Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೀಗೂ ಉಂಟೇ? ಈ ಮಹಿಳೆಗೆ ಕೇವಲ ಪುರುಷರ ಧ್ವನಿ ಮಾತ್ರ ಕೇಳಿಸುವುದೇ ಇಲ್ಲವಂತೆ!
ಕಿವಿ ಕೇಳದೆ ಇರುವಂತಹ ಸಮಸ್ಯೆಯು ಕೆಲವೊಂದು ಕಾರಣಗಳಿಂದಾಗಿ ಬರಬಹುದು. ಕಿವಿ ಕೇಳದೆ ಇರುವಂತಹ ಜನರಿಗೆ ಯಾವುದೇ ರೀತಿಯ ಶಬ್ಧ ಕೂಡ ಕೇಳದು. ಆದರೆ ಜೋರಾಗಿ ಮಾತನಾಡಿದರೆ ಕೇಳಿಸುವವರು ಇದ್ದಾರೆ. ಇನ್ನು ಸಂಗಾತಿಯ ಕಿರಿಕಿರಿಯನ್ನು ಕೇಳಲಾರದೆ ಕೆಲವು ಮಹಿಳೆಯರು ಇವರ ಮಾತನ್ನು ಕೇಳದಂತೆ ನನ್ನನ್ನು ಕಿವುಡು ಮಾಡಿಬಿಡು ದೇವರೇ ಎಂದು ತಮಾಷೆಯಾಗಿ ಹೇಳುವುದು ಇದೆ. ಇದು ನಿಜವಾದರೆ ಹೇಗಾಗಬಹುದು ಎಂದು ನೀವು ಊಹಿಸಿ.

ಇಲ್ಲಿ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಇಂತಹ ನೈಜ ಘಟನೆ ಬಗ್ಗೆ. ಬೆಳಗ್ಗೆ ಎದ್ದ ವೇಳೆ ಮಹಿಳೆಗೆ ತನ್ನ ಸಂಗಾತಿ ಮಾತನಾಡುತ್ತಿರುವುದು ಕೇಳಿಸುತ್ತಿರಲೇ ಇಲ್ಲ. ಇದು ನಮಗೆ ತುಂಬಾ ತಮಾಷೆ ಎಂದು ಅನಿಸಬಹುದು. ಆದರೆ ಇದು ನಿಜವಾಗಿ ನಡೆದಿರುವಂತಹ ಘಟನೆ. ಆ ಮಹಿಳೆಗೆ ಪುರುಷರ ಸ್ವರ ಮಾತ್ರ ಕೇಳುತ್ತಾ ಇರಲಿಲ್ಲ. ಇದು ತುಂಬಾ ಕುತೂಹಲಕಾರಿ ವಿಚಾರ. ಪುರುಷರ ಸ್ವರ ಕೇಳುವಾಗ ಆಕೆಯ ಕಿವಿಯು ಕಿವುಡಾಗುವುದು ಎಂದು ಮಹಿಳೆ ಹೇಳಿದ್ದಾರೆ. ಈ ವಿಚಿತ್ರ ಘಟನೆ ಬಗ್ಗೆ ನೀವು ಇನ್ನು ಹೆಚ್ಚಿಗೆ ಓದುತ್ತಾ ಸಾಗಿ....

