Latest Updates
-
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ
ರಾಶಿಚಕ್ರದ ಅನುಸಾರ ಪ್ರೀತಿಯಲ್ಲಿ ಬಿದ್ದಾಗ ಯಾವ್ಯಾವ ರಾಶಿಯವರು ಹೇಗೆಲ್ಲಾ ವರ್ತಿಸುತ್ತಾರೆ ನೋಡಿ...
ಒಮ್ಮೆ ಪ್ರೀತಿಯಲ್ಲಿ ಬಿದ್ದವರಿಗೆ ಸುತ್ತ ಜನರಿದ್ದಾರೆ ಎನ್ನುವ ಅರಿವೇ ಇರುವುದಿಲ್ಲ. ಎಲ್ಲಿ ಕುಳಿತುಕೊಂಡಿದ್ದರೂ ಕೇವಲ ಅವರದ್ದೇ ನೆನಪು. ಅವರೊಂದಿಗೆ ಕಳೆದ ಸನ್ನಿವೇಶಗಳ ಮೆಲುಕು ಪದೇ ಪದೇ ನಡೆಯುತ್ತಲೇ ಇರುತ್ತದೆ. ಅವರ ಮಾತು, ನಗು, ಕುಶಲತೆ ಎಲ್ಲವೂ ಮನಸ್ಸಿಗೊಂದು ಬಗೆಯ ಮುದವನ್ನು ನೀಡುವುದು. ಸದಾ ಅನುಪಸ್ಥಿತಿಯ ಮನಸ್ಸಿನಿಂದ ತಮ್ಮದೇ ಆದ ಲೋಕದಲ್ಲಿ ತೇಲುತ್ತಿರುತ್ತಾರೆ. ನೋಡಿದ ವಸ್ತು ಮತ್ತು ವ್ಯಕ್ತಿಗಳೊಂದಿಗೆಲ್ಲಾ ತಮ್ಮ ಪ್ರೇಮಿಯನ್ನು ಹೋಲಿಸಿಕೊಂಡು ಇರುತ್ತಾರೆ. ದಿನದ 24 ಗಂಟೆಯೂ ಅವರಿಗೆ ತಮ್ಮ ಪ್ರೀತಿ-ಪ್ರೇಮದ ಗುಂಗಿನಲ್ಲಿಯೇ ಇರುತ್ತಾರೆ. ಅದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಚಿಂತೆಗಳಿರುವುದಿಲ್ಲ.
ಹೌದು, ಪ್ರೀತಿಯೇ ಹಾಗೆ. ಪ್ರಾಯಕ್ಕೆ ಬಂದ ಪ್ರತಿಯೊಂದು ವ್ಯಕ್ತಿಯು ವಿರುದ್ಧ ಲಿಂಗದವರನ್ನು ಪ್ರೀತಿಸುವುದು, ಅವರನ್ನು ತನ್ನ ಜೀವನದ ಸಂಗಾತಿಯನ್ನಾಗಿ ಪಡೆಯುವುದು ಎಲ್ಲವೂ ಒಂದು ಸಹಜ ಕ್ರಿಯೆ. ಪ್ರೀತಿ ಎನ್ನುವುದು ನೈಸರ್ಗಿಕವಾದ ಕ್ರಿಯೆ ಆದರೂ ಅದರಲ್ಲಿ ಪ್ರೀತಿ, ನಂಬಿಕೆ, ತ್ಯಾಗ, ಅರ್ಪಣೆ, ಸಂತೋಷ ಎಲ್ಲವೂ ಅಡಗಿರುತ್ತದೆ. ಜೀವನದಲ್ಲಿ ಪ್ರೀತಿ ಎನ್ನುವುದು ಇಲ್ಲದೆ ಯಾವ ವ್ಯಕ್ತಿಯೂ ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಎಲ್ಲವನ್ನೂ ಪಡೆದು ಪ್ರೀತಿಯಿಂದ ವಂಚಿತನಾಗಿದ್ದಾನೆ ಎಂದರೆ ಅವನ ಜೀವನದಲ್ಲಿ ಏನೋ ಒಂದನ್ನು ಕಳೆದುಕೊಂಡಿದ್ದಾನೆ ಎಂದು ಹೇಳಬಹುದು. ಅಂತಹವರಲ್ಲಿ ಮಾನಸಿಕವಾಗಿ ಒಂದು ಬಗೆಯ ಒತ್ತಡವನ್ನು ನಾವು ಕಾಣಬಹುದು.

