Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
Durga Ashtami 2022: ಈ ದಿನ ಮಾಡುವ ಹೋಮ-ಹವನ ಮಾಡಿದರೆ ಸಿಗುವುದು ಈ ವಿಶೇಷ ಫಲ
ನವರಾತ್ರಿಯ ಪ್ರತಿಯೊಂದು ದಿನವೂ ವಿಶೇಷವೇ, ಅದರಲ್ಲೂ ನವರಾತ್ರಿಯ ಎಂಟನೇ ದಿನ ತುಂಬಾನೇ ವಿಶೇಷವಾಗಿದೆ ಈ ದಿನ ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ದುರ್ಗಾಷ್ಟಮಿಯನ್ನು ದೇಶದ ವಿವಿಧ ಕಡೆ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ದೇವಿಯನ್ನು ಪೂಜಿಸುವುದರಿಂದ ದೇವಿಯ ಕೃಪಗೆ ಪಾತ್ರರಾಗುತ್ತೀರಿ.

ಈ ಸಾಲಿನಲ್ಲಿ ದುರ್ಗಾಷ್ಟಮಿ ಯಾವಾಗ? ಈ ದಿನ ಮಾಡುವ ಉಪವಾಸದ ಮಹತ್ವವೇನು, ಹೋಮ ಮಾಡಲು ತುಂಬಾನೇ ಸೂಕ್ತವಾದ ದಿನ, ಏಕೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ದುರ್ಗಾಷ್ಟಮಿ ಪೂಜೆಯ ಮುಹೂರ್ತ
ದಿನಾಂಕ: ಅಕ್ಟೋಬರ್ 3, ಸೋಮವಾರ
ತಿಥಿ ಸಮಯ: ಅಕ್ಟೋಬರ್ 2 ಸಂಜೆ 6:47ರಿಂದ ಅಕ್ಟೋಬರ್ 3, ಸಂಜೆ 4:38ರವರೆಗೆ

ರವಿ ಮತ್ತು ಶೋಭನ ಯೋಗದಲ್ಲಿ ದುರ್ಗಾ ಅಷ್ಟಮಿ
ದುರ್ಗಾ ಅಷ್ಟಮಿಯ ದಿನದಂದು ರವಿಯೋಗ ಮತ್ತು ಶೋಭನ ಯೋಗ ಉಂಟಾಗಿದೆ. ಈ ಎರಡೂ ಯೋಗಗಳು ಶುಭ ಕಾರ್ಯಗಳಿಗೆ ಮಂಗಳಕರ. ಬೆಳಗ್ಗಿನಿಂದ ಮಧ್ಯಾಹ್ನ 02.22ರವರೆಗೆ ಶೋಭನ ಯೋಗ. ರವಿಯೋಗವು ತಡರಾತ್ರಿ 12.25 ರಿಂದ ಮರುದಿನ ಬೆಳಿಗ್ಗೆ 06.15 ರವರೆಗೆ ಇರುತ್ತದೆ.

ದುರ್ಗಾಷ್ಟಮಿ ವ್ರತದ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಿಯನ್ನು ಹೂಗಳಿಂದ ಅಲಂಕರಿಸಬೇಕು.
* ದೇವಿಗೆ ದೀಪವನ್ನು ಬೆಳಗಿ, ಧೂಪ ಹಚ್ಚಿ, ಅಗರಬತ್ತಿ ಹಚ್ಚಿ ಪೂಜಿಸಿ
* ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ.
* ಈ ದಿನ ವ್ರತ ಮಾಡುವವರು ನೆಲದ ಮೇಲೆ ಮಲಗುತ್ತಾರೆ.
* ಕೆಲವರು ನೀರು ಸಹ ಸೇವಿಸಿದೆ ಕಟ್ಟುನಿಟ್ಟಿನ ವ್ರತ ಪಾಲಿಸಿದರೆ ಅಷ್ಟೊಂದು ಕಠಿಣ ವ್ರತ ಪಾಲಿಸಲು ಸಾಧ್ಯವಾಗದವರು ಹಣ್ಣು ಹಾಗೂ ಹಾಲು ಸೇವಿಸಬಹುದು.
* ಈ ದಿನ ಪೂಜೆ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು
* ನಂತರ ಸಮೀಪದ ದೇವಿಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬರುವುದು ಒಳ್ಳೆಯದು.

ದುರ್ಗಾಷ್ಟಮಿ ಮಹತ್ವ
* ದೇವಿಯ ಆಶೀರ್ವಾದ ಪಡೆಯಲು ಉಪವಾಸವಿದ್ದು ದುರ್ಗಾಷ್ಟಮಿ ಆಚರಿಸಲಾಗುವುದು.
* ಯಾರು ದುರ್ಗಾಷ್ಟಮಿ ವ್ರತವನ್ನು ಆಚರಿಸುತ್ತಾರೋ ಅವರಿಗೆ ದೇವಿ ಸಂತೋಷ, ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ.
* ಇನ್ನು ನವರಾತ್ರಿಯಲ್ಲಿ ಒಂಭತ್ತು ದಿನ ಉಪವಾಸವಿರಲು ಸಾಧ್ಯವಾಗದವರು ನವರಾತ್ರಿಯ ಮೊದಲ ಹಾಗೂ ದುರ್ಗಾಷ್ಟಮಿಯಂದು ಉಪವಾಸ ಮಾಡುತ್ತಾರೆ.
* ದುರ್ಗಾಷ್ಟಮಿಯ ದಿನ ಕನ್ಯಾಪೂಜೆ ಮಾಡಲಾಗುವುದು. ಈ ದಿನ ಇನ್ನು ಮುಟ್ಟಿನ ಚಕ್ರ ಪ್ರಾರಂಭವಾಗ 9 ಹುಡುಗಿಯರನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಸಿಹಿತಿಂಡಿ, ಉಡುಗೊರೆಗಳನ್ನು ನೀಡಲಾಗುವುದು.
* ನವರಾತ್ರಿಯಲ್ಲಿ ಮಾಡುವ ಪೂಜೆ-ಹವನಗಳಿಗೆ ತುಂಬಾನೇ ಮಹತ್ವ ಹೊಂದಿದೆ. ಈ ದಿನ ಹೋಮ ಮಾಡಿದರೆ ಎಲ್ಲಾ ದೇವತೆಗಳು ಸಂತುಷ್ಟರಾಗುತ್ತಾರೆ, ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.



Click it and Unblock the Notifications
