Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
13-7-2019: ಶನಿವಾರದ ದಿನ ಭವಿಷ್ಯ
ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಿವ್ಯ ನವಗ್ರಹಗಳಲ್ಲಿ ಒಂದು ಶನಿ. ಛಾಯಾದೇವಿ ಮತ್ತು ಸೂರ್ಯ ದೇವರ ಪುತ್ರನೇ ಶನಿಮಹಾರಾಜ. ಹಿಂದೂ ಸಂಪ್ರದಾಯದ ಪ್ರಕಾರ ಶನಿ ಯಮದೇವರ ಹಿರಿಯ ಸಹೋದರ. ಸೂರ್ಯದೇವರ ಇಬ್ಬರು ಪುತ್ರರಾದ ನ್ಯಾಯದೇವರಂದೇ ಹೇಳಲಾಗುವ ಯಮ ಮತ್ತು ಶನಿ ಜೀವಿತಕಾಲದಲ್ಲಿ ಮತ್ತು ಮರಣಾನಂತರ ಅವರವರು ಮಾಡಿದ ತಪ್ಪಿಗೆ ಶಿಕ್ಷೆ ನೀಡುತ್ತಾನೆ.
ಶನಿದೇವರು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು 30 ವರ್ಷ ತೆಗೆದುಕೊಳ್ಳುತ್ತಾನೆ. ಶನಿ ಕಪ್ಪು ಬಣ್ಣದವನಾಗಿದ್ದು ಸುಂದರರೂಪಿಯಾಗಿದ್ದು, ಕಾಲಭೈರವನನ್ನು ಪೂಜಿಸುವವನಾಗಿದ್ದಾನೆ. ಮನುಷ್ಯನ ಜೀವಿತಾವಧಿಯಲ್ಲಿ ಮೂರು ಬಾರಿ ಪ್ರವೇಶ ಮಾಡುತ್ತಾನೆ ಎನ್ನುವುದು ಜ್ಯೋತಿಷ ಶಾಸ್ತ್ರ.ಪುಂಗುಶನಿ, ಮಂಕುಶನಿ ಮತ್ತು ಕಟ್ಟಕಡೆಯ ಬಾರಿಗೆ ಮರಣಶನಿಯ ರೂಪದಲ್ಲಿ ಶನೀಶ್ಚ್ವರ ಪ್ರವೇಶವಾಗುತ್ತಾನೆ. ಪುಂಗುಶನಿ ಒಳ್ಳೆದನ್ನು, ಮಂಕುಶನಿ ಮತ್ತು ಮರಣಶನಿ ಕೆಟ್ಟದನ್ನು ಮಾಡುತ್ತಾನೆ, ಆದರೆ ಇದೆಲ್ಲಾ ಮನುಷ್ಯನ ಜನ್ಮಕುಂಡಲಿ ಮತ್ತು ಹಿಂದಿನ ಜನ್ಮದ ಪಾಪದ ಫಲಕ್ಕೆ ಅನುಗುಣವಾಗಿ ಶನಿ ಒಳ್ಳೆದು, ಕೆಟ್ಟದನ್ನು ಮಾಡುತ್ತಾನೆ ಎನ್ನುತ್ತೆ ಜ್ಯೋತಿಷ್ಯ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ (13 july 2019)
ನೀವು ನಿರ್ಭಯವಾಗಿ ನಿಮ್ಮದೇ ಆದ ಅಧಿಕಾರವನ್ನು ಚಲಾಯಿಸಲು ಸ್ವತಂತ್ರರಿದ್ದೀರಿ. ಹಾಗಾಗಿ ವಿರೋಧಿಗಳ ಅಥವಾ ಕುಹಕಿಗಳ ಮಾತಿಗೆ ಬೆಲೆ ನೀಡದಿರಿ. ಆನೆ ನಡೆದದ್ದೇ ದಾರಿ ಎನ್ನುವಂತೆ ಧೈರ್ಯವಾಗಿ ನಿಮ್ಮ ಪಥದಲ್ಲಿ ಸಾಗಿ. ಯಶಸ್ಸನ್ನು ಹೊಂದುವಿರಿ. ಹತ್ತಿರದವರೊಬ್ಬರು ನಿಮ್ಮನ್ನು ಆರಾಧಿಸಿ, ಹೊಗಳಿ ಸನ್ಮಾನಿಸುವ ಸಾಧ್ಯತೆ ಇದೆ ಮತ್ತು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಲಿದ್ದಾರೆ. ಬಹಳ ದಿನಗಳ ನಂತರ ಬಂಧು ಬಾಂಧವರು ಒಂದೆಡೆ ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ.9845743807 ಅದೃಷ್ಟ ಸಂಖ್ಯೆ:2

