Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅಚ್ಚರಿಯ ಕೂಪಕ್ಕೆ ತಳ್ಳುವ ಭಾರತದಲ್ಲಿರುವ ಕೆಲವು ನಿಗೂಢ ಪ್ರದೇಶಗಳು!
ಭಾರತವು ಬಹು ವೈವಿಧ್ಯತೆ ಹೊಂದಿರುವಂತಹ ರಾಷ್ಟ್ರ. ಇಲ್ಲಿ ವಿವಿಧ ಸಂಸ್ಕೃತಿ ಹಾಗೂ ಸಂಪ್ರದಾಯಗಳು ಈಗ ವಿದೇಶಿಗರನ್ನು ಸೆಳೆಯುತ್ತಿದೆ. ಇಲ್ಲಿನ ಹಲವಾರು ರಾಜ್ಯಗಳಲ್ಲಿ ವಿವಿಧ ಭಾಷೆ ಹಾಗೂ ಸಂಸ್ಕೃತಿಯಿದೆ. ಇಲ್ಲಿನ ನಂಬಿಕೆಗಳು ಕೂಡ ಅದೇ ರೀತಿಯಲ್ಲಿದೆ.
ಈ ಲೇಖನದಲ್ಲಿ ನಾವು ಭಾರತದಲ್ಲಿ ಇರುವಂತಹ ಕೆಲವೊಂದು ರಹಸ್ಯಮಯವಾದ ಪ್ರದೇಶಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಂತಹ ಪ್ರದೇಶಗಳು ಇದೆಯಾ ಎನ್ನುವ ಬಗ್ಗೆ ನಿಮಗೂ ಇಲ್ಲಿ ಅಚ್ಚರಿಯಾಗಲಿದೆ ಮತ್ತು ಇದರ ಹಿಂದಿನ ಇತಿಹಾಸವನ್ನು ಕೂಡ ನಿಮಗೆ ತಿಳಿಸಿಕೊಡಲಿದ್ದೇವೆ.

ತಮಿಳುನಾಡಿನ ರಾಮೇಶ್ವರಂ
ತಮಿಳುನಾಡಿನ ರಾಮೇಶ್ವರಂ ದೇವಸ್ಥಾನವು ಹಿಂದೂಗಳಿಗೆ ಅತೀ ಮಹತ್ವದ್ದಾಗಿದೆ. ಈ ಪ್ರದೇಶವು ರಾಮಾಯಣದಲ್ಲೂ ಉಲ್ಲೇಘಿಸಲ್ಪಟ್ಟಿದ್ದು, ಶ್ರೀರಾಮ ದೇವರು ತನ್ನ ವಾನರ ಸೇನೆಯೊಂದಿಗೆ ಇಲ್ಲಿ ಸೇತುವೆ ನಿರ್ಮಾಣ ಮಾಡಿದರು ಎಂದು ನಂಬಲಾಗಿದೆ. ತೆಲುತ್ತಾ ಇರುವಂತಹ ಈ ಸೇತುವೆಯು ಶ್ರೀಲಂಕಾಕ್ಕೆ ಆಗಿನ ಕಾಲದಲ್ಲಿ ಸಂಪರ್ಕ ಸಾಧಿಸಿತ್ತು. ಈ ಕಲ್ಲುಗಳು ರಾಮಾಯಣದಲ್ಲಿ ಹೇಳಿರುವಂತೆ ಈಗಲೂ ಅಲ್ಲಿ ಇದೆ.

ಪಶ್ವಿಮ ಬಂಗಾಳದ ಜವುಗು ಭೂಮಿ
ಪಶ್ಚಿಮ ಬಂಗಾಳದಲ್ಲಿನ ಈ ಜವುಗು ಪ್ರದೇಶವು ತುಂಬಾ ಪ್ರದೇಶವು ಕತ್ತಲಾಗುತ್ತಿದ್ದಂತೆ ತುಂಬಾ ಹೊಗೆಯಿಂದ ಕೂಡಿರುತ್ತದೆ ಮತ್ತು ಇಲ್ಲಿನ ಮೀನುಗಾರರಿಗೆ ಈ ಪ್ರದೇಶವು ಈಗಲೂ ತುಂಬಾ ವಿಚಿತ್ರವಾಗಿದೆ. ರಾತ್ರಿ ವೇಳೆ ಇಲ್ಲಿ ಕೆಲವು ತುಂಬಾ ಅಸಾಮಾನ್ಯವಾಗಿರುವಂತಹ ಬೆಳಕು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ತುಂಬಾ ಬೇರೆ ಬೇರೆ ಬಣ್ಣದ ಬೆಳಕುಗಳು ಕಾಣಿಸಿಕೊಳ್ಳುತ್ತದೆ. ಈ ಬೆಳಕಿನಿಂದಾಗಿ ಮೀನುಗಾರರಿಗೆ ತುಂಬಾ ಗೊಂದಲವಾಗುತ್ತದೆ ಮತ್ತು ಕೆಲವು ಸಲ ಅವರು ತಮ್ಮ ಪ್ರಾಣ ಕಳೆದುಕೊಂಡಿರುವುದು ಇದೆ.

