Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ!
18-1-2019: ಶುಕ್ರವಾರದ ದಿನ ಭವಿಷ್ಯ
ಶುಕ್ರ ರೇಖೆಯಅಧಿಪತಿ ಉಗ್ರಗುಣ ಈ ರೇಖೆಗೆ ಯಮ ಅಧಿದೇವತೆ ಹಿಡಿದ ಕೆಲಸವನ್ನು ಪೂರ್ಣವಾಗಿ ಮಾಡುವವರು, ರೋಗರಹಿತರು, ದುಃಖ ರಹಿತರು, ಚಂಚಲ ಚಿತ್ತರು, ಆಲಸ್ಯಗಾರರು, ಇವರು ತಮ್ಮ ನಿರ್ಣಯಗಳನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಬೇರೆಯವರನ್ನು ಎಷ್ಟು ಹೊಗಳುವರೋ ಅಷ್ಟೇ ಕಟುವಾಗಿ ಟೀಕಿಸುವರು. ವಿಲಾಸ ವಸ್ತುಗಳು ಹಾಗೂ ಆಧುನಿಕ ವಸ್ತುಗಳನ್ನು ಕೊಳ್ಳುವಲ್ಲಿ ಮುಂದಿರುತ್ತಾರೆ.

ಧನದ ಬಗ್ಗೆ ಸ್ತ್ರೀಯರ ಬಗ್ಗೆ ಮತ್ತು ಸುಗಂಧ ಪರಿಮಳದ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಪತ್ನಿಯಿಂದ ಅದೃಷ್ಟವು ಕೂಡಿ ಬರುತ್ತದೆ.ಇವರಿಗೆ ಸ್ತ್ರೀಸಂತಾನ ಅಧಿಕವಾಗಿರುತ್ತದೆ ಸಂಘದಲ್ಲಿ ಗೌರವ, ಪ್ರತಿಷ್ಠೆಯನ್ನು ಹೊಂದಿರುತ್ತಾರೆ. ತಾವು ನಂಬಿದ ಸಿದ್ದಾಂತಗಳಿಗೆ ಒಳಪಟ್ಟುನಡೆದುಕೊಳ್ಳುತ್ತಾರೆ. ನಿತ್ಯ ಲಕ್ಷ್ಮಿಪೂಜೆ ಮಾಡಬೇಕು ದೇವಿ ಆರಾಧನೆ ಮಾಡಬೇಕು. ಓಂ ಕೃಷ್ಣವರ್ಣೈ ವಿದ್ಮಹೇl ದಂಡಧರಾಯೈ ಧೀಮಹಿl ತನ್ನೋ ಭರಣೀ ಪ್ರಚೋದಯಾತ್ll ಈ ಮಂತ್ರವನ್ನು ಪ್ರತಿದಿನ ಪಠಿಸಿದರೆ ಬರುವ ಕಷ್ಟ ದುಃಖಗಳು ಪರಿಹಾರವಾಗುತ್ತದೆ.

ಮೇಷ
ನಿಮ್ಮ ಉತ್ತಮ ಬೌದ್ಧಿಕ ಶಕ್ತಿಯಿಂದಾಗಿ ಜನರಿಂದ ಗೌರವ ಮತ್ತು ಪ್ರಶಂಸೆಗೆ ಗುರಿಯಾಗುವಿರಿ. ಇದರಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನುಮಾಡಲುನಿರ್ಧರಿಸುವಿರಿ.ಅಪರಿಚಿತರನ್ನು ಹೆಚ್ಚು ಪರಿಚಯ ಮಾಡಿಕೊಂಡು ಸಂಕಷ್ಟಕ್ಕೆ ಗುರಿಯಾಗುವಿರಿ. ಅಂತಹವರಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಸಂಗಾತಿಯ ಸಲಹೆಯಂತೆ ನಡೆದರೆ ಕ್ಷೇಮ. ಅದೃಷ್ಟ ಸಂಖ್ಯೆ:2

