Latest Updates
-
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ
ಈ ಐದು ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಂತೆ! ಯಾಕೆ ಗೊತ್ತೇ?
ಕೆಲವರು ನಮಗೆ ಎಷ್ಟೇ ಹತ್ತಿರವಾಗಿದ್ದರೂ ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣವಾಗಿರುವುದು. ನಾವು ಎಷ್ಟೇ ಪ್ರಯತ್ನಪಟ್ಟರೂ ಅವರು ಒಂದು ಸಲ ಇದ್ದಂತೆ ಮತ್ತೊಮ್ಮೆ ಇರಲ್ಲ. ಪ್ರೀತಿಸುವವರ ಮಧ್ಯೆ ಜಗಳವಾಗಿರುವುದು ಇದೆ. ಇದಕ್ಕೆಲ್ಲಾ ಕಾರಣವೇನು ಎಂದು ಅನಿಸುವುದು ಇದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾಗಿರುವಂತಹ ಅಂಶವೆಂದರೆ, ಈ ಎಲ್ಲಾ ವರ್ತನೆಗಳಿಗೆ ಮುಖ್ಯವಾಗಿ ರಾಶಿ ಚಕ್ರಗಳು ಕಾರಣವಾಗಿದೆ.
ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆ, ಗುಣ, ಸ್ವಭಾವ ಇದೆಲ್ಲವೂ ರಾಶಿ ಚಕ್ರಗಳ ಮೇಲೆ ಅವಲಂಬಿತವಾಗಿದೆ. ಗ್ರಹಗತಿಗಳು ಬದಲಾಗುತ್ತಾ ಇರುವಂತಹ ಆಯಾಯ ರಾಶಿಗೆ ಅನುಗುಣವಾಗಿ ಅವರ ವರ್ತನೆ, ನಡವಳಿಕೆಗಳಲ್ಲಿ ಬದಲಾವಣೆಗಳು ಕಂಡುಬರುವುದು. ಕೆಲವು ರಾಶಿಯವರು ತುಂಬಾ ಶಾಂತ ಹಾಗೂ ವಿನಯದಿಂದ ಇದ್ದರೆ, ಇನ್ನು ಕೆಲವು ರಾಶಿಗಳಲ್ಲಿ ಮುಂಗೋಪ, ಸಿಡುಕುತನ ಇರುವುದು. ರಾಶಿ ಚಕ್ರಗಳಲ್ಲಿ ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗಿರುವ ಐದು ರಾಶಿಗಳು ಯಾವುದು ಎಂದು ಈ ಲೇಖನ ಮೂಲಕ ನಾವು ತಿಳಿದುಕೊಳ್ಳುವ....

ಕರ್ಕಾಟಕ
ಕರ್ಕಾಟ ರಾಶಿಯವರು ಯಾವುದೇ ಹಿಂದಿನ ಘಟನೆಯನ್ನು ಮರು ನೆನಪು ಮಾಡಿಕೊಂಡು ಮತ್ತೆ ತಮ್ಮ ಕೋಪ ವ್ಯಕ್ತಪಡಿಸುವಂತಹ ಸಾಧ್ಯತೆಯು ಇದೆ. ಇಂದು ಬೆಳಗ್ಗೆ ನೀವು ಅವರ ಮುಖವು ಸಂತೋಷದಿಂದ ಕಾಂತಿಯುತವಾಗಿ ಹೊಳೆಯುವುದನ್ನು ನೋಡಿಬಹುದು. ಅದೇ ಒಂದು ಗಂಟೆ ಬಳಿಕ ನೀವು ಅವರ ಮುಖ ನೋಡಿದರೆ ಹಾಗೆ ಇರದು. ಯಾಕೆಂದರೆ ಅವರ ಮನಸ್ಥಿತಿ ಬದಲಾಗುತ್ತಿರುವುದು. ನೀವು ಅವರಲ್ಲಿ ಇದರ ಬಗ್ಗೆ ಕಾರಣ ಕೇಳಿದರೂ ಅವರು ಅದನ್ನು ವ್ಯಕ್ತಪಡಿಸಲು ವಿಫಲರಾಗುವರು. ಇದರಿಂದ ನೀವು ತುಂಬಾ ಗೊಂದಲದಲ್ಲಿ ಸಿಲುಕುವಿರಿ.

