For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ (26-01-2020)

|

ಜ್ಯೋತಿಷ್ಯಶಾಸ್ತ್ರದಲ್ಲಿ ಈ ದಿನ ಯಾವ ರಾಶಿಯ ಫಲ ಹೇಗಿರುತ್ತದೆ ಎಂದು ಹೇಳಲಾಗಿರುತ್ತದೆ. ಕನ್ನಡ ಬೋಲ್ಡ್‌ಸ್ಕೈ ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ರಾಶಿಫಲ ಹೇಗಿದೆ ಎಂದು ಹೇಳಿದೆ ನೋಡಿ.

rashi bhavishya

ಸಂವತ್ಸರ: ವಿಕಾರಿನಾಮ
ಆಯನ: ಉತ್ತರಾಯನ
ಋತು: ಶಿಶಿರ
ಮಾಸ: ಪುಷ್ಯ
ತಿಥಿ: ಶುಕ್ಲಪಕ್ಷ
ನಕ್ಷತ್ರ:ಧನಿಷ್ಠಾ

ರಾಹುಕಾಲ: ಬೆಳಗ್ಗೆ 9.39ರಿಂದ 11.04ರವರೆಗೆ
ಗುಳಿಕಕಾಲ: ಬೆಳಿಗ್ಗೆ 6.50ರಿಂದ 8.14ರವರೆಗೆ
ಯಮಗಂಡಕಾಲ: ಮಧ್ಯಾಹ್ನ 01.53ರಿಂದ 3.18ರವರೆಗೆ
ದುರ್ಮುಹೂರ್ತ: ಬೆಳಗ್ಗೆ 6.505ರಿಂದ 7.35ರವರೆಗೆ ಹಾಗೂ 7.35ರಿಂದ8.20ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.50
ಸೂರ್ಯಾಸ್ತ: ಸಂಜೆ 6.07ಕ್ಕೆ