ವೃಷಭ
ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕಚೇರಿಗೆ ಹೊರಡುವಾಗ ಐದು ಅಥವಾ ಹತ್ತು ನಿಮಿಷ ಮುಂಚೆಯೇ ಮನೆಯಿಂದ ಹೊರಡಿ. ಅನಗತ್ಯ ಒತ್ತಡದಿಂದ ದೂರವಿರಿ. ಕೆಲಸಗಳು ಮನಸ್ಸಿಗೆ ನೆಮ್ಮದಿ ನೀಡುವವು. ಮೇಲಧಿಕಾರಿಗಳಿಂದ ಕಿರುಕುಳವಿದ್ದರೂ ತಾಳ್ಮೆ ಕಳೆದುಕೊಳ್ಳಬೇಡಿ. ನೀವು ಮಾಡಿರುವ ಕೆಲಸ ಸರಿಯಾಗಿಯೇ ಇದೆ. ಆದರೆ ನಿಮಗೆ ಆಗದವರೊಬ್ಬರು ನಿಮ್ಮ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ನಿಮ್ಮ ಬಾಸ್‌ಗೆ ತಿಳಿಸಿ ಅವರು ನಿಮ್ಮ ಮೇಲೆ ಕೋಪಗೊಳ್ಳುವಂತೆ ಮಾಡಿರುವರು. ಅದೃಷ್ಟ ಸಂಖ್ಯೆ:1

ಮಿಥುನ
ಮಕ್ಕಳ ಸಮಸ್ಯೆ ನಿಮಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಶ್ರೀ ನಾರಸಿಂಹ ದೇವರನ್ನು ನೆನೆಯಿರಿ. ಆತನ ಕರುಣೆಯಿಂದ ನಿಮ್ಮ ಸಂತತಿಗೆ ಸೂಕ್ತ ಸಂಗಾತಿ ದೊರೆಯುತ್ತಾರೆ. ಮಡದಿಯ ಮಾತನ್ನು ತಿರಸ್ಕರಿಸಬೇಡಿ. ವಿಪರೀತ ದಣಿದು ಕೆಲಸಕ್ಕೆ ಮುಂದಾಗದಿರಿ. ಕೆಲಸದ ಒತ್ತಡದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ನಿಮ್ಮ ಕೈಲಿ ಆಗುವಷ್ಟು ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ. ಅದೃಷ್ಟ ಸಂಖ್ಯೆ:2

ಕಟಕ
ಚಿಕ್ಕ ಮತ್ತು ಚೊಕ್ಕ ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದೇ ದೇವರ ಒಲುಮೆಗೆ ಸೋಪಾನ. ಸ್ವಚ್ಛತೆಯಿದ್ದಲ್ಲಿ ಭಗವಂತ ಇರುತ್ತಾನೆ. ಹಾಗಾಗಿ ಆತನ ಒಲುಮೆಗೆ ಮನೆ ಮತ್ತು ಮನಸ್ಸಿನ ಸ್ವಚ್ಛತೆಗೆ ಮೀಸಲಿಡಿ. ನೀವು ಮಾಡುವ ಕೆಲಸವನ್ನು ಜನರು ಬಹಿರಂಗವಾಗಿ ಹೊಗಳದಿದ್ದರೂ ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವರು. ಹಾಗಾಗಿ ನೀವು ತೀರಿಸಬೇಕಾಗಿರುವ ಸಾಲದ ಬಗೆಗೂ ಯಾರೂ ಒತ್ತಡ ಹೇರುತ್ತಿಲ್ಲ. ನ್ಯಾಯಯುತವಾಗಿ ದುಡಿದು ಹಣ ಮರು ಪಾವತಿಸುವಿರಿ. ಅದೃಷ್ಟ ಸಂಖ್ಯೆ:4

ಸಿಂಹ
ವಿವಾಹ ಆಪೇಕ್ಷೆಯುಳ್ಳವರಿಗೆ ಸ್ವಲ್ಪ ನಿರಾಶೆ ಕಾಡುವುದು. ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತೆ ಕೊನೆಯ ಕ್ಷ ಣದಲ್ಲಿ ವಧುವಿನ ಕಡೆಯುವರು ತಮ್ಮ ಅಸಮ್ಮತಿಯನ್ನು ತಿಳಿಸುವರು. ಇನ್ನೂ ಸ್ವಲ್ಪ ದಿನ ಕಾಯುವುದು ಅನಿವಾರ್ಯ. ಕೆಲಸಕ್ಕೆ ಬಾರದ ಜನ ತಲೆ ತಿನ್ನುವ ಸಾಧ್ಯತೆ ಹೆಚ್ಚಿದೆ. ದೂರ ಪ್ರವಾಸ ಮಾಡುವ ಯೋಗವಿದೆ. ಪತಿ ಪತ್ನಿಯರಲ್ಲಿ ಮನಸ್ತಾಪ ಬರುವುದು. ಶಿವ ಪಂಚಾಕ್ಷರಿ ಮಂತ್ರವನ್ನು ತಪ್ಪದೆ ಪಠಿಸಿ. ಅದೃಷ್ಟ ಸಂಖ್ಯೆ:6

