Latest Updates
-
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ!
10-1-2019: ಗುರುವಾರದ ದಿನ ಭವಿಷ್ಯ
ಗುರು ಗ್ರಹ: ನವಗ್ರಹಗಳಲ್ಲಿ ಅತಿ ಶುಭ ಹಾಗೂಶಾಂತ ಗ್ರಹ ಎಂದರೆ ಗುರು.ಈತನ ಸ್ವಕ್ಷೇತ್ರ ಧನುಸ್ಸು ಮತ್ತು ಮೀನ ರಾಶಿ. ಕಟಕರಾಶಿ ಉಚ್ಚರಾಶಿಯಾದರೆ ಮಕರ ನೀಚರಾಶಿಯಾಗಿದೆ. ಗುರು ವಿದ್ಯಾವಂತನು, ಶಾಂತ ಸ್ವಭಾವದವನು, ಅಧ್ಯಾತ್ಮಿಕ ಶಾಸ್ತ್ರ ನಿಪುಣನು, ಸಮಾಜ ಕಾರ‍್ಯದಲ್ಲಿ ಪ್ರವೀಣ, ಬುದ್ಧಿವಂತನು, ಪರೋಪಕಾರಿ, ಹಣದ ವಿಷಯದಲ್ಲಿ ಉದಾರಿ, ಪುತ್ರಕಾರಕ, ಶಿಕ್ಷಣ ನೀಡುವವನೂ ಆಗಿರುವನು.ಜಾತಕದಲ್ಲಿ ಗುರುಕುಂಡಲಿಯಲ್ಲಿ ಗುರುವು ಲಗ್ನ ಅಥವಾ ಮೊದಲನೆ ಭಾವದಲ್ಲಿ ಇದ್ದರೆ ಆ ಜಾತಕದವರು ಸುಂದರ ದೇಹವುಳ್ಳವರು, ಅವರು ದೀರ್ಘ ಆಯುಸ್ಸು ಉಳ್ಳವರು, ಪಂಡಿತರೂ, ಧೀರರೂ, ಶ್ರೇಷ್ಠ ವ್ಯಕ್ತಿಯೂ ಆಗಿರುತ್ತಾರೆ.ಕುಂಡಲಿಯಲ್ಲಿ ಗುರುವು ಎರಡನೇ ಮನೆಯಲ್ಲಿದ್ದರೆ ಆ ಜಾತಕದವರು ಧನಿಕರೂ, ಉತ್ತಮ ಆಹಾರ ಸೇವಿಸುವವರೂ, ವಾಕ್ ಚಾತುರ‍್ಯ ಹೊಂದಿರುವವರೂ, ಮೃದುಭಾಷಿಗಳೂ ಆಗಿರುತ್ತಾರೆ.
ಮೂರನೇ ಮನೆಯಲ್ಲಿದ್ದರೆ ಬೇರೆಯವರಿಂದ ತಿರಸ್ಕರಿಸಲ್ಪಡುವವರೂ, ಕೃಪಣರೂ, ಸ್ತ್ರೀಯರಿಂದ ಪರಾಜಿತನೂ, ಹೆಚ್ಚು ಪಾಪ ಕಾರ್ಯ ಮಾಡುವವರೂ ಆಗಿರುತ್ತಾರೆ.ಕುಂಡಲಿಯಲ್ಲಿ ಗುರು 4ನೇಮನೆಯಲ್ಲಿದ್ದರೆ ಆ ಜಾತಕರು ವಾಹನ ಸುಖವನ್ನು ಹೊಂದುವರು, ಬುದ್ಧಿವಂತರೂ, ಭೋಗವಂತರೂ, ಶ್ರೇಷ್ಠರೂ, ಶತ್ರುಗಳನ್ನು ಜಯಿಸುವವರೂ ಆಗಿರುತ್ತಾರೆ.

