Latest Updates
-
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ -
ಡೇಟಿಂಗ್ ಆಪ್ಗಳಲ್ಲಿ ಎಐ ಚಾಟ್ಬಾಟ್ ವಂಚನೆ: ನಿಮ್ಮ ಪ್ರೀತಿಯೇ ಬಲೆ ಆಗಬಹುದು, ಎಚ್ಚರ! -
ಚೆನ್ನೈನಲ್ಲಿ ಭಾರಿ ಮಳೆ: ಅಪಾರ್ಟ್ಮೆಂಟ್ ನಿವಾಸಿಗಳು ಮರೆಯದೆ ಮಾಡಬೇಕಾದ 20 ನಿಮಿಷದ ಸೇಫ್ಟಿ ಚೆಕ್ಲಿಸ್ಟ್ -
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಶಿ ಪ್ರಕಾರ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಯಾವ ರಾಶಿಯವರು ಹೇಗೆ ಪೂಜಿಸಬೇಕು ನೋಡಿ
ಶ್ರೀ ಆಂಜನೇಯ ಶ್ರೀ ರಾಮನ ಭಕ್ತ. ಭಕ್ತಿ ಎಂದರೆ ಏನು, ಹೇಗಿರುತ್ತದೆ ಎಂಬುವುದಕ್ಕೆ ನಿದರ್ಶನ ಹನುಮಂತ. ಹನುಮಂತನನ್ನು ಪೂಜಿಸಿದರೆ ಐಶ್ವರ್ಯ, ಧೈರ್ಯ, ಆತ್ಮಸ್ಥೈರ್ಯ, ಆರೋಗ್ಯ ಎಲ್ಲವೂ ಲಭಿಸುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಬಹುದು, ರೋಗಗಳು ದೂರಾಗುವುದು.

ಜ್ಯೋತಿಷ್ಯದಲ್ಲಿ ನಿಮ್ಮ ರಾಶಿಯ ಪ್ರಕಾರ ಹನುಮಂತನ ಪೂಜಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜಿಸಿದರೆ ಹೆಚ್ಚಿನ ಫಲ ಸಿಗುವುದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರು ಅಧಿಪತಿ ಮಂಗಳ. ಮಂಗಳವಾರ ಹಾಗೂ ಶನಿವಾರ ಹನುಮಂತನಿಗೆ ಕುಂಕುಮ ಅರ್ಪಿಸಿ ಪೂಜೆ ಸಲ್ಲಿಸಿ.

ವೃಷಭ ರಾಶಿಯವರು
ವೃಷಭ ರಾಶಿಯವರು ಪ್ರತಿದಿನ ಒಂದು ಬಾರಿಯಾದರೂ ಹನುಮಾನ್ ಚಾಲೀಸ ಹೇಳಿದರೆ ಕಷ್ಟಗಳು, ರೋಗಗಳು ದೂರಾಗುವುದು.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ, ಹನುಮಂತನಿಗೆ ಬುಧನ ರಕ್ಷಣೆ ಇದೆ. ನೀವು ಶನಿವಾರ ಹನುಮಂತನಿಗೆ ಬೂಂದಿ ಪ್ರಸಾದ ಅರ್ಪಿಸಿ.

ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ನೀವು ಕೆಂಪು ವಸ್ತ್ರ ಅರ್ಪಿಸಿ.

ಸಿಂಹ ರಾಶಿ
ಸಿಂಹ ರಾಶಿಯವರ ಅಧಿಪತಿ ಸೂರ್ಯ. ನೀವು ಶ್ರೀ ಆದಿತ್ಯ ಹೃದಯ ಸ್ತೋತ್ರ ಪಠಿಸಿ, ಬಡವರಿಗೆ ಆಹಾರವನ್ನು ನೀಡಿದರೆ ಹನುಮಂತನಿಗೆ ತೃಪ್ತಿಯಾಗುವುದು.

ಕನ್ಯಾ ರಾಶಿ
ಕನ್ಯಾ ರಾಶಿಯವರ ಅಧಿಪತಿ ಬುಧ ನೀವು ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸವನ್ನು 108 ಬಾರಿ ಪಠಿಸಿ.

ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ರಾಮಚರಿತ ಮಾನಸ ಬಾಲಕಾಂಡ ಓದಿದರೆ ಕಷ್ಟಗಳು, ರೋಗಗಳು ದೂರಾಗುವುದು, ಐಶ್ವರ್ಯ ಹೆಚ್ಚುವುದು, ಜೀವನದಲ್ಲಿ ಯಶಸ್ಸು ಪಡೆಯುವಿರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ನೀವು ಪ್ರತೀದಿನ ಓಂ ಶ್ರೀ ಹನುಮಂತೇ ನಮಃ ಪಠಿಸಿದರೆ ಎಲ್ಲಾ ಸಮಸ್ಯೆಗಳು ದೂರಾಗುವುದು, ನಿಮ್ಮ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಯಾವುದೇ ದೇವಾಲಯಕ್ಕೆ ಹೋಗಿ ಶ್ರೀ ಸೀತಾ ಮಂತ್ರ ಪಠಿಸಿ ರಾಮ ಚರಿತೆ ಮಾನಸ ಪುಸ್ತಕವನ್ನು ಹಂಚಿದರೆ ಶ್ರೀ ಹನುಮಂತನ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ. ಶನಿ ದೇವನ ಗುರು ಹನುಮಂತ. ನೀವು ಶನಿ ದೇವರನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಮಂಗಳವಾರ, ಶನಿವಾರ ಹನಮಾನ್ ಚಾಲೀಸ ಪಠಿಸಿ, ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರಾಗಿ ಬದುಕಿನಲ್ಲಿ ಸಂತೋಷ ನೆಲೆಸುವುದು.

ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ. ನೀವು ಶ್ರೀ ರಾಮ ಮಂತ್ರ ಪಠಿಸಿ ಹಾಗೂ ಹನುಮಾನ್ ಚಾಲೀಸ ಹೇಳಿ. ಇದರಿಂದ ನಿಮ್ಮ ಬದುಕಿನಲ್ಲಿ ನೆಮ್ಮದಿ, ಪ್ರೀತಿ, ಶಾಂತಿ, ಸಂತೋಷ ಇರುತ್ತದೆ.

ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ನೀವು ಪ್ರತಿ ದಿನ ಶ್ರೀ ಹನುಮಂತೇ ನಮಃ ಪಠಿಸಿದರೆ ಆರೋಗ್ಯ, ಐಶ್ವರ್ಯ, ಯಶಸ್ಸಯ ಲಭಿಸುವುದು.



Click it and Unblock the Notifications
