3-1-2019: ಗುರುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು

ಗುರುವಾರದ ದಿನ. ಇದಕ್ಕೆ ಬೃಹಸ್ಪತಿವಾರವೆಂದೂ ಕರೆಯುತ್ತಾರೆ. ದೇವತೆಗಳ ಗುರು ಬೃಹಸ್ಪತ್ಯಾಚಾರ್ಯ.ಗುರುವಾರದ ಹೆಸರು ಗುರು ಗ್ರಹದಿಂದ ಬಂದಿದೆ. 'ಗುರು' ಅಂದರೆ ಭಾರ,ಮಹತ್ವಪೂರ್ಣ ಎಂಬರ್ಥ ಇದೆ.

horoscope

ಹೀಗಾಗಿ ಗುರುವಾರ ಗುರು ಅಂದರೆ ಆಚಾರ್ಯರಿಗೆ ಮೀಸಲಾದ ದಿನ ಕೂಡ ಹೌದು.ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನಕ್ಕೆ(ಮಂದಿರಗಳಲ್ಲಿ) ವಿಶೇಷ ಮಹತ್ವ ಇದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ. 9845743807

ಮೇಷ

ಮೇಷ

ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಅವನ್ನು ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆರೂಢಿಸಿಕೊಳ್ಳಿ. ಅವರು ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರಿಸುವ ಸಾಧ್ಯತೆ ಇದೆ.ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.9845743807

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಬಂಧುಗಳು ಅಥವಾ ಒಡಹುಟ್ಟಿದ ಸಹೋದರ, ಸಹೋದರಿಯರೇ ಆಸ್ತಿ ಪಾಲು ವಿಷಯದಲ್ಲಿ ತಕರಾರು ಮಾಡುವ ಸಾಧ್ಯತೆ ಇದೆ. ಗುರು, ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು. ನಿಮಗೆ ನ್ಯಾಯಯುತವಾಗಿ ಬರಬೇಕಾದ ಪಾಲು ದೊರೆಯುವುದು.ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಪಿತೂರಿ ಎಬ್ಬಿಸುವರು. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಯೋಚಿಸಿ.9845743807

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಸುಮ್ಮನೆ ಮಾತುಕತೆ ನಡೆಸಿ. ಇದರಿಂದ ಒಳಿತಾಗುವುದು. ಇತರರಿಗೆ ಸಹಾಯ ಮಾಡಲು ಮನಸ್ಸು ಇಲ್ಲದಿದ್ದರೆ ಸಹಾಯ ಮಾಡುವವರಿಗೂ ದಾರಿ ತಪ್ಪಿಸಬೇಡಿ. ಅಡಕೆ ಕದ್ದ ಮಾನ ಆನೆ ಕೊಟ್ಟರೂ ಸರಿಹೋಗದು ಎಂಬ ಗಾದೆ ಮಾತು ನೆನಪಾಗುವುದು. ಆದರೂ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲವೂ ಸುಗಮವಾಗುವವು.9845743807

ಅದೃಷ್ಟ ಸಂಖ್ಯೆ:5

ಕಟಕ

ಕಟಕ

ವಿದೇಶದಿಂದ ಬರುವ ಸ್ನೇಹಿತ ಅಥವಾ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ಬಹುದಿನಗಳಿಂದ ಕಾಡುತ್ತಿದ್ದ ವ್ಯಾಜ್ಯ ಸಮಾಪ್ತಿಯಾಗುವುದು. ಕೆಲಸ ಕಾರ್ಯಗಳಲ್ಲಿನ ನಿಷ್ಠೆ ನಿಮಗೆ ಗೌರವ ತಂದುಕೊಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ತಿಳಿದೂ ದೂರದ ಬಂಧುಗಳು ಸಹಾಯ ಮಾಡುವರೆಂಬ ಭ್ರಮೆಯಲ್ಲಿರಬೇಡಿ. ಸದ್ಯದ ಗ್ರಹಸ್ಥಿತಿಗಳು ಪೂರಕವಾಗಿಲ್ಲದ ಕಾರಣ ಅರಿತು ಸುಮ್ಮನಿರುವುದು ಒಳ್ಳೆಯದು.9845743807

ಅದೃಷ್ಟ ಸಂಖ್ಯೆ:8

ಸಿಂಹ

ಸಿಂಹ

ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.9845743807

ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ವಿಷ್ಣು ಸಹಸ್ರನಾಮ ಪಾರಾಯಣದಿಂದ ಇಚ್ಛಿತ ಕಾರ್ಯಗಳು ಬೇಗನೆ ಕೈಗೂಡುವವು. ನೀವು ನಿಮ್ಮ ವಿದ್ಯಾಭ್ಯಾಸದಲ್ಲಿ ಚಾಕಚಕ್ಯತೆ ತೋರಿ ಅಂತಿಮ ಗುರಿ ತಲುಪಲು ಈ ಸ್ತೋತ್ರ ಸಹಕಾರಿಯಾಗುವುದು. ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.9845743807

