Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಶುಕ್ರವಾರದ ದಿನ ಭವಿಷ್ಯ: 22 ಮೇ 2020
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಸಂವತ್ಸರ: ಶಾರ್ವರಿ
ಆಯನ: ಉತ್ತರಾಯನ
ಋತು: ಗ್ರೀಷ್ಮ
ಮಾಸ: ವಸಂತ
ಪಕ್ಷ: ಕೃಷ್ಣ
ತಿಥಿ: ಚತುರ್ದಶಿ
ನಕ್ಷತ್ರ: ಭರಣಿ
ರಾಹುಕಾಲ: ಮಧ್ಯಾಹ್ನ 2.01 ರಿಂದ 3.43 ರವರೆಗೆ
ಗುಳಿಕಕಾಲ: ಬೆಳಿಗ್ಗೆ 8.53 ರಿಂದ 10.35 ರವರೆಗೆ
ಯಮಗಂಡಕಾಲ: ಬೆಳಿಗ್ಗೆ 5.27 ರಿಂದ 7.10 ರವರೆಗೆ
ದುರ್ಮುಹೂರ್ತ: ಬೆಳಿಗ್ಗೆ 10.01 ರಿಂದ 10.56 ರವರೆಗೆ
ಸೂರ್ಯೋದಯ: ಬೆಳಿಗ್ಗೆ 5.28
ಸೂರ್ಯಾಸ್ತ: ಸಂಜೆ 7.08
ಸೂರ್ಯಾಸ್ತ: ಸಂಜೆ 5.27

ಮೇಷ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಇಂದು ಉತ್ತಮವಾಗಿರುತ್ತದೆ. ಹೆಚ್ಚುವರಿ ಹಣವನ್ನು ಗಳಿಸಲು ಉತ್ತಮ ಅವಕಾಶ ಸಿಗುತ್ತದೆ ಮತ್ತು ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ ತಂದೆ ಅಥವಾ ಯಾವುದೇ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಸಕಾರಾತ್ಮಕತೆಯು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ನೀಡುತ್ತದೆ. ವೈಯಕ್ತಿಕ ಜೀವನದ ತೊಂದರೆಗಳಿಂದ ಪರಿಹಾರ ಪಡೆಯಲು, ಇಂದು ಇಷ್ಟಪಡುವ ಕೆಲಸಗಳಲ್ಲಿ ಹೆಚ್ಚಿನ ಗಮನವನ್ನು ನೀಡುತ್ತೀರಿ. ಬಹುಶಃ ಇಂದು ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಉದ್ಯೋಗದಲ್ಲಿರುವವರು ಇಂದು ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಮತ್ತು ಉದ್ಯೋಗಿಗಳ ಕೆಲಸದಿಂದಲೂ ತೃಪ್ತರಾಗುತ್ತಾರೆ. ನಿಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ನಿಮ್ಮ ಖ್ಯಾತಿಗೆ ಕಳಂಕ ಉಂಟಾಗುತ್ತದೆ.
ಉತ್ತಮ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 36
ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 7:00 ರವರೆಗೆ

ವೃಷಭ ರಾಶಿ
ಇಂದು ಹಣದ ವಿಷಯದಲ್ಲಿ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಆರ್ಥಿಕ ವ್ಯವಹಾರ ಸಮಸ್ಯೆಗೆ ಸಿಲುಕಬಹುದು. ಬಿಡುವಿನ ವೇಳೆಯಲ್ಲಿ ಏನನ್ನಾದರೂ ಮಾಡಿ ಅದು ನಿಮಗೆ ಸಂತೋಷ ನೀಡುತ್ತದೆ. ಅನಗತ್ಯ ಆಲೋಚನೆಗಳು ಇಂದು ನಿಮ್ಮನ್ನು ಕಾಡುತ್ತವೆ ಆದ್ದರಿಂದ ಅತಿಯಾಗಿ ಯೋಚಿಸಬೇಡಿ ಮತ್ತು ಶಾಂತವಾಗಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಪ್ರಮುಖ ವ್ಯಕ್ತಿಯನ್ನು ಭೇಟಿ ಮಾಡಬಹುದು. ಉದ್ಯಮಿಗಳಿಗೆ ಯಾವುದೇ ಕೆಲಸವನ್ನು ಚಿಂತನಶೀಲವಾಗಿ ಮಾಡಲು ಸೂಚಿಸಲಾಗಿದೆ. ಪ್ರೀತಿಯ ದೃಷ್ಟಿಯಿಂದ ಇಂದು ಉತ್ತಮ ದಿನ. ಸಂಗಾತಿ ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದ್ದರಿಂದ ನಿಮ್ಮ ಸಂಬಂಧದಲ್ಲಿ ಶಾಂತಿ ಕಾಪಾಡಲು ಅವರನ್ನು ಕ್ಷಮಿಸಿ.
ಉತ್ತಮ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 17
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ

