Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
02-05-2019- ಗುರುವಾರದ ದಿನ ಭವಿಷ್ಯ
ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ. ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈ ದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ....ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ( 2 ಫೆಬ್ರವರಿ 2019)
ಬೇರೆಯವರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ. ಕೈಲಾಗದ ಕೆಲಸಗಳನ್ನು ಹಮ್ಮಿಕೊಳ್ಳುವುದು ಬೇಡ. ಆ ಕಾರ್ಯವನ್ನು ಜಾಣ್ಮೆಯಿಂದ ಮುಂದೆ ಹಾಕಿ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಮಂದ ಪ್ರಗತಿ ಕಂಡುಬರುವುದು. ಹಾಗಂತ ಈ ವಿಚಾರದಲ್ಲಿ ಅವಸರ ತೋರಿ ಬೇರೆ ದಾರಿಯನ್ನು ಹುಡುಕಲು ಹೊರಟರೆ ತೊಂದರೆ ಎದುರಾಗುವುದು. ಸಂಗಾತಿಯ ವಿಚಾರಧಾರೆಗಳಿಗೆ ಬೆಂಬಲ ಸೂಚಿಸಿ.ಪರಿವರ್ತನೆ ಜಗದ ನಿಯಮ. ಅಂತೆಯೇ ಸದ್ಯದ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸ್ವೀಕರಿಸುವುದರಿಂದ ಮುಂದೆ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.9845743807 ಅದೃಷ್ಟ ಸಂಖ್ಯೆ:2

ವೃಷಭ
ನಿಮ್ಮ ಆಚಾರ ವಿಚಾರಗಳೇ ಭಿನ್ನತೆಯಿಂದ ಕೂಡಿರುವುದು. ಊರಿನವರದು ಒಂದು ದಾರಿಯಾದರೇ ನಿಮ್ಮದೇ ಒಂದು ದಾರಿ. ಹಾಗಾಗಿ ಕೆಲವು ವಿಚಾರಗಳಲ್ಲಿ ಸಾಮ್ಯತೆ ಸಾಧಿಸುವುದು ಕಷ್ಟವಾಗುತ್ತದೆ. ಈ ಬಗ್ಗೆ ಎರಡು ಬಾರಿ ಚಿಂತಿಸಿ. ಕಾರ್ಯ ಪ್ರವೃತ್ತರಾಗಿ.ಅಧಿಕ ತಿರುಗಾಟದಿಂದ ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿಯ ಸಕಾಲಿಕ ಆರೈಕೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಮನೆಗೆ ಸಂಬಂಧಪಟ್ಟ ಕಾಗದ ಪತ್ರಗಳು ದೊರೆಯುವ ಸಾಧ್ಯತೆ ಇದೆ. ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ಒಡಂಬಡಿಕೆ ಉಂಟಾಗುವುದು. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.9845743807 ಅದೃಷ್ಟ ಸಂಖ್ಯೆ:1

ಮಿಥುನ
ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುವುದು. ಮಗನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಡದಿಯ ಸಲಹೆಗಳು ನಿಮ್ಮ ಯಶಸ್ಸಿಗೆ ಕಾರಣವಾಗುವುದು.ಮಕ್ಕಳ ವಿಚಾರವಾಗಿ ಚಿಂತಿತರಾಗಿರುವ ನಿಮಗೆ ದೈವಕೃಪೆಯಿಂದ ಅವರಿಗೆ ಉತ್ತಮ ಕಾಲೇಜಿನಲ್ಲಿ ಸೀಟು ದೊರೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯುವುದು.ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಬಹುದು. ಈ ಬಗ್ಗೆ ಅನ್ಯಮಾರ್ಗವನ್ನು ಅನುಸರಿಸಬೇಕಾಗುವುದು. ಅನ್ಯರಿಗೆ ಸಲುಗೆ ಕೊಡಬೇಡಿ ಮತ್ತು ಅಂತರಂಗದ ವಿಷಯಗಳನ್ನು ಬಹಿರಂಗಗೊಳಿಸದಿರಿ.9845743807 ಅದೃಷ್ಟ ಸಂಖ್ಯೆ:2