ಕನ್ಯಾ
ನೀವು ಹುಟ್ಟಿದ ಊರಿನಲ್ಲಿ ಸಂಭ್ರಮದ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮೊಡನೆ ಆಡಿ ಬೆಳೆದ ಸಹಪಾಠಿಗಳ ಭೇಟಿ ನಿಮಗೆ ಸಂತಸ ನೀಡುವುದು.ಹಣಕಾಸಿನಪರಿಸ್ಥಿತಿಉತ್ತಮಗೊಳ್ಳುವುದು. ಅನಿರೀಕ್ಷಿತ ಬೆಳವಣಿಗೆಗಳು ನಿಮ್ಮ ಪರವಾಗಿ ಆಗುವುದರಿಂದ ತಡೆ ಹಿಡಿಯಲ್ಪಟ್ಟಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಜೀವನದಲ್ಲಿ ಹೊಸ ಆಶಾಕಿರಣ ಮೂಡುವುದು. ಮನಸ್ಸು ಹಕ್ಕಿಯಂತೆ ಹಾರಾಡುವುದು. ಅದೃಷ್ಟ ಸಂಖ್ಯೆ:4

ತುಲಾ
ಎಷ್ಟೇ ಹಣ ಇದ್ದರೂ ಸಾಲದು ಎಂಬ ಭಾವನೆ ಬರಬಹುದು. ಧನಕಾರಕ ಗುರು ಅಷ್ಟಮ ಸ್ಥಾನದಲ್ಲಿದ್ದು, ಹಣ ನೀರಿನಂತೆ ಖರ್ಚಾಗುವುದು. ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಹೆಚ್ಚುವುದು. ಗುರು ಸ್ತೋತ್ರ ಪಠಿಸಿ.ಗೆಳೆಯರನ್ನು ಪ್ರೀತಿಯಿಂದ ಕಾಣಬೇಕು. ಸ್ವಂತ ಮಕ್ಕಳನ್ನು ಸಹ ಸ್ನೇಹಿತರಂತೆ ಕಾಣಬೇಕು. ಅವರ ತಪ್ಪುಗಳನ್ನು ಕ್ಷಮಿಸುವ ಔದಾರ‍್ಯ ಇಟ್ಟುಕೊಂಡರೆ ಬಾಂಧವ್ಯ ಗಟ್ಟಿಗೊಳ್ಳುವುದು. ಅವರನ್ನು ನಗು ನಗುತ್ತಾ ತಿದ್ದುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:2

ವೃಶ್ಚಿಕ
ಹಮ್ಮಿಕೊಂಡಿರುವ ಕೆಲಸಗಳಲ್ಲಿ ಅಡಚಣೆಗಳು ಬಾರದಿರಲಿ ಎಂದು ವಿಘ್ನನಾಶಕ ಗಣಪತಿಯನ್ನು ಪ್ರಾರ್ಥಿಸಿ. ಇದರಿಂದ ಅನುಕೂಲವಾಗುವುದು. ಸಂಗಾತಿಯ ಸಂಗಡ ಮನಸ್ತಾಪ ಬೇಡ.ವಿವಿಧ ಮೂಲಗಳಿಂದ ಹಣ ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆತುರ ಪ್ರವೃತ್ತಿಯಿಂದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಸಾವಧಾನದಿಂದ ಹೆಜ್ಜೆಯಿಟ್ಟರೆ ಒಳಿತಾಗುವುದು. ಅದೃಷ್ಟ ಸಂಖ್ಯೆ:9