ಪ್ರೀತಿಯ ಆರಂಭದಲ್ಲಿ
ಪ್ರೀತಿಯ ಆರಂಭದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ಒಂದು ರೀತಿಯ ಮುಗ್ಧತೆ ಹಾಗೂ ಸಹಾನೂಭೂತಿಯ ವರ್ತನೆ ಇರುತ್ತದೆ. ಪ್ರೀತಿಸುವ ಮನಸ್ಸಿಗಾಗಿ ಹಾತೊರೆಯುತ್ತಿರುತ್ತದೆ. ತನ್ನ ಪ್ರೀತಿಯ ಜೀವದೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಮುಂದಾಗಿರುತ್ತದೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅಥವಾ ಪಡೆಯುವ ಉದ್ದೇಶಕ್ಕಾಗಿ ಕೆಲವೊಮ್ಮೆ ತನ್ನ ವ್ಯಕ್ತಿತ್ವದಲ್ಲಿ ಇರದಂತಹ ವರ್ತನೆಯನ್ನು ತೋರುವ ಸಾಧ್ಯತೆಗಳು ಇರುತ್ತವೆ. ತಮ್ಮ ವ್ಯಕ್ತಿತ್ವದಲ್ಲಿ ಇಲ್ಲದ ವಿಷಯವನ್ನು ತೋರ್ಪಡಿಸಿಕೊಳ್ಳುವುದರ ಮೂಲಕ ಪ್ರೇಮಿಯ ಮನಸ್ಸಿನಲ್ಲಿ ತಪ್ಪಾದ ಕಲ್ಪನೆ ಮೂಡುವ ಸಾಧ್ಯತೆಗಳು ಇರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಅನುಸಾರ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರತಿಯೊಬ್ಬ ವ್ಯಕ್ತಿಗೂ ಪ್ರೀತಿ ಎನ್ನುವುದು ಅತ್ಯವಶ್ಯಕ. ಪ್ರೀತಿಯನ್ನು ಒಮ್ಮೆ ಕಳೆದುಕೊಂಡ ಅಥವಾ ಪ್ರೀತಿಯಿಂದ ದೂರವಾದರು ಎಂದಾದರೆ ಮಾನಸಿಕವಾಗಿ ಸಾಕಷ್ಟು ನೋವು ಹಾಗೂ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎನ್ನುವ ಭಾವನೆಯಿಂದ ನೋವನ್ನು ಅನುಭವಿಸುತ್ತಾ ಇರುತ್ತಾರೆ. ಪ್ರೀತಿಯಲ್ಲಿ ಮುಳುಗಿದಾಗ ವ್ಯಕ್ತಿಯು ತನ್ನ ರಾಶಿಚಕ್ರಗಳಿಗೆ ಅನುಗುಣವಾಗಿ ಕೆಲವು ವಿಶೇಷ ವರ್ತನೆಯನ್ನು ತೋರುತ್ತಾನೆ ಎಂದು ಹೇಳಲಾಗುವುದು. ಹಾಗಾದರೆ ಆ ವರ್ತನೆಗಳು ಯಾವವು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದೆ ಎಂದಾದರೆ ಈ ಮುಂದೆ ವಿವರಿಸಿದ ವಿವರಣೆಯನ್ನು ಪರಿಶೀಲಿಸಿ.

