Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಿಕ್ಸ್ ಪ್ಯಾಕ್ ಆಬ್ಸ್ ಬೇಕೇ? ಹಾಗಾದರೆ ಈ ಆಸ್ಪತ್ರೆಗೆ ಹೋಗಿ…
ಸಿನಿಮಾ ನಟರನ್ನು ನೋಡಿಕೊಂಡು ಅವರಂತೆ ನಮಗೂ ಕೂಡ ಸಿಕ್ಸ್ ಪ್ಯಾಕ್ ಆಬ್ಸ್ ಬರಬೇಕು ಎಂದು ಇಂದಿನ ಪ್ರತಿಯೊಬ್ಬ ಯುವಜನತೆಯ ಕನಸಾಗಿರುವುದು. ಇದರಲ್ಲಿ ಕೆಲವರು ಇದನ್ನು ಸಾಧಿಸಿ ತೋರಿಸುವರು. ತುಂಬಾ ಕಠಿಣ ಪರಿಶ್ರಮ ಹಾಗೂ ವ್ಯಾಯಾಮ, ಆಹಾರ ಕ್ರಮದಿಂದ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಬಹುದು. ಆದರೆ ಇಲ್ಲೊಂದು ಆಸ್ಪತ್ರೆಯು ತನ್ನ ಗ್ರಾಹಕರಿಗೆ ತುಂಬಾ ಸುಲಭದಲ್ಲಿ ಸಿಕ್ಸ್ ಪ್ಯಾಕ್ ಆಬ್ಸ್ ತಯಾರಿಸಿ ಕೊಡುತ್ತಿದೆ. ಇದನ್ನು ನಂಬಲು ತುಂಬಾ ಕಷ್ಟ. ಎಷ್ಟೋ ತಿಂಗಳುಗಳ ಕಾಲ ಜಿಮ್ ನಲ್ಲಿ ಬೆವರಿಳಿಸಿದ ಬಳಿಕ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು ಸಾಧ್ಯವಾಗುವುದು. ಆದರೆ ಆಸ್ಪತ್ರೆಯು ತಕ್ಷಣವೇ ಕೊಡುತ್ತಿದೆ ಎಂದರೆ ಆಗ ಖಂಡಿತವಾಗಿಯೂ ಅಚ್ಚರಿಯಾಗದೆ ಇರದು. ಈ ಬಗ್ಗೆ ನೀವು ತುಂಬಾ ವಿವರವಾಗಿ ತಿಳಿಯಿರಿ.
ಥಾಯ್ಲೆಂಡ್ ನ ಆಸ್ಪತ್ರೆಯಲ್ಲಿ ಈ ರೀತಿ ಸಿಕ್ಸ್ ಪ್ಯಾಕ್ ಆಬ್ಸ್ ನೀಡಲಾಗುತ್ತಿದೆ
ಥಾಯ್ಲೆಂಡ್ ನ ಬ್ಯಾಂಕಾಕ್ ಆಸ್ಪತ್ರೆಯಲ್ಲಿ ಈ ತುಂಬಾ ಅಪರೂಪದ ಸಿಕ್ಸ್ ಪ್ಯಾಕ್ ಆಬ್ಸ್ ನ್ನು ತಯಾರಿಸಿ ಕೊಡಲಾಗುತ್ತಿದೆ. ಪ್ಲಾಸ್ಟಿಕ್ ಸರ್ಜರಿ ಮೂಲಕವಾಗಿ ಇಲ್ಲಿ ಬೇಕಿರುವವರು ಸಿಕ್ಸ್ ಪ್ಯಾಕ್ ಆಬ್ಸ್ ಪಡೆದುಕೊಳ್ಳಬಹುದು.

ವಿಧಾನ
ವ್ಯಕ್ತಿಯ ದೇಹದಲ್ಲಿ ಇರುವಂತಹ ಸ್ವಲ್ಪ ಕೊಬ್ಬನ್ನು ತೆಗೆದು ಅದು ಸಿಕ್ಸ್ ಪ್ಯಾಕ್ ಆಬ್ಸ್ ನಂತೆ ಕಾಣುವಂತೆ ಮಾಡಲಾಗುವುದು. ಈ ಪ್ರಕ್ರಿಯೆಯಲ್ಲಿ ಯಾವುದೇ ರಿತಿಯ ಪ್ಲಾಸ್ಟಿಕ್ ಅಥವಾ ಸಿಲಿಕಾನ್ ನ್ನು ಬಳಸಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲಿಪೊಸಕ್ಷನ್ ಶಸ್ತ್ರಚಿಕಿತ್ಸೆ ಮೂಲಕವಾಗಿ ಈ ಆಬ್ಸ್ ನ್ನು ತಯಾರಿಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದು ತುಂಬಾ ಜನಪ್ರಿಯವಾಗುತ್ತಲಿದೆ
ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಕಳೆದ 3-4 ವರ್ಷಗಳಿಂದ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತೀ ತಿಂಗಳು ಇಲ್ಲಿ ಸುಮಾರು 20-30 ಮಂದಿ ಬಂದು 6 ಪ್ಯಾಕ್ ಆಬ್ಸ್ ಮಾಡಿಕೊಂಡು ಹೋಗುತ್ತಾರಂತೆ ಮತ್ತು ಈಗ ಇದರ ಸಂಖ್ಯೆಯು ಹೆಚ್ಚಾಗುತ್ತಲಿದೆ.
ಇದು ತುಂಬಾ ಹಿಂದಿನ ವಿಧಾನ
ಈ ವಿಧಾನದ ಬಗ್ಗೆ ಮಾಹಿತಿ ನೀಡಿರುವಂತಹ ವೈದ್ಯರು, 1990ರಲ್ಲಿ ಇಂತಹ ಒಂದು ಶಸ್ತ್ರಚಿಕಿತ್ಸೆಯನ್ನು ಟೆಕ್ಸಾಸ್ ನ ಸರ್ಜನ್ ಗಳು ಮಾಡಿದ್ದರು. ತಮ್ಮದೇ ಆಗಿರುವಂತಹ ತಂತ್ರವನ್ನು ಪಾಲಿಸಿಕೊಂಡು ಹೋಗಲಾಗುತ್ತಿದೆ ಎಂದು ವೈದ್ಯರು ತಿಳಿಸಿರುವರು. ಎರಡರಿಂದ ನಾಲ್ಕು ಗಂಟೆಗಳ ಕಾಲ ನಡೆಯುವಂತಹ ಶಸ್ತ್ರಚಿಕಿತ್ಸೆಯು ಅಪಾಯಕಾರಿಯೂ ಅಲ್ಲ ಮತ್ತು ನೋವಿನಿಂದಲೂ ಕೂಡಿಲ್ಲ ಎಂದು ಹೇಳುತ್ತಾರೆ.ಇಂತಹ ಚಿಕಿತ್ಸೆಗೆ ಒಳಗಾಗಿ ನಿಮಗೆ ಕೂಡ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಬೇಕೆಂದು ಆಸೆಯಾಗಿದೆಯಾ? ಹಾಗಾದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications

