Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
26-6-2019: ಬುಧವಾರದ ದಿನ ಭವಿಷ್ಯ
ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉಜ್ವಲವಾಗಿರಬೇಕು. ಸದಾ ಖುಷಿಯಿಂದ ಕೂಡಿರಲಿ. ಯಾವುದೇ ಕಷ್ಟ ನಷ್ಟಗಳು ಉಂಟಾಗದಿರಲಿ ಎಂದು ಬಯಸುತ್ತಾರೆ. ಆದರೆ ಜಾತಕದಲ್ಲಿರುವ ಗ್ರಹಗತಿಗಳು ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.

ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆತನ ಪ್ರೀತಿಗೆ ಪಾತ್ರರಾಗಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಬುಧವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ.

ಮೇಷ( 26 june 2019)
ದೂರದ ಊರಿಗೆ ಪ್ರವಾಸ ಕಾರ್ಯಕ್ರಮ ನಿಶ್ಚಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಅದಕ್ಕೆ ಪೂರಕವಾಗಿ ಹಣಕಾಸು ಕೂಡಾ ಬರುವುದು. ಮಡದಿ ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಇದೆ. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಅನ್ಯರು ಅಪಾರ್ಥ ತಿಳಿಯುವರು. ಅನ್ಯರ ಕುಹಕ ನುಡಿಗಳಿಗೇಕೆ ಆಹಾರವಾಗುವಿರಿ. ನೀವು ಸರಿಯಾದ ಸ್ಥಳದಲ್ಲಿಯೇ ಮಜ್ಜಿಗೆ ಕುಡಿದರೆ ಯಾರಿಗೂ ಸಂಶಯ ಬರುವುದಿಲ್ಲ. ಅನ್ಯರು ಮಾಡುವ ಟೀಕೆಗಳಿಗೆ ಹೆದರಬೇಕಾಗಿಲ್ಲ.9845743807 ಅದೃಷ್ಟ ಸಂಖ್ಯೆ:2

ವೃಷಭ
ನೀವು ಎಷ್ಟೇ ಚಾಣಾಕ್ಷ ತನದಿಂದ ವಾದವನ್ನು ಮಂಡಿಸಿದರೂ ಸುಳ್ಳನ್ನೇ ಸತ್ಯವೆಂದು ವಾದಿಸುವವರ ನಡುವೆ ನಿಮ್ಮ ವಾದ ಮಹತ್ವ ಕಳೆದುಕೊಳ್ಳುವುದು. ದ್ವಿತೀಯ ವಾಕ್‌ಸ್ಥಾನದ ರಾಹು ನಿಮ್ಮ ಮಾತಿನ ಮೂಲಕ ಆಟ ಆಡಲಿದ್ದಾನೆ. ಮಾತಿನ ಬಗ್ಗೆ ಎಚ್ಚರ ಇರಲಿ.ಅನೇಕ ದಿನಗಳ ಕಾರ್ಯಶೀಲತೆಯ ಫಲವಾಗಿ ಧನಲಾಭದ ದಾರಿ ನಿಮಗೆ ಸಿದ್ಧಿಸಲಿದೆ. ಅರ್ಥಾತ್ ವಿವಿಧ ಮೂಲಗಳಿಂದ ಹಣಕಾಸು ಬರುವುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಿಮ್ಮ ಜಾಣ್ಮೆಯನ್ನು ಅವಲಂಬಿಸಿದೆ.9845743807 ಅದೃಷ್ಟ ಸಂಖ್ಯೆ:1

