Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ತಾಯಂದಿರ ದಿನದಂದೇ ಮಗನಿಗೆ ಇಷ್ಟದ ಅಡುಗೆ ಮಾಡಿಟ್ಟು ಸಾವನ್ನಪ್ಪಿದ ತಾಯಿ!
ಕೆಲವೊಂದು ವಿಶೇಷ ದಿನಗಳಲ್ಲಿ ನಾವು ತುಂಬಾ ಸಂತೋಷವಾಗಿ ಇರುತ್ತೇವೆ ಮತ್ತು ಆ ದಿನವನ್ನು ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುತ್ತೇವೆ. ಇದರಲ್ಲಿ ಮುಖ್ಯವಾಗಿ ಮದರ್ಸ್ ಡೇ ಎನ್ನುವುದು ತುಂಬಾ ಜನಪ್ರಿಯ. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ತುಂಬಾ ಮನಕಲಕುವಂತಹ ಘಟನೆಯನ್ನು. ಮದರ್ಸ್ ಡೇ ದಿನ ತನ್ನ ಪುತ್ರನಿಗೆ ಇಷ್ಟವಾಗಿರುವಂತಹ ಅಡುಗೆಗಳನ್ನು ಮಾಡಿದ ಬಳಿಕ ತಾಯಿಯು ಆತನಿಗಾಗಿ ತುಂಬಾ ಹೊತ್ತು ಕಾಯುತ್ತಾರೆ. ಆದರೆ ಆತ ಮಾತ್ರ ಬರುವುದೇ ಇಲ್ಲ. ಈ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆದ ಬಳಿಕ ತನ್ನ ಸ್ವಂತ ಬಲದಿಂದ ಮಗನನ್ನು ಸಾಕುತ್ತಾಳೆ ಮತ್ತು ಇದರ ಬಳಿಕ ಮಗ ಬೇರೆ ನಗರಕ್ಕೆ ಕೆಲಸಕ್ಕೆಂದು ತೆರಳುತ್ತಾನೆ.
ಬೇರೆ ನಗರದಲ್ಲಿ ವಾಸವಾಗಿದ್ದ ಮಗ ವಾರಕ್ಕೊಮ್ಮೆ ಬಂದು ಒಂಟಿಯಾಗಿದ್ದ ತನ್ನ ತಾಯಿಯನ್ನು ಭೇಟಿಯಾಗಿ ಹೋಗುತ್ತಿದ್ದ. ಆದರೆ ಸಮಯ ಕಳೆದಂತೆ ಆತ ಬರುವುದು ಕಡಿಮೆ ಆಯಿತು ಮತ್ತು ಇದರ ಬಗ್ಗೆ ತಾಯಿ ದೂರಲಿಲ್ಲ ಮತ್ತು ಆತನಿಗಾಗಿ ಯಾವಾಗಲೂ ಕಾಯುತ್ತಾ ಕುಳಿತಿರುತ್ತಿದ್ದಳು. ಕೆಲವೊಂದು ಸಲ ಹಲವಾರು ತಿಂಗಳುಗಳ ಕಾಲ ಆತ ಬರುತ್ತಲೇ ಇರಲಿಲ್ಲ.

ಮದರ್ಸ್ ಡೇ ದಿನ ತನ್ನ ತಾಯಿ ಜತೆಗೆ ಸಮಯ ಕಳೆಯಲು ಬಯಸಿದ ಮಗ, ತಾನು ಮನೆಗೆ ಬರುತ್ತಿರುವುದಾಗಿ ಹೇಳಿದ ಮತ್ತು ತನ್ನ ಇಷ್ಟದ ಅಡುಗೆ ಮಾಡಿಡುವಂತೆ ಹೇಳಿದ. ಆ ವೃದ್ಧ ಮಹಿಳೆಯು ತುಂಬಾ ಸಂತೋಷಗೊಂಡು, ಮಗನೊಂದಿಗೆ ಊಟ ಮಾಡುವ ಕನಸು ಕಂಡಳು. ಇದಕ್ಕಾಗಿ ಮದರ್ಸ್ ಡೇ ದಿನ ತನ್ನ ಪುತ್ರನಿಗೆ ಬೇಕಿರುವ ಇಷ್ಟದ ಅಡುಗೆಗಳನ್ನು ತಯಾರಿಸಿದಳು.