ಮಿಥುನ
ಮೌನವಾಗಿ ತುಂಬಾ ಗಮನಿಸುವ ಗುಣ ಹೊಂದಿರುವ ಮಿಥುನ ರಾಶಿಯವರು ಅನಗತ್ಯವಾಗಿರುವ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವರು. ಇದರಿಂದ ಅವರು ಬೇರೆಯವರನ್ನು ಗೊಂದಲಕ್ಕೀಡು ಮಾಡುವುದು ಮಾತ್ರವಲ್ಲದೆ, ತಾವು ಗೊಂದಲಕ್ಕೀಡಾಗುವರು. ಸಂತೋಷವಾಗಿರುವ ಮತ್ತು ಸಂತೋಷವಾಗಿಲ್ಲದ ಮನಸ್ಥಿತಿಯು ತುಂಬಾ ಭಿನ್ನವಾಗಿರುವುದು. ಆದರೆ ಇದು ಮಿಥುನ ರಾಶಿಯವರಿಗೆ ಹೊಂದಿಕೊಳ್ಳಲ್ಲ. ಮಿಥುನ ರಾಶಿಯವರಿಗೆ ಒಂದೇ ವಿಚಾರವು ಸಂತೋಷ ನೀಡಬಹುದು ಮತ್ತು ಅದೇ ವಿಚಾರವು ಕೆಲವು ಸಮಯದ ಬಳಿಕ ಬೇಸರ ಉಂಟು ಮಾಡಬಹುದು. ಇವರು ತಮ್ಮನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗುವರು. ಆದರೆ ಯಾವಾಗಲೂ ಅಲ್ಲ. ಕೆಲವೊಂದು ಸಲ ಇವರು ಒಂದು ಅಭಿಪ್ರಾಯದಿಂದ ಮತ್ತೊಂದಕ್ಕೆ ಬೇಗನೆ ಜಿಗಿಯಬಲ್ಲರು. ಇವರು ಪ್ರತಿಯೊಬ್ಬರೊಂದಿಗೆ ಮತ್ತು ಯಾರೊಂದಿಗೂ ಮಾತನಾಡಲು ಬಯಸುವರು. ಇದರಿಂದ ಜನರು ಗೊಂದಲಕ್ಕೆ ಒಳಗಾಗುವರು.

ವೃಶ್ಚಿಕ
ವೃಶ್ಚಿಕ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ ಯಾಕೆಂದರೆ ಇವರು ತಮ್ಮ ಮನಸ್ಥಿತಿಗೆ ಅನುಗುಣವಾಗಿ ಯಾವತ್ತೂ ವರ್ತಿಸಲ್ಲ ಇವರು ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸವರು, ಇದು ನಿಜವಾಗಿಯೂ ಕೆಟ್ಟ ಪರಿಸ್ಥಿತಿಗೆ ತಿರುಗುವ ತನಕ ಮಾತ್ರ. ಸಾಮಾನ್ಯವಾಗಿ ಈ ರಾಶಿಯವರು ತಮ್ಮ ಭಾವನೆಗಳನ್ನು ಅದುಮಿಟ್ಟುಕೊಳ್ಳುವರು. ನೀವು ಹೇಳುವಂತಹ ಒಳ್ಳೆಯ ಜೋಕ್ ಗೆ ಇವರು ನಗಲ್ಲ ಅಥವಾ ಅವರಿಗೆ ಮುಜುಗರವಾಗಬೇಕೆಂದು ನೀವು ಏನಾದರೂ ಹೇಳಿದರೂ ಅದನ್ನು ಅವರು ತುಂಬಾ ಲಘುವಾಗಿ ಪರಿಗಣಿಸುವರು. ಇದರಿಂದ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನೀವು ಅವರನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ತಿಳಿದ ಕೂಡಲೇ ನಿಮಗೆ ಅವರು ದೊಡ್ಡ ರಹಸ್ಯವಾಗಿ ಉಳಿಯಬಹುದು.