ಮೇಷ ರಾಶಿ

ಮೇಷ ರಾಶಿ

ಮೇಷರಾಶಿಯವರು ಈ ದಿನ ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ಮಾತಿನ ತರ್ಕ ಉಂಟಾಗಿ ಮನಸ್ಸು ಹಾಳಾಗಬಹುದು. ಆದರೆ ಮನೆಯಿಂದ ಹೊರಡುವ ಮುನ್ನ ನಡೆದ ವಿಷಯವನ್ನು ಅಲ್ಲೇ ಬಿಟ್ಟು ಹೋಗುವುದು ಒಳ್ಳೆಯದು, ಇಲ್ಲದಿದ್ದರೆ ಮನಸ್ಸು ಹಾಳಾಗುವುದು. ನಿಮ್ಮ ಕುಟುಂಬದಲ್ಲಿ ಖುಷಿ ಹಾಗೂ ನೆಮ್ಮದಿ ನೆಲೆಸಲು ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ. ಅತಿಯಾದ ಕೋಪದಿಂದ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಣಕಾಸಿನ ಸ್ಥಿತಿಯೂ ಅಷ್ಟಾಗಿ ಉತ್ತಮವಾಗಿಲ್ಲ. ಸಾಲ ತೆಗೆದುಕೊಂಡಿದ್ದರೆ ಇಂದು ಅದರ ಚಿಂತೆ ಹೆಚ್ಚಲಿದೆ, ಇಂಥ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ. ನೀವು ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿದರೆ ಮೇಲಾಧಿಕರಿಯ ಮೆಚ್ಚುಗೆ ಗಳಿಸುವಿರಿ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಸಂಜೆ 4 ಗಂಟೆಯಿಂದ ರಾತ್ರಿ 9.20ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಈ ದಿನ ನೀವು ತುಂಬಾ ಖುಷಿಯಾಗಿರುವಿರಿ. ನೀವು ಆತ್ಮವಿಶ್ವಾಸದಿಂದ ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗುತತ್ದೆ. ಈ ದಿನ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು. ಆದರೆ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಚಿಂತೆ ಕಾಡಬಹುದು, ನೀವು ಬಯಸಿದಷ್ಟು ಹಣ ಸಿಗದೇ ಹೋಗಬಹುದು, ಆದರೆ ನಿರಾಸೆ ಬೆಡ, ಪ್ರಯತ್ನ ಮುಂದುವರೆಸಿ, ಫಲ ಸಿಗುತ್ತದೆ. ನಿಮ್ಮ ಸಂಬಂಧ ಗಟ್ಟಿಯಾಗಿಸುವ ಪ್ರಯತ್ನ ಮಾಡಿ, ಜಗಳಕ್ಕೆ ಹೋಗಬೇಡಿ, ಎಲ್ಲರೊಂದಿಗೆ ಚೆನ್ನಾಗಿ ಇರಿ. ವೈವಾಹಿಕ ಬದುಕಿನ ಸಮಸ್ಯೆಗಳು ಇಲ್ಲವಾಗಿ ಸಂಗಾತಿಯೊಂದಿಗೆ ಖುಷಿಯಾಗಿ ಕಳೆಯುವಿರಿ. ಇನ್ನು ನಿಮ್ಮ ನೌಕರಿ ಜಾಗದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆನೆ ಬಣ್ಣ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ ರಾತ್ರಿ10.10ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಈ ದಿನ ಪ್ರಯಾಣಕ್ಕೆ ಯೋಗ್ಯವಲ್ಲ, ಅನಾವಶ್ಯಕ ಹಣ ಖರ್ಚು ಮಾಡಬೇಡಿ. ಮಿಥುನ ರಾಶಿಯವರಿಗೆ ಈ ದಿನ ಆರ್ಥಿಕ ಸ್ಥಿತಿ ಅಷ್ಟಾಗಿ ಉತ್ತಮವಾಗಿಲ್ಲ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಇಂದೇ ಪರಿಹರಿಸಿಕೊಳ್ಳುವುದು ಒಳ್ಳೆಯದು, ಇಲ್ಲದಿದ್ದರೆ ಮುಂದೆ ತೊಂದರೆ ಉಂಟಾಗಬಹುದು. ಮನೆಯಲ್ಲಿ ಹಾಗೂ ಹೊರಗಡೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ವೈವಾಹಿಕ ಬದುಕಿನಲ್ಲಿ ನೆಮ್ಮದಿ ಸಿಗಲು ಕೆಲಸ ಹಾಗೂ ವೈಯಕ್ತಿಕ ಬದುಕನ್ನು ಸಮತೋಲನ ಮಾಡಿ. ಆರೋಗ್ಯದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಮಧ್ಯಾಹ್ನ12.45ರಿಂದ 6 ಗಂಟೆಯವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಪ್ರೇಮಿಗಳಿಗೆ ಈ ದಿನ ಚೆನ್ನಾಗಿದೆ, ಮದುವೆ ಪ್ರಸ್ತಾಪ ಮಾಡಲು ಸಕಾಲ. ಇನ್ನು ಯಾರಿಗಾದರೂ ಪ್ರಪೋಸ್‌ ಮಾಡಬೇಕೆಂದು ಇದ್ದರೆ ಈ ದಿನ ಮಾಡಿದರೆ ಧನಾತ್ಮಕ ಪ್ರತಿಕ್ರಿಯೆ ದೊರೆಯುವುದು. ಕೌಟಂಬಿಕ ಜೀವನ ಉತ್ತಮವಾಗಿದೆ. ಹಣಕಾಸಿನ ದೃಷ್ಟಿಯಿಂದ ಹೇಳುವುದಾದರೆ ಈ ದಿನ ಚೆನ್ನಾಗಿದ್ದು, ಖರ್ಚಿನಲ್ಲಿ ಹಿಡಿತವಿರಲಿ. ಹಣಕಾಸಿನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆತುರಬೇಡ. ಯಾರೊಂದಿಗೂ ಅನಾವಶ್ಯಕ ತರ್ಕ ಮಾಡಬೇಡಿ, ಕೆಲಸದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಮಧ್ಯಾಹ್ನ 2.15ರಿಂದ ಸಂಜೆ 7.20ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕೌಟಂಬಿಕ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ಇದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲವಾಗುವುದು. ಬೇರೆ ಕೆಲಸದ ಒತ್ತಡದ ಕಾರಣ ಸಂಗಾತಿಗೆ ನಿಮ್ಮ ಕಡೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ಯಾವುದೇ ತೊಂದರೆಯಿಲ್ಲ. ಕಚೇರಿಯಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ, ಇದರಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಈ ದಿನ ಅಷ್ಟೊಂದು ಅನುಕೂಲಕರವಾಗಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಪ್ತರ ಸಲಹೆ ಪಡೆಯಿರಿ.