ಮಿಥುನ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ ಮತ್ತು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು. ಕೆಲಸದ ಬಗ್ಗೆ ಮಾತನಾಡುತ್ತಾ ನಿಮ್ಮ ವ್ಯವಹಾರದಲ್ಲಿ ದೊಡ್ಡ ಬದಲಾವಣೆಯಾಗಬಹುದು, ಈ ಕಾರಣದಿಂದಾಗಿ ನೀವು ಪ್ರಯಾಣಿಸಬೇಕಾಗಬಹುದು. ವಿಷಯಗಳು ನಿಮ್ಮ ಪರವಾಗಿ ತೋರುತ್ತಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸನ್ನು ಕಾಣುತ್ತೀರಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಕೆಲವು ದಿನಗಳಿಂದ ನಿಮ್ಮ ಸಂಗಾತಿಯು ಕಿರಿಕಿರಿ ಅನುಭವಿಸುತ್ತಿದ್ದರು ಆದರೆ ಇಂದು ನಿಮ್ಮ ಬಗ್ಗೆ ಅವರ ನಡವಳಿಕೆ ಉತ್ತಮವಾಗಿ ಬದಲಾಗುತ್ತದೆ. ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಮತ್ತು ಉಚಿತ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಆರೋಗ್ಯದ ಬಗ್ಗೆ ನೀವು ಜಾಗೃತರಾಗಿರಬೇಕು.
ಉತ್ತಮ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 6
ಅದೃಷ್ಟ ಸಮಯ: ಬೆಳಿಗ್ಗೆ 7:55 ರಿಂದ 11:20 ರವರೆಗೆ

ಕರ್ಕ ರಾಶಿ
ಇಂದು ನೀವು ತುಂಬಾ ಸಮತೋಲನದಲ್ಲಿರಬೇಕು. ವಾದಗಳನ್ನು ತಪ್ಪಿಸಿ, ಇಂದು ನಿಮ್ಮ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವಿವಾಹಿತರಿಗೆ ಈ ದಿನ ಒಳ್ಳೆಯದಲ್ಲ. ಮೂರನೇ ವ್ಯಕ್ತಿಯ ಹಸ್ತಕ್ಷೇಪವು ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಸಂಬಂಧದ ಅಡಿಪಾಯ ದೃಢವಾಗಿಡಲು ಸಂಗಾತಿಯ ಮೇಲೆ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಪ್ರಮುಖ ಕಾರ್ಯಗಳಲ್ಲಿ ಅಡೆತಡೆ ಉಂಟಾಗುತ್ತವೆ, ಅದು ನಿಮ್ಮನ್ನು ಸಾಕಷ್ಟು ಒತ್ತಡಕ್ಕೆ ಒಳಪಡಿಸುತ್ತದೆ. ಆರ್ಥಿಕ ರಂಗದಲ್ಲಿ ಹೆಚ್ಚು ಪ್ರಯೋಜನಕಾರಿ ದಿನವಲ್ಲ. ಸಾಕಷ್ಟು ಖರ್ಚು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನಿಮ್ಮ ಆರೋಗ್ಯವನ್ನು ಖಂಡಿತವಾಗಿ ಸುಧಾರಿಸುವ ಕೆಲವು ಕೆಲಸಗಳನ್ನು ಮಾಡುತ್ತೀರಿ.
ಉತ್ತಮ ಬಣ್ಣ: ತಿಳಿ ನೀಲಿ
ಅದೃಷ್ಟ ಸಂಖ್ಯೆ: 43
ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3:00 ರವರೆಗೆ

