Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
21-4-2019- ಭಾನುವಾರದ ದಿನ ಭವಿಷ್ಯ
ಆದಿತ್ಯವಾರ ಅಥವಾ ಭಾನುವಾರ ವೇದಗಳ ಭವಿಷ್ಯ ಶಾಸ್ತ್ರ ದಲಿ, ಸೂರ್ಯನು ತನ್ನ ಬಿಸಿ ಮತ್ತು ಒಣಗಿದ ಪ್ರಕೃತಿಯಿಂದಾಗಿ, ಸಣ್ಣ ಪ್ರಮಾಣದ ಮೇಲ್ಫಿಕ್ ಎಂದು ಕರೆಯಲಾಗಿದೆ. ಆತ್ಮ , ಇಚ್ಚಾ-ಶಕ್ತಿ ,ಹೆಸರು , ಕಣ್ಣುಗಳು , ಸಾಮಾನ್ಯ ಶಕ್ತಿ , ಧೈರ್ಯ , ಒಡೆತನ , ತಂದೆ , ಉನ್ನತ ಸ್ಥಾನದಲ್ಲಿರುವವರು ಹಾಗು ಅಧಿಕಾರ ಇವುಗಳನ್ನು ಸೂರ್ಯನು ಪ್ರತಿನಿಧಿಸುತ್ತಾನೆ. ಎಲ್ಲಾ ರಾಶಿಯಲ್ಲಿಯೂ ಸೂರ್ಯನು 'ಉಚ್ಚ' ಸ್ಥಾನದಲ್ಲಿದ್ದರೆ, ಹೆಚ್ಚು 'ಬಲಶಾಲಿ'ಯಾಗಿ ಇರುತ್ತಾರೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807...

ಮೇಷ(21 ಏಪ್ರಿಲ್ 2019)
ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವವು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿ. ದೈವಬಲದಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.9845743807 ಅದೃಷ್ಟ ಸಂಖ್ಯೆ:2

ವೃಷಭ
ಅನೇಕ ರೀತಿ ಅಡೆತಡೆಗಳನ್ನು ದಾಟಿ ಬಂದಿರುವಿರಿ. ನಿಮ್ಮ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮರ್ಥ್ಯವು ನಿಮ್ಮಲ್ಲಿ ಅಹಂಕಾರ ಉಂಟುಮಾಡದಂತೆ ನೋಡಿಕೊಳ್ಳಿ.ಗುರು ಹಿರಿಯರ ಸೇವೆ ಎಂದರೆ ಅವರನ್ನು ಒಂದೆಡೆ ಕೂರಿಸಿ ಅರ್ಚನೆ ಮಾಡುವುದಲ್ಲ. ಅವರ ಬೇಕು ಬೇಡಗಳನ್ನು ಪೂರೈಸುವುದು. ಅವರಿಗೆ ನೋವಾಗದಂತೆ ನಡೆದುಕೊಳ್ಳುವುದೇ ಸೇವೆ. ಇಂತಹ ಸೇವೆಯಿಂದ ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:1

ಮಿಥುನ
ಸಿಂಹ ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ. ಅಂತೆಯೇ ನೀವು ಉದ್ಯೋಗದಲ್ಲಿ ಗಾಂಭೀರ್ಯತೆ ಕಾಯ್ದುಕೊಳ್ಳಿ. ಸಣ್ಣಪುಟ್ಟ ಟೀಕೆಗಳಿಂದ ಆತ್ಮ ಸಂಯಮ ಕಳೆದುಕೊಳ್ಳದಿರಿ. ಕುಲದೇವತಾ ಪ್ರಾರ್ಥನೆ ಮಾಡಿ.ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿ ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.9845743807 ಅದೃಷ್ಟ ಸಂಖ್ಯೆ:4

ಕಟಕ
ಗೆಳೆಯನೊಬ್ಬನ ಸಹಾಯ ನಿಮಗೆ ದೊರೆಯಲಿರುವುದು ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆ ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು. ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೆ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿ . ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ.9845743807 ಅದೃಷ್ಟ ಸಂಖ್ಯೆ:6

ಸಿಂಹ
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ ನುಡಿಯಲ್ಲಿ ಎಚ್ಚರಿಕೆ ವಹಿಸಿ.ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:4

