Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
11-2-2019: ಸೋಮವಾರದ ದಿನ ಭವಿಷ್ಯ
ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ.

ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ.ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ(11 ಫೆಬ್ರವರಿ 2019)
ಮನದಾಳದ ಚಿಂತನೆಗಳನ್ನು ದೂರಮಾಡಿ ಒಳಿತುಗಳನ್ನು ಪಡೆಯುವ ಸಿದ್ದಿಯನ್ನು ಕಂಡುಕೊಳ್ಳುವಿರಿ. ಇದಕ್ಕೆ ಪೂರಕವಾಗಿ ಬಂಧುಗಳು ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಹಠ ಯಾರಿಗೂ ಒಳ್ಳೆಯದಲ್ಲ. ನಿಮ್ಮ ಹಠದಿಂದ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರುವುದು. ಒಂದು ವೇಳೆ ಕೋಪ, ಹಠವನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ತೊಂದರೆ ಅನುಭವಿಸುವಿರಿ.
ಬಾಳಸಂಗಾತಿ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಅಂತೆಯೇ ಹೆತ್ತ ತಂದೆ ತಾಯಿಯ ಮಾತನ್ನು ನಡೆಸಿಕೊಡುವುದು ಒಳ್ಳೆಯದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.9845743807
ಅದೃಷ್ಟ ಸಂಖ್ಯೆ:2

ವೃಷಭ
ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಜನೆಯನ್ನು ಸ್ವಲ್ಪ ದಿನ ಮುಂದೂಡಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರಗತಿ ಇರುತ್ತದೆ.ಮಾಡಿದ್ದುಣ್ಣೊ ಮಹರಾಯ ಎಂಬ ಸಂಗತಿ ನೆನಪಿಡಿ. ಇದರಿಂದ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕಾಗುವುದು.
ಆದಷ್ಟು ಉಡಾಫೆ ಮಾತುಗಳನ್ನು ಆಡದಿರಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದು.ವ್ಯಕ್ತಿತ್ವದ ವಿಚಾರದಲ್ಲಿ ಹೊಸ ಎತ್ತರ ಪಡೆಯಲು ಸಂಬಂಧಿಕರು ಸಹಾಯ ಮಾಡುವರು. ಇದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ. ಆತ್ಮೀಯರು ನಿಮ್ಮನ್ನು ಸನ್ಮಾನಿಸುವ ಸಾಧ್ಯತೆ ಇದೆ.9845743807
ಅದೃಷ್ಟ ಸಂಖ್ಯೆ:1

ಮಿಥುನ
ಕಿರಿಕಿರಿಗಳಿಂದ ಪಾರಾಗಲು ಅಪಾರವಾದ ತಾಳ್ಮೆಯಿರಲಿ. ತಂತಾನೇ ಕೆಲವು ಪರಿಹಾರದ ಮಾರ್ಗೋಪಾಯಗಳು ಲಭಿಸುವುವು. ಸಿಟ್ಟಿಗೆ ಬುದ್ಧಿ ಕೊಡದಿರಿ. ನಿಮ್ಮ ಮಾತುಕತೆಯಲ್ಲಿ ತಪ್ಪು ನುಸುಳದಂತೆ ಎಚ್ಚರ ವಹಿಸಿ. ಎದುರು ವ್ಯಕ್ತಿಯ ಜೊತೆ ವ್ಯವಹರಿಸುವಾಗ ಹುಷಾರಾಗಿರಿ. ಆಂಜನೇಯ ಸ್ವಾಮಿಯ ಸ್ಮರಣೆ ಮಾಡಿ.ಸ್ವಾಭಿಮಾನಿಗಳಾದ ನೀವು ಸಾಧಿಸಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಇದರಿಂದ ನೀವಷ್ಟೇ ಅಲ್ಲದೆ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುವರು. ಆದರೆ ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಇರಲಿ.9845743807
ಅದೃಷ್ಟ ಸಂಖ್ಯೆ:2