ಮಿಥುನ
ನಿಷ್ಠುರ ನುಡಿಯನ್ನಾಡುವ ನಿಮ್ಮ ಮುಂದೆ ಕೆಲವರು ತಗ್ಗಿ ಬಗ್ಗಿ ನಡೆಯುವರು. ಆದರೆ ಅವರು ಹೃದಯಪೂರ್ವಕವಾಗಿ ನಿಮ್ಮನ್ನು ಗೌರವಿಸುವರು ಎಂದು ನೀವು ತಪ್ಪಾಗಿ ಅಥೈರ್‍ಸಿಕೊಳ್ಳುವಿರಿ. ಆನಂತರ ವಿಷಯ ತಿಳಿದು ಪಶ್ಚಾತ್ತಾಪ ಪಡುತ್ತೀರ. ಸಾಮಾಜಿಕವಾಗಿ ಗುರುತಿಸಿಕೊಂಡಿರುವ ನಿಮಗೆ ಇನ್ನು ಹೆಚ್ಚು ರೀತಿಯ ವರ್ಚಸ್ಸಿಗೆ ಕಾರಣವಾಗುವ ಘಟನೆಯೊಂದು ದೈವಾನುಗ್ರಹದಿಂದ ಪ್ರಾಪ್ತವಾಗುವುದು. ಈ ಸುಸಂದರ್ಭಕ್ಕಾಗಿ ಶಬರಿಯಂತೆ ಕಾದು ಕುಳಿತ ನಿಮಗೆ ಸಂತೋಷವಾಗುವುದು.9845743807 ಅದೃಷ್ಟ ಸಂಖ್ಯೆ:2

ಕಟಕ
ಆಹಾರ, ವಿಹಾರದ ಕಡೆ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು. ನಾಲಿಗೆಯ ಚಾಪಲ್ಯತೆಗೆ ಮನ ಸೋತು ಕಂಡ ಕಂಡಲ್ಲಿ ಆಹಾರ ಸೇವಿಸದಿರಿ. ಇದರಿಂದ ಉದರ ಶೂಲೆಗೆ ಸಂಬಂಧಪಟ್ಟ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.ದಿವ್ಯ ಅಲೌಕಿಕ ವಿಚಾರಗಳಲ್ಲಿನ ನಿಮ್ಮ ಆಸಕ್ತಿ ಮತ್ತು ಭಕ್ತಿಭಾವದ ತರಂಗಗಳು ನಿಮಗೆ ವಿಶಿಷ್ಟ ಶಕ್ತಿಯನ್ನು ನೀಡುವವು. ಇದರಿಂದ ನಿಮ್ಮ ಬಹುತೇಕ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.9845743807 ಅದೃಷ್ಟ ಸಂಖ್ಯೆ:4

ಸಿಂಹ
ಪ್ರಶಂಸೆಯ ಮಾತುಗಳಿಂದ ಹಿರಿಹಿರಿ ಹಿಗ್ಗದಿರಿ. ಧೂರ್ತರು ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನಿಮಗೆ ಹಾನಿ ಮಾಡಲು ಸಂಚು ಹೂಡುವರು. ಮರೆಯದೇ ಕುಲದೇವರ ಪ್ರಾರ್ಥನೆ ಮತ್ತು ಶಿವನ ಆರಾಧನೆ ಮಾಡಿ. ಹಿರಿಯರ ಜತೆಗಿನ ಮಾತುಕತೆಗಳಿಂದ ಅನೇಕ ರೀತಿಯ ಕಿರಿಕಿರಿಗಳಿಗೆ ಮುಕ್ತಿ ಸಿಗುವುದು. ಇದರಿಂದ ಇಂದಿನ ದಾರಿ ಸುಗಮವಾಗುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಆಂಜನೇಯ ಸ್ವಾಮಿ ಸೋತ್ರ ಪಠಿಸಿ.9845743807 ಅದೃಷ್ಟ ಸಂಖ್ಯೆ:6

