Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ರಾಶಿಚಕ್ರದ ಪ್ರಕಾರ ಯಾವ ವಿನ್ಯಾಸದ ಟ್ಯಾಟೂ ನಿಮಗೆ ಸೂಕ್ತ
ಹಚ್ಚೆ ಹಾಕಿಕೊಳ್ಳುವಂತಹ ಕ್ರಮವು ತುಂಬಾ ಪುರಾತನವಾಗಿರುವಂತದ್ದಾಗಿದ್ದು, ಇದು ಇಂದಿನ ಯುವ ಜನತೆಯನ್ನು ತುಂಬಾ ಆಕರ್ಷಿಸಿದೆ. ಯಾಕೆಂದರೆ ಇದರಲ್ಲಿ ಹಲವಾರು ವಿಧದ ಚಿತ್ರಗಳು, ವಿವಿಧ ವಿನ್ಯಾಸಗಳು ಇವೆ.

ಹೀಗಾಗಿ ಹಚ್ಚೆ ಯಾನೆ ಟ್ಯಾಟೂ ಎನ್ನುವುದು ತುಂಬಾ ಟ್ರೆಂಡ್ ಆಗುತ್ತಿದೆ. ಕೆಲವರು ಕಣ್ಣಿನ ರೆಪ್ಪೆಯನ್ನು ಬಿಡದೆ ಇಡೀ ದೇಹದ ಮೇಲೆ ಟ್ಯಾಟೂ ಬಿಡಿಸಿಕೊಳ್ಳುವರು. ಇನ್ನು ಕೆಲವರು ದೇಹದ ನಿರ್ದಿಷ್ಟ ಭಾಗದ ಮೇಲೆ ಮಾತ್ರ ಟ್ಯಾಟೂ ಹಾಕಿಸಿಕೊಳ್ಳುವರು.
ಕೆಲವು ಟ್ಯಾಟೂಗಳು ಜೀವಮಾನವಿಡಿ ಹಾಗೆ ದೇಹದ ಮೇಲೆ ಉಳಿದುಕೊಳ್ಳುವುದು. ಆದರೆ ಜ್ಯೋತಿಷ್ಯದ ಪ್ರಕಾರ ನಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಟ್ಯಾಟೂ ಹಾಕಿಸಿಕೊಳ್ಳಬೇಕೆಂತೆ. ಪ್ರತಿಯೊಂದು ರಾಶಿಚಕ್ರಕ್ಕೂ ಅದರದ್ದೇ ಆಗಿರುವಂತಹ ಟ್ಯಾಟೂಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಇದರಿಂದ ನಿಮ್ಮ ರಾಶಿಗೆ ಅನುಗುಣವಾಗಿ ಟ್ಯಾಟೂ ಹಾಕಿಸಿ.

ಮೇಷ
ಮಂಗಳ ಗೃಹದ ಅಧಿಪತ್ಯದಲ್ಲಿ ಇರುವ ಮೇಷ ರಾಶಿಯವರು ತುಂಬಾ ಶಕ್ತಿಯಿಂದ ಹಾಗೂ ಸಾಹಸಮಯಿಗಳು. ಇವರಿಗೆ ತಮ್ಮ ಹಾದಿಯ ಸ್ಪಷ್ಟತೆ ಇರುವ ಕಾರಣದಿಂದಾಗಿ ಇವರು ಬಾಣಗಳಿರುವ ಟ್ಯಾಟೂ ಹಾಕಿಸಬೇಕು.
ಮೇಷ ರಾಶಿಯವರ ಸ್ಪರ್ಧಾತ್ಮಕ ಸ್ಪೂರ್ತಿಗೆ ಜೇನುಹುಳದ ಟ್ಯಾಟೂ ಹಾಕಿಸಿಕೊಂಡರೂ ತುಂಬಾ ಒಳ್ಳೆಯದು. ಇವರಿಗೆ ಹೊಂದಾಣಿಕೆ ಆಗುವಂತಹ ಬೇರೆ ಟ್ಯಾಟೂಗಳೆಂದರೆ ಅದು ಬಿಲ್ಲುಬಾಣ ಹಿಡಿದಿರುವ ಬುಡಕಟ್ಟು ಜನರು.