ಕುಂಭ
ಕುಂಭ ರಾಶಿಯವರು ತಮ್ಮ ಹೃದಯದ ಮಾತನ್ನು ಹಾಗೆ ಪ್ರತಿಯೊಬ್ಬರ ಮುಂದೆ ಹೇಳಿಕೊಳ್ಳುವುದಿಲ್ಲ. ವೃಶ್ಚಿಕ ರಾಶಿಯವರು ಯಾರೊಂದಿಗೆ ತಮ್ಮ ಮನದ ಮಾತನ್ನು ಹೇಳಿಕೊಳ್ಳಬೇಕು ಎನ್ನುವ ಬಗ್ಗೆ ತುಂಬಾ ಮೂಡಿ ಆಗಿರುವರು. ಅದೇ ಕುಂಭ ರಾಶಿಯವರು ಈ ವಿಚಾರದಲ್ಲಿ ತುಂಬಾ ಜಿಪುಣತನ ಪ್ರದರ್ಶಿಸುವರು. ಇವರು ತುಂಬಾ ಸುರಕ್ಷಿತವಾಗಿ ಕಾಣಿಸುವಂತಹ ವ್ಯಕ್ತಿಯೊಂದಿಗೆ ತಮ್ಮ ಮನದ ಮಾತು ಹೇಳುವರು. ತಮ್ಮ ಹೃದಯದ ಮಾತನ್ನು ಹೇಳಬೇಕೆಂದು ಇವರಿಗೆ ಕೆಲವೊಂದು ಸಲ ಅನಿಸುವುದೇ ಇಲ್ಲ. ತಮ್ಮನ್ನು ಅರ್ಥ ಮಾಡಿಕೊಳ್ಳಲು ಜನರು ಮತ್ತೊಂದು ಮಟ್ಟಕ್ಕೆ ಏರಬೇಕು ಎಂದು ಅವರು ನಂಬಿರುವರು.

ಮೀನ
ಇವರು ತಮ್ಮ ಮನದ ಮಾತನ್ನು ಬೇರೆಯವರಿಗೆ ಹೇಳುವುದು ತುಂಬಾ ಕಡಿಮೆ. ಮೀನ ರಾಶಿಯವರು ಎಲ್ಲರೊಂದಿಗೆ ಸ್ನೇಹ ಬೆಳೆಸಬಹುದು ಮತ್ತು ಇದರಲ್ಲಿ ಕೆಲವರು ತುಂಬಾ ಆಪ್ತ ಸ್ನೇಹಿತರು ಆಗಿರಬಹುದು. ಆದರೆ ಇವರು ಶಬ್ದಗಳಲ್ಲಿ ತಮ್ಮ ಮನದ ಮಾತು ಹೇಳಲ್ಲ. ಬೇರೆ ವಿಧಾನದಿಂದ ಇದನ್ನು ವ್ಯಕ್ತಪಡಿಸುವಂತಹ ಕಲೆಯು ಇವರಿಗೆ ಇದೆ. ಇವರು ತುಂಬಾ ಮೂಡಿ ವ್ಯಕ್ತಿ. ಇವರ ಮನಸ್ಥಿತಿ ಎನ್ನುವುದು ಬೇರೆ ಯಾರೋ ಅಥವಾ ಬೇರೆ ಯಾವುದೋ ವಿಚಾರದಿಂದಾಗಿ ಬದಲಾಗುವುದಿಲ್ಲ. ಆದರೆ ಇವರ ಕಾರಣದಿಂದಾಗಿಯೇ ಇದು ಬದಲಾಗುವುದು. ಅದಾಗ್ಯೂ, ಕೆಲವು ಜನರು ಇಂತಹ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಮತ್ತು ಇದರಿಂದ ಮೀನ ರಾಶಿಯವರಿಗೆ ತುಂಬಾ ಬೇಸರವಾಗಬಹುದು.



Click it and Unblock the Notifications