ಗುರು ಐದನೇ ಮನೆಯಲ್ಲಿದ್ದರೆ ಪುತ್ರ ಸಂತಾನ, ಉತ್ತಮ ಮಿತ್ರರನ್ನು ಹೊಂದುವರು. ಧೈರ‍್ಯವಂತರಾಗಿದ್ದು ಎಲ್ಲಾ ವಿಧದ ಸುಖವನ್ನು ಹೊಂದುತ್ತಾರೆ. ಆರನೇ ಮನೆಯಲ್ಲಿದ್ದರೆ ಕೊಟ್ಟ ಮಾತಿನಂತೆ ನಡೆಯುವವರು, ಯಾವಾಗಲೂ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಅನುಭವಿಸುವರು. ಪತ್ನಿಯಿಂದ ಕೀರ್ತಿಯನ್ನು ಹೊಂದುವರು.
7ನೇ ಮನೆಯಲ್ಲಿದ್ದರೆ ಭಾಗ್ಯವಂತರಾಗಿ ಉತ್ತಮ ಪತ್ನಿ ಅಥವಾ ಪತಿಯನ್ನು ಹೊಂದುತ್ತಾರೆ. ಸಂಸಾರದಲ್ಲಿ ನೆಮ್ಮದಿಯಿಂದ ಇರುವವರೂ, ಸಮಯಕ್ಕೆ ಸರಿಯಾಗಿ ಮಾತಾಡುವವರೂ ಕವಿಯೂ, ಲೇಖಕರೂ ಆಗಿರುತ್ತಾರೆ.ಗುರು 8 ನೇ ಮನೆಯಲ್ಲಿದ್ದರೆ ಆಯಸ್ಸು ಕಡಿಮೆ ಇರುತ್ತದೆ. ಸಾಲಗಾರರೂ, ಆರೋಗ್ಯದಲ್ಲಿ ಆಗಾಗ ತೊಂದರೆ ಅನುಭವಿಸುವವರೂ, ಉತ್ತಮ ಕೆಲಸದಲ್ಲಿ ಇರುವವರೂ ಆಗಿರುತ್ತಾರೆ. 9ನೇ ಮನೆಯಲ್ಲಿದ್ದರೆ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರ ಭಕ್ತಿ ಹೊಂದಿರುವವರೂ, ವಿದ್ಯಾವಂತರೂ, ಮಂತ್ರಿಗಳ ಭಾಗ್ಯ ಹೊಂದಿರುವವರೂ, 10ನೇ ಮನೆಯಲ್ಲಿದ್ದರೆ ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೂ, ಸಕಲ ಉಪಾಯ ಮತ್ತು ಕುಶಲತೆಯನ್ನು ಹೊಂದಿರುವವರೂ, ವಾಹನ, ಧನ, ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡುವವರು ಆಗಿರುತ್ತಾರೆ.11ನೇ ಮನೆಯಲ್ಲಿದ್ದರೆ ಅಧಿಕ ಲಾಭ ಗಳಿಸುವವರು, ಅನೇಕ ಸೇವಕರನ್ನು ಹೊಂದಿರುವವರು, ಜನಗಳಿಂದ ಪ್ರೀತಿ ಹೊಂದುವವರು, ಅಲ್ಪ ಸಂತಾನ ಹೊಂದಿರುವವರು ಆಗಿರುತ್ತಾರೆ. 12ನೇ ಮನೆಯಲ್ಲಿದ್ದರೆ ಆಲಸಿಯೂ, ಜಗಳಗಂಟರೂ, ಜನಗಳಲ್ಲಿ ದ್ವೇಷ ಹೊಂದಿದವರೂ, ಯಾವ ಕೆಲಸಕ್ಕೂ ಹೇಸದವರೂ ಆಗಿರುತ್ತಾರೆ. ನಿಮ್ಮ ಜಾತಕದಲ್ಲಿ ಗುರುಗ್ರಹ ಬಲ ವಿಲ್ಲದಿದ್ದರೇ ಅಥವಾ ನೀಚ ಅಥವಾ ಆಗ್ರಹ ದ ದೋಷ ತಿಳಿದು ಸೂಕ್ತ ವಾದ ಪರಿಹಾರ ಮಾಡಿ ಎಲ್ಲವೂ ಶುಭ ವಾಗುತ್ತದೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ. 9845743807

