Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ನಿಮ್ಮ ಕೆಟ್ಟ ಚಟಗಳನ್ನು ದೂರ ಮಾಡುವ ಹರಳುಗಳು
ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಆತನಕ ಕೆಲವೊಂದು ದುರಾಭ್ಯಾಸಗಳು ಖಂಡಿತವಾಗಿಯೂ ಆತನ ಹೆಸರು ಕೆಡಿಸುವುದು. ಯಾಕೆಂದರೆ ಕೆಲವೊಂದು ಸಲ ದುರಾಭ್ಯಾಸಗಳಿಂದ ಮನುಷ್ಯನ ತನ್ನ ಗೌರವ, ಅಂತಸ್ತು, ಸಮಾಜದಲ್ಲಿನ ಪ್ರತಿಷ್ಠೆ ಎಲ್ಲವನ್ನು ಕಳೆದುಕೊಳ್ಳುವನು. ಹೀಗಾಗಿ ದುರಾಭ್ಯಾಸಗಳು ಯಾವತ್ತಿಗೂ ಒಳ್ಳೆಯದಲ್ಲ. ಹೀಗಾಗಿ ಮನುಷ್ಯನು ಯಾವಾಗಲೂ ದುರಾಭ್ಯಾಸಗಳಿಂದ ಮುಕ್ತವಾಗಿರಬೇಕು. ಸಮಾಜದಲ್ಲಿ ಒಂದು ಪ್ರತಿಷ್ಠಿತ ಸ್ಥಾನ ಸಿಗಬೇಕಾದರೆ ಆತ ಕೆಟ್ಟ ಅಭ್ಯಾಸಗಳಿಂದ ದೂರು ಇರಬೇಕು.
ಕೆಟ್ಟ ಅಭ್ಯಾಸಗಳು ಬೆಳೆಯಲು ಖಿನ್ನತೆ, ಸಂಬಂಧದಲ್ಲಿನ ಬಿರುಕು ಇತ್ಯಾದಿಗಳು ಕಾರಣವಾಗಿರಬಹುದು. ಇಂತಹ ಸಮಯದಲ್ಲಿ ಗೊಂದಲವು ಮೂಡಿ ಕೆಟ್ಟ ಚಟಗಳಿಗೆ ಬಲಿಯಾಗಬೇಕಾಗುತ್ತದೆ. ಆದರೆ ಕೆಟ್ಟ ಅಭ್ಯಾಸಗಳಿಂದ ದೂರವಾಗಿ, ಸ್ಪೂರ್ತಿ ಹೆಚ್ಚಿಸಿ, ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಕೆಟ್ಟ ಅಭ್ಯಾಸಗಳನ್ನು ಬಿಡಿಸುವ ಸಲುವಾಗಿ ಇಂದು ಹಲವಾರು ಶಿಬಿರಗಳು ನಡೆಯುತ್ತಿರುತ್ತದೆ. ಇದರಲ್ಲಿ ಭಾಗಿಯಾಗಿಯೂ ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಬಹುದು.
ಕೆಟ್ಟ ಅಭ್ಯಾಸಗಳಿಂದ ದೂರವಾದಾಗ ನಿಮಗೆ ಬೇಕಿರುವಂತಹ ಸ್ವಾತಂತ್ರ್ಯವು ಸಿಗುವುದು. ಎಲ್ಲದರಿಂದ ಮುಕ್ತರಾಗಿ ಒಂದು ಸ್ವತಂತ್ರ ಜೀವಿಯಾದ ಬಗ್ಗೆ ನಿಮಗೆ ಭಾವನೆ ಮೂಡುವುದು. ಆದರೆ ದುರಾಭ್ಯಾಸಗಳನ್ನು ದೂರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಅದನ್ನು ಆಹ್ವಾನಿಸುವುದು ಸುಲಭ. ದೂರ ಮಾಡುವುದು ಅಷ್ಟೇ ಕಠಿಣವಾಗಿರುವುದು. ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಲು ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ...