ವೃಷಭ
ಶುಕ್ರನಿಂದ ಆಳಲ್ಪಡುವಂತಹ ವೃಷಭ ರಾಶಿಯವರಿಗೆ ಸಣ್ಣ ಹೃದಯದ ಟ್ಯಾಟು ತುಂಬಾ ಒಳ್ಳೆಯದು. ಇವರು ತುಂಬಾ ಸರಳ ವ್ಯಕ್ತಿಗಳಾಗಿರುವ ಕಾರಣದಿಂದಾಗಿ ಇವರಿಗೆ ಎಲೆಯ ಟ್ಯಾಟೂ ಕೂಡ ಒಳ್ಳೆಯದು. ಇವರಿಗೆ ಹೊಂದಾಣಿಕೆ ಆಗುವ ಇತರ ಟ್ಯಾಟೂಗಳು ಗುಲಾಬಿ ಬಳ್ಳಿ, ಹೂವಿನ ಮಾಲೆ ಮತ್ತು ಮರಗಳು.

ಮಿಥುನ
ರಾಶಿಯ ಚಿಹ್ನೆಯು ಅವಳಿ ಆಗಿರುವ ಕಾರಣದಿಂದಾಗಿ ಈ ರಾಶಿಯವರು ಯಾವಾಗಲೂ ಎರಡು ಟ್ಯಾಟೂ ಹಾಕಿಸಿಕೊಳ್ಳುವರು. ಇವರಲ್ಲಿ ಇಬ್ಬಗೆಯ ಪ್ರವೃತ್ತಿಯು ಇರುವ ಕಾರಣದಿಂದಾಗಿ ಇವರಿಗೆ ಯಿಂಗ್ ಯಾಂಗ್ ಟ್ಯಾಟೂ ಹೊಂದಾಣಿಕೆ ಆಗುವುದು. ಯಾವಾಗಲೂ ತುಂಬಾ ಚುರುಕು ಮತ್ತು ಶಕ್ತಿಯುತ ಸ್ವಭಾವ ಹೊಂದಿರುವ ಇವರಿಗೆ ಹಕ್ಕಿಯ ಟ್ಯಾಟೂ ಒಳ್ಳೆಯದು. ಗರಿಗಳು, ರೆಕ್ಕೆಗಳು ಮತ್ತು ಕೊಂಬೆಗಳ ಟ್ಯಾಟೂ ಹಾಕಿಸಬಹುದು.

ಕರ್ಕ
ತಮ್ಮ ಕುಟುಂಬಕ್ಕೆ ಹೆಚ್ಚಿನ ಮಹತ್ವ ನೀಡುವಂತಹ ಕರ್ಕಾಟಕ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರ ಟ್ಯಾಟೂ ತುಂಬಾ ಒಳ್ಳೆಯದು. ಇವರ ಸ್ಥಿರ ಮತ್ತು ಶಾಂತಿ ಹಾಗೂ ಪ್ರೀತಿಯ ಗುಣವು ಲಂಗರಿನ ಟ್ಯಾಟೂ ಒಳ್ಳೆಯದು. ರೋಮನ್ ಸಂಖ್ಯೆಗಳು, ದೇಶಪ್ರೇಮದ ಚಿಹ್ನೆಗಳು ಮತ್ತು ಹೃದಯ ಬಡಿತದ ಟ್ಯಾಟೂಗಳು ಕರ್ಕಾಟಕ ರಾಶಿಯವರಿಗೆ ಇತರ ಒಳ್ಳೆಯ ಆಯ್ಕೆಗಳು.