ವೃಷಭ
ನಿಮ್ಮ ಜ್ಞಾನ ಸಂಪಾದನೆಯ ಮಾರ್ಗವು ಉತ್ತಮವಾಗಿದ್ದು ಮುಖದಲ್ಲಿ ತೇಜಸ್ಸು ತನ್ನಿಂದತಾನೆ ಪ್ರಕಾಶವಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸಿನ ದಾರಿ ತೆರೆದುಕೊಳ್ಳವುದು. ಮಾತಿನ ಮೇಲೆ ಹಿಡಿತವಿದ್ದಲ್ಲಿ ಒಳಿತಾಗುವುದು. ಕೂಡಿಟ್ಟ ಹಣ ಅಪವ್ಯಯವಾಗುವುದನ್ನು ಕಂಡು ಸುಮ್ಮನಿರಬೇಕಾದ ಪರಿಸ್ಥಿತಿ ನಿಮ್ಮದಾಗುವುದು. ಹಣ ಖರ್ಚಾಗುವುದನ್ನು ತಡೆಗಟ್ಟಲು ಪ್ರಯತ್ನ ಮಾಡುವಿರಿ. ಆದರೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. 9845743807 ಅದೃಷ್ಟ ಸಂಖ್ಯೆ:1

ಮಿಥುನ
ಮಹತ್ವದ ಸಾತ್ವಿಕ ಶಕ್ತಿಯೊಂದು ನಿಮ್ಮಲ್ಲಿ ಪ್ರವೇಶಿಸಿ ಮಹತ್ತರ ಕಾರ್ಯವನ್ನು ಸುಲಭವಾಗಿ ಮಾಡಲು ಪ್ರೇರೇಪಿಸುವುದು. ಮಗನ ಮದುವೆಯನ್ನು ವಿದ್ಯುಕ್ತವಾಗಿ ಮಾಡುವ ಕನಸು ನನಸಾಗುವುದು. ಇದರಿಂದ ಬಂಧುಬಾಂಧವರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಅನ್ಯೋನ್ಯತೆಯನ್ನು ಸಾಧಿಸಿ ಕುಟುಂಬದಲ್ಲಿ ಸಂತೋಷವನ್ನು ನಿರ್ಮಿಸುವಿರಿ. ನಿಮ್ಮ ಈ ಗುಣವೇ ಎಲ್ಲೆಡೆ ನಿಮಗೆ ಗೌರವ ತಂದುಕೊಡುವುದು. ಹಲವು ಪ್ರಮುಖ ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 9845743807 ಅದೃಷ್ಟ ಸಂಖ್ಯೆ:2

ಕಟಕ
ಅನವರತವಾದ ಸಿದ್ಧಿಯು ದೊರೆಯುವುದು ಮತ್ತು ಮುಂದಿನ ಏಳಿಗೆಗಾಗಿ ಹೊಸದಾದ ಯೋಜನೆಗಳನ್ನು ಕ್ರಮಬದ್ಧವಾಗಿ ಆಯೋಜಿಸಿಕೊಂಡಲ್ಲಿ ಗೆಲುವನ್ನು ಸಾಧಿಸುವಿರಿ. ಗುರು ಹಿರಿಯರ ಎಚ್ಚರಿಕೆಯ ಮಾತುಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಅನಿರೀಕ್ಷಿತ ಒತ್ತಡಗಳು ದುತ್ತನೆ ಮೇಲೆದ್ದು ಬರಲು ಹವಣಿಸುತ್ತಿವೆ. ಈ ಬಗ್ಗೆ ಹುಷಾರಾಗಿರಿ. ನೀವು ನಂಬಿದ ಗುರುವಿನ ಮೊರೆ ಹೋಗಿ ಮತ್ತು ಯಾವುದೇ ಗುರು ಮಂದಿರಕ್ಕೆ ಹೋಗಿ ಗುರುಗಳ ದರ್ಶನ ಮಾಡಿಕೊಂಡು ಬನ್ನಿ.9845743807 ಅದೃಷ್ಟ ಸಂಖ್ಯೆ:4

ಸಿಂಹ
ಜನ್ಮಶನಿಯು ಹೇಗೆ ತೊಂದರೆಗಳನ್ನು ಉಂಟು ಮಾಡುವನು ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ ನೀವು ನಿಮ್ಮ ಎಚ್ಚರಿಕೆ ಯಲ್ಲಿರುವುದು ಒಳ್ಳೆಯದು. ಆದಷ್ಟು ಹನುಮಾನ್ ಚಾಲೀಸ್ ಪಠಣ ಮಾಡುತ್ತಿರಿ. ಹಣಕಾಸಿನ ವ್ಯವಹಾರವನ್ನು ಮುಂದೂಡುವುದು ಒಳ್ಳೆಯದು. ಕೃಷಿ ಸಂಬಂಧ ಮತ್ತು ಭೂ ಸಂಬಂಧ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುವುದು. ನಿಮಗೆ ಬರಬೇಕಾಗಿದ್ದ ದೊಡ್ಡ ಮೊತ್ತದ ಹಣವು ನಿಮ್ಮ ಬ್ಯಾಂಕಿಗೆ ಜಮಾ ಆಗುವ ಸಂದರ್ಭ ಹೇರಳವಾಗಿರುವುದು. ಕುಲದೇವರನ್ನು ಪ್ರಾರ್ಥನೆ ಮಾಡಿ.9845743807 ಅದೃಷ್ಟ ಸಂಖ್ಯೆ:6

