ಪತಿ ತಂದಿಟ್ಟಿದ್ದ ಅವೇಂಜರ್ ಆಟಿಕೆ ಮಾರಲು ಮುಂದಾದ ಪತ್ನಿ

ಜಗತ್ತಿನಲ್ಲಿ ವಿಭಿನ್ನ ಹವ್ಯಾಸಗಳನ್ನು ಹೊಂದಿರುವ ಜನರನ್ನು ನಾವು ಕಾಣುತ್ತೇವೆ. ಒಬ್ಬರ ಮನೋಭಾವ ಹಾಗೂ ನಡವಳಿಕೆಯು ಮತ್ತೊಬ್ಬರಿಗಿಂತ ಭಿನ್ನವಾಗಿ ಇರುವಂತೆ, ಅವರ ಹವ್ಯಾಸಗಳು ಕೂಡ ಭಿನ್ನವಾಗಿರುತ್ತದೆ. ಸಿನಿಮಾದಲ್ಲಿ ಬರುವ ಸಾಹಸವನ್ನು ನೋಡಲು ಕೆಲವರಿಗೆ ತುಂಬಾ ಇಷ್ಟವಿರುತ್ತದೆ. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ಬರುವಂತಹ ಸಾಹಸ ದೃಶ್ಯಗಳು ಮೈನವಿರೇಳಿಸುವುದು. ಕೆಲವು ಸಿನಿಮಾಗಳಲ್ಲಿ ಬರುವಂತಹ ಪಾತ್ರಗಳು ನಮಗೆ ಮೆಚ್ಚುಗೆ ಆಗುವುದು.

ಹಿಂದೆ ಸೂಪರ್ ಮ್ಯಾನ್, ಬ್ಯಾಟ್ ಮೆನ್ ಹೀಗೆ ಹಲವಾರು ಸರಣಿ ಸಿನಿಮಾಗಳನ್ನು ನೋಡಿದ್ದೇವೆ. ಈಗ ಸಿನಿಮಾ ಮಂದಿರಗಳಲ್ಲಿ ಸದ್ದು ಮಾಡುತ್ತಲಿರುವ ಬಾಲಿವುಡ್ ಸಿನಿಮಾ ಅವೇಂಜರ್ ದ ಎಂಡ್ ಗೇಮ್. ಈ ಸಿನಿಮಾವು ಹಲವು ಸರಣಿಗಳಲ್ಲಿ ಬಂದಿದೆ. ಇದು ಸಂಪೂರ್ಣವಾಗಿ ಸಾಹಸಮಯ ಸಿನಿಮಾ ಮತ್ತು ಇದರಲ್ಲಿ ಬರುವಂತಹ ಪಾತ್ರಗಳು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಿಗೂ ಇಷ್ಟವಾಗಿರುವುದು. ಅದೇ ರೀತಿ ಈ ಸಿನಿಮಾದ ಕೆಲವು ಪಾತ್ರಗಳ ಆಟಿಕೆಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೇ ರೀತಿಯ ಆಟಿಕೆಯು 40ರ ಹರೆಯದ ವ್ಯಕ್ತಿಯೊಬ್ಬರಿಗೆ ತುಂಬಾ ಇಷ್ಟ. ಅವರು ಇಂತಹ ಆಟಿಕೆ ಸಂಗ್ರಹಿಸಿಕೊಂಡು ಇಟ್ಟಿದ್ದಾರೆ ಮತ್ತು ಈಗಲೂ ಅದರೊಂದಿಗೆ ಆಡುತ್ತಲಿರುತ್ತಾರೆ. ಆದರೆ ಆ ವ್ಯಕ್ತಿಯ ಪತ್ನಿಯು ಈ ಆಟಿಕೆಗಳನ್ನು ಮಾರಲು ಪ್ರಯತ್ನಿಸಿದ ವೇಳೆ ಏನಾಯಿತು ಎಂದು ನೀವು ಮುಂದೆ ಓದುತ್ತಾ ತಿಳಿಯಲೇಬೇಕು.

ಸಿನಿಮಾ ವೀಕ್ಷಿಸಿದ ಬಳಿಕ ಆಟಿಕೆ ಖರೀದಿ ಮಾಡುತ್ತಿದ್ದ

ಸಿನಿಮಾ ವೀಕ್ಷಿಸಿದ ಬಳಿಕ ಆಟಿಕೆ ಖರೀದಿ ಮಾಡುತ್ತಿದ್ದ

ಹಾಂಕಾಂಗ್ ನ 40ರ ಹರೆಯದ ವ್ಯಕ್ತಿಯು ಅವೇಂಜರ್ ಎಂಡ್ ಗೇಮ್ ಸಿನಿಮಾ ವೀಕ್ಷಿಸಿದ ಬಳಿಕ ಐರನ್ ಮ್ಯಾನ್ ಆಟಿಕೆ ಖರೀದಿ ಮಾಡಲು ನಿರ್ಧರಿಸಿದ್ದ.