ಅದೃಷ್ಟದ ಬಣ್ಣ: ಮೆರೂನ್

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ ರಾತ್ರಿ 11.30ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ನೌಕರಿ ದೃಷ್ಟಿಯಿಂದ ನೋಡುವುದಾದರೆ ಸ್ವಲ್ಪ ಸವಾಲಿನ ದಿನವಾಗಿದೆ. ಕೆಲಸದ ಜಾಗದಲ್ಲಿ ನಿಮ್ಮಿಂದ ಕೆಲ ತಪ್ಪುಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ಹಿರಿಯ ಸಹೋದ್ಯೊಗಿಗಳು ನಿಮ್ಮ ತಪ್ಪುಗಳನ್ನು ಸರಿಪಡಿಸುತ್ತಾರೆ, ಆದರೆ ಆ ತಪ್ಪು ಭವಿಷ್ಯದಲ್ಲಿ ಮಾಡದಂತೆ ಎಚ್ಚರವಹಿಸಿ. ಆರ್ಥಿಕ ಸ್ಥಿತಿ ಉತ್ತಮವಾಗದೆ. ಮನೆಗೆ ಅವಶ್ಯಕವಾದ ವಸ್ತುಗಳನ್ನು ಕೊಳ್ಳಬಹುದು. ತಾಯಿಯೊಂದಿಗೆ ಕೆಲ ಭಿನ್ನಾಭಿಪ್ರಾಯ ಬರಬಹುದು, ಮಾತುಗಳನ್ನು ಎಚ್ಚರದಿಂದ ಪ್ರಯೋಗಿಸಿ. ನಿಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 34

ಅದೃಷ್ಟದ ಸಮಯ: ಬೆಳಗ್ಗೆ 7.55ರಿಂದ ಸಂಜೆ 6 ಗಂಟೆಯವರೆಗೆ

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರೇ ಈ ದಿನ ಕೆಲಸದ ಕಡೆ ನಿರ್ಲಕ್ಷ್ಯ ತೋರಬೇಡಿ, ಈ ದಿನ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡಿದರೆ ಮಾತ್ರ ಫಲ ಸಿಗುವುದು. ಸಂಗಾತಿಯೊಂದಿಗೆ ಖುಷಿ-ಖುಷಿಯಾಗಿರುವಿರಿ, ತುಂಬಾ ದಿನಗಳ ಬಳಿಕ ಒಡಹುಟ್ಟಿದರ ಜೊತೆಸಮಯ ಕಳೆಯುವಿರಿ. ಇಂದು ನಿಮ್ಮಲ್ಲಿ ಧನಾತ್ಮಕ ಆಲೋಚನೆ ಮೂಡಲು ಪ್ರಭಾವಿಸುವ ವ್ಯಕ್ತಿಗಳನ್ನು ಬೇಟಿಯಾಗುವಿರಿ. ಹಣದ ವಿಷಯದಲ್ಲಿ ಶುಭ ಸುದ್ದಿ ದೊರೆಯುತ್ತದೆ, ನಿರೀಕ್ಷಿಸದೆ ಇರುವ ಆರ್ಥಿಕ ಲಾಭ ಉಂಟಾಗುತ್ತದೆ, ಇಂದು ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಬೆಳಗ್ಗೆ 7.15ರಿಂದ ಮಧಾಹ್ನ 2.05ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಒಳ್ಳೆಯದಿದೆ, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪರಿಸ್ಥಿತಿ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗುವುದಿಲ್ಲ. ಕೌಟಂಬಿಕ ಬದುಕಿನಲ್ಲಿ ಸ್ವಲ್ಪ ಏರಳಿತ ಉಂಟಾಗಬಹುದು, ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಕೆಲಸದ ಕಡೆ ಗಮನ ನೀಡಿ. ಉದ್ಯಮಿಗಳಿಗೆ ಈ ದಿನ ಉತ್ತಮವಾಗಿದೆ. ಕೆಲಸದ ಬಗ್ಗೆ ಅಸಡ್ಡೆ ತೋರಿದರೆ ತೊಂದರೆ ಉಂಟಾಗುವುದು, ಆದ್ದರಿಂದ ಎಚ್ಚರ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 14

ಅದೃಷ್ಟದ ಸಮಯ: ಸಂಜೆ 6.30ರಿಂದ ರಾತ್ರಿ 8.40ರವರೆಗೆ

ಧನು ರಾಶಿ

ಧನು ರಾಶಿ

ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದ್ದು ಬೇರೆಯವರಿಗೋಸ್ಕರ ಹಣಕಾಸಿನ ನಿರ್ಧಾರ ತೆಗೆದುಕೊಳ್ಳಬೇಡಿ. ಹೂಡಿಕೆ ಮಾಡಲು ಬಯಸುವುದಾದರೆ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ. ನಿಮ್ಮ ಸಂಗಾತಿಯೊಂದಿಗೆ ಈ ದಿನ ಚೆನ್ನಾಗಿ ಕಳೆಯುವಿರಿ. ಅವರೊಂದಿಗೆ ನಿಮ್ಮ ಭಾವನೆಗಳು ಹಂಚಿಕೊಳ್ಳುವ ಮೂಲಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಕೆಲಸದ ಜಾಗದಲ್ಲೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಪರಿಶ್ರಮದಿಂದ ಕೆಲಸ ಮಾಡಿ, ಇಂದು ಸಹೋದ್ಯೋಗಿಯೊಬ್ಬರು ನಿಮ್ಮ ಕೆಲಸದಲ್ಲಿ ಮೂಗು ತೂರಿಸುವ ಸಾಧ್ಯತೆ ಇದೆ. ಆರೋಗ್ಯ ಸ್ಥಿತಿ ಚೆನ್ನಾಗಿದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಮಧ್ಯಾಹ್ನ 2.10ರಿಂದ 8.50ರವರೆಗೆ

