Latest Updates
-
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ
ಭಾನುವಾರದ ದಿನ ಭವಿಷ್ಯ: ವೃಷಭ ರಾಶಿಯ ವ್ಯಾಪಾರಿಗಳ ದಿನ ಒಳ್ಳೆಯದಿದೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ರಾತ್ರಿ 08:57ರವರೆಗೆ ಭರಣಿ ನಂತರ, ಕಾರ್ತಿಕ
ಕೃಷ್ಣ ಪಕ್ಷ
ರಾಹುಕಾಲ: ಸಂಜೆ 04:15ರಿಂದ 05:42ರವರೆಗೆ
ಗುಳಿಕಕಾಲ: ಮಧ್ಯಾಹ್ನ 02:47ರಿಂದ 04:15ರವರೆಗೆ
ಯಮಗಂಡಕಾಲ: ಮಧ್ಯಾಹ್ನ 12:52ರಿಂದ 01:20ರವರೆಗೆ
ದುರ್ಮುಹೂರ್ತ: ಸಂಜೆ 04:09ರಿಂದ 04:55ರವರೆಗೆ
ಸೂರ್ಯೋದಯ: ಬೆಳಗ್ಗೆ 06:03ಕ್ಕೆ
ಸೂರ್ಯಾಸ್ತ: ಸಂಜೆ 05:42ಕ್ಕೆ

ಮೇಷ ರಾಶಿ:
ಮಾನಸಿಕವಾಗಿ ಇಂದು ನಿಮಗೆ ಕೊಂಚ ಅಸಮಾಧಾನದ ದಿನ. ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತವೆ. ನಿಮ್ಮ ಮನಸ್ಸಿನಲ್ಲಿನ ಪ್ರಕ್ಷುಬ್ಧತೆಯಿಂದಾಗಿ, ನೀವು ಕೆಲಸದಲ್ಲಿಯೂ ಹೆಚ್ಚು ಗಮನಕೊಡುವುದಿಲ್ಲ. ಇಂದು ಕೆಲಸದ ಹೊರೆ ಕೂಡ ಅಧಿಕವಾಗಿರಬಹುದು. ನೀವು ಹೆಚ್ಚು ಒತ್ತಡ ತೆಗೆದುಕೊಂಡು ಕೆಲಸ ಮಾಡದಿರುವುದು ಉತ್ತಮ. ನಿಮ್ಮ ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಕೇವಲ ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ಹಣದ ಬಗ್ಗೆ ಮಾತನಾಡುವುದಾದರೆ ಇಂದು ಆರ್ಥಿಕ ಸಂಕಷ್ಟ. ಕುಟುಂಬ ಜವಾಬ್ದಾರಿಗಳನ್ನು ಪೂರೈಸಲು ಇಂದು ನೀವು ಹೆಚ್ಚು ಖರ್ಚು ಮಾಡಬೇಕಾಬಹುದು. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡಿದರೆ ನೀವು ಉಳಿತಾಯದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಅನಗತ್ಯವಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಲ್ಲ. ನೀವು ತುಂಬಾ ಮಾನಸಿಕ ಖಿನ್ನತೆಗೆ ಒಳಗಾಗುತ್ತೀರಿ ಅದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 16
ಶುಭ ಸಮಯ: ಸಂಜೆ 6 ರಿಂದ 8:45 ರವರೆಗೆ

