Latest Updates
-
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು
1-3-2019- ಶುಕ್ರವಾರದ ದಿನ ಭವಿಷ್ಯ
ಶುಕ್ರವಾರದ ದಿನ ಲಕ್ಷ್ಮಿ ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಆಚರಿಸುವ ಪದ್ದತಿಯಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿಪೂಜೆ ಎಂದು ಆಚರಿಸಲಾಗುತ್ತದೆ.
"ಶ್ರೀ" ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಲಕ್ಷ್ಮಿಯನ್ನು ಅನಂತ ಹೆಸರುಗಳಿಂದ ಕರೆಯುತ್ತಾರೆ. ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ , ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಧನಲಕ್ಷ್ಮಿ.ಲಕ್ಷ್ಮಿಯನ್ನು ಕಮಲದ (ಪದ್ಮ) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ.
ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.ಪದ್ಮಪ್ರಿಯ,ಪದ್ಮ ಮಾಲಾಧಾರ ದೇವಿ, ಪದ್ಮಮುಖಿ, ಪದ್ಮಾಕ್ಷಿ, ಪದ್ಮಹಸ್ತೆ, ಪದ್ಮಸುಂದರಿ, ಭಾರ್ಗವಿ,(ಋಷಿ ಭೃಗುವಿನ ಮಗಳ ಅವತಾರ). ಶುಕ್ರವಾರದ ದೇವಿಯಾದ ಶ್ರೀ ಭಾರ್ಗವಿ ಲಕ್ಷ್ಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ ( 1 ಮಾರ್ಚ್ 2019)
ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಬರುವುದು.ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.9845743807
ಅದೃಷ್ಟ ಸಂಖ್ಯೆ:2

ವೃಷಭ
ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮವಾಗಿಲ್ಲ.ನಿಮ್ಮ ನಿರೀಕ್ಷೆ ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ
ಬಹುತೇಕ ಸಮಸ್ಯೆಗಳು ನಿವಾರಣೆಯಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:1

ಮಿಥುನ
ವಿನಾಕಾರಣ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಆದರಗಳು ದೊರೆಯುವವು. ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.9845743807 ಅದೃಷ್ಟ ಸಂಖ್ಯೆ:4

ಕಟಕ
ವಾಯುಪ್ರಕೋಪ, ಇಲ್ಲವೆ ಮಿತಿ ಮೀರಿದ ಅಲರ್ಜಿ ತೊಂದರೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮ ಕಾಪಾಡಿಕೊಳ್ಳಿ. ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಅಗತ್ಯ. ಸಾಧ್ಯವಾದಲ್ಲಿ 18 ಉದ್ದಿನಕಾಳುಗಳನ್ನು ಜೇಬಿನಲ್ಲಿಟ್ಟುಕೊಳ್ಳಿ.9845743807 ಅದೃಷ್ಟ ಸಂಖ್ಯೆ:6

ಸಿಂಹ
ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ತಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಆಂಜನೇಯ ಸ್ವಾಮಿ ಮಂತ್ರ ಜಪಿಸಿ. ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ
ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರಿಸಿಕೊಂಡು ಹೋಗುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:4

ಕನ್ಯಾ
ನಿಮ್ಮ ಬುದ್ಧಿಮತ್ತೆ ಎಲ್ಲೆಡೆ ಚರ್ಚೆಗೆ ಒಳಪಡುವುದು ಮತ್ತು ಈ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನೂ ಎತ್ತರಕ್ಕೆ ಏರಲು ಅನುಕೂಲವಾಗುವುದು. ಪರರ ಮಾತುಗಳನ್ನು ಕೇಳಿ ನಿರ್ಧಾರ ಕೈಗೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ
ತೆಗೆದುಕೊಳ್ಳಿ. ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. 9845743807 ಅದೃಷ್ಟ ಸಂಖ್ಯೆ:8

ತುಲಾ
ನಿಮ್ಮ ಬಳಿ ಹಲವು ವಿಚಾರಗಳನ್ನು ತಿಳಿಯಲು ಬರುವ ಜನರು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ನೆನೆದು ಅವರಿಗೆ ಸೂಕ್ತ ಉತ್ತರವನ್ನು ಪರಿಹಾರ ರೂಪದಲ್ಲಿ ನೀಡುವಿರಿ. ಇದರಿಂದ ಜನರು ಸಂತುಷ್ಟರಾಗುವರು.ಸದಾ ನಕಾರಾತ್ಮಕ ಚಿಂತನೆಯಿಂದ ನಿಮ್ಮ ಜೀವನವನ್ನು ಹಾಳು ಮಾಡಿ ಕೊಳ್ಳುವುದಲ್ಲದೆ ಮನೆಯ ಇತರ ಸಮಸ್ಯೆಗೂ ಕಾರಣರಾಗುವಿರಿ. ಆದಷ್ಟು ಒಳಿತನ್ನು ಚಿಂತಿಸಿ. ಇದರಿಂದ ಒಳಿತಾಗುವುದು. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವ ತತ್ವವನ್ನು ತಿಳಿಯಿರಿ.9845743807ಅದೃಷ್ಟ ಸಂಖ್ಯೆ:6

