Latest Updates
-
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ
19-3-2019: ಮಂಗಳವಾರದ ದಿನ ಭವಿಷ್ಯ
ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳಬಹುದು ಎನ್ನುವ ಭಯ ಇರುವುದಿಲ್ಲ. ಏಕೆಂದರೆ ಹಕ್ಕಿಗಳು ತಮ್ಮ ರೆಕ್ಕೆಯನ್ನು ನಂಬಿರುತ್ತವೆಯೇ ಹೊರತು ಕೊಂಬೆಗಳನ್ನಲ್ಲಾ. ನಾವು ಸಹ ಹಕ್ಕಿಯಂತೆ ನಮ್ಮ ಬಲದ ಬಗ್ಗೆ ಆತ್ಮ ವಿಶ್ವಾಸ ಹೊಂದಿರಬೇಕು. ಅದೃಷ್ಟ ಬರುವುದು ಎಂದು ಕೈ ಕಟ್ಟಿ ಕುಳಿತುಕೊಳ್ಳುವುದು, ಯಾರಾದರೂ ನಮ್ಮನ್ನು ಮೋಸ ಮಾಡಬಹುದು ಎನ್ನುವ ಭಯಕ್ಕೆ ಒಳಗಾಗಿರುವುದು ಅಥವಾ ನಮ್ಮನ್ನು ಯಾರಾದರೂ ಮೇಲೆತ್ತಬಹುದು ಎನ್ನುವ ಆಸೆಯಲ್ಲಿ ಮುಳುಗಿರಬಾರದು.
ನಮ್ಮ ಸಾಮರ್ಥ್ಯದಲ್ಲಿ ಸದಾ ಭರವಸೆಯನ್ನು ಇಟ್ಟುಕೊಳ್ಳಬೇಕು. ಮಾಡಬೇಕು ಎಂದು ಕೊಂಡ ಕೆಲಸಕ್ಕೆ ನಿರಂತರ ಶ್ರಮವನ್ನು ವಹಿಸಬೇಕು. ಆಗಲೇ ಯಶಸ್ಸು ಹಾಗೂ ಸಂತೋಷ ನಮ್ಮ ಜೀವನದಲ್ಲಿ ತುಂಬಿರುತ್ತದೆ. ಮಂಗಳವಾರವಾದ ಈ ಶುಭ ದಿನ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುವುದು ಎಂಬ ನಂಬಿಕೆಯನ್ನು ಹೊತ್ತು, ದಿನವನ್ನು ಪ್ರಾರಂಭಿಸಿ. ಈ ದಿನದ ನಿಮ್ಮ ಭವಿಷ್ಯದ ಬದಲಾವಣೆ ಅರಿಯಲು ಈ ಮುಂದೆ ನೀಡಿರುವ ರಾಶಿ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ.... ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ (19 ಮಾರ್ಚ್ 2019)
ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾಗ್ರತೆಯಿಂದ ರೂಪಿಸಿ. ಇದರಿಂದ ಗೆಲುವು ದೊರೆಯಲಿದೆ. ನಿಮ್ಮ ಹಿಂಬಾಲಕರು ನಿಮ್ಮ ಕಾರ್ಯ ಯೋಜನೆಗಳಿಗೆ ಬೆಂಬಲ ಸೂಚಿಸುವರು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ.ಮನೋ ನಿಯಾಮಕ ರುದ್ರದೇವರ ಸ್ಮರಣೆ ಮತ್ತು ಪ್ರಾರ್ಥನೆಯಿಂದ ಮನಸ್ಸಿನಲ್ಲಿ ಕವಿದಿರುವ ಕಾರ್ಮೋಡಗಳು ದೂರಕ್ಕೆ ಸರಿಯಲಿವೆ. ಮಗನಿಗೆ ಉತ್ತಮ ಸಂಬಂಧ ಕೂಡಿ ಬರುವುದರಿಂದ ಮನೆಯಲ್ಲಿ ಸಂತಸ ಮೂಡುವುದು. 9845743807 ಅದೃಷ್ಟ ಸಂಖ್ಯೆ:2

