Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
2022ರ ದೀಪಾವಳಿಯು ಈ 3 ರಾಶಿಯವರಿಗೆ ತುಂಬಾನೇ ಅದೃಷ್ಟದ ಯೋಗ ತಂದಿದೆ
ದೀಪಾವಳಿ ಎಂದರೆ ಬೆಳಕಿನ ಹಬ್ಬ 5 ದಿನಗಳ ಕಾಲ ನಡೆಯುವ ಹಬ್ಬವಾದ ದೀಪಾವಳಿಯನ್ನು ದೇಶಾದ್ಯಂತ ತುಂಬಾನೇ ಸಡಗರ -ಸಂಭ್ರಮದಿಂದ ಆಚರಿಸಲಾಗುವುದು. ದೀಪಾವಳಿ ಆಚರಣೆ ಧನತ್ರಯೋಧಶಿ ಅಂದರೆ ಧಂತೇರಸ್‌ನಿಂದ ಪ್ರಾರಂಭವಾಗುವುದು. ದೀಪಾವಳಿಯನ್ನು ಕಾರ್ತಿಕ ಮಾಸದ ಅಮಾವಾಸ್ಯೆ ತಿಥಿಯಂದು ಆಚರಿಸಲಾಗುವುದು.
ಈ ವರ್ಷ ದೀಪಾವಳಿ ಹಬ್ಬವನ್ನು . ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಈ ದೀಪಾವಳಿ ಎಲ್ಲರ ಬಾಳಲ್ಲಿ ಸಂಪತ್ತು, ಸಮೃದ್ಧಿ ತುಂಬಲಿ.

ಈ ದೀಪಾವಳಿಯ ದಿನದಂದು ಅಭಿಜಿತ್ ಮುಹೂರ್ತ ಮತ್ತು ವೈಧೃತಿ ಯೋಗದ ಮಂಗಳಕರ ಸಂಯೋಜನೆಯಾಗಿದೆ. ಈ ಕಾಕತಾಳೀಯಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. ಎಲ್ಲಾ 12 ರಾಶಿಗಳಲ್ಲಿ, 3 ರಾಶಿಗಳ ಮೇಲೆ ಇದರ ಪರಿಣಾಮ ಹೆಚ್ಚು ಕಾಣಿಸುತ್ತದೆ. ಈ 3 ರಾಶಿಯವರ ಮೇಲೆ ಮಾತೆ ಲಕ್ಷ್ಮಿ ವಿಶೇಷ ಕೃಪೆ ಇರುತ್ತದೆ. ಈ ವರ್ಷ ನಿಮ್ಮ ಸಂಪತ್ತು ಹೆಚ್ಚಲಿದೆ, ನೀವು ಕೈ ಹಾಕಿರುವ ಕಾರ್ಯದಲ್ಲಿ ಯಶಸ್ಸು ಕಾಣುವಿರಿ.

ಸಿಂಹ ರಾಶಿ
ದೀಪಾವಳಿಯಂದು ಉಂಟಾಗುವ ಅಭಿಜಿತ್ ಮುಹೂರ್ತ ಮತ್ತು ವೈಧೃತಿ ಯೋಗದ ಸಂಯೋಜನೆ ಸಿಂಹ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಯ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿಯನ್ನು ವಹಿಸಿಕೊಡಬಹುದು, ಅದನ್ನು ನೀವು ಉತ್ತಮವಾಗಿ ಪೂರೈಸುವಿರಿ. ಶುಕ್ರ ಮತ್ತು ಶನಿಯ ವಿಶೇಷ ಅನುಗ್ರಹ ನಿಮ್ಮ ಮೇಲಿರುತ್ತದೆ. ಹೂಡಿಕೆ ಮಾಡುವ ಮೂಲಕ, ನೀವು ಭವಿಷ್ಯದಲ್ಲಿ ಉತ್ತಮ ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅದೃಷ್ಟದ ಬೆಂಬಲ ನಿಮ್ಮೊಂದಿಗೆ ಇರುವುದರಿಂದ ಈ ವರ್ಷ ಸಂಪತ್ತು ಹೆಚ್ಚಲಿದೆ.

ತುಲಾ ರಾಶಿ
ಈ ದೀಪಾವಳಿಯು ತುಲಾ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರುತ್ತದೆ. ಈ ರಾಶಿಯವರಿಗೆ ಅಭಿಜಿತ್ ಮುಹೂರ್ತ ಮತ್ತು ವೈಧೃತಿಯ ಸಂಯೋಜನೆಯು ತುಂಬಾ ಶುಭಕರವಾಗಿರುತ್ತದೆ. ಈ ವರ್ಷ ನೀವು ಮಾಡುವ ಪ್ರತಿ ಕೆಲಸದಲ್ಲಿ ಉತ್ತಮ ಯಶಸ್ಸು ಕಾಣುವಿರಿ, ಹಣ ಗಳಿಸುವಿರಿ. ನೀವು ಕಳೆದ ಹಲವು ತಿಂಗಳುಗಳಿಂದ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ದೀಪಾವಳಿಯ ನಂತರ ಖರೀದಿಸಲು ಸಾಧ್ಯವಾಗುವುದು. ಉದ್ಯೋಗಿಗಳು ಪ್ರಗತಿಯನ್ನು ಕಾಣುವಿರಿ, ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ವ್ಯಾಪಾರಸ್ಥರು ವ್ಯಾಪಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಹಾಗೂ ಒಳ್ಳೆಯ ಲಾಭ ಗಳಿಸುವಿರಿ.

ಮಕರ ರಾಶಿ
ಈ ರಾಶಿಯವರಿಗೆ ದೀಪಾವಳಿಯಂದು ಮೂಡಿದ ಅಭಿಜೀತ್ ಮುಹೂರ್ತ ಮತ್ತು ವೈಧೃತಿ ಯೋಗವು ತುಂಬಾನೇ ಮಂಗಳಕರವಾಗಿದೆ. ನೌಕರಿಯಲ್ಲಿ ಬಡ್ತಿ ಮತ್ತು ಆದಾಯ ಹೆಚ್ಚಳದ ಉತ್ತಮ ಲಕ್ಷಣಗಳಿವೆ. ವ್ಯಾಪಾರಸ್ಥರು ವರ್ಷವಿಡೀ ಉತ್ತಮ ಲಾಭವನ್ನು ಹೊಂದಿರುತ್ತಾರೆ. ಕೆಲವರಿಗೆ ಕೆಲವು ತಿಂಗಳಿಂದ ಆರ್ಥಿಕ ಸ್ಥಿತಿ ಸರಿಯಿಲ್ಲದ್ದರೆ ಈ ದೀಪಾವಳಿಯ ಬಳಿಕ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ನಿಮಗೆ ಬರಬೇಕಾಗಿದ್ದ ಹಣ ಕೈ ಸೇರುತ್ತದೆ.ಹೊಸ ಲಾಭದ ಮಾರ್ಗಗಳು ದೊರೆಯಲಿವೆ. ಪಾಲುದಾರಿಕೆಗೆ ಸಮಯ ಉತ್ತಮವಾಗಿರುತ್ತದೆ.



Click it and Unblock the Notifications