ವೃಷಭ ರಾಶಿ:
ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ನಿಮ್ಮ ಕೆಲಸ ಪೀಠೋಪಕರಣಗಳಿಗೆ ಸಂಬಂಧಪಟ್ಟಿದ್ದರೆ, ನೀವು ಆರ್ಥಿಕವಾಗಿ ಲಾಭ ಪಡೆಯಬಹುದು. ಇತ್ತೀಚೆಗೆ ಯಾವುದಾದರೂ ನಷ್ಟವಾಗಿದ್ದರೆ, ಅದನ್ನು ಮರುಪಡೆಯಲು ಇಂದು ಸಾಧ್ಯ. ಉದ್ಯೋಗಸ್ಥ ಜನರು ಇಂದು ತಾಳ್ಮೆಯಿಂದಿರಬೇಕು. ಉನ್ನತ ಅಧಿಕಾರಿಗಳೊಂದಿಗೆ ವಾದಿಸುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಿಕೊಳ್ಳಬಹುದು. ನೀವು ತಪ್ಪು ಮಾಡಿದ್ದರೆ, ಅದನ್ನು ಮುಕ್ತವಾಗಿ ಒಪ್ಪಿಕೊಳ್ಳಿ. ಅಹಂ ಮತ್ತು ಮುಖಾಮುಖಿ ವಾದ ನಿಮಗೆ ನೋವುಂಟು ಮಾಡುತ್ತದೆ. ಹಣದ ಹರಿವು ಚೆನ್ನಾಗಿರುತ್ತದೆ. ಇಂದು ಸಣ್ಣ ವೆಚ್ಚಗಳು ಇರಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದರೆ, ಮನೆಯ ವಾತಾವರಣವು ನೆಮ್ಮದಿಯಿಂದ ಕೊಡಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ. ನಿಮ್ಮ ಪ್ರಿಯತಮೆಯಿಂದ ಲಾಭ ಸಾಧ್ಯ. ಆರೋಗ್ಯದ ದೃಷ್ಟಿಯಿಂದ ಇಂದಿನ ದಿನವು ಒಳ್ಳೆಯದು. ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 28
ಶುಭ ಸಮಯ: ಸಂಜೆ 6 ರಿಂದ 10 ರವರೆಗೆ

ಮಿಥುನ ರಾಶಿ:
ಹಣದ ವಿಷಯದಲ್ಲಿ ಇಂದು ನಿಮಗೆ ಶುಭವಾಗಲಿದೆ. ಬೇರೆಲ್ಲಿಂದಾದರೂ ಹಣ ಬರಬಹುದು. ನೀವು ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ದೊಡ್ಡ ಚಿಂತೆಯನ್ನು ದೂರಮಾಡುತ್ತದೆ. ಅರ್ಧದಲ್ಲಿ ನಿಂತ ಕೆಲಸವನ್ನು ಪ್ರಾರಂಭಿಸಲು ಒಳ್ಳೆಯ ದಿನ ಇಂದು. ನೌಕರಸ್ಥರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಪ್ರತಿಭೆ ಎಲ್ಲರಿಗೂ ಗೊತ್ತಾಗುತ್ತದೆ. ನಿಮ್ಮ ಬಾಸ್ ನಿಮ್ಮ ಶ್ರಮವನ್ನು ಮೆಚ್ಚುತ್ತಾರೆ. ಮತ್ತೊಂದೆಡೆ, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರು ಲಾಭ ಪಡೆಯಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀವು ಶರಮಪಟ್ಟರೆ ಯಶಸ್ಸು ಸಿಗುತ್ತದೆ ಎಂಬುದನ್ನು ನೆನಪಿಡಿ. ನಿಮ್ಮ ಹಿರಿಯರ ಅಥವಾ ಗುರುಗಳ ಸಹಾಯ ಪಡೆಯುವುದು ಉತ್ತಮ. ಆರೋಗ್ಯ ವಿಷಯಗಳು ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಾ ಹೋಗುತ್ತದೆ. ನೀವು ಅತಿಯಾದ ಓಡಾಟವನ್ನು ತಪ್ಪಿಸಬೇಕು.
ಉತ್ತಮ ಬಣ್ಣ: ಆಕಾಶ
ಶುಭ ಸಂಖ್ಯೆ: 12
ಶುಭ ಸಮಯ: ಬೆಳಗ್ಗೆ 6:55 ರಿಂದ 12:20 ರವರೆಗೆ