ಕಟಕ
ನಿಮ್ಮ ಕಾರ್ಯಯೋಜನೆಗಳನ್ನು ಸಾಧಿಸಿ ಸಫಲತೆಗೆ ಮುಂದಾಗಲಿದ್ದೀರಿ. ಆದರೆ ಆತುರ ಬೇಡ. ಕೆಲವರಿಗೆ ತಾವು ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಂಭವವಿರುತ್ತದೆ. ಅರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ವಿವಾಹ ಅಪೇಕ್ಷಿಗಳು ಮಂಗಳಮಯ ವಾರ್ತೆ ಕೇಳುವರು. ಮನೆಯಲ್ಲಿನ ಸಂಭ್ರಮದ ವಾತಾವರಣವು ಮನಸ್ಸಿಗೆ ಮುದ ನೀಡುವುದು. ಬಂಧುಗಳು ನಿಮ್ಮ ಗುಣಗಾನ ಮಾಡುವರು. ಇಂದು ಹೆಚ್ಚು ಲವಲವಿಕೆಯಿಂದ ಇರಬಹುದು. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಬೆಂಗಾವಲಿಗೆ ಇರುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.9845743807 ಅದೃಷ್ಟ ಸಂಖ್ಯೆ:4

ಸಿಂಹ
ಅಪರಿಚಿತ ವ್ಯಕ್ತಿಗಳ ಮಾತಿಗೆ ಮರುಳಾಗದಿರಿ. ಹಿರಿಯರು ಕೊಡುವ ಸಲಹೆಗಳು ನಿಮ್ಮ ವ್ಯವಹಾರಕ್ಕೆ ನೆರವಾಗುವವು. ಯಾರನ್ನೆ ಆಗಲೀ ಕೀಳರಿಮೆಯಿಂದ ಕಾಣಬೇಡಿ. ಹೊಸ ಸ್ನೇಹಿತರ ಪರಿಚಯವಾಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವರು. ಉತ್ತಮ ಯೋಜನೆಗಳು ಕಾರ್ಯಗತವಾಗಲಿವೆ. ಗಳಿಸಿದ ಸಂಪತ್ತು ದುಪ್ಪಟ್ಟಾಗುವ ಸಂಭವ ಇದೆ. ಸಿರಿ ಬಂದ ಕಾಲಕ್ಕೆ ಕರೆದು ದಾನ ಮಾಡು ಎಂಬ ಮಾತಿನಂತೆ ದಾನ ಮಾಡಿ. ನಿಮ್ಮದಲ್ಲದ ತಪ್ಪಿನಿಂದಾಗಿ ಶಿಕ್ಷೆ ಅನುಭವಿಸಬೇಕಾಗುವುದು. ಅನವಶ್ಯಕ ಚಿಂತೆಗಳನ್ನು ಮಾಡದಿರುವುದು ಕ್ಷೇಮ. ಆಹಾರ ದೋಷದಿಂದಾಗಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿ.9845743807 ಅದೃಷ್ಟ ಸಂಖ್ಯೆ:6

