡಿಸೆಂಬರ್ 2022: 2 ರಾಶಿಗಳಿಗೆ ಅದೃಷ್ಟ, ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕಾಗಿದೆ
ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ, ಈ ವರ್ಷವನ್ನು ಒಮ್ಮೆ ತಿರುಗಿ ನೋಡಿದಾಗ ನಮ್ಮ ಜೀವನದಲ್ಲಿ ನಡೆದಂಥ ಅನೇಕ ಘಟನೆಗಳು ಕಣ್ಮುಂದೆ ಹೋಗುತ್ತದೆ. ಅವುಗಳಲ್ಲಿ ಒಳ್ಳೆಯದು, ಕೆಟ್ಟದು ಎಲ್ಲಾ ಇರುತ್ತದೆ, ಒಳ್ಳೆಯದು ನೆನಪಿನಲ್ಲಿಟ್ಟುಕೊಳ್ಳೋಣ, ಕೆಟ್ಟದ್ದು ಮರೆಯೋಣ. ಜ್ಯೋತಿಷ್ಯದಲ್ಲಿ ನಮ್ಮ ಜೀವನದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳಿಗೆ ಗ್ರಹಗತಿಗಳು, ನಮ್ಮ ಜಾತಕಫಲ ಎಲ್ಲವೂ ಕಾರಣ ಎಂದು ಹೇಳಲಾಗುವುದು.

ವೈದಿಕ ಶಾಸ್ತ್ರದ ಪ್ರಕಾರ ಈ ತಿಂಗಳ ಭವಿಷ್ಯ ನೋಡಿದರೆ ಕೆಲವು ರಾಶಿಗಳಿಗೆ ತುಂಬಾನೇ ಒಳ್ಳೆಯದಿದೆ, ಅವರು ವರ್ಷದ ಕೊನೆಯ ತಿಂಗಳನ್ನು ಹೆಚ್ಚೇನು ಚಿಂತೆಯಿಲ್ಲದೆ ಕಳೆಯಬಹುದು, ಅದೇ ಕೆಲ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು.
ಈ ತಿಂಗಳಿನಲ್ಲಿ ಯಾರಿಗೆ ಅದೃಷ್ಟ, ಯಾರು ಜಾಗ್ರತೆವಹಿಸಬೇಕು ಎಂದು ನೋಡೋಣ ಬನ್ನಿ:
ಈ 2 ರಾಶಿಗಳಿಗೆ ಅದೃಷ್ಟ
ಮೇಷ ರಾಶಿ
ಈ ತಿಂಗಳಿನಲ್ಲಿ ಏರಳಿತಗಳಿದ್ದರೂ ಅನೇಕ ಅನಿರೀಕ್ಷಿತ ಒಳ್ಳೆಯ ಸಂಗತಿಗಳು ನಡೆಯುತ್ತದೆ. ಗ್ರಹಗಳ ಸ್ಥಾನಗಳು ನಿಮಗೆ ಅನುಕೂಲಕರವಾದ ಸ್ಥಾನದಲ್ಲಿರುವುದರಿಂದ ನೀವು ತೆಗೆದುಕಳ್ಳುವ ನಿರ್ಧಾರಗಳು ಮತ್ತು ಮಾಡಿದ ಕೆಲಸಗಳು ಸಹ ಪ್ರಶಂಸಿಸಲ್ಪಡುತ್ತವೆ. ಭೂ ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗುತ್ತವೆ. ನೀವು ಯಾವುದೇ ರೀತಿಯ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಈ ಗ್ರಹಗಳ ಸಂಚಾರವು ಅದಕ್ಕೆ ಅನುಕೂಲಕರವಾಗಿರುತ್ತದೆ. ನೀವು ವಿದೇಶ ಪ್ರವಾಸಕ್ಕೆ ಹೋಗ ಬಯಸುವುದಾದರೆ ಪರಿಸ್ಥಿತಿಗಳು ಕೂಡಿ ಬರಲಿದೆ. ಈ ತಿಂಗಳ 21-22 ರಂದು ಜಾಗರೂಕರಾಗಿರಿ.
ಕುಂಭ ರಾಶಿ
ಈ ತಿಂಗಳು ತುಂಬಾನೇ ಚೆನ್ನಾಗಿದೆ. ತಿಂಗಳಾಂತ್ಯದವರೆಗೂ ಯಶಸ್ವಿನ ದಿನಗಳಾಗಿವೆ. ನಿಮ್ಮ ಧೈರ್ಯ ಮತ್ತು ಶೌರ್ಯದ ಬಲದ ಮೇಲೆ, ನೀವು ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ನಿಮ್ಮ ಶಕ್ತಿ ಹೆಚ್ಚಾಗುವುದು. ಭೂ ಆಸ್ತಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿವೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ತಿಂಗಳ 19-20 ರಂದು ಜಾಗರೂಕರಾಗಿರಿ.
ಯಾರು ಹುಷಾರಾಗಿರಬೇಕು?