ಮಕರ

ಮಕರ

ಈ ದಿನ ನಿಮಗೆ ಅನುಕೂಲಕರವಾಗಿದೆ. ತುಂಬಾ ದಿನದಿಂದ ನೀವು ಮಾಡುತ್ತಿದ್ದ ಪ್ರಯತ್ನಕ್ಕೆ ಫಲ ಸಿಗಲಿದೆ. ಪ್ರಯಾಣದ ಅವಕಾಶವಿದೆ. ವೈಯಕ್ತಿ ಜೀವನ ಕೂಡ ಚೆನ್ನಾಗಿರುತ್ತದೆ. ನಿಮ್ಮ ಮನೆಯಲ್ಲಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಮನೆಯ ನೆಮ್ಮದಿಗೆ ಯಾವುದೇ ಭಂಗ ತರದಂತೆ ನೋಡಿಕೊಳ್ಳಿ. ನಿಮ್ಮಿಂದ ಪೋಷಕರು ಸಂತುಷ್ಟರಾಗುತ್ತಾರೆ. ಯಾವುದೇ ಮಹತ್ವದ ವಿಷಯವನ್ನು ಈ ದಿನ ಅವರೊಂದಿಗೆ ಹೇಳಬಹುದು. ಹೊಸ ಉದ್ಯಮ ಪ್ರಾರಂಭಿಸುವುದಾದರೆ ಅದರ ಬಗ್ಗೆ ಯೋಜನೆ ರೂಪಿಸಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 17

ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ ರಾತ್ರಿ10 ಗಂಟೆಯವರೆಗೆ

ಕುಂಭ

ಕುಂಭ

ನಿಮ್ಮ ಹಣಕಾಸಿನ ತೊಂದರೆ ಇಂದು ಇಲ್ಲವಾಗುವುದು, ನಿಮಗಿಂದು ಆರ್ಥಿಕ ನೆರವು ದೊರೆಯಲಿದೆ. ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿ ಬದಲಾವಣೆ ತನ್ನಿ. ನಿಮ್ಮ ಸಮಸ್ಯೆ ಬಗೆಹರಿಸಲು ಏನು ಮಾಡಬಹುದೆಂದು ಶಾಂತವಾಗಿ ಆಲೋಚಿಸಿದರೆ ಮಾರ್ಗ ದೊರೆಯುತ್ತದೆ. ನೌಕರಿ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿದೆ. ಸಹೋದ್ಯೋಗಿಗಳ ಬೆಂಬಲ ಸಿಗದೆ ನಿಮಗೆ ಸ್ವಲ್ಪ ನಿರಾಸೆ ಆಗಬಹುದು. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಮೆರೂನ್

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಸಂಜೆ 4.20ರಿಂದ ರಾತ್ರಿ 12 ಗಂಟೆಯವರೆಗೆ

ಮೀನ ರಾಶಿ

ಮೀನ ರಾಶಿ

ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ, ನಿಮ್ಮ ಹಣಕಾಸಿನ ವಿಷಯದ ಬಗ್ಗೆ ಯಾರೊಂದಿಗೆ ಹೆಚ್ಚು ಹಂಚಿಕೊಳ್ಳಬೇಡಿ. ಹಣ ಹೂಡಿಕೆಗೆ ಇಂದು ಸಕಾಲ. ಉದ್ಯೋಗಿಗಳು ಬಾಸ್‌ ಜೊತೆ ಮಾತನಾಡುವಾಗ ಎಚ್ಚರವಹಿಸಿ. ನಿಮ್ಮ ಮಾತು ಕೆಲಸದ ಮೇಲೆ ಪರಿಣಾಮ ಬೀರಬಹುದು. ಕೌಟಂಬಿಕ ಜೀವನದಲ್ಲಿ ಖುಷಿ ಇರುತ್ತದೆ. ನಿಮ್ಮ ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಕಾಣುತ್ತದೆ, ಅವರು ನಿಮ್ಮನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಸಂತೋಷಗೊಳ್ಳುವಿರಿ. ಆರೋಗ್ಯದ ಕಡೆ ಗಮನ ನೀಡಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.45ರವರೆಗೆ

English summary

Daily Horoscope 26 Jan 2020 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, January 25, 2020, 14:42 [IST]
X
Desktop Bottom Promotion