ಕನ್ಯಾ
ಉತ್ತಮ ಆನಂದಕ್ಕೆ ಕಾರಣವಾಗುವಂತಹ ದಿನವಾಗಿದೆ. ಜನರಿಂದ ಪ್ರಶಂಸೆ ಹಾಗೂ ಮನ್ನಣೆಗೆ ಪಾತ್ರರಾಗುವಿರಿ. ಮುಂಬರುವ ದಿನಗಳು ಕೂಡಾ ನಿಮಗೆ ಶುಭ ಸುದ್ದಿಯನ್ನೆ ತಂದುಕೊಡಲಿವೆ. ತಪ್ಪದೇ ವಿಷ್ಣುಸಹಸ್ರನಾಮ ಪಠಿಸಿ. ಕೆಲವು ವಿವಾಹ ಯೋಗ್ಯರಿಗೆ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಆದರೆ ಸಂಗಾತಿ ಸಿಕ್ಕಿದರೆ ಸಾಕು ಎಂಬ ಅವಸರದಿಂದ ಬೀಗರ ಪೂರ್ವಾಪರ ತಿಳಿಯದೆ ಇಕ್ಕಟ್ಟಿಗೆ ಸಿಲುಕಿಕೊಳ್ಳು ಬಹುದು. ಈ ಬಗ್ಗೆ ನಿಧಾನವಾಗಿ ಮತ್ತು ಪ್ರಮುಖ ನಿರ್ಧಾರ ತಳೆಯಿರಿ.9845743807 ಅದೃಷ್ಟ ಸಂಖ್ಯೆ:4

ತುಲಾ
ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ಪ್ರವೃತ್ತರಾಗಿ. ಸಮಾಜವನ್ನು ತಿದ್ದುವ ಉಸಾಬರಿ ತೆಗೆದುಕೊಂಡು ಅವಮಾನಕ್ಕೆ ಪಾತ್ರರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದ್ದು ಈ ಬಗ್ಗೆ ಜಾಗ್ರತೆ ಅಗತ್ಯ.ನಿಮ್ಮ ಬದುಕಿನ ಕನಸೊಂದು ಕೆಲವು ರಾಜಿಗಳೊಡನೆ ಈಡೇರಲು ಸಾಧ್ಯವಾಗುತ್ತದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಕೆಲವರು ನಿಮ್ಮಿಂದ ಹಣದ ಪ್ರತಿಫಾಲಾಪೇಕ್ಷೆ ಬಯಸುವರು. ಅವರಿಗೆ ಸುತಾರಾಂ ಹಣ ನೀಡಿದಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ
ಅತ್ಯಂತ ಮೇಧಾವಿ ಆದ ನೀವು ಕೆಲವೊಮ್ಮೆ ನಿಮ್ಮ ಹಠಮಾರಿತನದಿಂದ ಬಂದ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಬಹು ದೊಡ್ಡ ಬಂಡವಾಳದೊಂದಿಗಿನ ವ್ಯವಹಾರಗಳ ಬಗ್ಗೆ ಸಂಯಮ ಇರಲಿ.ಹಲವು ತಪ್ಪುಗಳು ನಿಮ್ಮನ್ನು ಪಾಪಪ್ರಜ್ಞೆಯಲ್ಲಿ ಇರಿಸುವುದು. ಇದನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ. ಹಿರಿಯರ ಆಶೀರ್ವಾದದಿಂದ ಮಾನಹಾನಿ ಪ್ರಸಂಗ ಬರುವುದಿಲ್ಲ.9845743807 ಅದೃಷ್ಟ ಸಂಖ್ಯೆ:8

ಧನುಸ್ಸು
ಅನವಶ್ಯಕ ಕೆಲಸ ಮಾಡಲು ಮುಂದಾಗುವಿರಿ. ಇದರಿಂದ ಮನೆಯ ಸದಸ್ಯರಿಂದಲೇ ಟೀಕೆಗೆ ಒಳಗಾಗುವಿರಿ. ಕೆಲವು ವೇಳೆ ಅತಿ ಸಣ್ಣತನ ತೋರಿ ಅಪಹಾಸ್ಯಕ್ಕೆ ಈಡಾಗುವಿರಿ. ನಿಮ್ಮ ವಿದ್ಯೆ, ವಯಸ್ಸಿಗೆ ತಕ್ಕಂತೆ ಗಂಭೀರವಾಗಿರಿ.ಹಿರಿಯರ ಬಳಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಿ. ಅವರಿಂದ ನಿಮಗೆ ಸೂಕ್ತ ಪರಿಹಾರ ಸಿಗುವುದು. ಮಗನ ನೌಕರಿ ವಿಷಯದಲ್ಲಿ ಶುಭವಾರ್ತೆ ಕೇಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.9845743807 ಅದೃಷ್ಟ ಸಂಖ್ಯೆ:6