ಮೇಷ ( 10 ಜನವರಿ 2018)
ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಹರಿದು ಬರುವುದು. ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆಉತ್ತಮವಾಗಿರುವುದಿಲ್ಲ. ನಿಮ್ಮ ನಿರೀಕ್ಷೆಯನ್ನು ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ತಿಳಿಗೊಳ್ಳುವವು. ಗುರು ರಾಘವೇಂದ್ರ ಸ್ವಾಮಿಯ ಅಶೀರ್ವಾದ ಪಡೆಯಿರಿ ಮತ್ತು ಗುರು ಕಾಣಿಕೆ ಸಲ್ಲಿಸಿ.9845743807
ಅದೃಷ್ಟ ಸಂಖ್ಯೆ:1

ಮಿಥುನ
ವಿನಾಕಾರಣ ನಿಮ್ಮ ಅಮೂಲ್ಯ ಸಮಯವನ್ನು ಹಾಳುಗೆಡಹುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಆದರಗಳು ದೊರೆಯುವವು. ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.9845743807 ಅದೃಷ್ಟ ಸಂಖ್ಯೆ:4

ಕಟಕ
ವಾಯುಪ್ರಕೋಪ, ಇಲ್ಲವೆ ಮಿತಿ ಮೀರಿದ ಅಲರ್ಜಿ ತೊಂದರೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇವೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮ ಕಾಪಾಡಿಕೊಳ್ಳಿ. ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಾಧ್ಯವಾದಲ್ಲಿ 18 ಉದ್ದಿನಕಾಳನ್ನು ಜೇಬಿನಲ್ಲಿಟ್ಟುಕೊಳ್ಳಿ.9845743807 ಅದೃಷ್ಟ ಸಂಖ್ಯೆ:6

ಸಿಂಹ
ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಆಂಜನೇಯ ಸ್ವಾಮಿ ಮಂತ್ರ ಜಪಿಸಿ.ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:4

ಕನ್ಯಾ
ನಿಮ್ಮ ಬುದ್ಧಿಮತ್ತೆ ಎಲ್ಲೆಡೆ ಚರ್ಚೆಗೆ ಒಳಪಡುವುದು ಮತ್ತು ಈ ವರ್ಚಸ್ಸಿನ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನೂ ಎತ್ತರಕ್ಕೆ ಏರಲು ಅನುಕೂಲವಾಗುವುದು. ಪರರ ಮಾತುಗಳನ್ನು ಕೇಳಿಸಿಕೊಂಡು ಕ್ರಮ ಕೈಗೊಳ್ಳುವ ವಿಚಾರ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:2

ತುಲಾ
ಸದಾ ನಕಾರಾತ್ಮಕ ಚಿಂತನೆಯಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಮನೆಯ ಇತರ ಸಮಸ್ಯೆಗೂ ಕಾರಣರಾಗುವಿರಿ. ಆದಷ್ಟು ಒಳಿತನ್ನು ಚಿಂತಿಸಿದರೆ ಒಳಿತಾಗುವುದು. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವ ತತ್ವವನ್ನು ತಿಳಿಯಿರಿ. ನಿಮ್ಮ ಬಳಿ ಹಲವು ವಿಚಾರಗಳನ್ನು ತಿಳಿಯಲು ಬರುವ ಜನರು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ನೆನೆದು ಅವರಿಗೆ ಸೂಕ್ತ ಉತ್ತರವನ್ನು ಪರಿಹಾರ ರೂಪದಲ್ಲಿ ನೀಡುವಿರಿ. ಇದರಿಂದ ಜನರು ಸಂತುಷ್ಟರಾಗುವರು.9845743807 ಅದೃಷ್ಟ ಸಂಖ್ಯೆ:8

ವೃಶ್ಚಿಕ
ಏಕಕಾಲದಲ್ಲಿ ಎರಡೂ ಕಡೆಯಿಂದ ಉತ್ತಮ ಅವಕಾಶಗಳು ಬರಲಿದ್ದು ಈ ಪೈಕಿ ಒಂದನ್ನು ಶುದ್ಧ ಮನಸ್ಸಿನಿಂದ ಆಯ್ದುಕೊಳ್ಳಿ. ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಬೆಳೆಸಿದರೆ ಇಚ್ಛಿತ ಗುರಿ ತಲುಪಲು ಆಗುವುದಿಲ್ಲ.ನಿಮ್ಮ ಮುಂದೆ ಹಲವು ದಾರಿಗಳು ಗೋಚರಿಸುತ್ತಿವೆ. ಯಾವ ಮಾರ್ಗದಲ್ಲಿ ಹೋದರೆ ಉತ್ತಮ ಎಂಬ ಗೊಂದಲಕ್ಕೆ ಒಳಗಾಗುವಿರಿ. ಹಾಗಾಗಿ ಒಂದೇ ಮನಸ್ಸಿನಿಂದ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ ಅವರು ಮಾರ್ಗ ತೋರುವರು.9845743807 ಅದೃಷ್ಟ ಸಂಖ್ಯೆ:9