ನೀವು ಎಲ್ಲಿಂದ ಆರಂಭ ಮಾಡಬೇಕು?
ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಲು ಕೆಲವೊಂದು ಪರಿಣಾಮಕಾರಿಯಾದ ತಂತ್ರಗಳು ಇವೆ. ನಾವು ಇಲ್ಲಿ ಹರಳುಗಳ ಬಗ್ಗೆ ಹೇಳುತ್ತಲಿದ್ದೇವೆ ಮತ್ತು ಇವುಗಳು ಕೆಲವೊಂದು ವಿನಾಶಕಾರಿ ಮಾದರಿಯನ್ನು ತುಂಡು ಮಾಡಲು ನೆರವಾಗುವುದು. ಹರಳುಗಳು ತುಂಬಾ ಪುರಾತನವಾದ ಚಿಕಿತ್ಸಕ ಕಲ್ಲುಗಳು. ಪ್ರಕೃತಿದತ್ತವಾಗಿ ಸಿಗುವ ಇವುಗಳಲ್ಲಿ ತಮ್ಮದೇ ಆಗಿರುವಂತಹ ಶಕ್ತಿಯು ಅಡಗಿ ಕೊಂಡಿದೆ. ಹರಳುಗಳು ಬಳಸದೆ ಇರುವ ಶಕ್ತಿ ಅಥವಾ ಶಕ್ತಿಯನ್ನು ಹೆಚ್ಚು ಮಾಡುವುದು. ಇವುಗಳು ನಮ್ಮ ಜೀವನದಲ್ಲಿ ಇರುವಂತಹ ನಕಾರಾತ್ಮಕತೆ ದೂರ ಮಾಡಿಕೊಂಡು ಧನಾತ್ಮಕತೆ ಉಂಟು ಮಾಡುವುದು. ಕೆಲವೊಂದು ಹರಳುಗಳು ತಾನಾಗಿಯೇ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವುದು, ಇದರಿಂದ ನಿಮಗೆ ನಕರಾತ್ಮಕ ಶಕ್ತಿಯು ಅಂಟಿಕೊಳ್ಳದಂತೆ ಅದು ರಕ್ಷಿಸುವುದು. ಹರಳುಗಳು ಪ್ರಕೃತಿಯು ನಮಗೆ ಕೊಟ್ಟಿರುವಂತಹ ಒಂದು ವರದಾನವಾಗಿದೆ ಮತ್ತು ಇದು ನಮ್ಮ ಜೀವನದ ಹಾದಿಯಲ್ಲಿ ಬರುವಂತಹ ಎಲ್ಲಾ ರೀತಿಯ ನಕರಾತ್ಮಕತೆ ದೂರ ಮಾಡುವುದು. ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿಕೊಂಡು ಒಳ್ಳೆಯ ಅಭ್ಯಾಸಗಳನ್ನು ಪಡೆಯಲು ನೆರವಾಗುವಂತಹ ಕೆಲವೊಂದು ಹರಳುಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ...

ಅಮೆಥಿಸ್ಟ್
ಕೆಟ್ಟ ಚಟವನ್ನು ದೂರ ಮಾಡಿಕೊಂಡು ಧನಾತ್ಮಕ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಹರಳಿನಲ್ಲಿ ಅಮೆಥಿಸ್ಟ್ ಪ್ರಮುಖವಾಗಿದೆ. ಅಮೆಥಿಸ್ಟ್ ನ್ನು ಮದ್ಯಪಾನ ವಿರೋಧಿ ಹರಳು ಎಂದು ಕೂಡ ಕರೆಯಲಾಗುತ್ತದೆ. ಪುರಾತನ ರೋಮ್ ನಗರದಲ್ಲಿ ಅಮಲನ್ನು ತಪ್ಪಿಸುವ ಸಲುವಾಗಿ ಈ ಹರಳನ್ನು ವೈನ್ ತಯಾರಿಕೆ ವೇಳೆ ಬಳಸಲಾಗುತ್ತಿತ್ತು. ಈ ಹರಳು ನಿಮ್ಮ ಆತ್ಮಶಕ್ತಿಯನ್ನು ಹೆಚ್ಚಿಸುವುದು ಮತ್ತು ಯಾವುದೇ ಪರಿಸ್ಥಿತಿ ಮತ್ತು ಅಭ್ಯಾಸಕ್ಕೆ ಇಲ್ಲ ಎನ್ನುವುದನ್ನು ಹೇಳುವ ಸಾಮರ್ಥ್ಯವನ್ನು ನೀಡಲಿದೆ. ಇದರಿಂದಾಗಿ ಕೆಟ್ಟ ಚಟಗಳು ದೂರವಾಗುವುದು. ನೀವು ಇಂದು ಒಳ್ಳೆಯ ಭಾವನೆಯಲ್ಲಿದ್ದರೆ ಅದು ನಾಳೆಗೆ ಕೂಡ ನೆರವಾಗುವುದು. ಈ ಹರಳು ನಿಮ್ಮ ಜೀವನದ ಗುರಿ ಮುಟ್ಟಲು ನೆರವಾಗುವುದು ಮತ್ತು ನಿಮ್ಮ ಜೀವನದ ಪಯಣದಲ್ಲಿ ನಿಮಗೆ ನೆರವಾಗುವುದು.

