For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ವೀರ್ಯ ಕುಡಿಯುವ ಮೂಲಕ ಗರ್ಭಪಾತ ತಡೆಯಬಹುದಂತೆ!!

|

ಇಂದಿನ ದಿನಗಳಲ್ಲಿ ವಿಜ್ಞಾನವು ತುಂಬಾ ಮುಂದುವರಿದಿದ್ದು, ಕೆಲವೊಂದು ವಿಚಿತ್ರ ಸಂಶೋಧನೆಗಳನ್ನು ಕೂಡ ಅದು ನಡೆಸುತ್ತದೆ. ಇದಲ್ಲಿ ಮುಖ್ಯವಾಗಿ ಸೆಕ್ಸ್ ಸಂಬಂಧಿಸಿದ ಕೆಲವೊಂದು ಸಂಶೋಧನೆಗಳು ನಮಗೆ ವಿಚಿತ್ರವಾಗಿ ಕಾಣಬಹುದು. ಯಾಕೆಂದರೆ ಹೀಗೂ ಆಗುತ್ತದೆಯಾ ಎನ್ನುವ ಪ್ರಶ್ನೆ ಮೂಡುವುದು.

Semen Intake

ವಿಜ್ಞಾನವು ಕೆಲವೊಂದು ಅಸಾಮಾನ್ಯ ವಿಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವುದರಿಂದ ನಮಗೆ ಇದೆಲ್ಲವೂ ವಿಚಿತ್ರ ಎಂದು ಅನಿಸುವುದು. ಇಂತಹ ಒಂದು ವಿಚಿತ್ರ ಸಂಶೋಧನೆ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಸಂಗಾತಿಯ ವೀರ್ಯ ಕುಡಿಯುವಂತಹ ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತದ ಸಂಭವ ಕಡಿಮೆ ಆಗುವುದು ಎಂದು ಹೊಸ ಸಂಶೋಧನೆಯೊಂದು ಕಂಡು ಹುಡುಕಿದೆ. ಈ ವಿಚಿತ್ರ ಅಧ್ಯಯನ ವರದಿ ಬಗ್ಗೆ ನೀವು ಮುಂದಕ್ಕೆ ತಿಳಿಯಿರಿ.

ಸಂಶೋಧನೆಗಳು ನಂಬಿರುವ ಪ್ರಕಾರ

ಸಂಶೋಧನೆಗಳು ನಂಬಿರುವ ಪ್ರಕಾರ

ಸಂಶೋಧನೆಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಗರ್ಭಿಣಿ ಮಹಿಳೆಯುರು ವೀರ್ಯ ಕುಡಿದರೆ, ಅದರಿಂದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು. ವೀರ್ಯ ಕುಡಿಯುವ ಮೂಲಕವಾಗಿ ಗರ್ಭದಲ್ಲಿರುವಂತಹ ಮಗುವ ತುಂಬಾ ಆರೋಗ್ಯಕಾರಿ ಆಗಿ ಬೆಳೆಯಲು ನೆರವಾಗುವುದು.

ಇದು ಒಂದು ಕಾರಣವಾಗಿರಬಹುದು

ಇದು ಒಂದು ಕಾರಣವಾಗಿರಬಹುದು

ವೀರ್ಯದಲ್ಲಿ ಪುರುಷರ ದೇಹದ ಕೆಲವೊಂದು ಹಾರ್ಮೋನುಗಳು ಮತ್ತು ಪ್ರೋಟೀನ್ ಗಳು ಇದೆ. ಇದರಿಂದ ಗರ್ಭಿಣಿಗೆ ಪ್ರತಿರೋಧಕ ಶಕ್ತಿ ಬಲಪಡಿಸಲು ನೆರವಾಗಬಹುದು ಮತ್ತು ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಅನಾರೋಗ್ಯವನ್ನು ದೂರ ಮಾಡಲು ಇದರಿಂದ ಸಾಧ್ಯವಾಗುವುದು.

234 ಮಹಿಳೆಯರ ಮೇಲೆ ಸಂಶೋಧನೆಗಳು ನಡೆದಿದೆ!

234 ಮಹಿಳೆಯರ ಮೇಲೆ ಸಂಶೋಧನೆಗಳು ನಡೆದಿದೆ!

ನೆದರ್ಲೆಂಡ್ ನಲ್ಲಿ ಇರುವಂತಹ ಲೈಡೆನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನಲ್ಲಿ ಈ ಬಗ್ಗೆ ಸಂಶೋಧನೆಗಳೂ ನಡೆದಿದೆ. ಈ ಅಧ್ಯಯನದ ವೇಳೆ ಗರ್ಭಿಣಿಯರ ಆರೋಗ್ಯದ ಇತಿಹಾಸ ಮತ್ತು ಬಾಯಿಯ ಸೆಕ್ಸ್ ನ ಹವ್ಯಾಸವಿರುವ ಸುಮಾರು 234 ಮಂದಿ ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಯಿತು.

ವಿರ್ಯವನ್ನು ಹೊಟ್ಟೆಯು ಚೆನ್ನಾಗಿ ಹೀರಿಕೊಳ್ಳುವುದು

ವಿರ್ಯವನ್ನು ಹೊಟ್ಟೆಯು ಚೆನ್ನಾಗಿ ಹೀರಿಕೊಳ್ಳುವುದು

ಸಂಶೋಧನೆಗಳು ಹೇಳುವ ಪ್ರಕಾರ ದಂಪತಿಯು ಗರ್ಭ ಧರಿಸಬೇಕೆಂದು ನಿರ್ಧಾರ ಮಾಡಿದ್ದರೆ ಆಗ ವೀರ್ಯವು ಯೋನಿಯ ಸಂಪರ್ಕಕ್ಕೆ ಬರುವುದು ಅಥವಾ ಅಸುರಕ್ಷಿತ ಸೆಕ್ಸ್ ನಡೆಸುವುದು ಅತೀ ಅಗತ್ಯ ಆಗಿರುವುದು. ಆದರೆ ಹೊಟ್ಟೆಯಲ್ಲಿ ಈ ವೀರ್ಯವು ತುಂಬಾ ಚೆನ್ನಾಗಿ ಹೀರಿಕೊಳ್ಳುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ ಎಂದು ವರದಿಗಳು ಹೇಳಿವೆ. ಈ ವರದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಲು ಮರೆಯಬೇಡಿ.

English summary

Semen Intake Reduces Miscarriage Chances

Science has been making constant progress and some studies are quite weird. According to reports,a Dutch researcher has found out that swallowing semen helps to strengthen a pregnant woman's immune system in such a way that it helps a developing foetus to grow into a healthy baby. Semen Intake Reduces Miscarriage Chances
X
Desktop Bottom Promotion