ಕಟಕ
ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುವಿರಿ ಮತ್ತು ನೀವು ಸಾಲ ಪಡೆದವರಿಂದ ನೋಟಿಸು ಜಾರಿ ಆಗುವ ಸಂದರ್ಭವಿರುತ್ತದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಒತ್ತಡದಲ್ಲಿ ಸಿಲುಕಿಕೊಳ್ಳುವ ಸಂಭವ ಜಾಸ್ತಿ ಇದೆ. ಯೋಚಿಸದೆ ಯಾರಿಗೂ ಹಣ ಅಥವಾ ಮಾತು ಕೊಡಲು ಮುಂದಾಗದಿರಿ. ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಸ್ಮರಿಸಿಕೊಳ್ಳಿ.ರಸ್ತೆಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುವಿರಿ. ಈ ಬಗ್ಗೆ ಜಾಗ್ರತೆಯಿಂದ ಇರಿ. ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ.9845743807
ಅದೃಷ್ಟ ಸಂಖ್ಯೆ:4

ಸಿಂಹ
ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.ಆತ್ಮೀಯ ಬಂಧುಗಳು ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಇದ್ದದ್ದನ್ನು ಇದ್ದಂತೆ ಬೇರೆಯವರ ಮುಂದೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಕೆಲವು ಸಮಸ್ಯೆಗಳು ಎದುರಾಗುವವು. ಅವುಗಳನ್ನು ಹೆಚ್ಚಿನ ತೊಂದರೆಯಿಲ್ಲದೆ ಎದುರಿಸುವ ಶಕ್ತಿ ನಿಮಗೆ ಬರುವುದು. ಬರಬೇಕಾಗಿದ್ದ ಹಣಕಾಸು ಬರುವುದು.9845743807
ಅದೃಷ್ಟ ಸಂಖ್ಯೆ:6

ಕನ್ಯಾ
ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಕಾದಾಡದೆ ಮಾತುಕತೆ ಮುಂದುವರೆಸಿದರೆ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ದೂರದ ಊರಿನಿಂದ ಬರುವ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಮಗನ ಮದುವೆ ಮಾಡುವ ಆಸೆ ಚಿಗುರುವುದು. ಗ್ರಹಗಳ ಆಟ ಯಾವ ರೀತಿಯಲ್ಲಿಯೂ ಇರಬಹುದು. ಅದನ್ನು ಸ್ವೀಕರಿಸಿ.ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವುದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ.9845743807
ಅದೃಷ್ಟ ಸಂಖ್ಯೆ:8

ತುಲಾ
ಬಹುಮುಖ್ಯ ಕಡತವೊಂದು ಕಣ್ಮರೆಯಾಗುವುದರಿಂದ ಚಿಂತೆಗೆ ಒಳಗಾಗುವಿರಿ. ವ್ಯವಧಾನದಿಂದ ಹುಡುಕಿದರೆ ಸಂಜೆ ವೇಳೆ ಆ ಕಡತ ದೊರೆಯುವ ಸಾಧ್ಯತೆ ಇದೆ. ಕಾರ್ತವೀರ್ಯಾರ್ಜುನನ ಮಂತ್ರ ಪಠಿಸಿ. ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದಿರಿ.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ತಿಳಿದು ಭ್ರಮೆಯಲ್ಲಿ ಚಡಪಡಿಸುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗುವುದು. ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ. ವಿಷ್ಣುವಿನ ಆರಾಧನೆ ಮೂಲಕ ಶುಭ ಸಿಗುವುದು.9845743807
ಅದೃಷ್ಟ ಸಂಖ್ಯೆ:8