ಮೇಷ
ರಾಶಿ ಚಕ್ರಗಳಲ್ಲಿ ಬಹಳ ಚಿಕ್ಕ ಚಿಹ್ನೆ ಎಂದು ಮೇಷ ರಾಶಿಯನ್ನು ಪರಿಗಣಿಸಲಾಗುವುದು. ಈ ರಾಶಿಯ ಅಡಿಯಲ್ಲಿ ಜನಿಸಿದವರು ಹಳೆಯ ಶೈಲಿಯಲ್ಲಿ ತಮ್ಮ ಪ್ರೀತಿಯನ್ನು ತೋರುವರು. ಇವರು ತಮ್ಮ ಪ್ರೀತಿ ಪಾತ್ರರಿಗಾಗಿ ಸಾಕಷ್ಟು ಪ್ರೀತಿ ಹಾಗೂ ಕಾಳಜಿಯನ್ನು ತೋರುವರು. ಅಲ್ಲದೆ ತನ್ನ ಪ್ರೇಮಿಯ ಜೊತೆಗೆ ದಿನದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಾರೆ. ತಮ್ಮ ಪ್ರೀತಿಯ ಜೀವದೊಂದಿಗೆ ತನ್ನ ಆಂತರಿಕ ವಿಷಯಗಳನ್ನು ಹೇಳಿಕೊಳ್ಳುತ್ತಾರೆ. ಆಳವಾದ ರಹಸ್ಯವನ್ನು ಹೇಳಿಕೊಳ್ಳುವರು. ಅಲ್ಲದೆ ತನ್ನ ಸಂಗಾತಿ ಅಥವಾ ಪ್ರೀತಿಯ ವ್ಯಕ್ತಿಯ ಆಂತರಿಕ ವಿಷಯಗಳನ್ನು ಸಹ ತಿಳಿದುಕೊಳ್ಳುವುದರ ಮೂಲಕ ರಕ್ಷಣಾತ್ಮಕ ಭಾವನೆಯನ್ನು ನೀಡುತ್ತಾರೆ. ಇವರ ಪ್ರೀತಿಯ ನಡುವೆ ಆಗಾಗ ಚಿಕ್ಕ-ಪುಟ್ಟ ಘರ್ಷಣೆಗಳು ನಡೆಯುವ ಸಾಧ್ಯತೆಗಳಿವೆ.

ವೃಷಭ
ಈ ರಾಶಿಯ ವ್ಯಕ್ತಿಗಳು ಒಮ್ಮೆ ಪ್ರೀತಿ ಸ್ಪರ್ಶಕ್ಕೆ ಅಥವಾ ಸುಳಿಗೆ ಒಳಗಾದರೆ ತಮ್ಮ ಬದ್ಧತೆಯನ್ನು ಕಾಯ್ದುಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವರು. ಇವರು ತಮ್ಮ ಬದ್ಧತೆಯನ್ನು ಪಡೆದುಕೊಂಡ ಬಳಿಕ ಪಾಲುದಾರರನ್ನು ಮುದ್ದಿಸಲು ಬಯಸುತ್ತಾರೆ. ಅಲ್ಲದೆ ತಮ್ಮ ಪ್ರೀತಿಗಾಗಿ ನೂತನ ಉಡುಗೊರೆ, ದೂರದ ಸ್ಥಳಗಳಿಗೆ ಪ್ರಯಾಣ, ಆಶ್ಚರ್ಯಕರವಾದ ಡೇಟ್ಸ್‍ಗಳನ್ನು ಆಯೋಜಿಸುತ್ತಾರೆ. ಇವರ ಸಂಬಂಧ ಅಥವಾ ಪ್ರೀತಿಯಲ್ಲಿ ಒರಟಾದ ವರ್ತನೆ ಅಥವಾ ನಿರ್ಲಕ್ಷ್ಯವನ್ನು ತೋರುವುದನ್ನು ಗಮನಿಸಿದರೆ ಸಾಕಷ್ಟು ಮಾನಸಿಕ ನೋವನ್ನು ಅನುಭವಿಸುವರು. ಜೊತೆಗೆ ಒಂದಿಷ್ಟು ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ದೂರ ಸರಿಯಬಹುದು.