ಕನ್ಯಾ
ಗುತ್ತಿಗೆ ಕಾರ್ಮಿಕರಿಗೆ ಬೇಡಿಕೆ ಬರಲಿದೆ. ಸಾರ್ವಜನಿಕ ಅಧಿಕಾರಿಗಳಿಗೆ ಅನಿರೀಕ್ಷಿತ ವರ್ಗಾವಣೆ ಆಗಬಹುದು. ಬಿಡುವಿಲ್ಲದ ಕೆಲಸಗಳು ಇರುವಂತೆ ಕಂಡರೂ ಅದರಲ್ಲಿ ಲಾಭಾಂಶ ಕಡಿಮೆ ಇರುತ್ತದೆ.ಮನೆಯಲ್ಲಿ ಚಿಕ್ಕಪುಟ್ಟ ವಾದವಿವಾದಗಳು ಕಂಡುಬರುವ ಸಾಧ್ಯತೆ ಇದೆ. ವ್ಯವಹಾರ ಅಭಿವೃದ್ಧಿಗೆ ಸಾಕಷ್ಟು ಚಿಂತನೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ಸಾಮಾಜಿಕ ಮನ್ನಣೆ ಹಾಗೂ ಸತ್ಕಾರಗಳು ದೊರಕುವವು. ಮನೆಯಲ್ಲಿ ವಿಶೇಷ ಅತಿಥಿ ಸತ್ಕಾರ ನಡೆಯಲಿದೆ. ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಪರವಾಗಿ ಆಗುತ್ತವೆ. ಆತ್ಮವಿಶ್ವಾಸದಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ.9845743807 ಅದೃಷ್ಟ ಸಂಖ್ಯೆ:4

ತುಲಾ
ಶಕ್ತಿ ಮೀರಿ ವಹಿಸಿಕೊಳ್ಳುವ ಜವಾಬ್ದಾರಿಯು ಮಾನಸಿಕ ಹಿಂಸೆಗೆ ಕಾರಣವಾಗುವುದು. ರಾಜಕಾರಣಿಗಳಿಗೆ ಪಕ್ಷ ದಲ್ಲಿ ಮನ್ನಣೆ ದೊರೆಯಲಿದೆ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ.ಮಿತಿಮೀರಿದ ಹಾಗೂ ಅರ್ಥವಿಲ್ಲದೆ ಮಾಡಿದ ಸಾಲಗಳ ಫಲವನ್ನು ಅನುಭವಿಸುವಿರಿ. ಸಾಲ ಕೊಟ್ಟವರು ನಿಮ್ಮ ಮನೆಯ ಮುಂದೆ ಗಲಾಟೆ ಮಾಡಬಹುದು. ಎಲ್ಲದ್ದಕ್ಕೂ ಸಿದ್ಧರಾಗಿ. ಸೂಕ್ತ ರಕ್ಷ ಣೆಯನ್ನುಪಡೆದುಕೊಳ್ಳಿ.ನಿಮ್ಮಿಂದ ಧಾರ್ಮಿಕ ಚಟುವಟಿಕೆಗಳಿಗೆ ವಂತಿಗೆ ಸಲ್ಲಲಿದೆ. ಸಭೆ ಸಮಾರಂಭಗಳಲ್ಲಿ ಗೌರವ ಪಡೆಯುವಿರಿ. ಸಹೋದ್ಯೋಗಿಗಳಿಂದ ನಿಮ್ಮ ಬಗ್ಗೆ ಮೆಚ್ಚುಗೆ ಮಾತು ಕೇಳಿ ಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. 9845743807 ಅದೃಷ್ಟ ಸಂಖ್ಯೆ:3