ಸಿಂಹ
ಸಿಂಹ ರಾಶಿಯವರು ಜನ್ಮತಃ ನಾಯಕತ್ವದ ಗುಣ ಹೊಂದಿರುವರು ಮತ್ತು ಅಧಿಕಾರ ಸೂಚಿಸುವ ಟ್ಯಾಟೂ ಇವರಿಗೆ ಒಳ್ಳೆಯದು. ಸಿಂಹ, ಕಿರೀಟ ಮತ್ತು ರಾಜದಂಡದ ಟ್ಯಾಟೂಗಳು ಸಿಂಹ ರಾಶಿಯವರಿಗೆ ಒಳ್ಳೆಯದು. ಕಿತ್ತಳೆ ಮತ್ತು ಕೆಂಪು ಬಣ್ಣದ ದಪ್ಪ ಗೆರೆಗಳ ಮೂಲಕ ಇವರು ತಮ್ಮ ಟ್ಯಾಟೂದಲ್ಲಿ ಪ್ರಯೋಗ ಮಾಡಬಹುದು.

ಕನ್ಯಾ
ಹೆಚ್ಚು ಶಿಸ್ತುಬದ್ಧ ಮತ್ತು ಆಧಾರಿತ ಕನ್ಯಾ ರಾಶಿಯವರಿಗೆ ವಿವರ ಒಳಗೊಂಡಿರುವ ಜ್ಯಾಮಿತೀಯ ಟ್ಯಾಟೂ ಒಳ್ಳೆಯದು. ನಾಚಿಕೆ ಮತ್ತು ಸರಳ ಸ್ವಭಾವದ ಕನ್ಯಾ ರಾಶಿಯವರು ಸಣ್ಣ ಪರ್ವತದ ಟ್ಯಾಟೂ ಕೂಡ ಒಳ್ಳೆಯ ಆಯ್ಕೆ. ಯಾವಾಗಲೂ ಜೇನುಹುಳದಂತೆ ಕ್ರಿಯಾಶೀಲರಾಗಿರುವ ಇವರಿಗೆ ಜೇನುಹುಳದ ಟ್ಯಾಟೂ ಕೂಡ ಒಳ್ಳೆಯದು.

ತುಲಾ
ತುಂಬಾ ಬುದ್ಧಿವಂತರಾಗಿರುವಂತಹ ತುಲಾ ರಾಶಿಯವರನ್ನು ಸೆಳೆಯಬಹುದಾದ ಟ್ಯಾಟೂಗಳು ಎಂದರೆ ಹೂಗಳು ಮತ್ತು ಹಂಸದ್ದಾಗಿದೆ. ಕೆಲವು ಸಣ್ಣ ವಾಕ್ಯ ಮತ್ತು ಶಬ್ಧಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ತುಲಾ ರಾಶಿಯವರು ತಮ್ಮ ಸಂಗಾತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವರು.

ವೃಶ್ಚಿಕ
ತುಂಬಾ ತೀವ್ರತೆಯವರಾಗಿರುವಂತಹ ವೃಶ್ಚಿಕ ರಾಶಿಯವರು ರಹಸ್ಯ ಮತ್ತು ಇಂದ್ರಿಯತೆಯ ಟ್ಯಾಟೂಗಳ ಕಡೆಗೆ ಹೆಚ್ಚು ಆಕರ್ಷಿಸಲ್ಪಡುವರು. ಇವರು ತಾವು ಎಲ್ಲಿಂದ ಬಂದಿದ್ದೇವೆ ಮತ್ತು ತಮ್ಮ ಅಭಿವೃದ್ಧಿ ಏನು ಎನ್ನುವಂತಹ ಟ್ಯಾಟೂ ಬಿಡಿಸಿಕೊಳ್ಳುವರು. ಗುಲಾಬಿ, ಫೀನಿಕ್ಸ್ ಮತ್ತು ಚೇಳಿನ ಟ್ಯಾಟೂ ಕೂಡ ಇವರಿಗೆ ಒಳ್ಳೆಯ ಆಯ್ಕೆ.

