Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ನಿಮಗೆ ಗೊತ್ತೇ? ಈ ಆರು ರಾಶಿಯವರು ಅಧಿಕ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಾರಂತೆ!!
ಹಣ ಎನ್ನುವುದು ಎಲ್ಲರ ಜೀವನದಲ್ಲೂ ಅಗತ್ಯವಾದ ವಸ್ತು. ಅದು ಎಷ್ಟು ಮೌಲ್ಯಯುತವಾದದ್ದು ಎಂದರೆ ಅದಿಲ್ಲದೆ ವ್ಯಕ್ತಿ ಏನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ನಿತ್ಯದ ಬದುಕಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಹಣ ಇರಲೇ ಬೇಕು. ಹಾಗಾಗಿ ಅದನ್ನು ಗಳಿಸುವಾಗ ಹಾಗೂ ವ್ಯಯಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಬೇಕು. ಇಲ್ಲವಾದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹಾಗೂ ದುಃಖವನ್ನು ಅನುಭವಿಸಬೇಕಾಗುವುದು. ಕೆಲವರು ಹಣವನ್ನು ವ್ಯಯಿಸುವಾಗ ಸಾಕಷ್ಟು ಗಮನವನ್ನು ನೀಡುತ್ತಾರೆ. ಇನ್ನೂ ಕೆಲವರು ಹಣದ ಬಗ್ಗೆ ಯಾವುದೇ ಚಿಂತೆಯನ್ನು ಮಾಡುವುದಿಲ್ಲ.
ಕೆಲವು ವ್ಯಕ್ತಿಗಳಿಗೆ ಕೈಯಲ್ಲಿ ಸ್ವಲ್ಪ ಹಣ ಇದೆ ಎಂದಾದರೆ ಮೊದಲು ಬೇಕಾದ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾರೆ. ಕೆಲವರಿಗೆ ಶಾಪಿಂಗ್ ಮಾಡುವುದು, ಉಡುಗೊರೆ ವಸ್ತುಗಳನ್ನು ಖರೀದಿಸುವುದು ಎಂದರೆ ಒಂದು ರೀತಿಯ ಸಂತೋಷವನ್ನು ಅನುಭವಿಸುತ್ತಾರೆ. ಜೊತೆಗೆ ವಸ್ತುಗಳನ್ನು ಖರೀದಿಸುವುದು, ಅದನ್ನು ಬಳಸುವುದು ಅಥವಾ ಉಡುಗೊರೆಯಾಗಿ ನೀಡುವುದು ಎಂದರೆ ಎಲ್ಲಿಲ್ಲದ ಆನಂದ ಹಾಗೂ ಮಾನಸಿಕ ನೆಮ್ಮದಿಯನ್ನು ನೀಡುವುದು. ಹಾಗಾಗಿ ಹಣ ಖಾಲಿಯಾಗುವುದು ಅಥವಾ ವ್ಯವಯಿಸುವುದರ ಬಗ್ಗೆ ಹೆಚ್ಚಿನ ಚಿಂತನೆ ಅಥವಾ ಬೇಸರವನ್ನು ವ್ಯಕ್ತಪಡಿಸುವುದಿಲ್ಲ.