ಮಿಥುನ
ಈ ರಾಶಿಯ ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದಾಗ, ತನ್ನ ಪ್ರೀತಿಯ ವ್ಯಕ್ತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುವರು. ಅದಾ ಅವರ ಗಮನವನ್ನು ಸೆಳೆಯಲು ಸಂಪರ್ಕದಲ್ಲಿಯೇ ಇರಲು ಬಯಸುತ್ತಾರೆ. ಇವರು ತಮ್ಮ ಸಂಗಾತಿಗಾಗಿ ವಿಶೇಷ ಬರಹ ನೀಡಲು ಇಷ್ಟಪಡುವರು. ಆಗಾಗ ಕರೆ ಮಾಡುವುದರ ಮೂಲಕ ಅವರ ಧ್ವನಿ ಕೇಳಲು ನಿರೀಕ್ಷಿಸುತ್ತಾರೆ. ಕೆಲವೊಮ್ಮೆ ಇವರ ಅತಿಯಾದ ಆಸೆ ಹಾಗೂ ಬಯಕೆಗಳಿಂದಾಗಿ ಸಂಗಾತಿಗೆ ಕಿರಿಕಿರಿ ಉಂಟಾಗಬಹುದು. ತಾನು ಪ್ರೀತಿಸಿದ ವ್ಯಕ್ತಿಗಾಗಿ ತಮ್ಮ ಸಮಯವನ್ನು ಮೀಸಲಿಡಲು ಬಯಸುವರು.

ಕರ್ಕ
ಕರ್ಕ ರಾಶಿಯ ವ್ಯಕ್ತಿಗಳು ಅತ್ಯಂತ ಭಾವನಾತ್ಮಕ ಜೀವಿಗಳು ಎಂದು ಹೇಳಲಾಗುವುದು. ಇವರು ತಮ್ಮ ಪ್ರೀತಿ ಹಾಗೂ ಕುಟುಂಬದ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಇವರು ಸಣ್ಣ ಪುಟ್ಟ ಸಂಗತಿಯಲ್ಲೂ ಪ್ರೀತಿಯನ್ನು ತೋರುವುದರ ಮೂಲಕ ತನ್ನ ಪ್ರೀತಿಯ ಜೀವಕ್ಕೆ ಹೆಚ್ಚಿನ ಕಾಳಜಿಯನ್ನು ತೋರುತ್ತಾರೆ. ತಮ್ಮ ಪ್ರೀತಿಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ತೋರುವುದಿಲ್ಲ. ಅವರಿಗೆ ಬೇಕಾದಂತೆ ತಮ್ಮ ಕೆಲಸ ಕಾರ್ಯಗಳನ್ನು ಬದಲಿಸಿಕೊಳ್ಳುತ್ತಾರೆ. ಪ್ರೀತಿಗಾಗಿ ಎರಡು ಯೋಚನೆಯನ್ನು ಮಾಡುವುದಿಲ್ಲ. ಅವರಿಗಾಗಿ ಅತಿಯಾದ ಪ್ರೀತಿ ಹಾಗೂ ಕಾಳಜಿಯನ್ನು ತೋರುವರು.

