Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೇವಲ 9 ನಿಮಿಷದಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾನ್ ತಾಯಿ!
ಗರ್ಭಧಾರಣೆಯ ಸಮಯದಲ್ಲಿ ಹುಟ್ಟುವ ಮಗುವಿನ ಬಗ್ಗೆ ಪ್ರತಿಯೊಬ್ಬ ಮಹಿಳೆಯು ಕನಸು ಕಾಣುತ್ತಿರುತ್ತಾಳೆ. ತನ್ನ ಮಗು ಆಗಿದ್ದರೆ ಚೆನ್ನ, ಹಾಗೆ ಸುಂದರವಾಗಿರಬೇಕು ಎಂದು...ಹಲವಾರು ಕನಸುಗಳನ್ನು ಕಟ್ಟಿ ಕೊಂಡಿರುವಳು. ಆದರೆ ಕೆಲವು ಕೆಲವು ಮಹಿಳೆಯರಿಗೆ ತಾವು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇವೆ ಎಂದು ಕೊನೆಯ ಹಂತದವರೆಗೂ ತಿಳಿದಿರುವುದೇ ಇಲ್ಲ.
ಆದರೆ ಅವಳಿ ಮಕ್ಕಳನ್ನು ಬಿಡಿ, ಆರು ಮಕ್ಕಳು ಏಕಕಾಲದಲ್ಲಿ, ಅದೂ ಕೇವಲ 9 ನಿಮಿಷದಲ್ಲಿ ಜನಿಸಿದರೆ ಹೇಗಿರಬಹುದು? ಖಂಡಿತವಾಗಿಯೂ ಆಗ ಎಲ್ಲರಿಗೂ ಅಚ್ಚರಿಯಾಗ ಬಹುದು. ಇಂತ ಹೆರಿಗೆ ನಡೆಯುವುದು 4.5 ಮಿಲಿಯನ್ ನಲ್ಲಿ ಒಬ್ಬರಿಗೆ ಮಾತ್ರ. ಈ ಅಪರೂಪದ ಹೆರಿಗೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಆ ಮಹಿಳೆ ನಿಜವಾಗಿಯೂ ತುಂಬಾ ಶಕ್ತಿವಂತೆ
ಥೆಲ್ಮಾ ಚಿಯಾಕ ಎಂಬ ಮಹಿಳೆ ಆರು ಮಕ್ಕಳಿಗೆ ಜನ್ಮ ನೀಡಿರುವಳು. ಆಕೆ ಕೇವಲ 9 ನಿಮಿಷಗಳ ಅಂತರದಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ್ದು, ಈಗ ಆರಾಮ ಮಾಡಿಕೊಳ್ಳುತ್ತಿದ್ದಾರೆ.

ಶಿಶುಗಳು
ಚಿಯಾಕ ಎರಡು ಜತೆ ಅವಳಿ ಗಂಡು ಶಿಶುಗಳು ಮತ್ತು ಒಂದು ಜತೆ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 4.50 ರಿಂದ 4.59 ಮಧ್ಯೆ ಈ ಹೆರಿಗೆ ಆಗಿದೆ.
ಶಿಶುಗಳು ಆರೋಗ್ಯವಾಗಿದ್ದಾರೆ!
ಎಲ್ಲಾ ಆರು ಮಕ್ಕಳು ಒಂದು ಪೌಂಡ್ 12 ಔನ್ಸ್ ನಿಂದ 2 ಪೌಂಡ್ 14 ಔನ್ಸ್ ತನಕ ತೂಕ ಹೊಂದಿದ್ದಾರೆ ಎಂದು ವರದಿಗಳು ಹೇಳಿವೆ. ಎಲ್ಲಾ ಆರು ಮಕ್ಕಳ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಮತ್ತು ಈ ಶಿಶುಗಳನ್ನು ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಇಡಲಾಗಿದೆ. ಎಲ್ಲಾ ಮಕ್ಕಳು ತುಂಬಾ ಆರೋಗ್ಯವಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಇದು ಅಪರೂಪದ ಗರ್ಭಧಾರಣೆ
ಚಿಯಾಕ ಗರ್ಭಧಾರಣೆಯು ತುಂಬಾ ಅಪರೂಪ ಎಂದು ಪರಿಗಣಿಸಲಾಗಿದೆ. ಆದರೆ ಈ ಬಗ್ಗೆ ಆಕೆಯು ದಾಖಲೆ ಪುಟ ಸೇರುವುದರಿಂದ ವಂಚಿತರಾಗಿದ್ದಾರೆ. ಯಾಕೆಂದರೆ ಇದಕ್ಕೆ ಮೊದಲು 33ರ ಹರೆಯದ ನಾದ್ಯ ಸುಲೇಮಾನ್ ಎನ್ನುವ ಮಹಿಳೆ 2009ರ ಜನವರಿಯಲ್ಲಿ ಎಂಟು ಶಿಶುಗಳಿಗೆ ಜನ್ಮ ನೀಡಿದ್ದರು.



Click it and Unblock the Notifications