ಹಣ ಎನ್ನುವುದು ಜೀವಕ್ಕೆ ಸಮಾನ!
ಪ್ರತಿಯೊಬ್ಬರಿಗೂ ಹಣ ಎನ್ನುವುದು ಜೀವಕ್ಕೆ ಸಮಾನವಾಗಿರುತ್ತದೆ. ಹಣವಿಲ್ಲದ ಜೀವನ ವ್ಯರ್ಥ ಹಾಗೂ ದುಃಖದಿಂದ ಕೂಡಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ಹಣವನ್ನು ಗಳಿಸಲು ಸಾಕಷ್ಟು ಶ್ರಮ ಹಾಗೂ ತ್ಯಾಗವನ್ನು ಮಾಡುತ್ತಾರೆ. ಇನ್ನೂ ಕೆಲವರು ಹಣ ಹಾಗೂ ಆಸ್ತಿಯನ್ನು ಪಡೆದುಕೊಳ್ಳು ವುದಕ್ಕಾಗಿ ಮಾನವೀಯತೆಯನ್ನು ಮರೆಯುವುದು, ಕ್ರೂರ ಕೆಲಸ ಮಾಡುವುದು ಅಥವಾ ಮೋಸ ಮಾಡುವುದಕ್ಕೂ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಬೇರೆಯವರಿಗಾಗಿ ಹಣವನ್ನು ವ್ಯಯಿಸುವುದು ಅಥವಾ ಹಣ ಸಹಾಯ ಮಾಡುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರು ರಾಶಿಚಕ್ರದ ವ್ಯಕ್ತಿಗಳು ಹಣವನ್ನು ಖರ್ಚು ಮಾಡುವುದರ ಬಗ್ಗೆ ಚೂರು ಚಿಂತನೆ ನಡೆಸುವುದಿಲ್ಲ. ತಮ್ಮ ಕೈಯಲ್ಲಿ ಹಣವಿದೆ ಎಂದಾದಾಗ ಆದಷ್ಟು ಹಣವನ್ನು ವ್ಯಯಿಸಲು ಮುಂದಾಗುತ್ತಾರೆ. ಒಂದಿಷ್ಟು ಅಗತ್ಯ ವಸ್ತುಗಳನ್ನು ಖರೀದಿಸುವುದು, ಉಡುಗೊರೆ ನೀಡುವುದರಲ್ಲಿ ಹೆಚ್ಚು ಆನಂದವನ್ನು ಅನುಭವಿಸುತ್ತಾರೆ ಎನ್ನಲಾಗುವುದು. ಹಾಗಾದರೆ ನಿಮ್ಮ ರಾಶಿಚಕ್ರ ಯಾವುದು? ನೀವು ಈ ಸ್ವಭಾವವನ್ನು ಹೊಂದಿದ್ದೀರಾ? ಹಣವನ್ನು ವ್ಯಯಿಸುವಾಗ ನಿಮಗೆ ಸಂತೋಷವಾಗುವುದೇ? ಎನ್ನುವ ಸಂಗತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಮೇಷ ರಾಶಿಯವರು ಸಾಮಾನ್ಯವಾಗಿ ತಾಳ್ಮೆಯನ್ನು ಹೊಂದಿರದ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರಿಗೆ ಕೋಪವು ಬಹುಬೇಗ ಬರುವುದು. ಭಾವನಾತ್ಮಕವಾಗಿ ಶೀಘ್ರಗತಿಯ ಏರಿಳಿತವನ್ನು ಅನುಭವಿಸುವರು. ಇವರು ತಮ್ಮ ಕೈಯಲಿದ್ದ ಹಣದ ಬಗ್ಗೆ ಹಾಗೂ ಅದರ ಖರ್ಚು-ವೆಚ್ಛಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವರು. ಅದೇ ಅವರು ತಮಗೆ ಇಷ್ಟವಾಗುವ ಬಟ್ಟೆ ಅಥವಾ ಉಡುಗೆಯನ್ನು ಕಂಡರೆ ಅದನ್ನು ಖರೀದಿಸಲು ಮುಂದಾಗುವರು. ಆಗ ಅವರು ಹಣವನ್ನು ಅಧಿಕವಾಗಿ ವ್ಯಯಿಸುತ್ತಿದ್ದೇನೆ ಎನ್ನುವುದರ ಚಿಂತನೆಯನ್ನು ನಡೆಸರು. ಈ ವಿಷಯದಲ್ಲಿ ಅವರು ಹೆಚ್ಚು ಹಣವನ್ನು ವ್ಯಯಿಸುವ ವ್ಯಕ್ತಿಗಳಾಗಿ ಕಂಡುಬರುತ್ತಾರೆ.