ಕನ್ಯಾ
ಯಶಸ್ಸಿಗಾಗಿ ಮಾಡಿದ ಸಂಕಲ್ಪದಿಂದಲೇ ಅರ್ಧ ಗೆಲುವನ್ನು ಸಾಧಿಸಬಲ್ಲಿರಿ. ಇನ್ನರ್ಧ ಕೆಲಸವು ದೇವರ ಕೃಪೆಯಿಂದ ಮತ್ತು ನಿಮ್ಮ ಮೇಲಧಿಕಾರಿಗಳ ಜಯದಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.ನಿಮ್ಮ ಅತ್ಯಂತ ಸಮೀಪದವರೇ ವಿನಾಕಾರಣ ಜಗಳವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಆದರೆ ಗುರುವಿನ ಪೂರ್ಣ ಅನುಗ್ರಹ ನಿಮ್ಮ ರಾಶಿಯ ಮೇಲೆ ಇರುವುದರಿಂದ ಚಿಂತಿಸುವ ಅಗತ್ಯವಿಲ್ಲ. ಎಲ್ಲವೂ ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:4

ತುಲಾ
ನಿಮ್ಮ ಇತಿ ಮಿತಿ ಅರಿತು ಕಾರ್ಯ ಪ್ರವೃತ್ತರಾಗಿ. ಸಮಾಜವನ್ನು ತಿದ್ದುವ ಇಲ್ಲದ ಉಸಾಬರಿ ತೆಗೆದುಕೊಂಡು ಅವಮಾನಕ್ಕೆ ಗುರಿಯಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದ್ದು ಈ ಬಗ್ಗೆ ಜಾಗ್ರತೆ ಇರಲಿ.ನಿಮ್ಮ ಬದುಕಿನ ಕನಸೊಂದು ಕೆಲವು ರಾಜಿಗಳೊಡನೆ ಈಡೇರಲು ಸಾಧ್ಯವಿದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಕೆಲವರು ನಿಮ್ಮಿಂದ ಹಣದ ಪ್ರತಿಫಲಾಪೇಕ್ಷೆ ಬಯಸುವರು. ಅವರಿಗೆ ಸುತಾರಾಂ ಹಣ ನೀಡದಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ
ಅತ್ಯಂತ ಮೇಧಾವಿ ಆದ ನೀವು ಕೆಲವೊಮ್ಮೆ ನಿಮ್ಮ ಹಠಮಾರಿತನದಿಂದ ಬಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ಬಹು ದೊಡ್ಡ ಬಂಡವಾಳದೊಂದಿಗಿನ ವ್ಯವಹಾರ ವಹಿವಾಟುಗಳ ಬಗ್ಗೆ ಸಂಯಮ ಇರಲಿ.ಹಲವು ತಪ್ಪುಗಳು ನಿಮ್ಮನ್ನು ಪಾಪಪ್ರಜ್ಞೆಯಲ್ಲಿ ಇರಿಸುವವು. ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ. ದೈವಕೃಪೆ ಇರುವುದರಿಂದ ಮಾನಹಾನಿ ಪ್ರಸಂಗ ಬರುವುದಿಲ್ಲ.9845743807 ಅದೃಷ್ಟ ಸಂಖ್ಯೆ:8

ಧನುಸ್ಸು
ಅನವಶ್ಯಕ ಕೆಲಸ ಮಾಡಲು ಮುಂದಾಗುವಿರಿ. ಇದರಿಂದ ಮನೆಯ ಸದಸ್ಯರಿಂದಲೇ ಟೀಕೆಗೆ ಒಳಗಾಗುವಿರಿ. ಕೆಲವು ವೇಳೆ ಅತಿ ಸಣ್ಣತನ ತೋರಿ ಅಪಹಾಸ್ಯಕ್ಕೆ ಈಡಾಗುವಿರಿ. ನಿಮ್ಮ ವಿದ್ಯೆ, ವಯಸ್ಸಿಗೆ ತಕ್ಕಂತೆ ಗಂಭೀರವಾಗಿರಿ. ಹಿರಿಯರ ಬಳಿ ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಿ. ಅವರಿಂದ ನಿಮಗೆ ಸೂಕ್ತ ಪರಿಹಾರ ಸಿಗುವುದು. ಮಗನ ನೌಕರಿ ವಿಷಯದಲ್ಲಿ ಒಂದು ಶುಭವಾರ್ತೆ ಕೇಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.9845743807 ಅದೃಷ್ಟ ಸಂಖ್ಯೆ:5

