ಹೀಗೆ ಮಾಡಿದ್ರೆ ಖಂಡಿತ ಪಿತೃದೋಷ, ಪಾಪ-ಕರ್ಮಗಳು ದೂರಾಗುವುದು

ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗೂ ಏಳು ಜನ್ಮಗಳು ಇರುತ್ತವೆ ಎಂಬ ನಂಬಿಕೆಯಿದೆ. ನಾವು ಈ ಜನ್ಮದಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದರೆ ಅದು ಪೂರ್ವ ಜನ್ಮದ ಕರ್ಮದ ಫಲ ಎಂದು ಹೇಳುವುದುಂಟು. ಹೋದ ಜನ್ಮದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಮಾತ್ರ ಈ ಜನ್ಮದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಪಾಪ ಪುಣ್ಯದ ಲೆಕ್ಕಾಚಾರ ನಾವು ಅಂದುಕೊಂಡಷ್ಟು ಸುಲಭ ಅಂತೂ ಖಂಡಿತ ಇಲ್ಲ.

Follow These Practice To Eliminate your Karma And Sins From Your Previous Birth In Kannada.

ಕೆಲವೊಂದು ಬಾರಿ ನಮ್ಮ ಪೂರ್ವಜರು ಮಾಡಿದ ಪಾಪವು ಈ ಜನ್ಮದಲ್ಲಿ ನಮ್ಮನ್ನು ಕಾಡುವುದುಂಟು. ಇದು ಕೇವಲ ನಂಬಿಕೆ ಅಷ್ಟೇ, ಇದೇ ಸತ್ಯ ಅಂತ ಹೇಳೋದಕ್ಕೆ ಪುರಾವೆಗಳು ಸಿಕ್ಕಿಲ್ಲ. ಆದರೆ ಜನರಲ್ಲಿ ಅಂತಹದೊಂದು ಆಳವಾದ ನಂಬಿಕೆ ಬೇರೂರಿ ಬಿಟ್ಟಿದೆ. ಹಾಗಾದ್ರೆ ಸಂಕಷ್ಟಗಳು ಕಳೆಯಬೇಕಾದರೆ ಏನು ಮಾಡ್ಬೇಕು? ಈ ರೀತಿ ಮಾಡುವುದರಿಂದ ನಮ್ಮ ಪಾಪ ಪರಿಹಾರವಾಗಿದ್ಯಾ? ಪಾಪ-ಕರ್ಮ ಪರಿಹಾರವಾಗಲು ಯಾವ ಆಚರಣೆಗಳನ್ನು ಅನುಸರಿಸಬೇಕೆಂದು ಹೇಳ್ತೀವಿ.

ಕರ್ಪೂರ ಬೆಳಗಿ

ಕರ್ಪೂರ ಬೆಳಗಿ

ಹಿಂದೂ ಸಂಪ್ರದಾಯದಲ್ಲಿ ಕರ್ಪೂರಕ್ಕೆ ಮಹತ್ವದ ಸ್ಥಾನವಿದೆ. ಕರ್ಪೂರ ಬೆಳಗುವುದರಿಂದ ದುಷ್ಟ ಶಕ್ತಿಗಳು ದೂರವಾಗುತ್ತದೆ ಎಂಬ ನಂಬಿಕೆಯೂ ಇದೆ. ಪೂಜೆಯ ವೇಳೆ ನಿತ್ಯವು ಮನೆಯಲ್ಲಿ ಕರ್ಪೂರ ಬೆಳಗಬೇಕು. ಇದರಿಂದ ಪೂರ್ವಜನ್ಮದ ಪಾಪಗಳು ಮತ್ತು ಕರ್ಮ ತೊಲಗಲಿದ್ಯಂತೆ.

ಬಿಲ್ವಪತ್ರೆ ಮರಕ್ಕೆ ಪ್ರದರ್ಶಿಣೆ ಹಾಕಿ

ಬಿಲ್ವಪತ್ರೆ ಮರಕ್ಕೆ ಪ್ರದರ್ಶಿಣೆ ಹಾಕಿ

ಬಿಲ್ವಪತ್ರೆಯು ಶಿವನಿಗೆ ಪೂಜ್ಯವಾದ ವಸ್ತು. ಶಿವನ ದೇವಸ್ಥಾನಗಳಲ್ಲಿ ಬಿಲ್ವಪತ್ರೆ ಇರಲೇಬೇಕು. ಬಿಲ್ವಪತ್ರೆ ಪೂಜೆಗಷ್ಟೇ ಅಲ್ಲ, ಇದರಿಂದ ಸಾಕಷ್ಟ ಆರೋಗ್ಯಕರ ಉಪಯೋಗಗಳು ಇದೆ. ಬಿಲ್ವಪತ್ರೆಯ ಎಲೆ, ರೆಂಬೆ, ಕೊಂಬೆ, ಕಾಯಿ ಎಲ್ಲದರಲ್ಲೂ ಔಷಧೀಯ ಗುಣಗಳಿದೆ. ಅಂತಹ ಬಿಲ್ವಪತ್ರೆಯ ಮರವನ್ನು ರವಿವಾರ ಬೆಳಗ್ಗೆ ಅಥವಾ ಸಂಜೆ ಮೂರು ಬಾರಿ ಪ್ರದಕ್ಷಿಣೆ ಹಾಕಬೇಕು. ಇದರಿಂದ ಹೋದ ಜನ್ಮದ ಪಾಪ, ಕರ್ಮ ಪರಿಹಾರವಾಗಲಿದ್ಯಂತೆ.

 ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಿ

ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಿ

ಅನ್ನದಾನಕ್ಕಿಂತ ಮಹಾದಾನ ಯಾವುದಿಲ್ಲ ಅಂತಾರೆ ಕೇವಲ ಮನುಷ್ಯರಿಗೆ ಅನ್ನದಾನ ಮಾಡಿದದರೆ ನಮಗೆ ಪುಣ್ಯ ಬರುವುದಿಲ್ಲ. ಅದರ ಜೊತೆಗೆ ನಮ್ಮ ಜೊತೆಗೆ ನಮ್ಮ ಸುತ್ತಮುತ್ತಲು ವಾಸಿಸುವ ಪ್ರಾಣಿ-ಪಕ್ಷಿಗಳ ಬಗ್ಗೆ ಕೂಡ ನಾವು ಚಿಂತಿಸಬೇಕು. ದನ, ನಾಯಿ, ಇರುವೆ, ಹಕ್ಕಿ ಹೀಗೆ ಎಲ್ಲಾ ಜಾತಿಯ ಪ್ರಾಣಿಗಳಿಗೂ ಆಹಾರ ನೀಡಬೇಕು. ಇದರಿಂದ ನಮ್ಮ ಪಾಪ-ಕರ್ಮಗಳು ಕಳೆಯಲಿದ್ಯಂತೆ.

ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ರೀತಿ ಮಾಡಿ

ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ರೀತಿ ಮಾಡಿ

ಸೋಮವಾರದ ದಿನ 14 ಬಿಲ್ವಪತ್ರೆ ಗಿಡ, ಶುಕ್ರವಾರ 9 ನೆಲ್ಲಿಕಾಯಿ, ಶನಿವಾರ 8 ಹೂವಿನ ಗಿಡ ನೆಡಬೇಕಂತೆ. ಹೀಗೆ ಪ್ರತಿವಾರ ಮಾಡಿ 90 ದಿನಗಳ ಕಾಲ ಇದನ್ನು ಚಾಚು ತಪ್ಪದೇ ಪಾಲಿಸಬೇಕು. ಹೀಗೆ ಮಾಡುತ್ತಾ ಬಂದರೆ ಪೂರ್ವ ಜನ್ಮದ ಪಾಪಗಳು ಕಳೆಯಲಿದೆ.

ಈ ದಿನ ದಾನ ಮಾಡಿ

ಈ ದಿನ ದಾನ ಮಾಡಿ

ದಾನ ಮಾಡಲು ಇಂತಹದ್ದೆ ವಸ್ತು ಅಥವಾ ಇಂತಹದ್ದೇ ದಿನ ಆಗಬೇಕಿಲ್ಲ. ದಾನದಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಅಮವಾಸ್ಯೆ, ಪುರ್ಣಿಮಾ ಹಾಗೂ ಅಕ್ಷಯ ತೃತಿಯದ ದಿನ ದಾನ ಮಾಡುವುದರಿಂದ ಹೋದ ಜನ್ಮದಲ್ಲಿ ಮಾಡಿದ ಪಾಪಗಳು ತೊಲಗಿ ಪುನೀತರಾಗುತ್ತೀರಿ ಎಂಬ ನಂಬಿಕೆಯಿದೆ.

