Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೋಡಿ, ಇದೇ ಕಾರಣಕ್ಕೆ ನೀವು ಪ್ರೇರಣೆ ಕಳೆದುಕೊಳ್ಳುತ್ತಿರುವುದು
ಜೀವನದಲ್ಲಿ ಗುರಿ ಸಾಧಿಸಬೇಕು ಎಂದಿದ್ದರೆ ಆಗ ಪ್ರೇರಣೆಯು ಅತೀ ಅಗತ್ಯವಾಗಿರುವುದು. ಯಾವುದೇ ಕೆಲಸ, ಸಾಧನೆ ಮಾಡಲು ಪ್ರೇರಣೆಯು ಬೇಕು. ಇಲ್ಲವಾದಲ್ಲಿ ಕೆಲವು ದಿನಗಳ ಕಾಲ ನಡೆಯುವ ಇದು ಅಲ್ಲೇ ಮಣ್ಣಾಗುವುದು. ಎಲ್ಲರಿಗೂ ತನಗೆ ಅದು ಮಾಡಬೇಕು, ಆ ಸಾಧನೆ ಮಾಡಬೇಕು ಎನ್ನುವಂತಹ ಮನಸ್ಸು ಇರುತ್ತದೆ. ಆದರೆ ಅವರಿಗೆ ಪ್ರೇರಣೆಯ ಕೊರತೆಯು ಇರುವುದು.
ಇಂತಹ ಸಮಯದಲ್ಲಿ ಗುರಿಯತ್ತ ದೃಷ್ಟಿಯನ್ನಿಟ್ಟು, ಅದನ್ನು ಸಾಧಿಸಲು ಪ್ರೇರಣೆ ಮುಖ್ಯ. ಪ್ರೇರಣೆಯ ಕೊರತೆಗೆ ಕಾರಣಗಳು ಇರಬಹುದು. ಇದಕ್ಕೆ ಕಾರಣವೇನೆಂದು ತಿಳಿದುಕೊಂಡು ಆ ಪರಿಸ್ಥಿತಿ ಅರ್ಥ ಮಾಡಿಕೊಂಡು ಗುರಿ ಕಡೆ ನಡೆಯಬೇಕು. ಗುರಿ ಸಾಧಿಸಲು ಹೆಚ್ಚಿನವರಿಗೆ ಪ್ರೇರಣೆ ಕೊರತೆ ಆಗಲು ಆರು ಕಾರಣಗಳು ಏನು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದೆ. ಇದನ್ನು ನೀವು ತಿಳಿಯಿರಿ...

ನೀವು ನಿಭಾಯಿಸಲು ಸಾಧ್ಯವಾಗದೆ ಇರುವುದಕ್ಕಿಂತಲೂ ಹೆಚ್ಚಿನದನ್ನು ಪಡೆದಿರುವುದು
ವಿಳಂಬ ಪ್ರವೃತ್ತಿಯು ಪ್ರೇರಣೆಯ ಕೊರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ನೀವು ಹಲವಾರು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದರೆ, ಆಗ ನಿಮಗೆ ಒಂದರ ಕಡೆ ದೃಷ್ಟಿ ಹರಿಸಲು ತುಂಬಾ ಕಷ್ಟವಾಗುವುದು. ಇದರಿಂದಾಗಿ ನಿಮ್ಮ ಏಕಾಗ್ರತೆಯು ಹಂಚಿಹೋಗುವುದು ಮತ್ತು ನಿಮ್ಮ ಪ್ರೇರಣೆಯು ಕಳೆದುಹೋಗುವುದು.

ಸಾಧನೆಗಳಿಗೆ ನೀವು ಅರ್ಹರಲ್ಲ ಎಂದು ಯೋಚಿಸಲು ಆರಂಭಿಸಿದರೆ…
ನಿಮಗೆ ನೀಡಿರುವಂತಹ ಕೆಲಸವನ್ನು ಪೂರ್ತಿಗೊಳಿಸದೆ ಇರುವಂತಹ ಹವ್ಯಾಸವನ್ನು ನೀವು ಬೆಳೆಸಿಕೊಂಡಿದ್ದರೆ ಆಗ ನೀವು ಖಂಡಿತವಾಗಿಯೂ ಪ್ರೇರಣೆ ಕೊರತೆಯನ್ನು ಎದುರಿಸಲಿದ್ದೀರಿ. ನಿಮ್ಮಲ್ಲಿ ಒಂದು ದೂರದೃಷ್ಟಿಯಿದ್ದರೆ, ಆಗ ನಿಮ್ಮ ಕಾರ್ಯವನ್ನು ಪೂರ್ತಿಗೊಳಿಸುವ ಕಾರಣದಿಂದಾಗಿ ಬೇರೆಯವರ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ಅನಿಸಿದರೆ ಖಂಡಿತವಾಗಿಯೂ ಅದು ನಿಮ್ಮ ಪ್ರೇರಣೆಗೆ ಅಡ್ಡಿಯಾಗಲಿದೆ.

ನೀವು ನೆರವು ಕೇಳಲು ಬಯಸದೆ ಇದ್ದರೆ….
ಗುರಿಯನ್ನು ಸಾಧಿಸಲು ಕೆಲವೊಂದು ಸಲ ನಾವು ಬೇರೆಯವರ ನೆರವು ಕೂಡ ಪಡೆಯಬೇಕಾಗುತ್ತದೆ. ಆದರೆ ನಿಮಗೆ ನೆರವು ಕೇಳಲು ಘನತೆಯು ಅಡ್ಡಿ ಬರುತ್ತಲಿದ್ದರೆ, ಆಗ ನಿಮ್ಮ ಗುರಿ ಸಾಧಿಸಲು ಖಂಡಿತವಾಗಿಯೂ ಪ್ರೇರಣೆ ಕಳೆದುಕೊಳ್ಳಲಿದ್ದೀರಿ.

ನಿಮ್ಮ ಬಗ್ಗೆಯು ನಂಬಿಕೆ ಇಲ್ಲವಾದರೆ…
ಯಶಸ್ವಿಯಾಗಿರುವಂತಹ ನಿಮ್ಮ ಸ್ನೇಹಿತರು ತಮಾಷೆಗೆ ಗುರಿಯಾಗಿದ್ದರೆ ಮತ್ತು ನಿಮಗೆ ಕೂಡ ಹೀಗೆ ಆಗಬಹುದು ಎಂದು ಚಿಂತಿಸುತ್ತಿದ್ದರೆ, ಆಗ ನೀವು ಖಂಡಿತವಾಗಿಯೂ ಪ್ರೇರಣೆ ಕಳೆದುಕೊಳ್ಳಲಿದ್ದೀರಿ. ಇದರಿಂದಾಗಿ ನೀವು ನಿಮ್ಮ ಮೇಲೆ ನಂಬಿಕೆಯನ್ನಿಟ್ಟುಕೊಂಡು ಕೆಲಸ ಮಾಡಿ, ಗುರಿ ಸಾಧಿಸಿ.



Click it and Unblock the Notifications