ಸಿಂಹ ರಾಶಿ
ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಸಂಗಾತಿಯು ನಿರ್ಲಕ್ಷ್ಯ ಅನುಭವಿಸುವರು. ಅವರಿಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗದಿರಬಹುದು. ವೈವಾಹಿಕ ಜೀವನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರೀತಿಯ ದೃಷ್ಟಿಕೋನವನ್ನು ನೀವು ಅರ್ಥಮಾಡಿಕೊಳ್ಳಬೇಕು. ಆರ್ಥಿಕವಾಗಿ ಈ ದಿನ ಲಾಭದಾಯಕವಾಗಿದೆ. ಇಂದು ನಿರೀಕ್ಷೆಯಂತೆ ಹಣವನ್ನು ಪಡೆಯುತ್ತೀರಿ. ಮನೆಗೆ ಅಮೂಲ್ಯ ವಸ್ತುಗಳನ್ನು ಸಹ ನೀವು ಶಾಪಿಂಗ್ ಮಾಡಬಹುದು. ಕೆಲಸದಲ್ಲಿ ಇಂದು ಸವಾಲುಗಳಿಂದ ತುಂಬಿರಬಹುದು. ನಿಮ್ಮ ಅಸಡ್ಡೆ ವರ್ತನೆ ಮುಖ್ಯಸ್ಥನ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ, ನಿಮ್ಮ ಖ್ಯಾತಿಯನ್ನು ನೀವು ಹಾಳುಮಾಡುತ್ತೀರಿ, ಆದ್ದರಿಂದ ನಿಮ್ಮ ಕೆಲಸದ ಬಗ್ಗೆ ಮಾತ್ರ ಗಮನಹರಿಸಿ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 7
ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:50

ಕನ್ಯಾ ರಾಶಿ
ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ, ಬಂಧ ಮತ್ತು ಪರಸ್ಪರ ಗೌರವ ಇರುತ್ತದೆ. ಹಿರಿಯರು ಮಾತ್ರವಲ್ಲದೆ ಸಹೋದ್ಯೋಗಿಗಳು ಸಹ ಇಂದು ಕಚೇರಿಯಲ್ಲಿ ನಿಮ್ಮ ಉತ್ತಮ ಕೆಲಸವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಹಣಕಾಸಿನ ವಿಷಯದಲ್ಲಿ ದಿನವು ಉತ್ತಮವಾಗಿದೆ ಮತ್ತು ನೀವು ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯಾವುದೇ ರೀತಿಯ ಚರ್ಚೆಯನ್ನು ತಪ್ಪಿಸಿ. ಸೃಜನಾತ್ಮಕ ಹವ್ಯಾಸಗಳು ಇಂದು ನಿಮಗೆ ನಿರಾಳತೆಯನ್ನುಂಟು ಮಾಡುತ್ತದೆ. ವೈವಾಹಿಕ ಜೀವನದಲ್ಲಿ, ಸಂಗಾತಿಯಿಂದ ಉಡುಗೊರೆಯನ್ನು ಪಡೆದರೆ ಇಂದು ನಿಮಗೆ ವಿಶೇಷ ಅನುಭವವಾಗುತ್ತದೆ. ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಕೆಟ್ಟ ಪ್ರಭಾವವು ನಿಮಗೆ ಹಾನಿ ಮಾಡುತ್ತದೆ, ಆದ್ದರಿಂದ ನೀವು ಅಂತಹ ಜನರಿಂದ ದೂರವಿರುವುದು ಉತ್ತಮ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 29
ಅದೃಷ್ಟ ಸಮಯ: ಸಂಜೆ 4:00 ರಿಂದ 7:20 ರವರೆಗೆ