ಧನುಸ್ಸು
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕನ್ನಡಿಯ ಗಂಟಿನಂತೆ ತೋರುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಹಿರಿಯರ ಅಶೀರ್ವಾದ ಆಶೀರ್ವಾದ ಪಡೆದರೆ ಉತ್ತಮ ಫಲ ಕಾಣುವಿರಿ. ನಿಮ್ಮಿಂದ ದೂರವಾಗಿದ್ದ ವ್ಯಕ್ತಿಗಳೇ ಪುನಃ ನಿಮ್ಮ ಬಳಿ ಬಂದು ಸ್ನೇಹದ ಹಸ್ತ ಚಾಚುವರು. ಅವರ ಅಂತರಂಗದ ಭಾವನೆಗಳು ಶುದ್ಧವೆಂದು ಕಂಡುಬಂದಲ್ಲಿ ಅವರ ಸಖ್ಯವನ್ನು ಬೆಳೆಸಿ. ಹಣಕಾಸು ಸ್ಥಿತಿ ಉತ್ತಮವಾಗುವುದು.9845743807 ಅದೃಷ್ಟ ಸಂಖ್ಯೆ:4

ಮಕರ
ಕೆಲವೊಂದು ಮಾತಿನ ವ್ಯವಹಾರಗಳನ್ನು ನೇರಾ ನೇರ ಮುಖಕೊಟ್ಟು ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಬಗ್ಗೆ ಹೆಚ್ಚಿನ ಗೌರವ ಮೂಡುವುದು. ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭವುಂಟಾಗುವುದು. ಪರರು ನಿಮ್ಮ ಮೇಲೆ ಅಪನಂಬಿಕೆ ಇಟ್ಟಿರುವ ವಿಚಾರ ನಿಮಗೆ ತಿಳಿದೇ ಇದೆ. ಆದರೆ ಅವರ ಅಪನಂಬಿಕೆ ದೂರವಾಗುವಂತಹ ಒಂದು ಪ್ರಮುಖ ಘಟನೆ ಜರುಗುವುದು. ಇದರಿಂದ ಒಳಿತಾಗುವುದು.9845743807 ಅದೃಷ್ಟ ಸಂಖ್ಯೆ:2

ಕುಂಭ
'ಮಾತು ಬೆಳ್ಳಿ ಮೌನ ಬಂಗಾರ'. ಜನ್ಮಸ್ಥ ಶನಿಯು ಕೆಲವೊಮ್ಮೆ ಅನೃತಗಳನ್ನು ನುಡಿಸುವನು. ಇದರಿಂದ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಮೌನ ವಹಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರ ಇರಬೇಕು. ಅಗತ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡುವ ಸಂದರ್ಭ ಎದುರಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಇರಲಿ. ಮನದಲ್ಲಿ ದುರ್ಗಾದೇವಿ ಜಪವನ್ನು ಮಾಡಿ. 9845743807 ಅದೃಷ್ಟ ಸಂಖ್ಯೆ:2

ಮೀನ
ಅಲೆದಾಡುವ ಶ್ರಮವೇ ಜಾಸ್ತಿ. ಆದರೂ ನಿರಾಶಾರಾಗದಿರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುವುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನಿಮಗೆ ಅನುಕೂಲವಾಗುವುದು. ಹಲವು ವಿಚಾರಗಳಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುವುದು. ಆದಾಗ್ಯೂ ಕರ್ತವ್ಯದಲ್ಲಿನ ನಿಮ್ಮ ನಿಷ್ಠೆಯು ಸಾಮಾಜಿಕವಾಗಿ ಗೌರವಿಸಲ್ಪಡುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