ಕೆಲವು ದಿನಗಳಿಂದ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು
ವರದಿಗಳು ಹೇಳುವ ಪ್ರಕಾರ, ಮಹಿಳೆ ಅಸ್ವಸ್ಥತೆಗೆ ಒಳಗಾದರು ಮತ್ತು ಆಕೆಗೆ ಕಳೆದ ಕೆಲವು ದಿನಗಳಿಂದ ತನ್ನ ಕಿವಿಯಲ್ಲಿ ಏನೋ ಒಂದು ರೀತಿಯ ಶಬ್ದ ಬರುತ್ತಿದೆ ಎಂದು ಅನಿಸುತ್ತಿತ್ತು. ಇದರ ಬಳಿಕ ಆಕೆಗೆ ಈ ಸಮಸ್ಯೆ ಕಾಡಿದೆ. ಆಕೆ ತೀರ ಒತ್ತಡಕ್ಕೆ ಒಳಗಾಗಿದ್ದರು ಮತ್ತು ತಡರಾತ್ರಿವರೆಗೆ ಕೆಲಸ ಮಾಡುತ್ತಲಿದ್ದರು ಹಾಗೂ ಸರಿಯಾಗಿ ನಿದ್ರೆ ಕೂಡ ಮಾಡುತ್ತಲಿರಲಿಲ್ಲ. ಒತ್ತಡದಿಂದಾಗಿ ಮುಂದಿನ ದಿನಗಳಲ್ಲಿ ತನ್ನ ದೇಹದ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂದು ಆಕೆಗೆ ಅನಿಸಿರಲೇ ಇಲ್ಲ.

ಆಕೆ ಬೆಳಗ್ಗೆ ನಿದ್ರೆಯಿಂದ ಎದ್ದಾಗ ಈ ಸ್ಥಿತಿ
ತುಂಬಾ ಒತ್ತಡಕ್ಕೆ ಒಳಗಾಗಿದ್ದ ಕಾರಣ ಮತ್ತು ನಿದ್ರೆ ಕೂಡ ಸರಿಯಾಗಿ ಮಾಡದೆ ಇರುವ ಕಾರಣದಿಂದಾಗಿ ಆಕೆಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗಿತ್ತು ಮತ್ತು ಆಕೆಗೆ ತುಂಬಾ ಅಪರೂಪದ ಕಿವಿ ಕೇಳದ ಸಮಸ್ಯೆಯು ಕಾಡಿತ್ತು. ಆಕೆ ಬೆಳಗ್ಗೆ ಎದ್ದಳು ಮತ್ತು ತನ್ನ ಬಾಯ್ ಫ್ರೆಂಡ್ ಏನು ಮಾತನಾಡುತ್ತಿದ್ದಾನೆ ಎಂದು ಆಕೆಗೆ ಕೇಳಿಸುತ್ತಾ ಇರಲಿಲ್ಲ.

ವೈದ್ಯರಿಗೆ ಕೂಡ ಗೊಂದಲವಾಗಿತ್ತು
ಚೆನ್ ಇಎನ್ ಟಿ ತಜ್ಞರನ್ನು ಭೇಟಿಯಾದ ವೇಳೆ ಆಕೆಗೆ ವೈದ್ಯರ ಮಾತುಗಳು ಸರಿಯಾಗಿ ಕೇಳುತ್ತಲಿತ್ತು. ಆದರೆ ಪುರುಷ ರೋಗಿಗಳು ವೈದ್ಯರ ಕೋಣೆಗೆ ಪ್ರವೇಶ ಮಾಡಿದ ವೇಳೆ ಆಕೆಗೆ ಅವರು ಏನು ಮಾತನಾಡುತ್ತಿದ್ದರು ಎಂದು ಕೇಳುತ್ತಿರಲಿಲ್ಲ.

ಆಕೆಯ ಸ್ಥಿತಿ
ಮಹಿಳೆಯ ಪರಿಸ್ಥಿತಿ ಬಗ್ಗೆ ತುಂಬಾ ಗೊಂದಲಕ್ಕೆ ಒಳಗಾದ ವೈದ್ಯರು, ಆಕೆ `ರಿವರ್ಸ್ ಸ್ಲೊಪೆ ಹಿಯರಿಂಗ್ ಲಾಸ್' ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಂಡುಕೊಂಡರು. ಈ ಸಮಸ್ಯೆ ಇದ್ದರೆ ಆಕೆ ಕೇವಲ ಹೆಚ್ಚು ಆವರ್ತನದ ಶಬ್ದಗಳನ್ನು ಮಾತ್ರ ಕೇಳಬಲ್ಲರು. ಈ ಪರಿಸ್ಥಿತಿಯು 13 ಸಾವಿರದಲ್ಲಿ ಒಬ್ಬರಿಗೆ ಮಾತ್ರ ಬರುವುದು ಮತ್ತು ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