ಅದೃಷ್ಟ ಸಂಖ್ಯೆ:9

ತುಲಾ

ತುಲಾ

ನಿಮ್ಮ ಸಮಸ್ಯೆಗಳಿಗೆ ಆತ್ಮೀಯರಿಂದ ಉತ್ತಮ ಸಲಹೆ ಸಿಗುವುದು. ಖಾಸಗಿ ಕಂಪನಿ ನೌಕರರಿಗೆ ಸಂತಸದ ಸುದ್ದಿ ದೊರೆಯುವುದು. ತಾಯಿ ಕಡೆಯಿಂದ ಆರ್ಥಿಕ ನೆರವು ಸಿಗಲಿದೆ. ಆರ್ಥಿಕ ಸಮಸ್ಯೆಗಳು ಒಂದು ತಾತ್ವಿಕ ಕೊನೆ ಕಾಣಲಿದೆ.ಬಂಧುಗಳ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ಪರಿವಾರ ಸಮೇತ ತೆರಳುವಿರಿ. ಶತ್ರುಗಳ ಭೀತಿ ದೂರವಾಗಲಿದೆ. ಮನೆಯಲ್ಲಿ ಹಿರಿಯರ ಕಡೆಯಿಂದ ವಿವಾಹ ವಿಷಯ ಪ್ರಸ್ತಾಪವಾಗುವುದು.9845743807

ಅದೃಷ್ಟ ಸಂಖ್ಯೆ:6

ವೃಶ್ಚಿಕ

ವೃಶ್ಚಿಕ

ಆಮೆ ವೇಗದಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಹೆಚ್ಚಿಸಿಕೊಳ್ಳುವವು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಬಂಧುಗಳೊಡನೆ ಸಂಬಂಧ ಗಟ್ಟಿಗೊಳ್ಳುವುದು.ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಕೊಟ್ಟ ಸಾಲ ಭಾಗಶಃ ವಸೂಲಾಗುವ ಸಾಧ್ಯತೆಯಿದೆ. ಆದಾಯ ಮೂಲಗಳು ಹೆಚ್ಚಾಗುವವು. ಖರ್ಚು ವೆಚ್ಚಗಳಿಗೆ ಸರಿಯಾದ ಲೆಕ್ಕವಿಡುವುದು ಒಳ್ಳೆಯದು.9845743807

ಅದೃಷ್ಟ ಸಂಖ್ಯೆ:5

ಧನುಸ್ಸು

ಧನುಸ್ಸು

ಆಸ್ತಿ ಪಾಲು ಕುರಿತು ಚರ್ಚೆಯಾಗಲಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪತ್ನಿಯ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಎನಿಸುವುದು. ಹಿಡಿದ ಕೆಲಸ ಕೈಗೂಡಲು ನವಗ್ರಹಾರಾಧನೆ ಮಾಡಿ. ನೀವು ಊಹಿಸದ ರೀತಿಯಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ನೀವು ಸಂಧಾನ ಚತುರರಾಗಿರುವ ಕಾರಣ ಅದನ್ನು ಸಮರ್ಥವಾಗಿ ಎದುರಿಸುವಿರಿ. ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ.9845743807

ಅದೃಷ್ಟ ಸಂಖ್ಯೆ:5

ಮಕರ

ಮಕರ

ಪರಿವಾರದವರೊಂದಿಗೆ ವಿಹಾರಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ವಾಹನ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ನಿಮ್ಮ ಧೈರ್ಯ ಸ್ವಭಾವ ಎಲ್ಲರ ಮೆಚ್ಚುಗೆ ಪಡೆಯಲಿದೆ.ಅನಿರೀಕ್ಷಿತವಾಗಿ ಪ್ರೀತಿ ಪಾತ್ರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ ಕಂಡುಬರುವುದು. ಹಿರಿಯರ ಮೇಲೆ ವಿನಾಕಾರಣ ಮುನಿಸು ತೋರಿಸಬೇಡಿ. ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು.9845743807

ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ರಾಜಕಾರಣಿಗಳ ಸಹವಾಸದಿಂದ ದೂರವಿರುವುದು ಉತ್ತಮ. ಇಲ್ಲವಾದರೆ ಅವರಿಂದ ಮಾನಸಿಕ ಕಿರುಕುಳ ಆನುಭವಿಸಬೇಕಾಗುವುದು. ಪಾಲುದಾರರ ಇಬ್ಬಗೆಯ ನೀತಿಯಿಂದಾಗಿ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾದೀತು. ಪೂರ್ವ ಸಿದ್ಧತೆ ಇಲ್ಲದೆ ಪ್ರಯಾಣ ಮಾಡ ಬೇಡಿ. ತಾಂತ್ರಿಕ ಪರಿಣಿತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ಅಸ್ಥಿರತೆ ಕಾಣುವುದು. ಕುಲದೇವರ ಪ್ರಾರ್ಥನೆ ಮಾಡಿ.9845743807

ಅದೃಷ್ಟ ಸಂಖ್ಯೆ:2

ಮೀನ

ಮೀನ

ಆರ್ಥಿಕ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಬಹುದು. ಲೇವಾದೇವಿ ವ್ಯವಹಾರಕ್ಕೆ ಕೊಂಚ ಹಿನ್ನಡೆಯುಂಟಾಗುವುದು. ಮಾಧ್ಯಮದವರಿಗೆ ಸರ್ಕಾರದಿಂದ ಸವಲತ್ತುಗಳು ದೊರೆಯುತ್ತವೆ. ಹೊಸ ವ್ಯವಹಾರದ ಆರಂಭವನ್ನು ಮುಂದೂಡುವುದು ಉತ್ತಮ. ಯೋಚಿಸಿ ಮಾತನಾಡಿ. ಅನವಶ್ಯಕ ಘರ್ಷಣೆ ಬೇಡ. ಅವಿವಾಹಿತ ಕನ್ಯೆಗೆ ಯೋಗ್ಯ ವರ ದೊರೆಯುವನು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ.9845743807

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-3-january-December-2019

Know what astrology and the planets have in store for you today. Choose your zodiac sign and read the details..
Story first published: Thursday, January 3, 2019, 4:00 [IST]
X
Desktop Bottom Promotion