ವೃಶ್ಚಿಕ
ಕವಿ, ಕಲಾವಿದರಿಗೆ ಉತ್ತಮ ಸಂಭಾವನೆಯ ಅವಕಾಶ ದೊರೆಯಲಿದೆ. ದವಸ ಧಾನ್ಯ ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಒಳ್ಳೆಯದು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಉತ್ತಮ. ಉತ್ತಮ ಮನಃಸ್ಥಿತಿ ಕಾಯ್ದುಕೊಳ್ಳುವಿರಿ. ವಿಪರೀತ ಕೆಲಸದ ಒತ್ತಡದಿಂದ ದೇಹಾಲಸ್ಯ ಕಾಡುವುದು. ಇಂದು ಮತ್ತು ನಾಳೆ ಅಲ್ಪ ವಿಶ್ರಾಂತಿ ಪಡೆಯಿರಿ. ಸಮಯೋಚಿತ ನಿರ್ಧಾರದಿಂದ ಕಾರ್ಯಸಿದ್ಧಿ ಆಗುವುದು.ಅಧ್ಯಾತ್ಮದ ಕಡೆ ಒಲವು ತೋರುವಿರಿ. ಉದ್ಯೋಗ ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ಆಸ್ತಿ ವಿವಾದ ಬಗೆಹರಿಯುವುದು. ನಿರೀಕ್ಷಿತ ಶುಭ ಸಮಾಚಾರವೊಂದನ್ನು ಕೇಳುವಿರಿ. ಹಳೆಯ ಸ್ನೇಹಿತರ ಭೇಟಿ ಸಂಭವ ಇದೆ.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ವಹಿಸಿಕೊಂಡಿರುವ ಮಂಗಳ ಕಾರ್ಯದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದರಿಂದಾಗಿ ಆತ್ಮತೃಪ್ತಿ ದೊರೆಯುವುದು. ಜೀವನದಲ್ಲಿ ಎಂದಿಗಿಂತ ಹೆಚ್ಚು ಕ್ರಿಯಾಶೀಲರಾಗುವಿರಿ. ಮಡದಿಯ ಆರೋಗ್ಯದ ಕಡೆ ಗಮನವಿರಲಿ.ಮತ್ತಾರನ್ನೋ ಸಂತೃಪ್ತಿಪಡಿಸಲು ಹೋಗಿ ನೀವು ಸಮಸ್ಯೆಯ ಸುಳಿಯಲ್ಲಿ ಸಿಲುಕದಿರಿ. ಕಾರ್ಯದ ಒತ್ತಡ ತೀವ್ರವಾಗುವುದರಿಂದ ಅಪಾರ ತಾಳ್ಮೆ ಅತ್ಯವಶ್ಯಕ ಎಂಬುದನ್ನು ಮರೆಯದಿರಿ. ಮತ್ತೊಬ್ಬರ ಮೇಲೆ ಸಂಶಯ ಪಡುವುದನ್ನು ಬಿಡಿ.ನಿಮ್ಮ ಆದಾಯದ ಮೂಲ ಹೆಚ್ಚಲಿದೆ. ಬಂಧುಗಳಿಗೆ ಕೈಲಾದ ಸಹಾಯ ಮಾಡಲು ಪ್ರಯತ್ನಿಸುವಿರಿ. ಎಲ್ಲಾ ಸಮಸ್ಯೆಗಳು ಒಮ್ಮೆಲೆ ಪರಿಹಾರ ಆಗುವುದು. ಆರೋಗ್ಯದ ವಿಚಾರದಲ್ಲಿ ತೊಂದರೆ ಇಲ್ಲ.9845743807 ಅದೃಷ್ಟ ಸಂಖ್ಯೆ:6

ಮಕರ
ವಿದ್ಯಾವಂತ ನಿರುದ್ಯೋಗಿಗಳಿಗೆ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಸಮಾಜದ ಮುಖಂಡರಿಂದ ನೇತೃತ್ವ ವಹಿಸಿಕೊಳ್ಳಲು ಒತ್ತಡ ಬರಲಿದೆ. ಯೋಗ್ಯತೆಯನ್ನು ಮೀರಿ ಏನನ್ನೂ ಮಾಡಲು ಹೋಗದಿರಿ. ಪ್ರಸಂಗ ಬಂದಲ್ಲಿ ಸ್ನೇಹಿತರ ಸಹಕಾರ ಪಡೆಯಿರಿ.ಮಕ್ಕಳ ಪ್ರಗತಿಯು ಸಂತಸ ನೀಡುವುದು. ಮಗನ ಮದುವೆ ವಿಷಯವಾಗಿ ಉತ್ತಮ ಸಂಬಂಧವೊಂದು ಹುಡುಕಿಕೊಂಡು ಬರುವುದು. ಸಂಬಂಧ ಉತ್ತಮವಾಗಿದ್ದಲ್ಲಿ ಒಪ್ಪಿಗೆ ನೀಡಿ. ನಿಮ್ಮ ಜಾಣ್ಮೆ ಮತ್ತು ತಾಳ್ಮೆ ಹಿರಿಯರ ಪ್ರಶಂಸೆ ಪಡೆಯಲಿದೆ. ಅನುಭವಿ ಪಾಲುದಾರರನ್ನು ವ್ಯಾಪಾರದಲ್ಲಿ ಸೇರಿಸಿಕೊಳ್ಳುವುದರಿಂದ ನಿಮಗೇ ಲಾಭವಾಗುವುದು. ಮಗನ ಉನ್ನತ ಅಧ್ಯಯನಕ್ಕೆ ಆರ್ಥಿಕ ಸಹಾಯ ದೊರೆಯಲಿದೆ. ಹಮ್ಮಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಮುಕ್ತಾಯ ಹಂತ ತಲುಪುವುದು.9845743807 ಅದೃಷ್ಟ ಸಂಖ್ಯೆ:9