ಕರ್ಕಾಟಕ ರಾಶಿ:
ಆರೋಗ್ಯದ ದೃಷ್ಟಿಯಿಂದ ಈ ದಿನವು ಅಷ್ಟು ಉತ್ತಮವಾಗಿಲ್ಲ. ಊಟವನ್ನು ಲಘುವಾಗಿ ಸೇವಿಸಿ. ಹೆಚ್ಚಿನ ದ್ರವ ಪದಾರ್ಥಗಳ ಸೇವನೆ ಬೇಡ. ಸಾಧ್ಯವಾದಷ್ಟು, ಇಂದು ನೀವು ವಿಶ್ರಾಂತಿಗೆ ಹೆಚ್ಚಿನ ಗಮನ ನೀಡಬೇಕು. ಇಂದು ನಿಮ್ಮ ಆರೋಗ್ಯ ನಿಮ್ಮ ಮೊದಲ ಆದ್ಯತೆಯಾಗಬೇಕು. ಮನೆಯಲ್ಲಿ ಸಣ್ಣ ಒತ್ತಡ ಸಾಧ್ಯ, ಆದರೆ ಹೆಚ್ಚು ಚಿಂತಿಸಬೇಡಿ, ಶೀಘ್ರದಲ್ಲೇ ಎಲ್ಲವೂ ಸರಿಯಾಗುತ್ತದೆ. ನಿಮ್ಮನ್ನು ನೀವು ನಿಯಂತ್ರಿಸಿ. ಅನಗತ್ಯ ಕೋಪಗೊಳ್ಳುವುದನ್ನು ತಪ್ಪಿಸಿ. ಇಂದು ನಿಮ್ಮ ಪ್ರಿಯತಮೆಯೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಿ. ನಿರೀಕ್ಷಿತ ಫಲಿತಾಂಶ ಸಿಗದೇ ಉದ್ಯೋಗಸ್ಥರು ನಿರಾಶೆಗೊಳ್ಳಬಹುದು. ನಿಮ್ಮನ್ನು ಮತ್ತು ದೇವರನ್ನು ನಂಬಿರಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಿಗಳು ಇಂದು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 5
ಶುಭ ಸಮಯ: ಮಧ್ಯಾಹ್ನ 3 ರಿಂದ 4:20 ರವರೆಗೆ

ಸಿಂಹ ರಾಶಿ:
ಇಂದು ನೀವು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹಾಳಾದ ಸಂಬಂಧವನ್ನು ಸುಧಾರಿಸಲು ನೀವು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಬೇಕು. ಇಂದು ನೀವು ನಿಮ್ಮ ಇಡೀ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ. ಮನೆಯಲ್ಲಿ ಕೆಲವು ಜನರ ವರ್ತನೆ ನಿಮಗೆ ಸರಿಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಧೈರ್ಯ ಮತ್ತು ತಾಳ್ಮೆಯಿಂದಿರಬೇಕು. ಹಣದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಹಣಕಾಸಿನ ವ್ಯವಹಾರಗಳನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳಿ. ನೀವು ಕೆಲಸವನ್ನು ಮಾಡುವಲ್ಲಿ, ಸಹೋದ್ಯೋಗಿಗಳಿಂದ ಆಗುವ ತಪ್ಪುಗಳನ್ನು ತಡೆಯಿರಿ. ನೀವು ದೊಡ್ಡ ಉದ್ಯಮಿಯಾಗಿದ್ದರೆ ಇಂದು ಸಮಸ್ಯೆ ಉಂಟಾಗಬಹುದು. ನಿಮ್ಮ ವ್ಯವಹಾರ ನಿರ್ಧಾರಗಳನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಮೊದಲೇ ರಕ್ತದೊತ್ತಡದ ರೋಗಿಯಾಗಿದ್ದರೆ, ಕೋಪಗೊಳ್ಳುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯ ಹದಗೆಡಬಹುದು.
ಉತ್ತಮ ಬಣ್ಣ: ಕೇಸರಿ
ಶುಭ ಸಂಖ್ಯೆ: 40
ಶುಭ ಸಮಯ: ಮಧ್ಯಾಹ್ನ 2 ರಿಂದ 5 ರವರೆಗೆ

ಕನ್ಯಾರಾಶಿ:
ಕಣ್ಮುಚ್ಚಿ ತಪ್ಪಾಗಿ ಯಾರನ್ನೂ ನಂಬಬೇಡಿ. ನೀವು ಇಂದು ಮೋಸಕ್ಕೊಳಗಾಗಬಹುದು. ನಿಮ್ಮ ಪ್ರಮುಖ ನಿರ್ಧಾರಗಳನ್ನು ನಿಮ್ಮದೇ ಆದ ರೀತಿಯಲ್ಲಿ ತೆಗೆದುಕೊಳ್ಳಿ, ಇತರರ ಮಾತುಗಳಿಂದ ಪ್ರಭಾವಿತರಾಗಬೇಡಿ. ಆರ್ಥಿಕವಾಗಿ ಲಾಭ ಗಳಿಸುವ ಸಾಧ್ಯತೆ. ದೊಡ್ಡ ಮೊತ್ತದ ಹಣ ನಿಮಗೆ ದೊರೆಯಲಿದೆ. ಇದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಪೋಷಕರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ, ಇಲ್ಲದಿದ್ದರೆ ಅವರಿಗೆ ಬೇಸರವಾಗಬಹುದು. ಮತ್ತೊಂದೆಡೆ, ಇಂದು ಸಹೋದರ ಅಥವಾ ಸಹೋದರಿಯ ವರ್ತನೆ ನಿಮಗೆ ಸರಿ ಬರುವುದಿಲ್ಲ. ಮಾತನಾಡುವ ಮೂಲಕ ತಪ್ಪುಗ್ರಹಿಕೆಯನ್ನು ತೆಗೆದುಹಾಕಲು ನೀವು ಪ್ರಯತ್ನಿಸಿ. ಕೆಲಸದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಇಂದು ನಿಮಗೆ ಸ್ವಲ್ಪ ಒತ್ತಡ. ಆದರೆ ಆರಾಮವಾಗಿರಿ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 20
ಶುಭ ಸಮಯ: ಸಂಜೆ 4:45 ರಿಂದ 8 ರವರೆಗೆ