ಸ್ಟ್ರಾರೊಲೈಟ್
ಸ್ಟ್ರಾರೊಲೈಟ್ ಎನ್ನುವುದು ಒಂದು ರೀತಿಯ ಖನಿಜವಾಗಿದ್ದು, ಇದು ಕ್ರಾಸ್(ಕೂಡಿಸು)ನಂತೆ ಕಾಣಿಸುವುದು ಮತ್ತು ಇದರಿಂದಾಗಿ ಈ ಹರಳಿಗೆ "ನ್ಯಾಯೋಚಿತ ಕ್ರಾಸ್" ಎಂದು ಕರೆಯಲಾಗುತ್ತದೆ. ಈ ಹರಳು ಕೆಟ್ಟ ಚಟಗಳಿಂದ ಬಿಡುಗಡೆ ಮಾಡುವಲ್ಲಿ ಅದ್ಭುತವಾಗಿ ಕೆಲಸ ಮಾಡುವುದು. ಇದು ಸಂಬಂಧ, ಪರಿಸ್ಥಿತಿ ಅಥವಾ ಯಾವುದೇ ಅಭ್ಯಾಸವಾಗಿದ್ದರೂ ಅದನ್ನು ದೀರ್ಘ ಕಾಲದ ತನಕ ನಿಮ್ಮೊಂದಿಗೆ ಸಾಗದಂತೆ ಮಾಡಿ ಒಳ್ಳೆಯ ಉದ್ದೇಶ ಪೂರೈಸುವುದು. ಈ ಹರಳು ನಿಮಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿದೆ. ಇದರಿಂದ ನೀವು ಬಿಡಲು ಸಾಧ್ಯವಾಗದೆ ಇರುವಂತಹ ನಕಾರಾತ್ಮಕತೆಯಿಂದ ದೂರವಿರುವಂತೆ ಮಾಡುವುದು.

ಕ್ರೈಸೊಕೊಲ್ಲ
ಕ್ರೈಸೊಕೊಲ್ಲವು ಒಂದು ಸೌಮ್ಯ ಹರಳಾಗಿದ್ದು, ಇದು ನಿಮ್ಮಲ್ಲಿ ಸೌಮ್ಯತೆಯನ್ನು ಉಂಟು ಮಾಡುವುದು. ನೀವು ಕೆಟ್ಟ ಚಟಗಳಿಗೆ ಹೋಗದಂತೆ ಇದು ತುಂಬಾ ಕಠಿಣವಾಗಿ ತಡೆಯುವುದು ಮತ್ತು ನಿಮಗೆ ಕೂಡ ಆ ಶಕ್ತಿಯು ಬರುವುದು. ಈ ಹರಳು ನಿಮ್ಮಲ್ಲಿ ಒಳ್ಳೆಯದನ್ನು ನೋಡುವಮತೆ ಮಾಡುವುದ ಮತ್ತು ನೀವು ಈಗ ಇರುವಂತಹ ಪರಿಸ್ಥಿತಿಗೆ ಮಾಡಿರುವಂತಹ ಕಠಿಣ ಪರಿಶ್ರಮವನ್ನು ಅದು ನೆನಪಿಸುವುದು.ಭೀತಿಯಿಂದ ಕೆಲಸ ಮಾಡುವುದರಿಂದ ಈ ಹರಳು ನಿಮ್ಮನ್ನು ದೂರ ಮಾಡುವುದು. ಭೀತಿಯಿಂದಾಗಿ ಹಲವಾರು ರೀತಿಯ ನಕಾರಾತ್ಮಕತೆಯು ದೇಹವನ್ನು ಸೇರಿಕೊಳ್ಳುವುದು. ಇದರಿಂದಾಗಿ ಮತ್ತಷ್ಟು ಭೀತಿಯು ನಿರ್ಮಾಣ ವಾಗುವುದು. ಈ ಹರಳು ನಿಮ್ಮ ಭೀತಿಯನ್ನು ಸಂಪೂರ್ಣವಾಗಿ ದೂರ ಮಾಡುವುದು ಮತ್ತು ಧೈರ್ಯದಿಂದ ಇರುವಂತಹ ಶಕ್ತಿಯನ್ನು ನಿಮ್ಮಲ್ಲಿ ತುಂಬುವುದು.