ವೃಂದಾವನ ತೋಟ
ಹಿಂದೂ ಪುರಾಣದ ಪ್ರಕಾರ ಈ ಜಾಗದಲ್ಲಿ ಶ್ರೀಕೃಷ್ಣ ದೇವರು ಇಲ್ಲಿ 16000 ಮಹಿಳೆಯರನ್ನು ಮದುವೆಯಾಗಿರುವ ಎಂದು ಹೇಳಲಾಗುತ್ತದೆ. ಇಲ್ಲಿ ಹಲವಾರು ತೋಟಗಳು ಮತ್ತು ಮಂದಿರಗಳು ಇವೆ. ಈ ತೋಟದಲ್ಲಿ ಇರುವಂತಹ ಮರಗಳು ತಮ್ಮನ್ನು ತಾವು ಗೋಪಿಕೆಯರು ಅಥವಾ ಮಹಿಳೆಯರಾಗಿ ಪರಿವರ್ತನೆಯಾಗಿ ಗೋವುಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ನಂಬಲಾಗಿದೆ. ಕತ್ತಲಾದ ಬಳಿಕ ಈ ತೋಟಕ್ಕೆ ಯಾವ ಪ್ರಾಣಿ ಅಥವಾ ಮನುಷ್ಯರು ತೆರಳುವಂತಿಲ್ಲ ಎಂದು ಇಲ್ಲಿನ ಜನರು ಹೇಳುವರು. ಇದನ್ನು ಮೀರಿ ಪ್ರವೇಶ ಮಾಡಿದವರು ಹಲವಾರು ರೀತಿಯ ವಿಚಿತ್ರ ಸಮಸ್ಯೆಗೆ ಗುರಿಯಾಗಿರುವರು.

ಕೆಂಪು ಪ್ರದೇಶ
ಇಡುಕ್ಕಿ ಅಥವಾ ಕೆಂಪು ಪ್ರದೇಶವೆಂದು ಕರೆಯಲ್ಪಡುವಂತಹ ಈ ಪ್ರದೇಶವು ಭಾರತದ ಅತೀ ರಹಸ್ಯಮಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಜನರು ಕೆಂಪು ಮಳೆ ಬೀಳುವುದನ್ನು ನೋಡಿದ್ದಾರೆ ಮತ್ತು 2001ರ ಜುಲೈ 25ರಂದು ಇಲ್ಲಿ ಕೆಲವೊಂದು ವಿಚಿತ್ರ ವಿದ್ಯಮಾನಗಳು ನಡೆದಿವೆ. ಮಳೆಯು ಬಟ್ಟೆ ಹಾಗೂ ಕಟ್ಟಡಗಳ ಬಣ್ಣವನ್ನು ಕೆಂಪು ಮಾಡಿದೆ. ಸ್ಥಳೀಯರು ಈ ರಕ್ತ ಮಳೆಯನ್ನು ಸಂಗ್ರಹ ಮಾಡಿಕೊಂಡ ವೇಳೆ ಮೇಲೆ ನೀರು ನಿಂತಿದ್ದರೆ, ಕೆಳಗಿನ ಭಾಗದಲ್ಲಿ ಕೆಂಪು ಅಂಶವು ನಿಂತುಕೊಂಡಿತ್ತು. ಇಲ್ಲಿ ಹಲವಾರು ಅಧ್ಯಯನಗಳನ್ನು ನಡೆಸಿದ ಬಳಿಕ ವಿಜ್ಞಾನಿಗಳು ಈ ಕೆಂಪು ಅಂಶವನ್ನು ಈ ಪ್ರದೇಶದಲ್ಲಿ ಬೆಳೆಯುತ್ತಿರುವಂತಹ ಪಾಚಿಯು ಹೋಗಿ ಗಾಳಿಯಲ್ಲಿ ನಿಂತಿರುವುದಾಗಿ ಹೇಳಿರುವರು.



Click it and Unblock the Notifications