ತುಲಾ ರಾಶಿ:
ನಿಮ್ಮ ಜೀವನದಲ್ಲಿ ಏರಿಳಿತದ ಪರಿಸ್ಥಿತಿಗಳು ಕಂಡುಬರುತ್ತವೆ. ದಿನದ ಆರಂಭವು ಅಷ್ಟು ಅನುಕೂಲಕರವಾಗಿಲ್ಲ. ನೀವು ಬೆಳಬೆಳಗ್ಗೆ ಕೇಳುವ ವಿಷಯಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಈ ತೊಂದರೆಗಳ ಹೊರತಾಗಿಯೂ ನೀವು ನಿಮ್ಮನ್ನು ನಿಭಾಯಿಸಲು ಉತ್ತಮವಾದ ರೀತಿಯಲ್ಲಿ ಪ್ರಯತ್ನಿಸುತ್ತೀರಿ. ನೀವು ಉದ್ಯೋಗಸ್ಥರಾಗಿದ್ದರೆ, ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಆದರೆ ಇಂದು ನೀವು ತುಂಬಾ ಶ್ರಮಿಸಬೇಕಾಗಬಹುದು. ಉನ್ನತ ಅಧಿಕಾರಿಗಳ ಒತ್ತಡ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ಅದೇ ಸಮಯದಲ್ಲಿ, ಇಂದು ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ನಿಮ್ಮ ಯಾವುದೇ ಹಳೆಯ ಮತ್ತು ಪ್ರಮುಖ ಸಂಪರ್ಕಗಳ ಪ್ರಯೋಜನ ಇಂದು ಸಿಗಬಹುದು. ಕುಟುಂಬ ಜೀವನದಲ್ಲಿ ಅಪಶ್ರುತಿ ಉಂಟಾಗುವ ಸಾಧ್ಯತೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸದಿದ್ದರೆ, ಮನೆಯಲ್ಲಿ ದೊಡ್ಡ ವಿವಾದ ಉಂಟಾಗಬಹುದು. ನಿಮ್ಮ ಹಿರಿಯರ ಸಲಹೆಯನ್ನು ನೀವು ಪರಿಗಣಿಸಬೇಕಾಗುತ್ತದೆ. ಹಣದ ಬಗ್ಗೆ ಮಾತನಾಡುವುದಾದರೆ,ಇದ್ದಕ್ಕಿದ್ದಂತೆ ಸಂಪತ್ತು ನಿಮ್ಮ ಕೈಸೇರಬಹುದು. ತಂದೆಯ ಆರೋಗ್ಯ ಸ್ವಲ್ಪ ದುರ್ಬಲವಾಗಿರುತ್ತದೆ.
ಉತ್ತಮ ಬಣ್ಣ: ತಿಳಿ ಹಸಿರು
ಶುಭ ಸಂಖ್ಯೆ: 2
ಶುಭ ಸಮಯ: ಬೆಳಗ್ಗೆ 4:05 ರಿಂದ 11 ರವರೆಗೆ