ಸಿಂಹ
ಅತ್ಯಂತ ಉತ್ಸಾಹಿಗಳು ಹಾಗೂ ನಾಯಕತ್ವ ಸ್ವಭಾವದವರಾದ ಇವರು ಬೇಸರದ ಭಾವನೆಯಲ್ಲಿ ಇರುವ ಸಂದರ್ಭಗಳು ಅತ್ಯಂತ ಕಡಿಮೆ ಎಂದು ಹೇಳಬಹುದು. ಹಾಗೊಮ್ಮೆ ಇವರು ಬೇಸರದ ಭಾವನೆಯಲ್ಲಿ ಇದ್ದಾರೆ ಎಂದಾದರೆ ಅವರಿಗೆ ಶಾಪಿಂಗ್ ಮಾಡಲು ಆಹ್ವಾನಿಸಿದರೆ ಅಥವಾ ಶಾಪಿಂಗ್‍ಗಾಗಿ ಒಂದಿಷ್ಟು ಹಣ ಇಲ್ಲವೇ ಡೆಬಿಟ್ ಕಾರ್ಡ್‍ನ್ನು ನೀಡಿದರೆ ಸಾಕು. ಬೇಸರದ ಭಾವನೆ ಎಲ್ಲವೂ ಹೋಗಿ ಮುಖದಲ್ಲಿ ಸಂತೋಷದ ನಗು ಮೂಡುವುದು. ಇವರಿಗೆ ಎಲ್ಲದಕ್ಕಿಂತ ಹೆಚ್ಚಾಗಿ ಶಾಪಿಂಗ್ ಮಾಡುವುದರಲ್ಲಿ ಅತ್ಯಂತ ಹೆಚ್ಚಿನ ಸಂತೋಷವಿದೆ ಎಂದು ಹೇಳಲಾಗುವುದು. ಹೊಸ ಹೊಸ ವಸ್ತುಗಳನ್ನು ನೋಡುವುದು, ಅದನ್ನು ಖರೀದಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಸಂತೋಷ ಇರುತ್ತದೆ. ಕೆಲವು ವಿಷಯದಲ್ಲಿ ನಿರ್ದಿಷ್ಟ ಸಂಸ್ಥೆ ಅಥವಾ ಕಂಪನಿಯಿಂದ ತಯಾರಾದ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ.

ಧನು
ಅತ್ಯಂತ ಧೈರ್ಯಶಾಲಿ ವ್ಯಕ್ತಿಗಳು ಇವರು ಎನ್ನಲಾಗುವುದು. ಇವರು ಹಣದ ವಿಷಯದಲ್ಲಿ ಬಜೆಟ್ ರೂಪಿಸಿಕೊಳ್ಳುವುದು ಅಥವಾ ಒಂದು ಟ್ರ್ಯಾಕ್ ಮಾಡಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿರುವುದಿಲ್ಲ. ಇವರಿಗೆ ದುಬಾರಿ ಬೆಲೆಯ ಬಟ್ಟೆಯನ್ನು ಖರೀದಿಸುವುದು, ಹೋಟೆನ್ ಅಲ್ಲಿ ತಂಗುವುದು, ವಿಮಾನಗಳಲ್ಲಿ ಸಂಚರಿಸುವುದು ಎಂದರೆ ಒಂದು ರೀತಿಯ ಸಂತೋಷ ಹಾಗೂ ಮಾನಸಿಕವಾಗಿ ಒಂದಿಷ್ಟು ನೆಮ್ಮದಿಯನ್ನು ಅನುಭವಿಸುತ್ತಾರೆ. ಸಾಹಸ ಕೆಲಸಗಳನ್ನು ನಿರ್ವಹಿಸುವಾಗ ಹೆಚ್ಚು ಸಂತೋಷವನ್ನು ಅನುಭವಿಸುವರು. ಇವರು ಹಣವನ್ನು ದೊಡ್ಡ ವಿಷಯವನ್ನಾಗಿ ಪರಿಗಣಿಸುವುದಿಲ್ಲ. ಖರೀದಿ, ಓಡಾಟ, ಸಾಹಸ ಕೆಲಸಗಳೇ ಇವರಿಗೆ ಹೆಚ್ಚಿನ ಸಂತೋಷವನ್ನು ನೀಡುವುದು.

ಮಿಥುನ
ಈ ರಾಶಿಯ ವ್ಯಕ್ತಿಗಳು ವಿನೋದ ಮತ್ತು ಸಹಾಯ ಮಾಡುವ ಕೆಲಸದ ಬಗ್ಗೆ ಹೆಚ್ಚು ಸಂತೋಷವನ್ನು ಅನುಭವಿಸುತ್ತಾರೆ. ಇವರಲ್ಲಿ ಇರುವ ಹಣವನ್ನು ಎರಡು ವಿಷಯಗಳಿಗೆ ಹೆಚ್ಚು ವ್ಯಯಿಸುತ್ತಾರೆ. ವಿನೋದವನ್ನು ಅನುಭವಿಸುವ ಸಂಗತಿಗೆ ಹಾಗೂ ಇತರರಿಗೆ ಸಹಾಯ ಮಾಡಲು ಅಥವಾ ಧಾನ ಮಾಡುವ ವಿಷಯಕ್ಕೆ ಹಣವನ್ನು ಹೆಚು ಖರ್ಚುಮಾಡುತ್ತಾರೆ. ಇವರಿಗೆ ಹಣದ ವ್ಯಯದ ಬಗ್ಗೆ ಸೂಕ್ತ ಆಲೋಚನೆ ಹಾಗೂ ಬಜೆಟ್‍ಗಳು ಇರುವತ್ತವೆ. ಆದರೆ ಮೇಷ ರಾಶಿಯವರಂತೆ ಹಠಾತ್ ಭಾವನಾತ್ಮಕ ಬದಲಾವಣೆಯನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಮನಸ್ಸು ಸೂಚಿಸಿದ ವಸ್ತುಗಳ ಖರೀದಿ ಅಥವಾ ವ್ಯಯಕ್ಕೆ ಮುಂದಾಗುತ್ತಾರೆ.