ಕುಂಭ
ಹೊಸ ಹೊಸ ಯೋಜನೆಗಳಿಗೆ ಪ್ರೋತ್ಸಾಹದಾಯಕ ವಾತಾವರಣ ಮೂಡಿಬರಲಿದೆ. ನಿಮ್ಮ ಕೋರಿಕೆಗಳು ಕ್ರಮೇಣ ಒಂದೊಂದಾಗಿ ನೆರವೇರುವವು. ಪತ್ನಿ ವರ್ಗದವರ ಮನೆಗಳಿಗೆ ಭೇಟಿ ನೀಡುವಿರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ.ಅಪರಿಚಿತ ವ್ಯಕ್ತಿಯ ಸಲಹೆಯಿಂದಾಗಿ ವ್ಯವಹಾರಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸುವಿರಿ. ಹಾಗಾಗಿ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಆರ್ಥಿಕ ಮುಗ್ಗಟ್ಟು ಕಂಡು ಬರುವುದು.ಅವಸರದಲ್ಲಿ ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಂದರ್ಭವಿದೆ. ಆರ್ಥಿಕ ಭರವಸೆ ಕೊಟ್ಟವರು ಹಣಕಾಸಿನ ಸಹಾಯ ಮಾಡಲು ಹಿಂಜರಿಯುವರು. ವ್ಯಾಪಾರದ ದೃಷ್ಟಿಯಿಂದ ಹಳೆಯ ವಾಹನ ಖರೀದಿ ಸೂಕ್ತವಲ್ಲ.9845743807 ಅದೃಷ್ಟ ಸಂಖ್ಯೆ:2

ಮೀನ
ಮಂಗಳ ಕಾರ್ಯಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಿರಿ. ಸಾರ್ವಜನಿಕರ ಸೇವೆ ಸಂತಸ ತರಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ ಹಾಗೂ ಪ್ರಯಾಣ ಕಾಲದಲ್ಲಿಯೂ ಎಚ್ಚರಿಕೆ ಇರಲಿ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿ ಬರುವುದು. ಗಣ್ಯರೊಂದಿಗೆ ದೊಡ್ಡ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳುವಿರಿ. ಮಕ್ಕಳ ಮೇಲಿಟ್ಟ ಅತಿಯಾದ ಭರವಸೆ ಹುಸಿಯಾಗುವುದು. ಕುಲದೇವರನ್ನು ಸ್ಮರಿಸಿ.
ಶಾರೀರಿಕ ಬಳಲಿಕೆ ಕಂಡು ಬಂದರೂ ಉತ್ಸಾಹ ಕುಂದದು. ಆರೋಗ್ಯದ ಕಡೆ ಲಕ್ಷ್ಯ ನೀಡಿ. ವಾಹನಗಳನ್ನು ಚಲಾಯಿಸುವಾಗ ಎಚ್ಚರದಿಂದಿರಿ. ಲೇವಾದೇವಿ ವ್ಯವಹಾರ ಮುಂದುವರೆಸಲು ಸಕಾಲ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