ಮಿಥುನ ರಾಶಿ: ಆರ್ಥಿಕ ದೃಷ್ಟಿಕೋನದಿಂದ ಸಮಯವು ಅನುಕೂಲಕರವಾಗಿದೆ, ಆದರೆ ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ತುಂಬಾ ಪ್ರತಿಕೂಲವಾಗಬಹುದು, ಆದ್ದರಿಂದ ಈ ಅವಧಿಯಲ್ಲಿ ಕೆಲಸದ ಜಾಗದಲ್ಲಿ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ, ವಿಷಯಗಳು ನಿಮ್ಮ ನಿಯಂತ್ರಣದಲ್ಲಿ ಬರುತ್ತದೆ ಎಂದು ತೋರುವುದು, ಅಷ್ಟರಲ್ಲಿ ಇನ್ನು ಕೆಲವು ಸವಾಲುಗಳು ಬರಬಹುದು. ಈ ತಿಂಗಳಿನಲ್ಲಿ ಕುಟುಂಬದಲ್ಲೂ ಸಾಕಷ್ಟು ಒತ್ತಡಗಳಿರುತ್ತದೆ. ಆಯಾಸಕರ ಪ್ರಯಾಣವಿರುತ್ತದೆ.
ಕರ್ಕ ರಾಶಿ:
ಈ ತಿಂಗಳಿನಲ್ಲಿ ಕೆಲಸದ ಸ್ಥಳದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗಬಹುದು. ನೀವು ಅಜಾಗರೂಕರಾಗಿರದಿದ್ದರೆ ಈ ಸಮಯದಲ್ಲಿ ನಿಮ್ಮ ಕೆಲಸಕ್ಕೆ ಅಪಾಯ ಉಂಟಾಗಬಹುದು. ತಿಂಗಳಾಂತ್ಯದಲ್ಲಿ ಸಮಾಧಾನದಿಂದ ಕೂಡಿರುತ್ತದೆ. ಕೆಲವು ಕಾರಣಗಳಿಂದ ಕುಟುಂಬದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ಕೂಡ ಉದ್ಭವಿಸಬಹುದು. ನಿದ್ರಾಹೀನತೆ ಸಮಸ್ಯೆಯಾಗಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ.
ಸಿಂಹ ರಾಶಿ:
ಈ ತಿಂಗಳು ನಿಮ್ಮನ್ನು ಅನೇಕ ಅನಿರೀಕ್ಷಿತ ಏರಿಳಿತಗಳನ್ನು ಎದುರಿಸುವಂತೆ ಮಾಡುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಪ್ರಯೋಜನಗಳನ್ನು ಪಡೆದರೂ ಅಹಿತಕರ ಸುದ್ದಿಗಳನ್ನು ಸ್ವೀಕರಿಸುವ ಸಾಧ್ಯತೆಗಳು.
ಕನ್ಯಾ ರಾಶಿ:
ಯಾವುದೇ ವದಂತಿಯು ನಿಮ್ಮ ಮನಸ್ಸನ್ನು ಚಂಚಲಗೊಳಿಸಬಹುದು, ಅನಗತ್ಯ ಒತ್ತಡ ಮತ್ತು ಚಿಂತೆಗಳು ನಿಮ್ಮನ್ನು ಸುತ್ತುವರೆದು ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವುದು. ಪ್ರಯಾಣದಿಂದ ನಷ್ಟವಾಗುವ ಸಂಭವವಿರುವುದರಿಂದ ಆದಷ್ಟು ದೂರ ಪ್ರಯಾಣದಿಂದ ದೂರವಿರುವುದು ಉತ್ತಮ.
ಮಕರ ರಾಶಿ:
ಕೆಲಸದ ಸ್ಥಳದಲ್ಲಿ, ನಿಮ್ಮ ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಿ ನಿಮಗೆ ಹಾನಿಯುಂಟು ಮಾಡಲು ಪ್ರಯತ್ನಿಸಬಹುದು. ಎದುರಾಳಿಗಳ ಬಗ್ಗೆ ಗಮನ ನೀಡದೆ ನಿಮ್ಮ ಕೆಲಸದತ್ತ ಗಮನ ನೀಡುವುದು ಉತ್ತಮವಾಗಿದೆ. ಕುಟುಂಬದಲ್ಲಿಯೂ ಸವಾಲುಗಳನ್ನು ಎದುರಿಸಬಹುದು. ಯಾವುದೇ ವಿಷಯವು ನ್ಯಾಯಾಲಯವನ್ನು ತಲುಪಬಹುದು. ಆದ್ದರಿಂದ ಈ ಅವಧಿಯಲ್ಲಿ ನಿಮ್ಮ ಕೋಪ ನಿಯಂತ್ರಿಸಿ. ಮಾನಸಿಕ ಒತ್ತಡದಿಂದಾಗಿ ಆರೋಗ್ಯ ಹದಗೆಡಬಹುದು, ಆರೋಗ್ಯದ ಕಡೆ ಗಮನ ನೀಡಿ.
ಧನು ರಾಶಿ:
ವೃತ್ತಿಗೆ ಸಂಬಂಧಿಸಿದಂತೆ ಚಿಂತೆ ಹೆಚ್ಚಬಹುದು, ಈ ತಿಂಗಳಿನಲ್ಲಿ ಖರ್ಚು ಹೆಚ್ಚಾಗಲಿದೆ. ಖರ್ಚು ನಿಯಂತ್ರಿಸಲು ನೀವು ಬಜೆಟ್ ಪ್ಲ್ಯಾನ್ ಮಾಡಿ. ದೂರದ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ನಿಮ್ಮ ಕೋಪವನ್ನು ನಿಯಂತ್ರಿಸಿ, ಇಲ್ಲದಿದ್ದರೆ ನಷ್ಟ ಹೆಚ್ಚಾಗಬಹುದು.



Click it and Unblock the Notifications