ವೃಶ್ಚಿಕ
ದೈವಬಲ ಕಡಿಮೆ ಆಗಿದೆ. ನಿಮ್ಮ ಮುಂದೆ ಹಲವು ದಾರಿಗಳು ಗೋಚರಿಸುತ್ತಿವೆ. ಯಾವ ಮಾರ್ಗದಲ್ಲಿ ಹೋದರೆ ಸೂಕ್ತ ಎಂಬ ಗೊಂದಲ ಉಂಟಾಗುವುದು. ಹಾಗಾಗಿ ಒಂದೇ ಮನಸ್ಸಿನಿಂದ ಕುಲದೇವರನ್ನು ಸ್ಮರಣೆ ಮಾಡಿ. ಉತ್ತಮ ಮಾರ್ಗ ತೋರುವುದು. ಏಕಕಾಲದಲ್ಲಿ ಎರಡೂ ಕಡೆಯಿಂದ ಉತ್ತಮ ಅವಕಾಶಗಳು
ಬರಲಿದ್ದು ಎರಡು ಅವಕಾಶಗಳಲ್ಲಿ ಒಂದನ್ನು ಶುದ್ಧ ಮನಸ್ಸಿನಿಂದ ಆಯ್ದುಕೊಳ್ಳಿ. ಇಲ್ಲವೆ ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಬೆಳೆಸಿದರೆ ಇಚ್ಛಿತ ಗುರಿಯನ್ನು ತಲುಪಲಾರಿರಿ. 9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕನ್ನಡಿಯ ಗಂಟಿನಂತೆ ತೋರುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಹಿರಿಯರ ಅಶೀರ್ವಾದವನ್ನು ಪಡೆಯಿರಿ. ಅವರ ಆಶೀರ್ವಾದದಿಂದ ಉತ್ತಮ ಫಲವನ್ನು ಕಾಣುವಿರಿ. ನಿಮ್ಮಿಂದ ದೂರವಾಗಿದ್ದ ವ್ಯಕ್ತಿಗಳೇ ನಿಮ್ಮ ಬಳಿ ಪುನಃ ಬಂದು ಸ್ನೇಹದ ಹಸ್ತವನ್ನು ಚಾಚುವರು. ಅವರ ಅಂತರಂಗದ ಭಾವನೆಗಳು ಶುದ್ಧವೆಂದು ಕಂಡುಬಂದಲ್ಲಿ ಅವರ ಸಖ್ಯವನ್ನು ಬೆಳೆಸಿ. ಹಣಕಾಸು ಸ್ಥಿತಿ ಉತ್ತಮವಾಗುವುದು. 9845743807 ಅದೃಷ್ಟ ಸಂಖ್ಯೆ:9

ಮಕರ
ಪರರು ನಿಮ್ಮ ಮೇಲೆ ಅಪನಂಬಿಕೆ ಇಟ್ಟಿರುವ ವಿಚಾರ ನಿಮಗೆ ತಿಳಿದೇ ಇದೆ. ಆದರೆ ಅವರ ಅಪನಂಬಿಕೆಯು ದೂರವಾಗುವಂತಹ ಒಂದು ಪ್ರಮುಖ ಘಟನೆಯು ಜರುಗುವುದು. ಇದರಿಂದ ಒಳಿತಾಗುವುದು. ಕೆಲವೊಂದು ವಿಚಾರ ವ್ಯವಹಾರಗಳನ್ನು ನೇರಾನೇರ ಮುಖಕೊಟ್ಟು ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಬಗ್ಗೆ ಹೆಚ್ಚಿನ ಗೌರವ ಮೂಡುವುದು. ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭವುಂಟಾಗುವುದು.9845743807
ಅದೃಷ್ಟ ಸಂಖ್ಯೆ:5

ಕುಂಭ
'ಮಾತು ಬೆಳ್ಳಿ ಮೌನ ಬಂಗಾರ' ಜನ್ಮಸ್ಥ ಶನಿಯು ಕೆಲವೊಮ್ಮೆ ಸುಳ್ಳುಗಳನ್ನು ನುಡಿಸುವನು. ಇದರಿಂದ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಮೌನ ವಹಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ. ಅಗತ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡುವ ಸಂದರ್ಭ ಎದುರಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಇರಲಿ. ಮನದಲ್ಲಿ ದುರ್ಗಾ ದೇವಿ ಜಪ ಮಾಡಿ.9845743807
ಅದೃಷ್ಟ ಸಂಖ್ಯೆ:2

ಮೀನ
ಹಲವು ವಿಚಾರಗಳಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುವುದು. ಆದಾಗ್ಯೂ ಕರ್ತವ್ಯದಲ್ಲಿನ ನಿಮ್ಮ ನಿಷ್ಠೆಯು ಸಾಮಾಜಿಕವಾಗಿ ಗೌರವಿಸಲ್ಪಡುವುದು.
ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.ಅಲೆದಾಡುವ ಶ್ರಮವೇ ಜಾಸ್ತಿ. ಆದರೂ ನಿರಾಶಾರಾಗದಿರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನಿಮಗೆ ಅನುಕೂಲವಾಗುವುದು.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು.ಮದುವೆ,ಸಂತಾನಕೊರತೆ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











