Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಕ್ಟೋಪಸ್‌ನ್ನು ಜೀವಂತ ತಿನ್ನಲು ಹೋದ ಮಹಿಳೆ! ವಿಡಿಯೋ ವೈರಲ್!
ಕೆಲವು ದೇಶಗಳಲ್ಲಿ ಪ್ರಾಣಿಗಳನ್ನು ಹಸಿಯಾಗಿಯೇ ತಿನ್ನುವುದು ಇದೆ. ಆದರೆ ಇದು ಅಲ್ಲಿನ ಆಹಾರ ಪದ್ಧತಿ ಎನ್ನಬಹುದು. ಹೀಗೆ ಕೆಲವೊಂದು ಸಲ ಹಸಿ ಅಥವಾ ಜೀವಂತ ಪ್ರಾಣಿ ಅಥವಾ ಇನ್ನಿತರ ಕೀಟಗಳನ್ನು ತಿನ್ನುವ ವೇಳೆ ಅವಘಡಗಳು ಕೂಡ ನಡೆದಿದೆ. ಆದರೆ ಇಲ್ಲೊಬ್ಬಳು ಮಹಿಳೆ ಆಕ್ಟೋಪಸ್ ನ್ನು ಜೀವಂತವಾಗಿ ತಿನ್ನಲು ಹೋದ ವೇಳೆ ಅದು ಆಕೆಯ ಮುಖಕ್ಕೆ ಅಂಟಿಕೊಂಡ ಘಟನೆಯು ನಡೆದಿದೆ.

ಇದೆಲ್ಲವನ್ನು ಆ ಮಹಿಳೆಯು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಲಿ ಎಂದು. ಆದರೆ ಜೀವಂತ ಆಕ್ಟೋಪಸ್ ತಿನ್ನಲು ಹೋಗಿ ಆಕೆಗೆ ಮುಂದೆ ಏನಾಯಿತು ಎಂದು ತಿಳಿಯುವ...

ವ್ಲಾಗ್ಗರ್ ಆಗಿರುವ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ವ್ಲಾಗ್ಗರ್ ಆಗಿರುವ ಮಹಿಳೆಯು ``ಸೀಸೈಡ್ ಗರ್ಲ್ ಲಿಟ್ಲ್ ಸೆವೆನ್''ಎಂದು ಗುರುತಿಸಲ್ಪಡುವರು. ಆಕೆ ಯಾವಾಗಲೂ ಸಮುದ್ರಖಾದ್ಯಗಳನ್ನು ತಿನ್ನುತ್ತಿರುವುದನ್ನು ಲೈವ್ ಆಗಿ ತೋರಿಸುತ್ತಿರುವರು. ಆಕೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆಕ್ಟೋಪಸ್ ನ್ನು ಜೀವಂತ ತಿನ್ನಲು ಹೋದರು.

ಜೀವಂತ ಆಕ್ಟೋಪಸ್‌ನ್ನು ತಿನ್ನಲು ಅದನ್ನು ಹಿಡಿದರು
ವಿಡಿಯೋದಲ್ಲಿ ಇರುವಂತೆ ಆ ಮಹಿಳೆಯು ಆಕ್ಟೋಪಸ್ ನ್ನು ತಿನ್ನಲು ತನ್ನ ಮುಖದ ಬಳಿಕ ಹಿಡಿದುಕೊಂಡಿರುವರು. ಅದರ ಒಂದು ಅಂಗವನ್ನು ಕಚ್ಚಲು ಆಕೆ ತಯಾರಿಯಲ್ಲಿದ್ದರು.

ನಗುಮುಖದಲ್ಲಿದ್ದ ಆಕೆ ಅಳಲು ಆರಂಭಿಸಿದಳು
ಆಕೆ ಆಕ್ಟೋಪಸ್ ಗೆ ಕಚ್ಚಲು ಆರಂಭಿಸಿದಂತೆ ಎಲ್ಲವೂ ಅಸ್ತವ್ಯಸ್ತವಾಯಿತು. ಅಕ್ಟೋಪಸ್ ಹಿಂಸೆಗೆ ಇಳಿದು ಮಹಿಳೆಯ ಮುಖದ ಮೇಲೆ ಅದು ತನ್ನ ಹಲವು ಅಂಗಗಳಿಂದ ದಳಿ ಮಾಡಿತು. ಆಕೆ ಅಕ್ಟೋಪಸ್ ನ ಪ್ರತಿಕ್ರಿಯೆ ನೋಡಿ ಮೊದಲು ನಗುತ್ತಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅಳಲು ಆರಂಭಿಸಿದರು.

ಕೊನೆಗೂ ಆಕೆ ಆಕ್ಟೋಪಸ್ ಹಿಡಿತದಿಂದ ಹೊರಬಂದರು
ತುಂಬಾ ದೀರ್ಘ ಸಮಯ ಹೋರಾಡಿದ ಬಳಿಕ ಆಕೆ ಆಕ್ಟೋಪಸ್ ನ ಹಿಡಿತದಿಂದ ಹೊರಗೆ ಬರಲು ಯಶಸ್ವಿಯಾದರು. ಆದರೆ ಆಕ್ಟೋಪಸ್ ಹಿಡಿದಿಂದಾಗಿ ಆಕೆಯ ಮುಖದ ಮೇಲೆ ಗಾಯವಾಗಿದೆ ಮತ್ತು ಗಲ್ಲದಲ್ಲಿ ರಕ್ತ ಕೂಡ ಬಂದಿದೆ.
ಆಕ್ಟೋಪಸ್ ಗೆ ಮುಂದೆ ಏನಾಗುತ್ತದೆ ಎಂದು ವೀಕ್ಷಕರು ಕೇಳುತ್ತಿದ್ದಾರೆ. ಆದರೆ ಅದನ್ನು ತನ್ನ ಮುಂದಿನ ವಿಡಿಯೋದಲ್ಲಿ ತಿನ್ನುವುದಾಗಿ ಆಕೆ ಹೇಳಿಕೊಂಡಿದ್ದಾರೆ.



Click it and Unblock the Notifications