ವೃಶ್ಚಿಕ ರಾಶಿ:
ಇಂದು ನೀವು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕೆಲವು ಹಳೆಯ ನೆನಪುಗಳನ್ನು ಸಹ ರಿಫ್ರೆಶ್ ಆಗುತ್ತವೆ. ನೀವು ಇಂದು ತುಂಬಾ ಸಂತೋಷವಾಗಿರುತ್ತೀರಿ. ವ್ಯಾಪಾರಿಗಳಿಗೆ ಈ ದಿನ ಬಹಳ ಮುಖ್ಯವಾಗಿರುತ್ತದೆ. ನೀವು ಉತ್ತಮ ವ್ಯಾಪಾರ ಕೊಡುಗೆಯನ್ನು ಪಡೆಯಬಹುದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ, ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾರಿಗೆ ಸಂಪರ್ಕ ಉದ್ಯೋಗಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಮತ್ತೊಂದೆಡೆ, ನೀವು ನೌಕರಿ ಮಾಡುತ್ತಿದ್ದರೆ, ಜೊತೆಗೆ ಇತ್ತೀಚೆಗೆ ನೀವು ವೃತ್ತಿಪರ ಕೋರ್ಸ್ ಮಾಡಿದ್ದರೆ, ಇಂದು ನೀವು ಅದರ ಲಾಭವನ್ನು ಪಡೆಯಬಹುದು. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ನೀವು ದೊಡ್ಡ ಆರ್ಥಿಕ ನಿರ್ಧಾರ ತೆಗೆದುಕೊಳ್ಳಬಹುದು. ನೀವು ಕುಟುಂಬದಿಂದ ದೂರವಿದ್ದರೆ, ನಿಮಗೆ ಅವರು ತುಂಬಾ ನೆನಪಾಗುತ್ತಾರೆ. ವಿಶೇಷವಾಗಿ ನಿಮ್ಮ ತಾಯಿಯ ನೆನಪು ನಿಮ್ಮನ್ನು ಕಾಡುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 16
ಒಳ್ಳೆಯ ಸಮಯ: ಸಂಜೆ 6:20 ರಿಂದ 10 ರವರೆಗೆ

ಧನು ರಾಶಿ:
ನೀವು ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ತಂಪಾದ ಆಹಾರ ಪದಾರ್ಥಗಳನ್ನು ಇಂದು ಸೇವಿಸಬೇಡಿ. ಇಲ್ಲದಿದ್ದರೆ ನಿಮಗೆ ಕಫದ ಸಮಸ್ಯೆ ಉಂಟಾಗಬಹುದು. ಇದಲ್ಲದೆ, ಅನಗತ್ಯವಾಗಿ ಮನೆಯಿಂದ ಹೊರಹೋಗುವುದನ್ನೂ ತಪ್ಪಿಸಿ. ನಿಮ್ಮ ಸಣ್ಣ ಅಜಾಗರೂಕತೆಯು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಯೋಚಿಸದೇ ಖರ್ಚು ಮಾಡುವ ಅಭ್ಯಾಸವನ್ನು ಬದಲಾಯಿಸಿ. ಖರ್ಚುಗಳ ದಾಖಲೆಯನ್ನು ಸರಿಯಾಗಿ ಇರಿಸಿ ನೌಕರಸ್ಥರಿಗೆ ಸಾಮಾನ್ಯ ದಿನ. ಹಾಗೆಯೇ, ಪಾಲುದಾರಿಕೆಯಲ್ಲಿ ಮಾಡುವ ಯಾವುದೇ ಕೆಲಸದಿಂದ ವ್ಯಾಪಾರಿಗಳು ಉತ್ತಮ ಲಾಭಗಳನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಯಾವುದೇ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಇಂದು ಕುಟುಂಬದ ಸಹಾಯದಿಂದ, ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 10
ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ

ಮಕರ ರಾಶಿ:
ಇಂದು ನಿಮಗೆ ಮಿಶ್ರ ದಿನ. ಮಿಶ್ರ ಫಲ. ಉದ್ಯೋಗದಲ್ಲಿರುವವರು ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ನೀವು ಪ್ರತಿ ಕಾರ್ಯವನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಪೂರ್ಣಗೊಳಿಸುತ್ತೀರಿ ಮತ್ತು ಸವಾಲುಗಳನ್ನು ಸಹ ಸರಿಯಾದ ರೀತಿಯಲ್ಲಿ ಎದುರಿಸುತ್ತೀರಿ. ವ್ಯಾಪಾರಿಗಳು ಇಂದು ಜಾಗರೂಕರಾಗಿರಬೇಕು. ನೀವು ಕಾನೂನು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಹಣದ ಬಗ್ಗೆ ಮಾತನಾಡುವುದಾದರೆ, ಹಣವು ಬರಬಹುದು, ಆದರೆ ವೆಚ್ಚವೂ ಅಷ್ಟೇ ಹೆಚ್ಚಾಗಿರುತ್ತದೆ. ನೀವು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡದಿರುವುದು ಉತ್ತಮ. ಮನೆಯ ವಾತಾವರಣ ಆರಾಮದಾಯಕ. ಇಂದು ನೀವು ಮಕ್ಕಳೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ನಿಮ್ಮ ಸಂಗಾತಿಯೊಂದಿಗೆ ಮಾತಿನ ಜಟಾಪಟಿ ನಡೆಯಬಹುದು. ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಬಳಸುವುದು ಉತ್ತಮ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಇಂದು ಹೆಚ್ಚು ಸುಸ್ತಾಗುವಿರಿ.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 29
ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ಕುಂಭ ರಾಶಿ:
ಈ ದಿನ ಮಾನಸಿಕ ಒತ್ತಡ ಅಧಿಕವಿರುವುದರಿಂದ ಪೂಜೆ, ಧ್ಯಾನದ ಕಡೆ ಗಮನ ಕೊಡಿ. ಇದಲ್ಲದೆ, ಒಳ್ಳೆಯ ಮತ್ತು ಸಕಾರಾತ್ಮಕ ವಿಷಯಗಳನ್ನು ಯೋಚಿಸಿ, ಇದು ನಿಮಗೆ ಸಾಕಷ್ಟು ಶಾಂತಿಯನ್ನು ನೀಡುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ನೀವು ನೌಕರಿ ಮಾಡುತ್ತಿದ್ದರೆ ನಿಮ್ಮ ಕಾರ್ಯಕ್ಷಮತೆಯನ್ನು ಮೇಲಾಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಇಂದು ನೀವು ಕಷ್ಟಕರವಾದ ಕೆಲಸವನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಬಹುದು. ಉದ್ಯೋಗ ಮಾಡುವಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇಂದು ವ್ಯಾಪಾರಿಗಳಿಗೆ ಬಹಳ ಮುಖ್ಯ ದಿನ. ನೀವು ಅಪೂರ್ಣವಾದ ಕೆಲಸವೊಂದು ಪೂರ್ಣವಾಗಬಹುದು.ಇದರ ಲಾಭವನ್ನು ನೀವು ಶೀಘ್ರದಲ್ಲೇ ಪಡೆಯುವಿರಿ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮನೆಯ ಸದಸ್ಯರ ವರ್ತನೆ ಇಂದು ನಿಮಗೆ ಸರಿಹೊಂದುವುದಿಲ್ಲ. ಅವರ ಅಸಮಾಧಾನಕ್ಕೆ ಕಾರಣವನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಿದರೆ ಒಳ್ಳೆಯದು. ಅನಗತ್ಯ ಚರ್ಚೆಯನ್ನು ತಪ್ಪಿಸಿ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 14
ಶುಭ ಸಮಯ: ಬೆಳಗ್ಗೆ 4:25 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ:
ಹಣದ ವಿಷಯದಲ್ಲಿ ನೀವು ಬುದ್ಧಿವಂತಿಕೆ ತೋರಿಸಿ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಅಥವಾ ಇನ್ಯಾವುದಾದರೂ ದೊಡ್ಡ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಆತುರದಿಂದ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಾರದು ಇಲ್ಲದಿದ್ದರೆ ಹಣಕಾಸಿನ ನಷ್ಟವಾಗಬಹುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನೂ ಪಡೆಯುತ್ತೀರಿ. ಮತ್ತೊಂದೆಡೆ, ವ್ಯಾಪಾರಸ್ಥರು ಲಾಭ ಪಡೆಯುವ ಸಾಧ್ಯತೆಯಿದೆ. ನೀವು ನಿಮ್ಮ ವ್ಯವಹಾರವನ್ನು ಸಹಭಾಗಿತ್ವದಲ್ಲಿ ಮಾಡುತ್ತಿದ್ದರೆ, ನಿಮ್ಮ ಪಾಲುದಾರರಿಂದ ಅಗತ್ಯಕ್ಕಿಂತ ಹೆಚ್ಚು ನಿರೀಕ್ಷಿಸಬೇಡಿ ಇಲ್ಲದಿದ್ದರೆ ನೀವು ನಿರಾಶೆ ಅನುಭವಿಸುವಿರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗದಿದ್ದರೂ, ಪ್ರೀತಿ ಮತ್ತು ಸಾಮರಸ್ಯವು ಸಂಬಂಧದಲ್ಲಿ ಉಳಿಯುತ್ತದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಈ ದಿನ ಉತ್ತಮವಾಗಿದೆ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 15
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005



Click it and Unblock the Notifications











