Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
28ರ ಹರೆಯದ ಕಾಮುಕನಿಂದಾಗಿ ಮೂಕ ಪ್ರಾಣಿ ಆಡು ಬಲಿ ಆಯಿತು
ಕಾಮಾತುರಂ ನಾ ಲಜ್ಜಂ ನಾ ಭಯಂ ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ಮಾಡಿರುವುದು ಮಾತ್ರ ಮನುಷ್ಯ ಸಮಾಜವೇ ತಲೆ ತಗ್ಗಿಸುವಂತಹ ಕೆಲಸ. ಈ ಕಾಮಾಂಧನು ತನ್ನ ತೃಷೆಯನ್ನು ಆಡಿನೊಂದಿಗೆ ತೀರಿಸಿ ಕೊಂಡಿದ್ದಾನೆ. ಬಿಹಾರದ ಪಟ್ನಾದಲ್ಲಿ ನಡೆದಿರುವಂತಹ ಘಟನೆಯಿದು.
28ರ ಹರೆಯದ ವ್ಯಕ್ತಿಯೊಬ್ಬ ಆಡಿನೊಂಡಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಇದರ ಬಗ್ಗೆ ಪಟ್ನಾ ಜಿಲ್ಲೆಯ ಪರ್ಸಾ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯು ಕಳೆದ ವಾರ ನಡೆದಿದ್ದು, ಬಂಧಿತ ವ್ಯಕ್ತಿಯನ್ನು ಮಧೇಪುರ ಜಿಲ್ಲೆಯ ಮೊಹಮ್ಮದ್ ಸಿರ್ಮನ್ ಎಂದು ಗುರುತಿಸಲಾಗಿದೆ...

ಕಾಮುಕನಿಂದಾಗಿ ಆಡು ಬಲಿಯಾಗಿದೆ!
ಹೌದು ಕಾಮುಕನಿಂದಾಗಿ ಆಡು ಬಲಿಯಾಗಿದೆ. ಈ ಘಟನೆ ನೋಡಿದ ಸ್ಥಳೀಯರು ಮಕ್ಕಳು ಆಡಿನ ಯಜಮಾನರಾದ ಮಹಾಜಿನಿ ದೇವಿ ಅವರಿಗೆ ವಿಚಾರ ತಿಳಿಸಿದ ಬಳಿಕ ದೂರು ದಾಖಲಿಸಲಾಗಿದೆ. ಆಕೆ ಮೊದಲು ಆರೋಪಿಯನ್ನು ಹಿಡಿದು ತಂದಿದ್ದಾರೆ ಮತ್ತು ಇದರ ಬಳಿಕ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಸರಿಯಾದ ಹೊಡೆದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಎಸ್ ಎಚ್ ಒ ಜಯ ಪ್ರಕಾಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಡಿನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ
ಮಹಾಜಿನಿ ದೇವಿ ಅವರು ನೀಡಿರುವಂತಹ ದೂರಿನಲ್ಲಿ ಸಿರ್ಮನ್ ಆಡಿನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದರಿಂದ ಆಡು ಸಾವನ್ನಪ್ಪಿದೆ. ಗ್ರಾಮದ ಮಕ್ಕಳು ಈ ಘಟನೆಯನ್ನು ಕಣ್ಣಾರೆ ನೊಡಿದ್ದಾರೆ ಎಂದು ಆಕೆ ಹೇಳಿದ್ದಾಗಿ ಎಸ್ ಎಚ್ ಒ ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡಸಂಹಿತೆ 429, 377ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಆ ವ್ಯಕ್ತಿಯ ವಿರುದ್ಧ ಭಾರತೀಯ ದಂಡಸಂಹಿತೆ 429, 377ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಿಜವಾಗಿಯೂ ಆ ವ್ಯಕ್ತಿಯು ಈ ಕೃತ್ಯ ಎಸಗಿದ್ದಾನೆಯಾ ಅಥವಾ ಬೇರೆ ಯಾವುದೇ ಕಾರಣದಿಂದ ಆಡು ಸತ್ತಿದೆಯಾ ಎಂದು ತನಿಖೆ ನಡೆಸಲಾಗುತ್ತಿದೆ. ಅದಾಗ್ಯೂ, ಆರೋಪಿಯು ಆರೋಪಗಳನ್ನು ತಳ್ಳಿಹಾಕಿದ್ದಾನೆ.

ಆಡಿನ ದೇಹವನ್ನು ಪಶು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ
ಶವಪರೀಕ್ಷೆಗಾಗಿ ಆಡಿನ ದೇಹವನ್ನು ಶೇಖ್ ಪುರದಲ್ಲಿ ಇರುವಂತಹ ಪಶು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಿರ್ಮನ್ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಆತನ ಕುಟುಂಬ ಮತ್ತು ವೈದ್ಯಕೀಯ ಇತಿಹಾಸದ ಬಗ್ಗೆ ನಾವು ಮಾಹಿತಿ ಕಲೆ ಹಾಕುತ್ತಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ತನಗೆ ಮದುವೆಯಾಗಿದೆ ಮತ್ತು ತಾನು ಬೇರೆ ಕೂಲಿ ಕಾರ್ಮಿಕರ ಜತೆಗೆ ಪುನ್ ಪುನ್ ನಲ್ಲಿ ವಾಸವಾಗಿದ್ದೇನೆ ಎಂದು ಸಿರ್ಮನ್ ಹೇಳಿರುವುದಾಗಿ ಎಸ್ ಎಚ್ ಒ ತಿಳಿಸಿದ್ದಾರೆ.



Click it and Unblock the Notifications