ಮಕರ
ಸಿಟ್ಟು ಮಾನವನ ಮೊದಲ ಶತ್ರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಆದಷ್ಟು ತಾಳ್ಮೆಯನ್ನು ತಮ್ಮ ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳಬೇಕು. ಇಲ್ಲದೆ ಇದ್ದಲ್ಲಿ ಕೆಲವು ನಿರ್ಣಯಗಳು ನಿಮ್ಮನ್ನು ಪೇಚಿಗೆ ಸಿಲುಕಿಸುವವು. ಯಾವ ದಿಕ್ಕಿಗೆ ಹೋದರೂ ನೆಮ್ಮದಿ ಇಲ್ಲ. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಎನ್ನುವಂತಾಗಿದೆ. ಆದಷ್ಟು ತಾಳ್ಮೆಯಿಂದ ಇರಿ. ಧೈರ್ಯ ಕಳೆದುಕೊಳ್ಳಬೇಡಿ. ಕತ್ತಲು ಕಳೆದ ಮೇಲೆ ಉಜ್ವಲ ಬೆಳಗಿನ ಆಗಮನ ಆಗಲೇಬೇಕು.9845743807 ಅದೃಷ್ಟ ಸಂಖ್ಯೆ:8

ಕುಂಭ
ಜನ್ಮಸ್ತ ಶನಿ ನಿಮ್ಮ ವಿಚಾರಧಾರೆಗಳಲ್ಲಿ ನಿಧಾನ ತರುವನು. ನಿಧಾನವೇ ಪ್ರಧಾನ ಎಂಬ ಮಾತಿದೆ. ಅಂತೆಯೇ ಒಂದು ಬಾರಿ ಅವಘಡದಿಂದ ಪಾರಾಗುವಿರಿ. ಅದಕ್ಕೆ ಕಾರಣ ನಿಮ್ಮ ನಿಧಾನ ಪ್ರವೃತ್ತಿಯೇ ಆಗಿರುತ್ತದೆ. ಹಾಗಾಗಿ ಅವಸರಿಸಬೇಡಿ. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಗೊಣಗುವಿರಿ. ನಿಮ್ಮ ಹಿರಿಯರು ಕೂಡಾ ನಿಮ್ಮ ಬಗ್ಗೆ ಇದೇ ಮಾತನ್ನು ಆಡುವರು. ಕಾಲಗರ್ಭದಲ್ಲಿ ಇತಿಹಾಸ ಪುನಾರಾವರ್ತನೆ ಆಗುತ್ತದೆ. ಅದಕ್ಕಾಗಿ ಬೇಸರ ಮಾಡಿ ಕೊಳ್ಳದಿರಿ. ಪ್ರೀತಿಯಿಂದ ಮಕ್ಕಳನ್ನು ತಿದ್ದಿ.9845743807 ಅದೃಷ್ಟ ಸಂಖ್ಯೆ:2

ಮೀನ
ಯಾರ ವ್ಯಕ್ತಿತ್ವವನ್ನೂ ನಿರ್ಣಯಿಸಲು ಸಾಧ್ಯವಿಲ್ಲ. ಜಗತ್ತಿನ ಪ್ರತಿ ವಸ್ತು ತನ್ನದೇ ಆದ ವೈಶಿಷ್ಟತೆಯಿಂದ ಕೂಡಿರುತ್ತದೆ. ಜನರಲ್ಲಿನ ಉತ್ತಮ ಅಂಶವನ್ನು ಮಾತ್ರ ಗುರುತಿಸಿ ನಡೆದಲ್ಲಿ ನಿಮಗೆ ಅನುಕೂಲವಾಗುವುದು. ಪ್ರತಿರೋಧಗಳ ಮಧ್ಯೆಯೂ ಗೆಲ್ಲುವ ಅವಕಾಶ ನಿಮಗೆ ಲಭಿಸುವುದು. ಗುರು ಹಿರಿಯರ ಆಶೀರ್ವಾದ ದಿಂದ ನಿಮ್ಮ ಮನೋಕಾಮನೆಗಳು ಪೂರ್ಣ ಗೊಳ್ಳುವವು. ಆರ್ಥಿಕ ಸ್ಥಿತಿ ಸಾಧಾರಣದಿಂದ ಉತ್ತಮ ಮಟ್ಟಕ್ಕೆ ಹೋಗುವುದು. 9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸ ಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನಕೊರತೆ , ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏ ನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp



Click it and Unblock the Notifications