ವೃಷಭ
ವ್ಯಾಪಾರ ವಿಷಯದಲ್ಲಿ ಎಲ್ಲಾ ನಿಟ್ಟಿನಿಂದಲೂ ಜಾಗ್ರತೆ ಇರಲಿ. ನಿರ್ಲಕ್ಷ್ಯದಿಂದ ನಷ್ಟ ಆಗುವ ಸಂದರ್ಭವಿದೆ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಕೊಳ್ಳುವರು. ಕುಟುಂಬದವರೊಂದಿಗೆ ಸ್ನೇಹದಿಂದ ವರ್ತಿಸಿ.ಹತ್ತಿರದ ಊರುಗಳಿಗೆ ಹೋಗುವ ಪ್ರವಾಸಗಳಿಂದಾಗಿ ವ್ಯವಹಾರಿಕ ಗೆಲುವು ಸಾಧ್ಯವಾಗಲಿದೆ. ಮಕ್ಕಳ ಆಟ ಪಾಠಗಳಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಜನ್ಮಸ್ಥ ರಾಹು ಮಾನಸಿಕ ಕಿರಿಕಿರಿಯನ್ನುಂಟು ಮಾಡುವನು.9845743807 ಅದೃಷ್ಟ ಸಂಖ್ಯೆ:4

ಮಿಥುನ
ದೂರದ ಬಂಧುಗಳ ಆಗಮನದಿಂದಾಗಿ ಹೊಸ ಅವಕಾಶದ ಬಾಗಿಲು ತೆರೆಯಲು ಸಾಧ್ಯವಿದೆ. ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ ನಿಮ್ಮದಾಗುವುದು. ಒಡಹುಟ್ಟಿದವರು ನಿಮ್ಮ ಸಂತೋಷವನ್ನು ಹೆಚ್ಚಿಸುವರು.ಹಣವನ್ನು ಕೊಡುವ, ಕೊಡಿಸುವ ಕೆಲಸ ಮಾತ್ರ ಮಾಡಲೇಬೇಡಿ. ತೊಂದರೆಗೆ ಸಿಲುಕಿಕೊಳ್ಳುವಿರಿ. ಕೆಲವೊಮ್ಮೆ ನೀವೇ ಹಣವನ್ನು ಪಾವತಿಸುವ ಸಂದರ್ಭ ಎದುರಾಗುವುದು. ಇಲ್ಲಸಲ್ಲದ ಸಬೂಬು ಹೇಳಿ ಬಂದವರನ್ನು ನಯವಾಗಿ ಸಾಗ ಹಾಕುವುದು ಉತ್ತಮ.9845743807 ಅದೃಷ್ಟ ಸಂಖ್ಯೆ:9

ಕಟಕ
ಮಾತುಮಾತಿಗೆ ಸಿಟ್ಟು ಮಾಡಿಕೊಳ್ಳುವಂತಹ ಅತಿರೇಕಗಳು ಬೇಡ. ತಾಳ್ಮೆಯಿಂದಲೇ ಹೆಚ್ಚಿನ ಸಿದ್ಧಿ ದೊರೆಯಲಿದೆ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ. ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚಿನ ಹಣ ವ್ಯಯಿಸಿ. ಅನವಶ್ಯಕ ಖರೀದಿಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ತುರ್ತಾಗಿ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುವುದು. ಸದಾ ಕೆಲಸ ಕೆಲಸ ಎಂದು ದುಡಿಮೆಯ ಕಡೆಗೆ ಲಕ್ಷ್ಯ ನೀಡುವ ನೀವು ಮಡದಿ ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:6

ಸಿಂಹ
ಗೆಳೆಯರ ಬಗೆಗೆ ನೀವು ಮೃದು ಹೃದಯ ಹೊಂದಿದಲ್ಲಿ ಅದರಿಂದ ಹಾನಿಯನ್ನೇ ಅನುಭವಿಸುವಿರಿ. ಅವರು ನಿಮ್ಮ ನಂಬಿಕೆಗೆ ದ್ರೋಹ ಬಗೆಯುವರು. ಆದಷ್ಟು ದುಷ್ಟ ಸ್ನೇಹಿತರಿಂದ ದೂರ ಇರುವುದು ಒಳ್ಳೆಯದು. ನೀರಿನ ವಿಚಾರದಲ್ಲಿ ಕಾಳಜಿ ಇರಲಿ. ಜಲಾಶಯ, ಸಮುದ್ರದ ಕಡೆ ಸಂಚರಿಸುವಾಗ ಎಚ್ಚರಿಕೆ ಇರಲಿ. ಮನೆಯಿಂದ ಹೊರಡುವಾಗ ಲಕ್ಷ್ಮೀನರಸಿಂಹ ದೇವರನ್ನು ನೆನೆಯಿರಿ ಮತ್ತು ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ.9845743807 ಅದೃಷ್ಟ ಸಂಖ್ಯೆ:5