ವೃಶ್ಚಿಕ
ವೃತ್ತಿಯಲ್ಲಿ ಬೇಸರವುಂಟಾಗುವುದು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುವುದು. ಹಾಗಂತ ಸದ್ಯದ ವೃತ್ತಿಗೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇರುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ.
ವಿಷ್ಣು ಸಹಸ್ರನಾಮದ ಮಹಿಮೆ ಅಪಾರ. ಅಗತ್ಯವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಆಂಜನೇಯ ಗುಡಿಯಲ್ಲಿ ದೀಪಾರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.
ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪಗೊಳ್ಳುವಿರಿ. ಎಷ್ಟೇ ಕೂಗಾಡಿದರೂ ನಿಮ್ಮ ಕೋಪ ಕೆಲಸಕ್ಕೆ ಬಾರದ ವಿಷಯ. ನೀವೇ ನಿಮ್ಮ ಕೋಪ ನಿಯಂತ್ರಿಸಿಕೊಳ್ಳಿ. ಇದರಿಂದ ಒಳಿತಾಗುವುದು.9845743807
ಅದೃಷ್ಟ ಸಂಖ್ಯೆ:6

ಧನುಸ್ಸು
ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಭಯಪಡದೆ ಇಂತಹ ಜನರನ್ನು ದೂರ ಇಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು. ಕೆಲವು ದಿನಗಳಿಂದ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. ಇದರಿಂದ ನೀವು ಮಾಡಿದ ಸಾಲದ ತೀರುವಳಿಗೆ ಸಹಾಯವಾಗುವುದು.
ಮಕ್ಕಳ ಮೂಲಕವಾಗಿ ಹೊಸ ಆಸ್ತಿ, ನಿವೇಶನ ಇತ್ಯಾದಿ ಹೊಂದಲು ಕಾಲ ಕೂಡಿ ಬರುವುದು. ಇದರಿಂದ ಮನೆಯ ಸದಸ್ಯರು ಹರ್ಷಿತರಾಗುವರು. ಗೆಳೆಯರು ಇಲ್ಲವೆ ಆತ್ಮೀಯರು ನಿಮಗೆ ಸಹಾಯಹಸ್ತ ನೀಡುವರು.9845743807
ಅದೃಷ್ಟ ಸಂಖ್ಯೆ:7

ಮಕರ
ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಈ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವ ವಾಹನವನ್ನು ಖರೀದಿ ಮಾಡುವಿರಿ.ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲತೆಯನ್ನು ಹೊಂದುವುದು. ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ. ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.9845743807
ಅದೃಷ್ಟ ಸಂಖ್ಯೆ:6

ಕುಂಭ
ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷವನ್ನುಂಟು ಮಾಡುವುದು.
ಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದೆ ಇರುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಬಡವರಿಗೆ ಆಹಾರವನ್ನು ನೀಡಿ. ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವೊಂದು ಇಂದಿನ ಶ್ರಮದಿಂದಾಗಿ ಸುಖಾಂತ್ಯ ಕಾಣುವುದು. ಹಿರಿಯರ ಆಶೀರ್ವಾದ ಪಡೆದು ಕಾರ್ಯವನ್ನು ಆರಂಭಿಸಿ ದಿನದ ಅಂತ್ಯದ ವೇಳೆಯಲ್ಲಿ ಸಿಹಿ ಸುದ್ದಿ ಕೇಳುವಿರಿ.9845743807
ಅದೃಷ್ಟ ಸಂಖ್ಯೆ:2

ಮೀನ
ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ಗಳಿಕೆಯು ಲಭ್ಯವಾಗಲಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ನೂತನ ಅವಕಾಶ ಕೂಡಿ ಬರುವುದು. ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಗಳಿವೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕಾರ್ಯ ಮಾಡಿಸಿಕೊಳ್ಳುವಿರಿ. ಕಚೇರಿಯಲ್ಲಿನ ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆಯ ಬಗೆಗೆ ಸಾಫಲ್ಯತೆ ಪಡೆಯಲು ಅವಕಾಶಗಳಿವೆ. ಹೆಚ್ಚಿನ ಲಾಭಾಂಶ ಪಡೆಯಲು ಆಂಜನೇಯ ಸ್ತೋತ್ರ ಪಠಿಸಿ.9845743807
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