ಆತನ ಹವ್ಯಾಸದಿಂದ ಪತ್ನಿಗೆ ಬೇಸರವಾಗಿತ್ತು

ಆತನ ಹವ್ಯಾಸದಿಂದ ಪತ್ನಿಗೆ ಬೇಸರವಾಗಿತ್ತು

ಅವೇಂಜರ್ ಆಟಿಕೆ ಖರೀದಿ ಮಾಡುವುದು ಆತನ ಪತ್ನಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಇದರಿಂದ ಆಕೆ ಈ ಆಟಿಕೆಗಳನ್ನು ಆನ್ ಲೈನ್ ನಲ್ಲಿ ಮಾರಲು ಬಯಸಿದಳು. ಆಕೆ ಇದನ್ನು ಮಾರಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು.

ಆಕೆಯ ಪೋಸ್ಟ್ ಈ ರೀತಿಯಾಗಿದೆ

ಆಕೆಯ ಪೋಸ್ಟ್ ಈ ರೀತಿಯಾಗಿದೆ

ನನ್ನ ಪತಿ ಕೆಲವು ದಿನಗಳ ಕಾಲ ಮನೆಯಿಂದ ದೂರ ಹೋಗಿದ್ದರು. ಈ ಸಮಯದಲ್ಲಿ ಆನ್ ಲೈನ್ ನಲ್ಲಿ ತುಂಬಾ ಕಡಿಮೆ ಬೆಲೆಗೆ ತಾನು ಆಟಿಕೆಗಳನ್ನು ಮಾರಿದೆ. ನನ್ನ ಗಂಡನಿಗೆ ಅವೇಂಜರ್: ಎಂಡ್ ಗೇಮ್ ನೋಡಿದ ಬಳಿಕ ಗೀಳು ಹತ್ತಿಕೊಂಡಿದೆ. ಆತ ಮನೆಗೆ ಬರುವಾಗ ಒಂದು ಅಥವಾ ಎರಡು ಬಾಕ್ಸ್ ಆಟಿಕೆ ತೆಗೆದುಕೊಂಡು ಬರುತ್ತಿದ್ದ. ಆತನಿಗೆ ಈಗ 40ರ ಹರೆಯ. ಆದರೂ ಮಕ್ಕಳಂತೆ ವರ್ತಿಸುತ್ತಿದ್ದಾರೆ. ಮನೆ ತುಂಬಾ ಸಣ್ಣದಾಗಿದೆ ಮತ್ತು ಇನ್ನಷ್ಟು ಆಟಿಕೆಗಳನ್ನು ಇಡಲು ಸ್ಥಳವಿಲ್ಲ. ಇದನ್ನು ಸ್ವಚ್ಛ ಮಾಡಲು ನನಗೆ ನೆರವಾಗಿ. ಪತಿ ಮನೆಯಲ್ಲಿ ಇಲ್ಲದೆ ಇರುವ ಕಾರಣದಿಂದಾಗಿ ಇದನ್ನು ಕೆಲವೇ ದಿನಗಳಲ್ಲಿ ಮಾರಬೇಕಾಗಿದೆ.

ನೆಟ್ಟಿಗರು ಈ ಪೋಸ್ಟ್ ನೋಡಿ ಆಕ್ರೋಶಿತರಾದರು

ನೆಟ್ಟಿಗರು ಈ ಪೋಸ್ಟ್ ನೋಡಿ ಆಕ್ರೋಶಿತರಾದರು

ಈ ಪೋಸ್ಟ್ ನ್ನು ಓದಿದ ಬಳಿಕ ನೆಟ್ಟಿಗರು ಆಕ್ರೋಶಿತರಾಗಿ ಆಕೆಗೆ ಸರಿಯಾಗಿ ಬೈದಿದ್ದಾರೆ. ಕೆಲವರ ಪ್ರಕಾರ ಆಕೆ ತನ್ನ ಪತಿಗೆ ಅಗೌರವ ಸೂಚಿಸುತ್ತಿದ್ದಾಳೆ. ಇನ್ನು ಕೆಲವು ನೆಟ್ಟಿಗರು ಆಕೆಗೆ ವಿಚ್ಛೇದನ ಕೊಡಬೇಕೆಂದು ಸಲಹೆ ಮಾಡಿದ್ದಾರೆ. ಆ ಮಹಿಳೆಯು ತನ್ನ ಪೋಸ್ಟ್ ನ್ನು ಕೆಲವು ಸಮಯ ಬಳಿಕ ಡಿಲೀಟ್ ಮಾಡಿದ್ದಾಳೆ. ಆದರೆ ಆ ದಂಪತಿಗೆ ಏನಾಗಿದೆ ಎನ್ನುವ ಕುತೂಹಲವು ಈಗಲೂ ನಮ್ಮನ್ನು ಕಾಡುತ್ತಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

She Tried To Sell Her Husband’s Avenger’s Toy Collection

An irritated wife shared a post online to sell off her husband's Avenger's toy collection. The wife was so displeased with his addiction of playing with the toys that she decided to sell those action figures when he was away for a few days. The netizens were not pleased with her decision and roasted her for this.
Story first published: Thursday, May 9, 2019, 17:30 [IST]
X
Desktop Bottom Promotion