ಕನ್ಯಾ
ವಿನಾಕಾರಣ ಒಡಹುಟ್ಟಿದವರೇ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಅವರ ವಿಚಾರಧಾರೆ ಅವರಿಗೆ ಬಿಟ್ಟದ್ದು. ಅವರಿಗೆ ಸಲಹೆ ನೀಡದಿರುವುದು ಒಳ್ಳೆಯದು. ನಿಮಗೇ ಬೇಕಾದಷ್ಟು ಕೆಲಸವಿರುವಾಗ ಪರರ ಉಸಾಬರಿ ಏಕೆ?.ನೀರಾವರಿ ಕೃಷಿಕರಿಗೆ ಹೆಚ್ಚಿನ ಲಾಭವುಂಟಾಗುವುದು. ರೈತಾಪಿ ಜನರಿಗೆ ತಾವು ಬೆಳೆದ ಧಾನ್ಯಗಳಿಗೆ ಉತ್ತಮ ಬೆಂಬಲ ಬೆಲೆ ದೊರೆಯುವುದು. ಕೆಲವರಿಗೆ ಸರಕಾರದಿಂದ ಹಣಕಾಸು ಬರುವುದು.9845743807 ಅದೃಷ್ಟ ಸಂಖ್ಯೆ:4

ತುಲಾ
ನಿಮ್ಮ ಶಕ್ತಿಯ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಸರಳತೆಯ ಜೀವನದಿಂದ ನೀವು ಪರರಿಗೆ ಮಾರ್ಗಸೂಚಕರಾಗುವಿರಿ. ನಿಮ್ಮ ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು. ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಸಕಲ ದುರಿತಗಳು ನಾಶವಾಗುವವು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಕೆಮ್ಮು ಕಫದಂತಹ ತೊಂದರೆಗಳು ಕಾಡುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ
ಕೊರತೆಯಲ್ಲಿನ ಹಣಕಾಸಿನ ವೃದ್ಧಿಗೆ ಒಂಟಿ ಹೋರಾಟ ಬೇಡ. ಎಲ್ಲಾ ವಿಚಾರದಲ್ಲೂ ಬಾಳಸಂಗಾತಿಯ ಸಹಕಾರ ಪಡೆದು ಮುಂದುವರಿಯಿರಿ. ಕೆಲವು ವಿಷಯಗಳಲ್ಲಿ ಸಂಗಾತಿಯ ತೀರ್ಮಾನವೇ ಅಂತ್ಯವಾಗುವುದು. ನಿಮ್ಮ ಪ್ರತಿಭಾವಂತಿಕೆಯನ್ನು ಸಕಾರಾತ್ಮಕವಾಗಿ ನಿರೂಪಿಸಿ ಯಶ ಗಳಿಸಲು ಸೂಕ್ತ ಸಮಯವಾಗಿದೆ. ಆಕಸ್ಮಿಕವಾಗಿ ಹಣಕಾಸು ಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. 9845743807 ಅದೃಷ್ಟ ಸಂಖ್ಯೆ:6