ತುಲಾ ರಾಶಿ
ನೀವು ಯಶಸ್ಸನ್ನು ಸವಿಯಲು ಬಯಸಿದರೆ ಅದೃಷ್ಟವನ್ನು ಅವಲಂಬಿಸಬೇಡಿ, ಬದಲಿಗೆ ಶ್ರಮವಹಿಸಿ ಮುಂದುವರಿಯಿರಿ. ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಂದು ಹೆತ್ತವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅವರ ಸಹಾಯದಿಂದ ಯಾವುದೇ ದೊಡ್ಡ ಸಮಸ್ಯೆಯನ್ನು ತೊಡೆದುಹಾಕಬಹುದು. ಇಂದು ಹಣದ ದೃಷ್ಟಿಯಿಂದ ಪ್ರಯೋಜನಕಾರಿಯಾಗಲಿದೆ. ಇಂದು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಸಣ್ಣ ಹೂಡಿಕೆ ಕೂಡ ಮಾಡಬಹುದು. ಕೆಲಸದ ಬಗ್ಗೆ ಮಾತನಾಡುತ್ತಾ, ಇದು ಸಾಮಾನ್ಯ ದಿನವಾಗಿರುತ್ತದೆ. ಉದ್ಯೋಗಿಗಳು ಯಾವುದೇ ಅಡೆತಡೆಯಿಲ್ಲದೆ ತಮ್ಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 21
ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:30 ರವರೆಗೆ

ವೃಶ್ಚಿಕ ರಾಶಿ
ಪ್ರಣಯ ಜೀವನ ಇಂದು ಸ್ವಲ್ಪ ವಿವಾದಾಸ್ಪದವಾಗಬಹುದು. ಸಂಗಾತಿಯ ಮೇಲಿನ ನಿಮ್ಮ ನಂಬಿಕೆ ಕ್ಷೀಣಿಸುತ್ತಿರುವುದರಿಂದ ಸಂಬಂಧದಲ್ಲಿ ಕಹಿ ಹೆಚ್ಚುತ್ತದೆ. ಸಂಬಂಧವನ್ನು ಮುರಿಯುವ ಕಲ್ಪನೆಯನ್ನು ಸಹ ನೀವು ಮಾಡಬಹುದು. ಗೊಂದಲದ ಸ್ಥಿತಿಯಲ್ಲಿದ್ದರೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ದಂಪತಿಗಳಿಗೆ ಇಂದು ನೀರಸ ದಿನವಾಗಿರುತ್ತದೆ. ನೀವಿಬ್ಬರೂ ನಿಮ್ಮ ಸ್ವಂತ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ, ಆದ್ದರಿಂದ ನೀವು ಪರಸ್ಪರ ಸಮಯ ಕಳೆಯಲು ಅವಕಾಶವನ್ನು ಪಡೆಯುವುದಿಲ್ಲ. ಸಣ್ಣ ತೊಂದರೆಗಳನ್ನು ಬದಿಗಿಟ್ಟರೆ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಇದ್ದಕ್ಕಿದ್ದಂತೆ ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ಮತ್ತು ಬಹುಶಃ ಅದು ನಿಮ್ಮ ಕೆಲಸಕ್ಕೆ ಸಂಬಂಧಿಸಿರಬಹುದು. ಗ್ರಹಗಳ ಶುಭ ಸ್ಥಾನವು ಇಂದು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ.
ಉತ್ತಮ ಬಣ್ಣ: ಗಾಢ ನೀಲಿ
ಅದೃಷ್ಟ ಸಂಖ್ಯೆ: 10
ಅದೃಷ್ಟ ಸಮಯ: ಸಂಜೆ 7:30 ರಿಂದ 8:05 ರವರೆಗೆ