ಮಕರ
ಸಿಟ್ಟು ಮಾನವನ ಮೊದಲ ಶತ್ರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಾಳ್ಮೆಯನ್ನು ತಮ್ಮ ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಕೆಲವು ನಿರ್ಣಯಗಳು ನಿಮ್ಮನ್ನು ಪೇಚಿಗೆ ಸಿಲುಕಿಸುವವು. ಯಾವ ದಿಕ್ಕಿಗೆ ಹೋದರೂ ನೆಮ್ಮದಿ ಇಲ್ಲ. ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವಂತಾಗಿದೆ. ತಾಳ್ಮೆಯಿಂದ ಇರಿ. ಧೈರ್ಯ ಕಳೆದುಕೊಳ್ಳಬೇಡಿ. ಕತ್ತಲು ಕಳೆದ ಮೇಲೆ ಉಜ್ವಲ ಬೆಳಗಿನ ಆಗಮನ ಆಗಲೇಬೇಕು.9845743807 ಅದೃಷ್ಟ ಸಂಖ್ಯೆ:2

ಕುಂಭ
ನಿಧಾನವೇ ಪ್ರಧಾನ ಎಂಬ ಮಾತಿದೆ. ಅಂತೆಯೇ ಒಂದು ಬಾರಿ ಅವಘಡದಿಂದ ಪಾರಾಗುವಿರಿ. ಅದಕ್ಕೆ ಕಾರಣ ನಿಮ್ಮ ನಿಧಾನ ಪ್ರವೃತ್ತಿಯೇ ಆಗಿರುತ್ತದೆ. ಹಾಗಾಗಿ ಯಾವುದೇ ವಿಷಯಕ್ಕೂ ಅವಸರಿಸಬೇಡಿ. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಕೊರಗುವಿರಿ. ನಿಮ್ಮ ಹಿರಿಯರು ಕೂಡಾ ನಿಮ್ಮ ಬಗ್ಗೆ ಇದೇ ಮಾತನ್ನು ಆಡುವರು. ಕಾಲಗರ್ಭದಲ್ಲಿ ಇತಿಹಾಸ ಪುನಾರಾವರ್ತನೆ ಆಗುತ್ತದೆ. ಅದಕ್ಕಾಗಿ ಬೇಸರ ಮಾಡಿಕೊಳ್ಳದಿರಿ. ಪ್ರೀತಿಯಿಂದ ಮಕ್ಕಳನ್ನು ತಿದ್ದಿ.9845743807 ಅದೃಷ್ಟ ಸಂಖ್ಯೆ:2

ಮೀನ
ಯಾರ ವ್ಯಕ್ತಿತ್ವವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ವಸ್ತುವು ತನ್ನದೆ ಆದ ವೈಶಿಷ್ಯದಿಂದ ಕೂಡಿರುತ್ತದೆ. ಜನರಲ್ಲಿನ ಉತ್ತಮ ಗುಣಗಳನ್ನು ಮಾತ್ರ ಗುರುತಿಸಿ ನಡೆದಲ್ಲಿ ನಿಮಗೆ ಅನುಕೂಲವಾಗುವುದು. ಪ್ರತಿರೋಧಗಳ ಮಧ್ಯೆಯೂ ಗೆಲ್ಲುವ ಅವಕಾಶ ನಿಮಗೆ ಲಭಿಸುವುದು. ಗುರು ಹಿರಿಯರ ಆಶೀರ್ವಾದದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿ ಸಾಧಾರಣದಿಂದ ಉತ್ತಮಮಟ್ಟಕ್ಕೆ ಹೋಗುವುದು.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp



Click it and Unblock the Notifications