ಓನಿಕ್ಸ್
ಓನಿಕ್ಸ್ ತುಂಬಾ ಮೃಧುವಾಗಿರುವ ಹರಳಾಗಿದ್ದು, ಇದು ರಾತ್ರಿ ವೇಳೆ ಕಪ್ಪಾಗಿ ಕಂಡುಬರುವುದು. ಇದು ನಕರಾತ್ಮಕ ಶಕ್ತಿ ದೂರ ಮಾಡುವುದು ಮತ್ತು ಧನಾತ್ಮಕ ಶಕ್ತಿಯು ತುಂಬುವಂತೆ ಮಾಡುವುದು. ಈ ಹರಳು ಅಮೆಥೆಸ್ಟಿಯಂತ ಆತ್ಮಬಲ ಹೆಚ್ಚಿಸುವುದು ಮತ್ತು ನೀವು ದೀರ್ಘಕಾಲಕ್ಕೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದು. ಓನಿಕ್ಸ್ ಧನಾತ್ಮಕ ಶಕ್ತಿಯನ್ನು ನಿಮಗೆ ನೀಡುವ ಪರಿಣಾಮವಾಗಿ ನಕಾರಾತ್ಮಕ ಶಕ್ತಿ ದೂರವಾಗುವುದು. ಇದರಿಂದಾಗಿ ನೀವು ತುಂಬಾ ಉಪಯುಕ್ತ ಮತ್ತು ಲಾಭಕಾರಿ ಚಟುವಟಿಕೆಗಳನ್ನು ಅನುಸರಿಸಿ ಕೊಂಡು ಹೋಗಿ, ಕೆಟ್ಟ ಚಟಗಳನ್ನು ದೂರ ಮಾಡಬಹುದು.

ಶುದ್ಧ ಸ್ಪಟಿಕ
ಶುದ್ಧ ಸ್ಪಟಿಕವು ಒಂದು ಖಾಲಿ ಬಳಪದಂತೆ ಇರುವುದು ಮತ್ತು ಇದು ಹೊಸ ಆರಂಭ ನೀಡುವುದು. ಇದು ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆಯುವುದು ಮತ್ತು ಇದು ತನ್ನ ಸುತ್ತಲಿನ ಯಾವುದೇ ಕಲ್ಲುಗಳ ಶಕ್ತಿಯನ್ನು ವೃದ್ಧಿಸುವುದು. ಶುದ್ಧ ಸ್ಪಟಿಕವನ್ನು ನೀವು ಬೇರೆ ಹರಳುಗಳ ಜತೆಗೆ ಚಿಕಿತ್ಸಕವಾಗಿ ಬಳಸಿಕೊಳ್ಳಬಹುದು. ಇದರಲ್ಲಿರುವಂತಹ ಶಕ್ತಿಯು ಬೇರೆ ಹರಳುಗಳ ಶಕ್ತಿಯನ್ನು ಹೆಚ್ಚಿಸುವುದು.ಈ ಹರಳನ್ನು ಹೆಚ್ಚಿನ ಜನರು ಆಭರಣವನ್ನಾಗಿ ಮಾಡಿಕೊಂಡು ಧರಿಸುವರು ಮತ್ತು ದೇಹದ ಯಾವುದೇ ಭಾಗದಲ್ಲಿ ಇದನ್ನು ಧರಿಸಿದಾಗ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಶುದ್ಧ ಸ್ಪಟಿಕವು ಬೇರೆ ಯಾವುದೇ ಹರಳಿನ ಶಕ್ತಿಯನ್ನು ಹೆಚ್ಚಿಸಲು ಅಥವಾ ನೀವು ಚಿಕಿತ್ಸಕವಾಗಿ ಬಳಸುತ್ತಿರುವ ಹರಳಿನ ಶಕ್ತಿ ವೃದ್ಧಿಸಲು ಇದು ತುಂಬಾ ನೆರವಾಗುವುದು.