ಧನು ರಾಶಿ
ಹಿರಿಯರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಇಂದು ಅವರು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ನೀವು ಅದರ ಬಗ್ಗೆ ಗಮನ ಹರಿಸಬೇಕು ಏಕೆಂದರೆ ಅವರು ತಮ್ಮ ಅನುಭವದಿಂದ ನಿಮಗೆ ತಿಳಿಸುತ್ತಾರೆ. ಭವಿಷ್ಯದಲ್ಲಿ ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಮೂಲಕ ನೀವು ದೊಡ್ಡ ಲಾಭವನ್ನು ಪಡೆಯಬಹುದು. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಕಠಿಣ ಪರಿಶ್ರಮದ ಫಲವನ್ನು ನಿರೀಕ್ಷಿಸಿದಂತೆ ಪಡೆಯುವ ಸಾಧ್ಯತೆಯಿದೆ. ಉದ್ಯಮಿಯಾಗಿದ್ದರೆ ಇಂದು ನಿಮಗೆ ಶುಭವಾಗಲಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಬಯಸಿದರೆ ಇಂದು ನೀವು ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಕೆಲವು ಪ್ರಮುಖ ಕೆಲಸಗಳಿಗೆ ಹಣದ ಸಮಸ್ಯೆ ಇತ್ತು, ಇಂದು ಅದನ್ನು ನಿವಾರಿಸಬಹುದು. ಮದುವೆಯಾಗಿದ್ದರೆ ಇಂದು ನಿಮಗೆ ಸಮಾಧಾನವಾಗುತ್ತದೆ. ಸಂಗಾತಿಯೊಂದಿಗೆ ನಡೆಯುತ್ತಿರುವ ವಿವಾದ ಇಂದು ಕೊನೆಗೊಳ್ಳುತ್ತದೆ.
ಅದೃಷ್ಟ ಬಣ್ಣ: ಕಂದು
ಅದೃಷ್ಟ ಸಂಖ್ಯೆ: 8
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:30 ರವರೆಗೆ

ಮಕರ ರಾಶಿ
ಕೋಪವನ್ನು ನೀವು ನಿಯಂತ್ರಿಸಬೇಕು. ಕೋಪವನ್ನು ಇತರರ ಮೇಲೆ ಅನಗತ್ಯವಾಗಿ ಹೊರಹಾಕುವುದರಿಂದ ಲಾಭವನ್ನು ನಿರೀಕ್ಷಿಸುತ್ತೀರಿ. ಇದು ನಿಮ್ಮ ಸಂಬಂಧಗಳಲ್ಲಿ ಹುಳಿ ಹಿಡಿಯಲು ಕಾರಣವಾಗುತ್ತದೆ. ದೂರದ ಮೂಲದಿಂದ ನೀವು ಕೆಲವು ಒಳ್ಳೆಯ ಆರ್ಥಿಕ ಸುದ್ದಿಗಳನ್ನು ಸ್ವೀಕರಿಸಬಹುದು. ಶೀಘ್ರದಲ್ಲೇ ಹಣವನ್ನು ಪಡೆಯುವ ಸಾಧ್ಯತೆಯಿದೆ. ತೊಂದರೆಗೆ ಕಾರಣವಾಗುವ ಯಾವುದೇ ಕೆಲಸವನ್ನು ಇಂದು ಕಚೇರಿಯಲ್ಲಿ ಮಾಡಬೇಡಿ. ನಿಮ್ಮ ಕೆಲಸದ ಬಗ್ಗೆ ಗಮನಹರಿಸುವುದು ಉತ್ತಮ. ಪ್ರಣಯದ ವಿಷಯದಲ್ಲಿ ಇಂದು ನೀರಸ ದಿನವಾಗಿರುತ್ತದೆ ಮತ್ತು ಸಂಗಾತಿಯ ಮನಸ್ಥಿತಿ ಸರಿಯಾಗುವುದಿಲ್ಲ. ಅವರು ನಿಮ್ಮ ಬಗ್ಗೆ ಕೋಪಗೊಳ್ಳಬಹುದು, ಆದ್ದರಿಂದ ಇಂದು ನೀವು ತುಂಬಾ ಜಾಗರೂಕರಾಗಿರಬೇಕು, ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ.
ಉತ್ತಮ ಬಣ್ಣ: ಗಾಢ ಕೆಂಪು
ಅದೃಷ್ಟ ಸಂಖ್ಯೆ: 3
ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ

ಕುಂಭ ರಾಶಿ
ಇಂದು ನಿಮಗೆ ಕೆಲವು ಸವಾಲುಗಳನ್ನು ಇರುತ್ತದೆ ಮತ್ತು ಹಲವಾರು ಅಡೆತಡೆಗಳು ಎದುರಾಗುತ್ತವೆ. ಪ್ರಣಯದ ಬಗ್ಗೆ ಮಾತನಾಡುತ್ತಾ, ನಿಮ್ಮ ಸಂಗಾತಿಯ ನಡುವೆ ವಾದ ಇರುತ್ತದೆ. ಕೆಲವು ಸಂಗತಿಗಳ ಬಗ್ಗೆ ಸಂಗಾತಿಗೆ ಅರ್ಥವಾಗುವಂತೆ ಮಾಡುವುದು ನಿಮಗೆ ಕಷ್ಟಕರವಾಗಿರುತ್ತದೆ. ವಿವಾಹಿತ ಮಹಿಳೆಯರು ಇಂದು ಕೆಲವು ಅನಗತ್ಯ ಚರ್ಚೆಯನ್ನು ತಪ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ಮನೆಯ ವಾತಾವರಣವು ಹದಗೆಡುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಂದು ವ್ಯವಹಾರದಲ್ಲಿ ಕೆಲವು ದೊಡ್ಡ ಸಮಸ್ಯೆಗಳಿರಬಹುದು. ಕೆಲಸದಲ್ಲಿ ಇಂದು ಸಾಮಾನ್ಯ ದಿನವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡಬೇಕಾಗಬಹುದು. ಕೆಲಸದ ಒತ್ತಡವು ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 30
ಅದೃಷ್ಟ ಸಮಯ: ಬೆಳಿಗ್ಗೆ 9:45 ರಿಂದ ಮಧ್ಯಾಹ್ನ 12:55

ಮೀನ ರಾಶಿ
ಕೆಲಸದಲ್ಲಿ ಇಂದು ನಿಮಗೆ ಬಹಳ ಮುಖ್ಯವಾಗುತ್ತದೆ. ಪ್ರಸ್ತುತ ಉದ್ಯೋಗದಲ್ಲಿ ನಿಮಗೆ ತೃಪ್ತಿ ಇಲ್ಲದಿದ್ದರೆ ಇಂದು ಹೊಸ ಅವಕಾಶವು ನಿಮ್ಮ ಹಾದಿಗೆ ಬರುತ್ತದೆ. ನೀವು ಉತ್ತಮ ಉದ್ಯೋಗದ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆಯಿದೆ ಮತ್ತು ನೆಚ್ಚಿನ ಯೋಜನೆಯಲ್ಲಿ ನೀವು ಕೆಲಸ ಮಾಡಬಹುದು. ಇಂದು ನೀವು ಸಕಾರಾತ್ಮಕತೆಯನ್ನು ಅನುಭವಿಸುವಿರಿ. ಅಸಾಧ್ಯವಾದ ವಿಷಯಗಳು ಇಂದು ಸಾಧ್ಯವಾಗುವುದನ್ನು ನೀವು ಕಾಣಬಹುದು. ವಿಶ್ವಾಸಾರ್ಹ ಮಟ್ಟವನ್ನು ನೀವು ಮುಂದುವರಿಸಿದರೆ, ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯಬಹುದು. ಇಂದು ಪ್ರಣಯ ಮತ್ತು ಪ್ರೀತಿಯಿಂದ ತುಂಬಿದ ದಿನವಾಗಿರುತ್ತದೆ. ದಂಪತಿಗಳ ಸಂಬಂಧವು ಸೌಹಾರ್ದಯುತವಾಗಿ ಉಳಿಯುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಪ್ರಯತ್ನಿಸಿದರೆ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 25
ಅದೃಷ್ಟ ಸಮಯ: ಬೆಳಿಗ್ಗೆ 8:20 ರಿಂದ ಮಧ್ಯಾಹ್ನ 2:00 ರವರೆಗೆ



Click it and Unblock the Notifications