ಕನ್ಯಾ
ಕಾಲ, ಶೀಘ್ರಗತಿಯಲ್ಲಿ ಉರುಳುತ್ತಿದೆ ಎನಿಸುತ್ತಿದೆ. ನೀವು ಮಾಡಬೇಕಾದ ಕಾರ್ಯಗಳು ಬಹಳಷ್ಟಿದ್ದು ಆದ್ಯತೆಯ ಮೇರೆಗೆ ಕೆಲಸ ಪೂರೈಸಿ. ಮನೆಯಲ್ಲಿ ನಿಮ್ಮ ಮದುವೆ ಬಗ್ಗೆ ಮಾತುಕತೆಗಳು ನಡೆಯುವವು. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿದಂತೆ ನೀವು ಮಾಡುವುದು ಬೇಡ. ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದೀರಿ. ನಿಮ್ಮ ಎಲ್ಲಾ ನಡೆಯನ್ನು ಗಮನಿಸುವ ಜನರಿದ್ದಾರೆ.9845743807 ಅದೃಷ್ಟ ಸಂಖ್ಯೆ:5

ತುಲಾ
ನಿಮ್ಮ ತಾಂತ್ರಿಕ ಪರಿಜ್ಞಾನ ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅದನ್ನು ನಿಭಾಯಿಸಲು ಹಣದ ಅಡಚಣೆ ಉಂಟಾಗುವುದು. ನಿಮ್ಮ ಆಪ್ತ ಗೆಳೆಯರೇ ನಿಮಗೆ ಸಹಾಯ ಮಾಡಲು ಹಿಂಜರಿಯುವರು. ಆಳು ಮಾಡಿದ್ದು ಹಾಳು ಎನ್ನುವ ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸ ಮಾಡಿದಲ್ಲಿ ಯಶಸ್ಸು ದೊರೆಯುವುದು. ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ
ಒಂದನ್ನು ಪಡೆಯಲು ಮತ್ತೊಂದರ ತ್ಯಾಗ ಅನಿವಾರ್ಯ. ಹಾಗಾಗಿ ಮುಷ್ಟಿಕಾಳುಗಳನ್ನು ಚೆಲ್ಲಿ ಮೂಟೆ ಕಾಳುಗಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.ಬಂಧು ಬಾಂಧವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಬರಹಗಾರರಿಗೆ ಸರ್ಕಾರದಿಂದ ಸನ್ಮಾನ ಹಾಗೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಿ.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ಒಂಟಿತನ ನಿಮ್ಮನ್ನು ಕಾಡುವುದು. ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವುದು ಒಳ್ಳೆಯದು.ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.9845743807 ಅದೃಷ್ಟ ಸಂಖ್ಯೆ:8

ಮಕರ
ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ. ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸು ಹಾಗೂ ಬದಲಾವಣೆ ತಂದುಕೊಡುವುದು. ಇದರಿಂದ ಮಾನಸಿಕ ನೆಮ್ಮದಿ, ಸಂತೋಷವುಂಟಾಗುವುದು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು.9845743807 ಅದೃಷ್ಟ ಸಂಖ್ಯೆ:6

ಕುಂಭ
ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯ. ಗ್ರಹಗಳು ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲು ಕಾದಿವೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ. ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:2

ಮೀನ
ಭಗವಂತನ ಕೃಪೆ ನಿಮ್ಮ ಮೇಲಿರುವುದರಿಂದ ನಿಮಗೆ ಬರುವ ಅಪವಾದಗಳಿಂದ ಮುಕ್ತರಾಗುವಿರಿ ಮತ್ತು ನಿಮ್ಮ ಸಹಪಾಠಿಗಳು ಮತ್ತು ಸಹೋದ್ಯೋಗಿಗಳ ನಡುವೆ ಗೌರವವನ್ನು ಸಂಪಾದಿಸುವಿರಿ. ಪದೇಪದೆ ನಿಮ್ಮ ವಿರುದ್ಧ ಮಾತುಗಳು ಕೇಳಿಸುವುದು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗುಬರುವ ಸಂಭವವಿದೆ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