ಧನುಸ್ಸು
ಆಪ್ತ ಗೆಳೆಯನ ಭೇಟಿ ಸಾಧ್ಯತೆ ಇದೆ. ಆತನ ಕರುಣಾಜನಕ ಕಥೆ ಕೇಳಿ ಮನಸ್ಸು ಮರುಗುವುದು. ಆತನಿಗೆ ನಿಮ್ಮಿಂದ ಸಹಾಯ ಬೇಕಾಗಿರುತ್ತದೆ. ನಿಸ್ವಾರ್ಥದಿಂದ ಆತನಿಗೆ ಸಹಾಯ ಹಸ್ತ ನೀಡಿ. ಮುಂದೆ ಆತನಿಂದ ಅನುಕೂಲವಾಗುವುದು.ವ್ಯಾಜ್ಯದ ವಿಚಾರದಲ್ಲಿ ಸೋತು ಗೆಲ್ಲುವ ಯೋಚನೆ ಇರಲಿ. ಮುಂದಿನ ದಾರಿ ಯಶಸ್ಸಿಗೆ ಮುಖ ಮಾಡಲಿದೆ. ಮುಷ್ಠಿಕಾಳು ಚೆಲ್ಲಿ ಮೂಟೆ ಕಾಳು ಬಾಚುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸನ್ನು ಹೊಂದಲು ಹಣವನ್ನು ಚೆಲ್ಲುವುದು ಅನಿವಾರ್ಯವಾಗಲಿದೆ.9845743807 ಅದೃಷ್ಟ ಸಂಖ್ಯೆ:8

ಮಕರ
ವ್ಯಾಪಾರ ವ್ಯವಹಾರದಲ್ಲಿ ಮುಂದಾಲೋಚನೆಯಿಲ್ಲದೆ ಹಣ ಹೂಡಿದ ಪರಿಣಾಮ ನಷ್ಟ ಎದುರಿಸುವಿರಿ. ನಷ್ಟ ಸರಿದೂಗಿಸಲು ಸಾಲ ಮಾಡಬೇಕಾದ ಪ್ರಸಂಗ ಬರುವುದು. ಆದರೆ ಈಗಾಗಲೇ ಮಾಡಿರುವ ಸಾಲವೇ ಬಹಳಷ್ಟು ಇರುವಾಗ ನಿಮಗೆ ಬೇರೆಯವರು ಸಾಲ ನೀಡಲಾರರು. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಜನ್ಮಶನಿಯಿಂದ ಬಿಡುಗಡೆ ಆಗಿದ್ದರೂ ಸಾಡೇಸಾತ್ ಶನಿಯ ಕಾಟ ಇದ್ದೇ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಹಣ ಉಳಿತಾಯ ಮಾಡಲಾಗುವುದಿಲ್ಲ.9845743807 ಅದೃಷ್ಟ ಸಂಖ್ಯೆ:6

ಕುಂಭ
ನಿಮ್ಮನ್ನು ಪರರಿಗೆ ಹೋಲಿಸಿಕೊಂಡು ಖಿನ್ನರಾಗದಿರಿ. ಭಗವಂತ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ನೀಡಿರುವನು. ಆ ಪ್ರತ್ಯೇಕತೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಶಕ್ತಿದೇವಿಯ ಆರಾಧನೆಗೆ ಒಳ್ಳೆಯ ದಿನ. ಹಾಗಾಗಿ ಶಕ್ತಿದೇವಿಯನ್ನು ಅನನ್ಯವಾಗಿ ಭಜಿಸಿ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.9845743807 ಅದೃಷ್ಟ ಸಂಖ್ಯೆ:2

ಮೀನ
ಣಕಾಸಿನ ಮುಗ್ಗಟ್ಟು ಅನುಭವಿಸುವಿರಿ. ಆದರೆ ಸಕಾಲದಲ್ಲಿ ನೆಂಟರ ಅಥವಾ ಸ್ನೇಹಿತರಿಂದ ಸಹಕಾರ ದೊರೆಯುವುದು. ಹಾಗಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವಿಷ್ಣುಸಹಸ್ರನಾಮ ಪಠಿಸಿ. ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧರಿಸುತ್ತಾರೆ ಎಂದು ತಿಳಿದು ಕಾರ್ಯದಿಂದ ಹಿಂದೆ ಸರಿಯಬೇಡಿ. ಮುನ್ನುಗ್ಗಿ ಪ್ರವೃತ್ತರಾದಲ್ಲಿ ದೈವಕೃಪೆಯಿಂದ ಇಚ್ಛಿತ ಗುರಿ ತಲುಪುವಿರಿ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