ಹೂವಿನ ಗಿಡ ನೆಟ್ಟುಬಿಡಿ

ಹೂವಿನ ಗಿಡ ನೆಟ್ಟುಬಿಡಿ

ಪ್ರತಿ ಅಮಾವಾಸ್ಯೆಯ ದಿನ 9 ಹೂವಿನ ಗಿಡಗಳನ್ನು ನೆಡಬೇಕು. ಇದು ನಮ್ಮ ಪಾಪ ಕಳೆಯಲು ಸಹಾಯ ಮಾಡುತ್ತದೆ. ಈ ಬಗ್ಗೆ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದರೂ ಜನ ಈ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳೋ ಪ್ರಯತ್ನ ಮಾಡುವುದಿಲ್ಲ.

ಈ ಮರಗಳಿಗೆ ಪೂಜೆ ಸಲ್ಲಿಸಿ

ಈ ಮರಗಳಿಗೆ ಪೂಜೆ ಸಲ್ಲಿಸಿ

ಆಲದ ಮರಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ. ಈ ಮರವನ್ನು ನಿತ್ಯವು ಭಕ್ತಿಯಿಂದ ಪೂಜಿಸಿರಿ. ಆಲದ ಮರದ ಬೇರುಗಳಿಗೆ ನಿತ್ಯವು ನೀರುಣಿಸಬೇಕು. ಹಾಗೂ ಈ ಮರದ ನೆರಳಿನಲ್ಲಿ ಕೂತು ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ನಮ್ಮ ತಲೆಯಲ್ಲಿನ ಕೆಟ್ಟ ಆಲೋಚನೆಗಳು ತೊಲಗುತ್ತದೆ. ಹಾಗೂ ಪೂರ್ವ ಜನ್ಮದ ಪಾಪ-ಕರ್ಮಗಳು ನಾಶವಾಗಲಿದೆ.

ದಾನ

ದಾನ

ದಾನದ ನಿಯಮ ಏನೆಂದರೆ ಹುಣ್ಣಿಮೆಯ ದಿನ ದಾನ ಮಾಡಿದರೆ ಉತ್ತಮವೆಂದು ನಂಬಲಾಗಿದೆ. ಈ ದಿನ ನೀವು ನಿಮ್ಮ ಪೂರ್ವಜರ ಹೆಸರಿನಲ್ಲಿ ದಾನ ಮಾಡಿದರೆ ಪಾಪ ಕರ್ಮಗಳು ಕಳೆಯಿದೆ ಎಂದು ನಂಬಲಾಗಿದೆ. ನಿರಂತರವಾಗಿ ದಾನ ಕಾರ್ಯಗಳನ್ನು ಮಾಡಿದರೆ ಪಿತೃ ದೋಷವು ಕೂಡ ಪರಿಹಾರವಾಗಲಿದೆ.

ನಾವು ಅರಿತೋ ಅರಿಯದೆಯೋ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅಥವಾ ನಮ್ಮ ಪೂರ್ವಜರು ಮಾಡಿದ ಕರ್ಮಗಳಿಗೆ ಈ ಜನ್ಮದಲ್ಲಿ ನಾವು ಸಂಕಷ್ಟಗಳನ್ನು ಅನುಭವಿಸುತ್ತಿರುತ್ತೇವೆ. ಚಾಣಕ್ಯನು ಹೇಳಿದ ಈ ನೀತಿಗಳನ್ನು ಪಾಲನೆ ಮಾಡಿದರೆ ನಾವು ಮಾಡಿರೋ ಪಾಪ-ಕರ್ಮಗಳು ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗಬಹುದು. ಜೀವನ ನಶ್ವರ, ಇರುವ ನಾಲ್ಕು ದಿನ ನಮ್ಮಿಂದ ಮತ್ತೊಬ್ಬರಿಗೆ ಏನಾದರೂ ಸಹಾಯವಾದರೆ ಮಾಡಿ ಪುಣ್ಯಕಟ್ಟಿಕೊಳ್ಳಿ.

English summary

Follow These Practice To Eliminate your Karma And Sins From Your Previous Birth In Kannada.

Here are the Solution to Eliminate your Karma And Sins From Your Previous Birth in Kannada.
X
Desktop Bottom Promotion