ಕುಂಭ
ಕುಂಭ ರಾಶಿಯವರು ಸಹ ಹಣವನ್ನು ಅಧಿಕವಾಗಿ ಹಾಗೂ ಹೆಚ್ಚಾಗಿ ಖರ್ಚುಮಾಡುತ್ತಾರೆ. ಇವರು ಅಧಿಕ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಾರೆ ನಿಜ. ಆದರೆ ಅದು ಹೂಡಿಕೆಯಲ್ಲಿ, ಹೊಸ ಹೊಸ ತಂತ್ರಜ್ಞಾನಗಳ ಖರೀದಿಗೆ, ಉತ್ಪನ್ನಗಳ ಖರೀದಿಗೆ ಸೇರಿದಂತೆ ಹೊಸ ಹೊಸ ಸಂಗತಿಯ ವಿಷಯದಲ್ಲಿ ಹೆಚ್ಚು ತೃಪ್ತಿಯನ್ನು ಅನುಭವಿಸುವರು. ಹೆಚ್ಚು ಹೆಚ್ಚು ಹಣವನ್ನು ಹೊಂದುವುದು ಹಾಗೂ ಅಗತ್ಯವಾದ ವಸ್ತುಗಳನ್ನು ಖರೀದಿಸುವುದು ಮತ್ತು ಹಣ ಹೂಡಿಕೆ ಮಾಡುವುದು ಎಂದರೆ ಇವರಿಗೆ ಎಲ್ಲಿಲ್ಲದ ಸಂತೋಷ ಹಾಗೂ ನೆಮ್ಮದಿ ದೊರೆಯುವುದು.

ಮೀನ
ಮೀನ ರಾಶಿಯವರು ಸಾಮಾನ್ಯವಾಗಿ ಕನಸುಗಾರರು ಎಂದು ಹೇಳಲಾಗುವುದು. ಇವರು ಸದಾ ಹೊಸ ಹೊಸ ಸಂಗತಿಗಳ ಬಗ್ಗೆ ಹಾಗೂ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಹಾಗೂ ಕನಸನ್ನು ಕಾಣುತ್ತಲೇ ಇರುತ್ತಾರೆ. ಇವರು ತಮ್ಮಲ್ಲಿರುವ ಹಣವನ್ನು ತಮಗಾಗಿ ಅಥವಾ ತಮ್ಮ ಇಷ್ಟಕ್ಕೆ ಬೇಕಾದ ರೀತಿಯಲ್ಲಿ ಖರ್ಚು ಮಾಡುವುದಿಲ್ಲ. ಬದಲಿಗೆ ತಮ್ಮವರು, ಸ್ನೇಹಿತರು ಹಾಗೂ ಇತರರಿಗೆ ಸಹಾಯದ ಅವಶ್ಯಕತೆ ಇರುವಾಗ ಹೆಚ್ಚಿನ ಹಣವನ್ನು ವ್ಯಯಿಸುವರು. ಇತರರ ಅಗತ್ಯತೆಗಳಿಗೆ ಹಣ ಸಹಾಯ ಮಾಡುವುದರ ಮೂಲಕ ತಮ್ಮಲ್ಲಿರುವ ಹಣವನ್ನು ವ್ಯಯಿಸುತ್ತಾರೆ. ಸ್ನೇಹಿತರಿಗಾಗಿಯೇ ಹೆಚ್ಚು ಹಣವನ್ನು ವ್ಯಯಿಸುವರು ಎಂದು ಹೇಳಲಾಗುವುದು.



Click it and Unblock the Notifications