ಸಿಂಹ
ಈ ರಾಶಿ ಚಕ್ರದ ಅಡಿಯಲ್ಲಿ ಜನಿಸಿದವರು ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಲ್ಲದೆ ಅವರ ಆಕರ್ಷಕ ವರ್ಚಸ್ಸು ಇವರಿಗೆ ಇರುವ ಒಂದು ವಿಶೇಷ ಗುಣ. ಇವರು ಸಂಬಂಧದಲ್ಲಿ ತೊಡಗಿಕೊಂಡಿರುವಾಗ ಅದೇ ಅವರಿಗೊಂದು ಆಕರ್ಷಣೆಯ ಸಂಗತಿಯಾಗಿರುತ್ತದೆ. ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಪ್ರೀತಿಯನ್ನು ತೋರುವರು. ಇತರರ ಮುಂದೆ ತಮ್ಮ ಸಂಗಾತಿಯ ಆಕರ್ಷಕ ಕೌಶಲ್ಯವನ್ನು ತೋರ್ಪಡಿಸಲು ಬಯಸುವರು. ಅಲ್ಲದೆ ತಮ್ಮ ಪ್ರೀತಿಯ ವ್ಯಕ್ತಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ.

ಕನ್ಯಾ
ಕನ್ಯಾ ರಾಶಿಯವರು ಪರಿಪೂರ್ಣತೆಗೆ ಹೆಚ್ಚು ಆದ್ಯತೆಯನ್ನು ನೀಡುವ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ತಮ್ಮ ಮನಸ್ಸಿಗೆ ಇಷ್ಟವಾದ ವ್ಯಕ್ತಿಗಾಗಿ ತಮ್ಮ ಪ್ರೀತಿಯನ್ನು ಮುಡುಪಾಗಿ ಇಡುವರು. ಪ್ರೀತಿಯನ್ನು ಹೇಳುವ ಮೊದಲು ಅಥವಾ ಮೆಚ್ಚುಗೆ ವ್ಯಕ್ತ ಪಡಿಸುವ ಮೊದಲು ಸಾಕಷ್ಟು ಯೋಚನೆಯನ್ನು ಮಾಡುತ್ತಾರೆ. ಇವರು ತಮ್ಮ ಪ್ರೀತಿಯ ವ್ಯಕ್ತಿ ಅಥವಾ ಪಾಲುದಾರರನ್ನು ಸುಧಾರಿಸಲು ಸಾಕಷ್ಟು ಮಾರ್ಗವನ್ನು ಹುಡುಕುವರು. ಸಂಭಾಷಣೆ, ಉಡುಗೆಯನ್ನು ತೊಡುವ ಕೌಶಲ್ಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಹೆಚ್ಚಿನ ಸಲಹೆ ಹಾಗೂ ಸುಧಾರಣೆಯನ್ನು ತರಲು ಬಯಸುವರು.

ತುಲಾ
ಇವರು ಸಮಾನತೆಗೆ ಹೆಸರುವಾಸಿಯಾದವರು ಆಗಿರುತ್ತಾರೆ. ಇವರು ತಮ್ಮ ಪ್ರೀತಿ ಪಾತ್ರರಿಗಾಗಿ ಸಾಕಷ್ಟು ತ್ಯಾಗ ಹಾಗೂ ಪ್ರೀತಿಯನ್ನು ನೀಡುವರು. ತಮ್ಮ ಪ್ರೀತಿಯನ್ನು ಕುರುಡಾಗಿ ನಂಬುವ ವ್ಯಕ್ತಿಗಳು ಇವರು. ತಮ್ಮ ಪ್ರೀತಿಯ ವ್ಯಕ್ತಿಯು ತಮ್ಮ ಪರವಾಗಿಯೇ ನಿಲ್ಲುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ಸೂಕ್ತ ಸಮಯಗಳ ಕಾಲ ಕಳೆಯಲು ಬಯಸುವರು. ಅವರಿಗಾಗಿ ತಮ್ಮ ಸಮಯಗಳನ್ನು ಇತರ ಕೆಲಸಗಳೊಂದಿಗೆ ಹೊಂದಿಸಿಕೊಳ್ಳುವರು.

ವೃಶ್ಚಿಕ
ಶ್ರಮ ಜೀವಿಗಳು ಹಾಗೂ ನಿಷ್ಠಾವಂತ ವ್ಯಕ್ತಿಗಳು ಎನ್ನುವ ವಿಷಯಕ್ಕೆ ಮಾದರಿಯಾಘಿ ನಿಲ್ಲುವ ವ್ಯಕ್ತಿಗಳು ಇವರು. ಇವರು ಒಮ್ಮೆ ಪ್ರೀತಿಯಲ್ಲಿ ಬಿದ್ದರು ಅಥವಾ ಸಂಗಾತಿಯನ್ನು ಹೊಂದಿದ್ದಾರೆ ಎಂದಾದರೆ ಅವರಿಗಾಗಿ ನಿಷ್ಠರಾಗಿ ಇರುತ್ತಾರೆ. ತಮ್ಮ ಸಂಗಾತಿಯ ಅಥವಾ ಪ್ರೇಮಿಯ ಹಿಂದೆ ಗಾಸಿಪ್ ರೀತಿಯಲ್ಲಿ ಮಾತನಾಡುವುದನ್ನು ಸಹಿಸುವುದಿಲ್ಲ. ತಮ್ಮ ಪ್ರೀತಿಯ ವ್ಯಕ್ತಿಗಾಗಿ ಎಲ್ಲಾ ರೀತಿಯ ರಕ್ಷಣೆ ಹಾಗೂ ಪ್ರೀತಿಯನ್ನು ನೀಡುವ ಉದ್ದೇಶಕ್ಕೆ ಸಾಕಷ್ಟು ಹೋರಾಟವನ್ನು ನಡೆಸುವರು. ಅವರನ್ನು ಉಳಿಸಿಕೊಳ್ಳಲು ಅಥವಾ ರಕ್ಷಿಸುವ ಸಂಗತಿಯಲ್ಲಿ ಎರಡು ಬಾರಿ ಚಿಂತಿಸುವುದಿಲ್ಲ. ಇವರ ಪ್ರೀತಿಯು ಬಹಳ ಮುಗ್ಧ ಹಾಗೂ ನಿಷ್ಠೆಯಿಂದ ಕೂಡಿರುತ್ತದೆ.

ಧನು
ಈ ರಾಶಿಯ ವ್ಯಕ್ತಿಗಳು ಪ್ರೀತಿಯಲ್ಲಿ ಮುಳುಗುವ ಮುನ್ನ ಅಥವಾ ಗಂಭೀರವಾದ ಸಂಬಂಧವನ್ನು ತಲುಪುವ ಮೊದಲು ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವರು. ಇವೆಲ್ಲದರ ಬಳಿಕ ಪ್ರೀತಿಯಲ್ಲಿ ಬಿದ್ದರೆ ತಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ಸಾಕಷ್ಟು ಮೋಜು ಹಾಗೂಅವರಿಗಾಗಿ ಮೀಸಲಾದ ವ್ಯಕ್ತಿಗಳಂತೆ ಇರುತ್ತಾರೆ. ತಮ್ಮ ಸಂಗಾತಿಯನ್ನು ಸಾಹಸಮಯ ಪ್ರವಾಸಕ್ಕೆ ಕರೆದೊಯ್ಯಲು ಬಯಸುತ್ತಾರೆ. ಎಂದೂ ಅವರು ತಿಳಿದಿರದ ವಿಷಯಗಳ ಪರಿಚಯ ಮಾಡಿಸಲು ಪ್ರಯತ್ನಿಸುತ್ತಾರೆ.

