Latest Updates
-
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ?
2-1-2019: ಬುಧವಾರದ ದಿನ ಭವಿಷ್ಯ
ಬುಧವಾರ ದಿನ ಬುಧನು ಬೃಹಸ್ಪ್ರತಿಯ ಮಗ . ಅದಲ್ಲದೇ ನಮ್ಮ ಜೀವ-ಜೀವನದ ಬಹುಮುಖ್ಯ ಅಂಗವಾದ ಬುದ್ಧಿ ಮತ್ತು ನರಮಂಡಲವನ್ನು ನಿಯಂತ್ರಿಸುತ್ತಾನೆ. ಬುಧನ ಚಿಹ್ನೆ ಆತ್ಮ, ಜೀವಾತ್ಮ, ದೇಹ, ಮನಸ್ಸು ಅನ್ನು ಒಳಗೊಂಡಿದ್ದು ಇದರಿಂದ ಬುಧನನ್ನು ಬುದ್ಧಿ, ಮನಸ್ಸು, ಇದಕ್ಕೆ ಸಂಬಂಧಿಸಿದಂತೆ ನರಮಂಡಲ ಮತ್ತು ಸಾತ್ವಿಕತೆಯ ಪ್ರತೀಕಾವಾದ ಆತ್ಮವನ್ನೂ ಒಳಗೊಂಡಿದೆ.

ಇದರಿಂದ ಇವನನ್ನು ಶುಭನೊಡನೆ ಶುಭಗ್ರಹವಾಗಿಯೂ ಅಶುಭ ನೊಡನೆ ಪಾಪಗ್ರಹನಾಗಿಯೂ ವರ್ತಿಸುತ್ತಾನೆ.ಬುಧನ ಅಧಿದೇವತೆ, ಮಹಾವಿಷ್ಣು, ಪದ್ಮನಾಭನನ್ಶು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ. 9845743807

ಮೇಷ( 2 ಜನವರಿ 2018)
ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಅಪಾರವಾಗಿವೆ. ಅವರು ಅವನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಇದರಿಂದ ನಿಮಗೆ ಆತ್ಮತೃಪ್ತಿಯೂ ಮತ್ತು ಧನ್ಯತಾಭಾವವೂ ಮೂಡುವುದು. 'ಶ್ರಮ ಮೇವ ಜಯತೇ' ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಾಫಲಗಳು ದೊರೆಯುವವು. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಹಾಗಾಗಿ ಯಾರಿಗೂ ಉಪದೇಶ ನೀಡಲು ಮುಂದಾಗದಿರಿ.9845743807
ಅದೃಷ್ಟ ಸಂಖ್ಯೆ:2

ವೃಷಭ
ದೂರದ ಊರಿನಿಂದ ಅಥವಾ ವಿದೇಶದಿಂದ ಬಂದಂತಹ ಸ್ನೇಹಿತರು/ಬಂಧುಗಳು ನಿಮ್ಮ ಜೊತೆಯಲ್ಲಿ ವ್ಯಾಜ್ಯ ಮಾಡುವ ಸಾಧ್ಯತೆ ಇರುವುದು. ಆದರೆ ಹಿರಿಯರ ಮಧ್ಯಸ್ಥಿಕೆಯಿಂದ ನಿಮ್ಮ ನಡೆ, ನುಡಿ ಸತ್ಯವಾಗಿದೆ ಎಂದು ಅರಿತುಕೊಳ್ಳುವರು.ಮನೆ, ಮಠ ಅಥವಾ ಸಂಘ ಪರಿವಾರಗಳಲ್ಲಿ ನಿಮ್ಮ ಮಾತೇ ಅಂತಿಮವಾಗಬೇಕೆಂಬ ಹುಚ್ಚು ಆಲೋಚನೆಗೆ ತಡೆಯೊಡ್ಡಿ. ಎಲ್ಲಾ ಕಾರ್ಯವೂ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ನಿಮ್ಮ ಸಹಕಾರದಿಂದ ಆಯಿತು ಎನ್ನಿ.9845743807
ಅದೃಷ್ಟ ಸಂಖ್ಯೆ:1

ಮಿಥುನ
ಮಕ್ಕಳ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಉನ್ನತ ಸ್ಥಾನದಲ್ಲಿರುವ ನೀವು ಕೆಳನಿಂತು ಸಾಮಾನ್ಯ ಜನರಂತೆ ಚಿಂತಿಸಿ ಆಗ ನಿಮ್ಮ ಕಾರ್ಯಗಳು ಸುಲಲಿತವಾಗುವವು.ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಸಂಭಾಳಿಸಿ. ಹಣಕಾಸಿನ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಸಲಹೆ ಪಡೆಯಿರಿ. ಆಪತ್ತು ಎದುರಾಗುವ ಮುನ್ನ ಅದರ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವುದು ಒಳ್ಳೆಯದು.9845743807
ಅದೃಷ್ಟ ಸಂಖ್ಯೆ:4

ಕಟಕ
ಕಬ್ಬು ಸಿಹಿ ಇದೆ ಎಂದು ಸಿಪ್ಪೆಯ ಸಹಿತ ಅಗೆಯಲು ಆಗುವುದಿಲ್ಲ. ಅಂತೆಯೆ ಕೆಲವು ವಿಚಾರಗಳ ಬಗ್ಗೆ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ. ಕ್ರಮವರಿತು ಕೆಲಸ ಮಾಡುವ ನೀವಿಂದು ಹಂತ ಹಂತವಾಗಿ ಬೆಳೆದು ಎತ್ತರ ಸ್ಥಾನದಲ್ಲಿರುವಿರಿ. ಹಾಗಾಗಿ ನಿಮ್ಮ ಬಳಿ ಸಹಾಯ ಸಹಕಾರ ಕೇಳಲು ಜನರು ಬರುವರು. ಅವರನ್ನು ತಿರಸ್ಕಾರದಿಂದ ಕಾಣದಿರಿ. 9845743807
ಅದೃಷ್ಟ ಸಂಖ್ಯೆ:6

ಸಿಂಹ
ಹಳೆಯ ಅನವಶ್ಯಕವಾದ ಕಡತಗಳನ್ನು ನಾಶ ಮಾಡುವ ಸಂದರ್ಭದಲ್ಲಿ ಬೇಕಾದ ಕಡತಗಳನ್ನು ನಾಶಗೊಳಿಸದಿರಿ. ಆದಷ್ಟು ಕಬ್ಬಿಣಕ್ಕೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿಯಲ್ಲಿ ಜಾಗ್ರತೆ ಇರಲಿ. ಇಲ್ಲವೆ ಅದಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆ ಬರಬಹುದು.ಅನವಶ್ಯಕವಾದ ವಿಚಾರಗಳಲ್ಲಿ ಹಣ ಸುರಿಯಬೇಡಿ. ಅರ್ಥಾತ್ ಯಾರಾದರೂ ನೌಕರಿ ಕೊಡಿಸುತ್ತೇನೆಂದು ಹೇಳಿ ಹಣ ಕೇಳುವ ಸಂದರ್ಭವಿರುತ್ತದೆ. ಈ ಬಗ್ಗೆ ಸೂಕ್ತ ಮಧ್ಯವರ್ತಿಯ ಮೂಲಕ ಮಾತುಕತೆ ನಡೆಸಿ.9845743807
ಅದೃಷ್ಟ ಸಂಖ್ಯೆ:4

ಕನ್ಯಾ
ವಿರಸವೇ ಮರಣ ಸರಸವೇ ಜೀವನ ಎನ್ನುವಂತೆ ಎಲ್ಲರೊಂದಿಗೆ ವಿನೋದವಾಗಿ ಸ್ನೇಹಪೂರ್ಣವಾಗಿ ವರ್ತಿಸುವ ಗುಣವೇ ನಿಮ್ಮನ್ನು ಅತ್ಯುನ್ನತ ಸ್ಥಾನಕ್ಕ ಕೊಂಡೊಯ್ಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.ನಿಮ್ಮ ಕುರಿತಾಗಿ ಅಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.9845743807
ಅದೃಷ್ಟ ಸಂಖ್ಯೆ:8

ತುಲಾ
ಸುಮ್ಮನೆ ನಿರೀಕ್ಷೆ ಇಟ್ಟುಕೊಂಡು ಕೂರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬ ಮಾತಿದೆ. ಹಾಗಾಗಿ ನೀವೇ ಖುದ್ದಾಗಿ ಕೆಲಸ ಕಾರ್ಯ ಮಾಡುವುದು ಒಳ್ಳೆಯದು. ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು.9845743807
ಅದೃಷ್ಟ ಸಂಖ್ಯೆ:4

ವೃಶ್ಚಿಕ
ಕೇವಲ ಕೃತ್ರಿಮ ಮಾತುಗಳಿಂದಲೇ ನಿಮ್ಮನ್ನು ಹಣಿಯಲು ಕೆಲವರು ಕಾದಿರುವರು. ಇದರಿಂದ ಪಾರಾಗಲು ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.ಯಾಕಾದರೂ ಈ ಕೆಲಸಕ್ಕೆ ಕೈ ಹಾಕಿದೆನೋ ಎಂಬ ನಿರಾಸೆ ಬೇಡ. ದೈವದ ಅನುಗ್ರಹದಿಂದ ಸಿದ್ಧಿ ದೊರೆಯುವುದು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು.9845743807
ಅದೃಷ್ಟ ಸಂಖ್ಯೆ:5

ಧನುಸ್ಸು
ನೀವು ಪರೋಪಕಾರಿ ಎಂದು ಹಲವಾರು ಬಾರಿ ಸಾಬೀತಾದ ವಿಷಯ. ಅಂತೆಯೆ ನೀವು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.9845743807
ಅದೃಷ್ಟ ಸಂಖ್ಯೆ:9

ಮಕರ
ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.9845743807
ಅದೃಷ್ಟ ಸಂಖ್ಯೆ:1

ಕುಂಭ
ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ದೈವಕೃಪೆಯಿಂದ ಎಲ್ಲವೂ ಒಳಿತಾಗುವುದು. ಬಡವರಿಗೆ ಆಹಾರ ಕೊಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂಬಂತೆ ಸದಾ ಶ್ರೀಹರಿಯನ್ನು ನೆನೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಭಗವಂತನೇ ನಿಮ್ಮ ಸಹಾಯಕ್ಕೆ ಬರುವರು. ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆಗಾಗಿ ಮಾತಾ ದುರ್ಗಾದೇವಿಯನ್ನು ಸ್ಮರಿಸಿ.9845743807
ಅದೃಷ್ಟ ಸಂಖ್ಯೆ:2

ಮೀನ
ಸಮೃದ್ಧಿಯ ದಿನಗಳನ್ನು ಕಂಡ ನಿಮಗೆ ತೊಳಲಾಟವಾಗುವುದು. ಆದರೂ ಧೈರ್ಯದಿಂದ ಎದುರಿಸಿ. ದೈವಕೃಪೆ ಅಪಾರವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ.9845743807
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