ಧನುಸ್ಸು
ಯಾವ ಹುತ್ತದಲ್ಲಿ ಯಾವ ಹಾವೋ ಎಂಬಂತೆ ನಿಮ್ಮ ಸಮೀಪಕ್ಕೆ ಬರುವ ವ್ಯಕ್ತಿಗಳ ಗುಣಾವಗುಣಗಳನ್ನು ತಿಳಿಯಲು ಅಸಮರ್ಥರಾಗುವಿರಿ. ಯಾರೊಂದಿಗೂ ವಿರೋಧ ಮಾಡಿಕೊಳ್ಳದೆ ಚಾಣಾಕ್ಷ ತನದಿಂದ ಅವರೊಡನೆ ವ್ಯವಹರಿಸಿದರೆ ಒಳಿತಾಗುವುದು. ಅವಕಾಶವಾದಿಗಳು ನಿಮ್ಮ ಸುತ್ತಲೇ ಗಿರಕಿ ಹೊಡೆಯಬಹುದು. ವ್ಯಾವಹಾರಿಕ ಜಾಣ್ಮೆ ಪ್ರದರ್ಶಿಸದಿದ್ದರೆ ನಿಮಗೆ ದೊಡ್ಡ ಪ್ರಮಾಣದ ಹಾನಿ ಆಗುವುದು. ಹಾವು ಹೊಡೆದು ಹದ್ದಿಗೆ ಹಾಕುವಂತೆ ನಿಮ್ಮ ಶ್ರಮದ ಫಲ ಪರರ ಪಾಲಾಗುವುದು. ಅದೃಷ್ಟ ಸಂಖ್ಯೆ:8

ಮಕರ
ಬಂಧುಗಳ ಒಳ ಜಗಳಗಳು ನಿಮ್ಮನ್ನು ಹೈರಾಣ ಮಾಡುವವು. ಯಾರೊಬ್ಬರ ಪರವಾಗಿ ನಿಂತರೂ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಬಹು ವಿವೇಚನೆಯಿಂದ ಪರಿಸ್ಥಿತಿ ನಿಭಾಯಿಸುವಿರಿ. ಇದಕ್ಕೆ ಗುರುವಿನ ಬೆಂಬಲ ಪಡೆಯಿರಿ.ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ಬೇಡ. ದುರ್ಗಾದೇವಿಯನ್ನು ಪ್ರಾರ್ಥಿಸಿ. ಗುರುವಿನ ಶುಭ ಆಶೀರ್ವಾದದಿಂದ ಒಳಿತಾಗುವುದು. ಆಹಾರ ದಾನ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಹಣ ವಿನಿಯೋಗಿಸಿ. ಅದೃಷ್ಟ ಸಂಖ್ಯೆ:4

ಕುಂಭ
ಕೆಲಸಗಳು ಮಂದಗತಿಯಲ್ಲಿ ಸಾಗುವವು. ಹಣಕಾಸಿನ ಮುಗ್ಗಟ್ಟು ನಿಮ್ಮ ಮನೋಧೈರ್ಯವನ್ನು ಕುಗ್ಗಿಸುವುದು. ಶಿವ ಪಂಚಾಕ್ಷ ರಿ ಮಂತ್ರ ಜಪಿಸಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ನಿಮ್ಮ ಮನೆಯ ಕಾವಲಿಯೇ ತೂತಾಗಿರುವುದರಿಂದ ಅನ್ಯರ ವಿಚಾರಧಾರೆಗಳ ಕುರಿತು ಟೀಕೆ ಮಾಡಬೇಡಿ. ಮಾಡಿದರೆ ಅಪಹಾಸ್ಯಕ್ಕೆ ಗುರಿಯಾಗುವಿರಿ. ಅದೃಷ್ಟ ಸಂಖ್ಯೆ:2

ಮೀನ
ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಶಾಲಾ ಕಾಲೇಜುಗಳಿಂದ ಬರಬೇಕಾಗಿದ್ದ ಗೌರವ ಧನ ಸದ್ಯದಲ್ಲಿಯೇ ನಿಮ್ಮ ಕೈ ಸೇರುವುದು. ವಿವಾಹಕ್ಕೆ ಇನ್ನೂ ಕೆಲಕಾಲ ಕಾಯಬೇಕಾಗುವುದು.ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ತಿಳಿಯಿರಿ. ಗುರು ಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಇದರಿಂದ ನಿಮ್ಮ ಕಾರ್ಯಗಳು ಕೈಗೂಡುವವು. ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನಕೊರತೆ , ಶತ್ರುಕಾಟ, ಕುಜದೋಷಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications