Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಬೇಡದ ಆಲೋಚನೆಗಳನ್ನು ದೂರ ಮಾಡುವುದು ಹೇಗೆ?
ಆಲೋಚನೆಗಳು ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಆಲೋಚನೆಗಳು ಮಾಡದೆ ಇರುವಂಹ ಮನುಷ್ಯರು ಈ ಭೂಮಿ ಮೇಲೆ ಇದ್ದರೆ ಅದು ಅವರು ಎಲ್ಲವನ್ನು ತ್ಯಜಿಸಿರುವವರು ಎಂದು ಹೇಳಬಹುದು. ನಮ್ಮ ತಲೆಯಲ್ಲಿ ಹಲವಾರು ರೀತಿಯ ಆಲೋಚನೆಗಳು ಬಂದು ಹೋಗುವುದು. ಇದರಲ್ಲಿ ಕೆಲವು ಆಲೋಚನೆಗಳು ಕೆಟ್ಟದು ಹಾಗೂ ಇನ್ನು ಕೆಲವು ಆಲೋಚನೆಗಳು ಒಳ್ಳೆಯದು ಆಗಿರಬಹುದು.
ಕೆಲವು ಜನರಿಗೆ ಆಲೋಚನೆಗಳು ಎನ್ನುವುದು ಒಂದು ಚಕ್ರದಂತೆ ತಿರುಗುತ್ತಾ ಇರುತ್ತದೆ. ಇದರಲ್ಲಿ ಮೊದಲಿಗೆ ನಕಾರಾತ್ಮಕ ಆಲೋಚನೆಗಳು, ಇದರ ಬಳಿಕ ಧನಾತ್ಮಕ ಆಲೋಚನೆಗಳು, ಹಿಂದಿನ ಆಲೋಚನೆಗಳು ಮತ್ತು ಭವಿಷ್ಯದ ಆಲೋಚನೆಗಳು, ಸಂತಸದ ಆಲೋಚನೆಗಳು, ಚಿಂತೆಯ ಆಲೋಚನೆಗಳು ಮತ್ತು ಹೀಗೆ ತಿರುಗುತ್ತಾ ಇರುತ್ತದೆ.

ಸಾಮಾನ್ಯ ಜನರು ಯಾವಾಗಲೂ ನಕಾರಾತ್ಮಕ ಆಲೋಚನೆಗಳು ಅಥವಾ ಬೇಡದೆ ಇರುವಂತಹ ಆಲೋಚನೆಗಳ ಬಗ್ಗೆ ದೂರು ನೀಡುತ್ತಾ ಇರುತ್ತಾರೆ. ಇದು ತುಂಬಾ ಚಿಂತೆ ಕೂಡ ಉಂಟು ಮಾಡುವುದು. ಬೇಡದೆ ಇರುವಂತಹ ಆಲೋಚನೆಗಳಿಂದ ನಾವು ದೂರವಾಗಬಹುದೇ? ಅದರಲ್ಲೂ ನಮಗೆ ತುಂಬಾ ಸಮಸ್ಯೆ ಉಂಟು ಮಾಡುವಂತಹ ಆಲೋಚನೆಗಳಿಂದ?
ತುಂಬಾ ಸಮಸ್ಯೆ ಉಂಟು ಮಾಡುವ ಅಥವಾ ಬೇಡದೆ ಇರುವಂತಹ ಕೆಲವೊಂದು ಆಲೋಚನೆಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದರಿಂದ ನೀವು ತುಂಬಾ ಶಾಂತಿ ಹಾಗೂ ಸಂತೋಷವನ್ನು ಪಡೆಯಬಹುದು. ನೀವು ಒಂದು ಜಾಗದಲ್ಲಿ ನಿಂತುಕೊಂಡಿದ್ದೀರಿ ಎಂದು ಭಾವಿಸಿ ಮತ್ತು ಮತ್ತೊಬ್ಬ ವ್ಯಕ್ತಿಯು ನಿಮ್ಮ ಹಿಂದೆ ಬಂದು ನಿಂತು ಹೇಳುತ್ತಾನೆ, ಹಿಂದೆ ನೋಡಬೇಡ, ಆದರೆ ನಾನು ಹೇಳುವುದನ್ನು ತುಂಬಾ ಗಮನವಿಟ್ಟು ಹೇಳು. ಹಣದುಬ್ಬರದಲ್ಲಿ ತುಂಬಾ ಏರಿಕೆ ಆಗಿದೆ ಎಂದು ನಿನಗೆ ಗೊತ್ತಿದೆಯಾ?
ಜೀವನವು ಸುರಕ್ಷಿತವಲ್ಲ. ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ನೀನು ಏನು ಪಡೆಯಲು ಬಯಸಿದ್ದೀಯೋ ಅದಕ್ಕೆ ಅರ್ಥವಿಲ್ಲ. ಜನರು ನಿನಗೆ ಗೌರವ ನೀಡುವುದಿಲ್ಲ. ನೀನು ಇದನ್ನು ಮಾಡಲು ಸಾಧ್ಯವಿಲ್ಲ.. ಇತ್ಯಾದಿಗಳು. ಇಂತಹ ಮಾತುಗಳು ಎಚ್ಚರಿಕೆ ಗಂಟೆ ಬಡಿಯುತ್ತದೆಯಾ? ಇದು ನಿಮ್ಮ ಊಹೆಗೆ ನಿಲುಕದೆ ಇರುವಂತಹ ದೃಶ್ಯಾವಳಿಯೇ? ನಮ್ಮ ಹಿಂದೆ ನಿಂತುಕೊಂಡು ಯಾವುದೇ ರೀತಿಯಲ್ಲೂ ಇಂತಹ ಹೇಳಿಕೆಗಳನ್ನು ನೀಡುತ್ತಿರುವಂತಹ ಈ ವ್ಯಕ್ತಿಯು ಬೇರಾರೂ ಅಲ್ಲ, ನಮ್ಮದೇ ತಾಳೆ ಮಾಡುವ ಮತ್ತು ತೀರ್ಪು ನೀಡುವಂತಹ ಬುದ್ಧಿ.
ನೀವು ಇದಕ್ಕೆ ಪ್ರತಿಕ್ರಿಯೆ ನೀಡಲು ಹಿಂದೆ ತಿರುಗುವುದು ಕೂಡ ಇಲ್ಲ. ನೀವು ಜೀವನದಲ್ಲಿ ಧನಾತ್ಮಕವಾಗಿರುವ ಆಲೋಚನೆಗಳನ್ನು ತುಂಬಲು ಬಯಸಿದ್ದೀರಿ. ಆದರೆ ಇದು ನಿಮ್ಮಲ್ಲಿ ಒಂದು ರೀತಿಯ ನಕಾರಾತ್ಮಕ ಆಲೋಚನೆಗಳನ್ನು ತುಂಬಿ ಬಿಡುತ್ತದೆ. ನೀವು ಇದಕ್ಕೆ ಪ್ರತಿಕ್ರಿಯೆ ನೀಡಬಹುದು.
ಆತ ಹೇಳುತ್ತಿರುವುದು ಸರಿಯಾಗಿಯೇ ಇದೆ. ಆದರೆ ಇದಕ್ಕೆಲ್ಲಾ ನನ್ನಲ್ಲಿ ಪರಿಹಾರ ಎನ್ನುವುದು ಇದೆ. ಆಗ ನಿಮ್ಮ ಮನಸ್ಸು ಹೇಳುತ್ತದೆ, ಇದನ್ನು ನೀವು ಹೇಗೆ ಪರಿಹಾರ ಮಾಡುತ್ತಿ ಮತ್ತು ಇದು ಅಷ್ಟು ಸುಲಭವಾಗಿಲ್ಲ. ಇದು ಹಲವಾರು ರೀತಿಯ ಹೇಳಿಕೆಗಳನ್ನು ನೀಡುತ್ತಲೇ ಇರುತ್ತದೆ ಮತ್ತು ನಿಮ್ಮ ತಲೆಯಲ್ಲಿ ಇಂತಹ ನೂರಾರು ಹೇಳಿಕೆಗಳು ಓಡುತ್ತಲೇ ಇರುವುದು. ನಿಮ್ಮ ಸುತ್ತಲು ನಡೆಯುತ್ತಿರುವಂತಹ ವಿಚಾರಗಳ ಬಗ್ಗೆ ಕೂಡ. ಇದರಿಂದಾಗಿ ನಿಮಗೆ ಸಂತೋಷಕ್ಕಿಂತಲೂ ಹೆಚ್ಚು ಬೇಸರವಾಗುವುದು ಮತ್ತು ಮತ್ತೆ ಬೇಸರ ಕಾಡುವುದು. ಇದು ದಿನವಿಡಿ ಹಾಗೆ ಇರುವುದು.
ನೀವು ಯಾವುದಾದರೂ ತುಂಬಾ ಸಂತೋಷದ ಕ್ಷಣಗಳ ಬಗ್ಗೆ ಆಲೋಚನೆ ಮಾಡುತ್ತಿರುವಾಗಲೇ ನಿಮ್ಮ ಹಿಂದಿನ ಕೆಟ್ಟ ಘಟನೆಗಳು ಮನಸ್ಸಿನಲ್ಲಿ ಬರಬಹುದು. ಇದರಿಂದ ನಿಮಗೆ ತುಂಬಾ ಬೇಸರ ಮತ್ತು ದುಃಖವಾಗಬಹುದು. ತುಂಬಾ ಸಂತೋಷದ ಕ್ಷಣದಲ್ಲಿ ಇರುವ ವೇಳೆ ಹೀಗೆ ಆದರೆ ಆಗ ನೀವು ಚಿಂತೆಗೆ ಒಳಗಾಗುವಿರಿ. ನೀವು ಇಂತಹ ಆಲೋಚನೆಗಳಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕು. ಅದರಲ್ಲೂ ನಿಮಗೆ ತೊಂದರೆ ಉಂಟು ಮಾಡುವ ಆಲೋಚನೆಗಳ ಬಗ್ಗೆ.
ಇದರಿಂದ ನೀವು ಶಾಂತಿ ಹಾಗು ಯಶಸ್ವಿ ಜೀವನ ಸಾಗಿಸಬಹುದು. ಇಂತಹ ಬೇಡದ ಆಲೋಚನೆಗಳನ್ನು ನಿಭಾಯಿಸುವುದು ಹೇಗೆ ಎಂದು ತಿಳಿಯಿರಿ. ಇಂತಹ ಆಲೋಚನೆಗಳನ್ನು ನಿಭಾಯಿಸುವ ವೇಳೆ ಅವುಗಳನ್ನು ಎದುರಿಸುವುದು ಮತ್ತು ಅವುಗಳನ್ನು ನಿಮ್ಮ ರಚನಾತ್ಮಕವಾದ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವುದು. ಇದನ್ನು ನಾವು ಎಲ್ಲೂ ಕಲಿತಿರುವುದಿಲ್ಲ ಮತ್ತು ಶಾಲೆಗಳಲ್ಲೂ ಇದನ್ನು ಕಲಿಸುವುದಿಲ್ಲ. ಪ್ರತಿಯೊಬ್ಬ ಪೋಷಕರು ಈ ಕಲೆಯನ್ನು ಕಲಿತುಕೊಂಡು ಅದನ್ನು ತಮ್ಮ ಮಕ್ಕಳಿಗೆ ತಿಳಿಸಬೇಕು. ಬೇಡದ ಇರುವ ಆಲೋಚನೆಗಳನ್ನು ನಾವು ಹೇಗೆ ನಿಭಾಯಿಸುವುದು ಎಂದು ತಿಳಿಯುವ. ಒತ್ತಡ ಮತ್ತು ಹೆಚ್ಚು ಖಿನ್ನತೆಯಲ್ಲಿ ಇರುವ ವೇಳೆ ಇದು ಬರದೆ ಇರುವಂತೆ ತಡೆಯುವುದು ಕಷ್ಟ. ಆಲೋಚನೆಗಳಿಗೆ ನೀವು ಅತಿಯಾದ ಮೌಲ್ಯ ನೀಡಬಾರದು. ಅತಿಯಾದ ಮೌಲ್ಯ ನೀಡುವುದು ಎಂದರೆ ಏನು ಎಂದು ನೀವು ಕೇಳಬಹುದು. ಹಾಗಾದರೆ ಇದನ್ನು ಓದಿಕೊಳ್ಳಿ.
ನೀವು ಮಾರುಕಟ್ಟೆಗೆ ಹೋಗುತ್ತೀರಿ ಮತ್ತು ಅಲ್ಲಿ ಒಂದು ಸಾಮಾನು ತೆಗೆದುಕೊಳ್ಳಲು ನೀವು ಬಯಸುತ್ತೀರಿ. ಚೌಕಾಶಿ ಮಾಡುವುದು ತಿಳಿದಿದ್ದರೆ ಆಗ ನೀವು ಸರಿಯಾದ ಬೆಲೆ ಕೊಡುತ್ತೀರಿ. ಇಲ್ಲವಾದರೆ ನೀವು ಹೆಚ್ಚಿನ ಬೆಲೆ ಕೊಟ್ಟು ಖರೀದಿ ಮಾಡುತ್ತೀರಿ. ಇದನ್ನು ನಾವು ಅತಿಯಾದ ಮೌಲ್ಯ ಎಂದು ಹೇಳಿರುವುದು. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಅಂಗಡಿಯಾತ ನಿಮಗೆ ಇದಕ್ಕೆ 200 ರೂಪಾಯಿ ಎಂದು ಹೇಳಬಹುದು. ಆದರೆ ಇದು 150 ರೂಪಾಯಿಗೆ ಸಿಗುತ್ತದೆ ಎಂದು ತಿಳಿದಿದ್ದರೆ ಆಗ ನೀವು ಇದನ್ನು ನಂಬುವುದಿಲ್ಲ.
ನಿಮಗೆ ಬೆಲೆಯ ಬಗ್ಗೆ ಜ್ಞಾನವಿದೆ ಮತ್ತು ಯಾವುದು ಸರಿಯಾದ ಮೌಲ್ಯ ಎಂದು ನಿಮಗೆ ತಿಳಿದಿದೆ ಎಂದು ಅಂಗಡಿಯಾತನಿಗೆ ಅರ್ಥವಾದರೆ ಆಗ ಆತ ಸರಿಯಾದ ಮೌಲ್ಯಕ್ಕೆ ಆಸುಪಾಸಿನ ಮೌಲ್ಯ ಹೇಳಬಹುದು. ಇದು ನಿಮ್ಮ ಆಲೋಚನೆಗಳಿಗೆ ಕೂಡ ಅನ್ವಯವಾಗುತ್ತದೆ. ಯಾಕೆಂದರೆ ನೀವು ಆಲೋಚನೆಗಳನ್ನು ಸರಿಯಾ ಅಳೆದು ತೂಗಬೇಕು. ಇದು ನಿಜವೇ ಅಥವಾ ಕೆಲವೊಂದು ಊಹೆಗಳಿಂದ ಕಥೆ ಕಟ್ಟಲಾಗಿದೆಯಾ ಎಂದು ತಿಳಿಯಬೇಕು. ನಿಮ್ಮನ್ನು ಜಾಗೃತವಾಗಿ ಇರಿಸಲು ಹಿಂದಿನ ಮತ್ತು ಭವಿಷ್ಯದ ಕೆಲವೊಂದು ಆಲೋಚನೆಗಳು ಹಾಗೆ ನಿಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ.
ಕೆಲವೊಂದು ಆಲೋಚನೆಗಳು ನಿಮ್ಮ ಕೈಯಲ್ಲಿ ಇರುವಂತಹ ಕೆಲಸಕ್ಕೆ ಹಾನಿ ಉಂಟು ಮಾಡಬಹುದು. ನೀವು ಆಲೋಚನೆಗಳಿಂದಾಗಿ ದಾರಿ ತಪ್ಪಬಾರದು ಎಂದು ಅರ್ಥ ಮಾಡಿಕೊಳ್ಳಿ. ಇದರಿಂದಾಗಿ ನೀವು ನಿಮ್ಮನ್ನು ಸರಿಯಾಗಿ ತರಬೇತು ಮಾಡಬೇಕು ಮತ್ತು ಸರಿಯಾದ ರೀತಿಯಲ್ಲಿ ಆಲೋಚನೆಗಳ ಜತೆಗೆ ವ್ಯವಹಾರ ಮಾಡಬೇಕು. ಇದರಿಂದ ನಿಮ್ಮ ಜೀವನವು ಸರಿಯಾದ ದಾರಿಯಲ್ಲಿ ತುಂಬಾ ಶಾಂತಿ ಹಾಗೂ ಸಂತೋಷದಿಂದ ಸಾಗುವುದು.



Click it and Unblock the Notifications