ತನ್ನ ಮಗನಿಗೆ ಎಲ್ಲಾ ಅಡುಗೆಗಳನ್ನು ಮಾಡಿ ಟೇಬಲ್ ಮೇಲಿಟ್ಟು ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋದ ಆ ಮಹಿಳೆಗೆ ತೀವ್ರ ಹೃದಯಾ ಘಾತವಾಗಿ ಅಲ್ಲೇ ಕುಸಿದು ಬಿದ್ದರು. ಆಕೆ ಏಕಾಂಗಿಯಾಗಿದ್ದ ಕಾರಣ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವವರು ಯಾರು ಇರಲಿಲ್ಲ ಮತ್ತು ಅಲ್ಲೇ ಆಕೆ ಸಾವನ್ನಪ್ಪಿದರು. ಮನೆಯಿಂದ ದುರ್ವಾಸನೆ ಬರುತ್ತಿರುವುದಾಗಿ ನೆರೆಮನೆಯವರು ದೂರಿದ ಬಳಿಕ ಪೊಲೀಸರು ಬಂದು ಮನೆಯ ಬಾಗಿಲು ಮುರಿದರು.
ಪೊಲೀಸರು ಮಹಿಳೆಯ ಶವವನ್ನು ನೋಡಿದಾಗ ಅದರಲ್ಲಿ ಹುಳವಾಗಿತ್ತು ಮತ್ತು ಆಕೆ ಸಾವನ್ನಪ್ಪಿ ನಾಲ್ಕು ದಿನವಾಗಿತ್ತು ಎಂದು ವರದಿಗಳು ಹೇಳಿವೆ. ಮಹಿಳೆಯ ಮಗನಿಗೆ ಕರೆ ಮಾಡಿ, ಆತನಿಗೆ ತಾಯಿಯ ಸಾವಿನ ಬಗ್ಗೆ ತಿಳಿಸಿದ ವೇಳೆ ಆತ ಆಘಾತಕ್ಕೆ ಒಳಗಾದ ಮತ್ತು ತಾನು ಮದರ್ಸ್ ಡೇ ದಿನ ಬರುವುದಾಗಿ ಭರವಸೆ ನೀಡಿದ್ದೆ ಮತ್ತು ತುರ್ತು ಕೆಲಸದಿಂದಾಗಿ ಮನೆಗೆ ಬರಲು ಆಗಲಿಲ್ಲ ಎಂದು ಆತ ಹೇಳಿದ. ತನ್ನ ಇಷ್ಟದ ಅಡುಗೆಗಳನ್ನು ಮಾಡಿ ಟೇಬಲ್ ಮೇಲೆ ಇಟ್ಟಿರುವುದನ್ನು ನೋಡಿ ಆತ ಮತ್ತಷ್ಟು ಕುಸಿದು ಹೋದ. ಆ ಪುತ್ರ ವಿಶ್ವದ ಯುವಜನತೆಯಲ್ಲಿ ಮಾಡಿಕೊಂಡ ಕಳಕಳಿಯ ವಿನಂತಿಯೆಂದರೆ, ತಮ್ಮ ವಯೋವೃದ್ಧ ತಂದೆತಾಯಿ ಜತೆಗೆ ಯಾವಾಗಲೂ ಸಮಯ ಕಳೆಯಬೇಕು ಎಂದು ಕೇಳಿಕೊಂಡಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆಯಿರಿ.



Click it and Unblock the Notifications