ಧನು
ಸಾಹಸ ಪ್ರವೃತ್ತಿಯನ್ನು ಹೊಂದಿರುವಂತಹ ಧನು ರಾಶಿಯವರಿಗೆ ರೇಖಾಂಶ ಮತ್ತು ಅಕ್ಷಾಂಶದ ನಿರ್ದೇಶಾಂಕದ ಟ್ಯಾಟೂಗಳು ತುಂಬಾ ಒಳ್ಳೆಯದು. ಇವರು ಪ್ರಯಾಣವನ್ನು ಇಷ್ಟಪಡುವ ಕಾರಣದಿಂದಾಗಿ ವಿಶ್ವ ಮತ್ತು ವಿಶ್ವ ಭೂಪಟದ ಟ್ಯಾಟೂ ಹಾಕಿಸಬಹುದು. ಧಾರ್ಮಿಕ ಸಂಕೇತಗಳು ಮತ್ತು ಕೆಲವು ರಾಷ್ಟ್ರಗಳ ಸಂಕೇತಗಳನ್ನು ಇವರು ಹಚ್ಚೆ ಹಾಕಿಸಬಹುದು.

ಮಕರ
ತುಂಬಾ ಗಂಭೀರ ಹಾಗೂ ಅಷ್ಟೇ ಸರಳ ವ್ಯಕ್ತಿತ್ವ ಹೊಂದಿರುವಂತಹ ಮಕರ ರಾಶಿಯವರು ಯಾವಾಗಲೂ ಜ್ಯಾಮಿತೀಯ ಮತ್ತು ಗೆರೆಗಳ ಟ್ಯಾಟೂ ಕಡೆಗೆ ಆಕರ್ಷಿತರಾಗುವರು. ವ್ಯಾಪಾರಸ್ಥ ಬುದ್ಧಿ ಮತ್ತು ಪ್ರಾಯೋಗಿಕವಾಗಿರುವಂತಹ ಇವರಿಗೆ ಪ್ರೇರಣೆ ನೀಡುವಂತಹ ಟ್ಯಾಟೂ ಕೂಡ ಒಳ್ಳೆಯದು. ಸರಳ ಗೆರೆಗಳು ಮತ್ತು ತ್ರಿಕೋನಗಳು ಮಕರ ರಾಶಿಗೆ ಹಿಡಿಸುವಂತಹ ಟ್ಯಾಟೂಗಳು.

ಕುಂಭ
ತಮ್ಮ ಗುಣಕ್ಕೆ ಅನುಗುಣವಾಗಿ ಯಾವಾಗಲೂ ಸಜ್ಜನ ವ್ಯಕ್ತಿಗಳಾಗಿರುವಂತಹ ಇವರು ತುಂಬಾ ಕೊನೇ ಕ್ಷಣದಲ್ಲಿ ಟ್ಯಾಟೂ ಆಯ್ಕೆ ಮಾಡುವರು. ಇವರು ನಕ್ಷತ್ರ ಪುಂಜ ಅಥವಾ ಮಂಡಲ ಕಲೆಯನ್ನು ಟ್ಯಾಟೂ ಹಾಕಿಸಬಹುದು. ಸಣ್ಣ ಉಲ್ಲೇಖಗಳು ಮತ್ತು ಚಂದ್ರನ ಟ್ಯಾಟೂ ಕೂಡ ಕುಂಭ ರಾಶಿಯವರಿಗೆ ಹೊಂದಿಕೊಳ್ಳುವುದು.

ಮೀನ
ಆಯಸ್ಕಾಂತೀಯ ಮತ್ತು ಮುಕ್ತ ವ್ಯಕ್ತಿತ್ವವನ್ನು ಹೊಂದಿರುವಂತಹ ಮೀನ ರಾಶಿಯವರು ಸಮುದ್ರದ ಅಲೆಗಳ ಟ್ಯಾಟೂ ಹಾಕಿಸುವರು. ಮೀನ ರಾಶಿಯವರು ತಮ್ಮದೇ ಕನಸಿನ ಲೋಕದಲ್ಲಿ ಇರುವರು ಮತ್ತು ಚಿಟ್ಟೆಯಂತೆ ಇವರು ಮುಕ್ತವಾಗಿ ಇರುವವರು. ಹೀಗಾಗಿ ಯೂನಿಕಾರ್ನ್(ಕಲ್ಪನೆಯ ಪ್ರಾಣಿ) ಟ್ಯಾಟೂ ಕೂಡ ಒಳ್ಳೆಯದು.



Click it and Unblock the Notifications











