Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಜ್ಯೋತಿಷ್ಯ ಪ್ರಕಾರ ಬುಧವಾರದಂದು ಏನು ಮಾಡಬಾರದು?
ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷವಿದೆ, ಗ್ರಹಗಳ ಚಲನೆ, ಆ ದಿನದ ಅಧಿಪತಿ ಯಾರು ಎಂಬುವುದರ ಆಧಾರದ ಮೇಲೆ ಆ ದಿನ ವಿಶೇಷತೆ ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುವುದಾಗಿ ಹೇಳಲಾಗುವುದು.
ಬುಧವಾರದ ಅಧಿಪತಿ ಬುಧ. ಅಲ್ಲದೆ ಈ ದಿನ ವಿಘ್ನ ನಿವಾರಕ ಗಣಪತಿಗೆ ಈ ದಿನ ಗರಿಕೆ ಹುಲ್ಲನ್ನು ಅರ್ಪಿಸಬೇಕು. ನಾವಿಲ್ಲಿ ಜ್ಯೋತಿಷ್ಯ ಪ್ರಕಾರ ಬುಧವಾರ ಏನು ಮಾಡಬಾರದು ಎಂಬುವುದಾಗಿ ಹೇಳಿದ್ದೇವೆ ನೋಡಿ.

ಮಹಿಳೆಯರನ್ನು ಅವಮಾನಿಸಬಾರದು
ತಾಯಿ, ಸಹೋದರಿ, ಮಗಳು ಹೀಗೆ ಮಹಿಳೆಯರನ್ನು ಬುಧವಾರ ಅವಮಾನಿಸಬಾರದು. ಬುಧವಾರ ಹಸಿರು ಬಳೆಯನ್ನು ಮಹಿಳೆಯರಿಗೆ ನೀಡುವುದು ಒಳ್ಳೆಯದು.

ಸಾಲ ಪಡೆಯಬಾರದು
ಬುಧವಾರ ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾಡಬಾರದು. ಈ ದಿನ ಹಣ ಸಾಲ ಪಡೆದರೆ ಆರ್ಥಿಕ ಲಾಭ ಉಂಟಾಗುವುದಿಲ್ಲ ಎಂದು ಹೇಳಲಾಗುವುದು. ಆದ್ದರಿಂದ ಈ ದಿನದಂದು ಯಾರ ಕೈಯಿಂದ ಸಾಲ ಪಡೆಯಬಾರದು ಎಂದು ಹೇಳಲಾಗುವುದು.

ಕೆಟ್ಟ ಪದಗಳನ್ನು ಬಳಸಬಾರದು
ಯಾರಿಗಾದರೂ ಬೈಯ್ಯುವುದು, ಕೆಟ್ಟ ಪದಗಳಿಂದ ನಿಂದಿಸುವುದು ಮಾಡಿದರೆ ನಿಮಗೆ ಬುಧನ ಬಲ ಕುಗ್ಗುವುದು. ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುವುದು ಅಲ್ಲದೆ ಐಶ್ವರ್ಯ, ಸಂಪತ್ತು ನಶಿಸಿ ಹೋಗುವುದು ಎಂದು ಹೇಳಲಾಗಿದೆ. ಆದ್ದರಿಂದ ಬುಧವಾರ ಕೆಟ್ಟ ಪದಗಳನ್ನು ಬಳಸಿ ಯಾರ ಮನಸ್ಸನ್ನೂ ನೋಯಿಸಬೇಡಿ.

ಹೂಡಿಕೆ ಮಾಡಬೇಡಿ
ಬುಧವಾರ ಹೂಡಿಕೆ ಮಾಡಲು ಸೂಕ್ತವಲ್ಲ ಎಂದು ಹೇಳಲಾಗುವುದು. ಹೂಡಿಕೆಗೆ ಸೂಕ್ತ ದಿನ ಶುಕ್ರವಾರ.

ಮಂಗಳಮುಖಿಯರನ್ನು ಅವಮಾನಿಸಬಾರದು
ಈ ದಿನ ಮಂಗಳಮುಖಿಯರನ್ನು ಅವಮಾನಿಸಬಾರದು, ಬದಲಿಗೆ ಅವರಿಗೆ ಹಣವನ್ನು ನೀಡಿ ಅವರಿಂದ ಆಶೀರ್ವಾದ ಪಡೆಯಬೇಕು. ಇದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುವುದು.

ಪಶ್ಚಿಮದ ಕಡೆ ಪ್ರಯಾಣ ಒಳ್ಳೆಯದಲ್ಲ
ಬುಧವಾರ ಪಶ್ಚಿಮದ ಕಡೆ ಪ್ರಯಾಣ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು.

ಮುತ್ತೈದೆಯರು ಕಪ್ಪು ಬಟ್ಟೆ ಧರಿಸಬಾರದು
ಕಪ್ಪುವಾರದಂದು ವಿವಾಹಿತ ಮಹಿಳೆಯರು ಕಪ್ಪು ಬಟ್ಟೆ ಧರಿಸಬಾರದು ಎನ್ನುತ್ತಾರೆ. ಹಸಿರು ವಸ್ತ್ರ ಒಳ್ಳೆಯದು ಎಂದು ಹೇಳಲಾಗುವುದು.
ಕೊನೆಯದಾಗಿ: ಇಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರದಂದು ಏನು ಮಾಡಬಾರದು ಎಂದು ಹೇಳಲಾಗಿದೆ. ಇಲ್ಲಿ ಹೇಳಿರುವ ವಿಷಯಗಳನ್ನು ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು....



Click it and Unblock the Notifications