ಮಕರ
ಈ ರಾಶಿಯ ವ್ಯಕ್ತಿಗಳು ಸ್ವಭಾವತಃ ಅದ್ಭುತ ಪ್ರಣಯ ಜೀವಿಗಳು. ಇವರು ಪ್ರೀತಿಯಲ್ಲಿ ಬಿದ್ದಾಗ ಇವರ ಸಂಗಾತಿಯು ಇವರ ಪ್ರೀತಿಯಲ್ಲಿ ಗುಲಾಬಿಯ ಹಾಸಿಗೆಯಂತಹ ಅನುಭವವನ್ನು ಪಡೆಯಬಹುದು. ಮುಂಬತ್ತಿ ಬೆಳಕಿನ ಊಟ ಮತ್ತು ಕಡಲ ತೀರದಲ್ಲಿ ಆಶ್ಚರ್ಯಕರ ಉಡುಗೊರೆಯನ್ನು ನೀಡುವುದರ ಮೂಲಕ ಪುಳಕ ಗೊಳಿಸುವರು. ಇವರು ವಾಸ್ತವಿಕ ರೀತಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ.

ಕುಂಭ
ಇವರು ತಮ್ಮ ಪ್ರೀತಿಯನ್ನು ಪಾಲುದಾರರೊಂದಿಗೆ ಉತ್ತಮ ರೀತಿಯಲ್ಲಿ ತೋರಿಸುತ್ತಾರೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸ್ವಲ್ಪ ಹಿಂಜರಿಕೆ ಹಾಗೂ ಮುಜುಗರದ ಸ್ವಭಾವಕ್ಕೆ ಒಳಗಾಗುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವಲ್ಲಿ ವಿಫಲರಾಗಿರುತ್ತಾರೆ. ಇವರ ತಲೆಯಲ್ಲಿ ಏನಿದೆ ಅಥವಾ ಮನಸ್ಸಿನ ಮಾತು ಮತ್ತು ಭಾವನೆಗಳು ಏನು ಎನ್ನುವುದನ್ನು ಅಷ್ಟು ಸುಲಭವಾಗಿ ಅರಿಯಲು ಸಾಧ್ಯವಿಲ್ಲ. ಸೃಜನಾತ್ಮಕ ರೀತಿಯಲ್ಲಿ ಸಂಗಾತಿಯನ್ನು ಸಂತೋಷಗೊಳಿಸುತ್ತಾರೆ.

ಮೀನ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಹಗಲು ಕನಸು ಕಾಣುವವರು ಎಂದು ಹೇಳಲಾಗುವುದು. ಇವರು ತಮ್ಮ ಪ್ರೀತಿಯೊಂದಿಗೆ ಇರುವಾಗ ಅಥವಾ ಪ್ರೀತಿಯಲ್ಲಿ ಇರುವಾಗ ಅಕ್ಷರಶಃ ಕುರುಡು ಎನ್ನುವ ರೀತಿಯಲ್ಲಿ ಇರುತ್ತಾರೆ. ಇವರಿಗೆ ಇಷ್ಟವಾದ ವ್ಯಕ್ತಿಯಲ್ಲಿ ಇರುವ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಯನ್ನು ಸಮಾನ ರೀತಿಯಲ್ಲಿ ಸ್ವೀಕರಿಸುತ್ತಾರೆ. ಅವರ ಯಾವುದೇ ಗುಣಲಕ್ಷಣಗಳನ್ನು ಸಹ ಕಡೆಗಣಿಸುವುದಿಲ್ಲ. ಇವರು ತಮ್ಮ ಪ್ರೀತಿಯ ವ್ಯಕ್ತಿಯನ್ನು ಭಾವೋದ್ವೇಗದಿಂದ ಪ್ರೀತಿಸುತ್ತಾರೆ. ಇವರು ಕೆಲವೊಮ್ಮೆ ಪ್ರೀತಿಯ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಾರೆ. ಪ್ರೀತಿಯಂದ ನೋವುಂಟಾದರೆ ಸುಲಭವಾಗಿ ಭಾವನಾತ್ಮಕವಾಗಿ ಗಾಯಕ್ಕೆ ಒಳಗಾಗುತ್ತಾರೆ.



Click it and Unblock the Notifications











