Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಬ್ಯಾಗೇಜ್ ಸ್ಕ್ಯಾನರ್ ನೊಳಗೆ ಹೋದ ವ್ಯಕ್ತಿ-ವಿಡಿಯೋ ವೈರಲ್!
ಕೆಲವರಿಗೆ ಇಂದಿನ ದಿನಗಳಲ್ಲಿ ಬಂದಿರುವಂತಹ ಆಧುನಿಕ ಯಂತ್ರಗಳು ಹಾಗೂ ಇನ್ನಿತ ತಂತ್ರಜ್ಞಾನಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ಕೆಲವರು ಇಂತಹ ಯಂತ್ರಗಳ ಮುಂದೆ ಪೇಚಿಗೆ ಸಿಲುಕುವರು. ಇದನ್ನು ಕಂಡು ಗೊಂದಲದಿಂದಾಗಿ ಏನೇನೋ ಮಾಡುವರು. ಕೆಲವೊಂದು ಸಲ ಇದರಿಂದ ಅನಾಹುತಗಳು ಕೂಡ ಸಂಭವಿಸಬಹುದು. ಆದರೆ ಈ ಲೇಖನದಲ್ಲಿ ನಾವು ನಿಮಗೆ ವ್ಯಕ್ತಿಯೊಬ್ಬ ಎಕ್ಸ್ ರೇ ಯಂತ್ರದ ಒಳಗೆ ಹೋಗಿ ಬಂದಿರುವ ಬಗ್ಗೆ ಹೇಳಲಿದ್ದೇವೆ.

ಈ ಘಟನೆಯು ನಿಮಗೆ ಅಚ್ಚರಿ ಉಂಟು ಮಾಡಬಹುದು. ಆದರೆ ಈ ಮುಗ್ದ ವ್ಯಕ್ತಿ ಏನೂ ತಿಳಿಯದೆ ವಿಮಾನ ನಿಲ್ದಾಣದಲ್ಲಿ ಎಕ್ಸ್ ರೇ ಯಂತ್ರದ ಒಳಗಡೆ ಹೋಗಿ ಬಂದಿದ್ದಾನೆ. ರಷ್ಯಾದ ಪ್ರವಾಸಿಗನೊಬ್ಬ ತನ್ನ ಬ್ಯಾಗ್ ಗಳ ಜತೆಗೆ ಎಕ್ಸ್ ರೇ ಸ್ಕ್ಯಾನರ್ ನ ಒಳಗಡೆ ಹೋಗಿದ್ದಾನೆ. ಈ ವಿಡಿಯೋದಲ್ಲಿ ಆತ ಎಷ್ಟರ ಮಟ್ಟಿಗೆ ಗೊಂದಲಕ್ಕೆ ಒಳಗಾಗಿದ್ದಾನೆ ಎಂದು ತಿಳಿಯಬಹುದು. ಯಾಕೆಂದರೆ ಈ ಸ್ಕ್ಯಾನರ್ ಹೇಗೆ ಕೆಲಸ ಮಾಡುತ್ತಿದೆ ಎಂದೇ ಆತನಿಗೆ ತಿಳಿದಿಲ್ಲ. ಮೆಟಲ್ ಡಿಟೆಕ್ಟರ್ ನಲ್ಲಿ ಹಾದು ಹೋದ ಬಳಿಕ ಆತನಿಗೆ ಸ್ವಲ್ಪ ಗೊಂದಲವಾಗಿದೆ.
ಯುವಕನು ಇದು ಕೂಡ ಮೆಟಲ್ ಡಿಟೆಕ್ಟರ್ ಎಂದು ಅನಿಸಿ ನೇರವಾಗಿ ಬ್ಯಾಗೇಜ್ ಸ್ಕ್ಯಾನರ್ ನ ಒಳಗಡೆ ಪ್ರವೇಶಿಸಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಆತ ಅದರಿಂದ ಹೊರಗೆ ಬಂದಿದ್ದಾನೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ಅಲ್ಲಿನ ಭದ್ರತಾ ಅಧಿಕಾರಿಗಳು ವ್ಯಕ್ತಿಯು ಸ್ಕ್ಯಾನರ್ ನಿಂದ ಹೊರಗೆ ಬರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಈಗ ತುಂಬಾ ವೈರಲ್ ಆಗಿದೆ. ಇದನ್ನು ನೀವು ಕೂಡ ನೋಡಿ.



Click it and Unblock the Notifications