ಹುಲಿ ಕಣ್ಣು
ಹುಲಿ ಕಣ್ಣು ಎನ್ನುವ ಹರಳು ಒಂದು ರಕ್ಷಣಾತ್ಮಕ ಕಲ್ಲು ಆಗಿರುವುದು. ಇದು ಒಂದು ರಕ್ಷಕ ದೇವತೆಯಂತೆ ಕೆಲಸ ಮಾಡುವುದು. ಇದು ಪ್ರೇರಣೆ ನೀಡುವುದು ಮತ್ತು ಬಹುಮಾನದ ಕಡೆಗೆ ನಿಮ್ಮ ದೃಷ್ಟಿಯು ನೆಟ್ಟಿರುವಂತೆ ಮಾಡುವುದು. ಈ ಹರಳು ಇದ್ದರೆ ನೀವು ತುಂಬಾ ಸುರಕ್ಷಿತ ಭಾವನೆ ಹೊಂದುವಿರಿ. ಇದು ರಕ್ಷಣಾ ಭಾವನೆಯನ್ನು ವೃದ್ಧಿಸುವುದು ಮತ್ತು ಶಾಂತತೆ ಉಂಟು ಮಾಡುವುದು. ಕೆಟ್ಟ ಚಟಗಳಿಂದ ದೂರವಾಗಲು ಮುಖ್ಯವಾಗಿ ಸಂಯಮ ಹಾಗೂ ಶಾಂತಿಯು ಬೇಕಾಗಿರುವುದು. ನಿಮ್ಮ ರಕ್ಷಣಾತ್ಮಕತೆಯು ಬೇಕು ಎಂದಿರುವಾಗ ನೀವು ಹುಲಿ ಕಣ್ಣು ಹರಳನ್ನು ಇಟ್ಟುಕೊಳ್ಳಿ.

ನೀವು ಹರಳಿನೊಂದಿಗೆ ಕೆಲಸ ಮಾಡಿ ಮತ್ತು ಅದು ನಿಮ್ಮೊಂದಿಗೆ ಕೆಲಸ ಮಾಡುವುದು
ಈ ಎಲ್ಲಾ ರೀತಿಯ ಹರಳುಗಳು ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿ ದೂರ ಮಾಡಿಕೊಂಡು, ಧನಾತ್ಮಕ ಶಕ್ತಿಯು ಬರುವಂತೆ ಮಾಡುವುದು. ಇದೇ ವೇಳೆ ಅದು ನಿಮ್ಮ ಗುರಿಯನ್ನು ಅರ್ಧ ತಲುಪುವಂತೆ ಮಾಡುವುದು. ನೀವು ಭಾಗಿಯಾಗದೆ ಇದ್ದರೆ ಆಗ ಯಾವುದೇ ಹರಳುಗಳು ಪವಾಡ ಉಂಟು ಮಾಡುವುದಿಲ್ಲ. ಇದರಿಂದ ಹರಳುಗಳನ್ನು ಬಳಸಿಕೊಂಡು ನೀವು ಧ್ಯಾನ್ಯ ಹಾಗೂ ಚಿಕಿತ್ಸೆ ಮಾಡಿಕೊಳ್ಳಿ. ಕೆಟ್ಟ ಚಟಗಳನ್ನು ಬಿಡಲು ನೀವು ಅದರಲ್ಲಿ ಭಾಗಿ ಯಾಗಬೇಕು. ಕೇವಲ ಹರಳುಗಳು ಏನು ಮಾಡಲು ಸಾದ್ಯವಿಲ್ಲ. ನೀವು ಮಾಡಲು ಸಾಧ್ಯವಿದೆ.



Click it and Unblock the Notifications











