Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹೋಳಿ 2019: ಯಾವ್ಯಾವ ರಾಶಿಚಕ್ರದವರು ಯಾವ ಬಣ್ಣದಲ್ಲಿ ಹೋಳಿ ಆಚರಿಸಬೇಕು?
ಭಾರತದಲ್ಲಿ ವಿವಿಧ ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳು ಇರುವಂತೆ, ಹಲವಾರು ಹಬ್ಬಹರಿದಿನಗಳು ವರ್ಷವಿಡಿ ಒಂದಲ್ಲಾ ಒಂದು ಪ್ರದೇಶ ಅಥವಾ ಧರ್ಮದಲ್ಲಿ ನಡೆಯುತ್ತಾ ಇರುವುದು. ಈಗ ಹೋಳಿ ಹಬ್ಬವು ಬಂದಿದ್ದು, ಚಳಿಗಾಲ ಕಳೆದು ವಸಂತ ಕಾಲದ ಆಗಮನವನ್ನು ಹೋಳಿ ಹಬ್ಬವು ಸೂಚಿಸುವುದು. ಹಿಂದೂ ಪಂಚಾಂಗದ ಫಾಲ್ಗುಣಿ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವು ಮಾರ್ಚ್ 21ರಂದು ನಡೆಯಲಿದೆ. ಹೋಳಿಕ ದಹನವು ಮಾ.20ರಂದು ರಾತ್ರಿ ನಡೆಯುವುದು.
ಹೋಳಿಗೆ ಮುನ್ನಾದ ದಿನ ಹೋಳಿಕ ದಹನ ನಡೆಯುತ್ತಿದೆ. ಇದು ನಮ್ಮಲ್ಲಿರುವಂತಹ ನಕಾರಾತ್ಮಕತೆಯನ್ನು ಸುಡುವುದರ ಸೂಚನೆಯಾಗಿದೆ ಎಂದು ನಂಬಲಾಗಿದೆ. ವಸಂತ ಕಾಲದ ಆರಂಭದ ಸೂಚನೆಯಾಗಿರುವ ಹಿನ್ನೆಲೆಯಲ್ಲಿ ಹೋಳಿ ಹಬ್ಬವನ್ನು ಬಣ್ಣಗಳಿಂದ ಆಚರಣೆ ಮಾಡಲಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತಕ್ಕಿಂತಲೂ ಹೋಳಿ ಹಬ್ಬವು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗೆ ಅನುಗುಣವಾಗಿ ಯಾವ ಬಣ್ಣವನ್ನು ಹೋಳಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ..

ಮೇಷ
ಮೇಷ ರಾಶಿಯವರಿಗೆ ಕೆಂಪು ಬಣ್ಣವು ಅದೃಷ್ಟವನ್ನು ತರುವುದು. ಅದೇ ಗುಲಾಬಿ ಬಣ್ಣವು ಅವರಿಗೆ ಶಾಂತಿ ಣಿಡುವುದು. ಪ್ರೀತಿ ಹಾಗೂ ಗೆಲುವಿಗೆ ಕೆಂಪು ಬಣ್ಣವು ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ಮೇಷ ರಾಶಿಯವರು ಕೆಂಪು ಹಾಗೂ ಗುಲಾಬಿ ಬಣ್ಣದಿಂದ ಹೋಳಿ ಹಬ್ಬವನ್ನು ಆಚರಿಸಿಕೊಳ್ಳಬಹುದು.

ವೃಷಭ
ಬಿಳಿ ಬಣ್ಣವು ಎಲ್ಲಾ ಬಣ್ಣಗಳ ಶಕ್ತಿಯನ್ನು ತನ್ನಲ್ಲಿ ಇಟ್ಟು ಕೊಂಡಿರುವುದು. ಇದು ವೃಷಭ ರಾಶಿಯವರಿಗೆ ತುಂಬಾ ಶುಭ. ಇದು ಶಾಂತಿ ಮತ್ತು ಧನಾತ್ಮಕತೆಯ ಸಂಕೇತವಾಗಿದೆ. ಶುದ್ಧ ಬಿಳಿ ಬಣ್ಣವು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಆದರೆ ನೀವು ಇದರ ಬೇರೆ ವಿಧಗಳನ್ನು ಕೂಡ ಬಳಸಬಹುದು.

ಮಿಥುನ
ಈ ವರ್ಷ ಮಿಥುನ ರಾಶಿಯವರು ಹಳದಿ ಹಾಗೂ ಹಸಿರು ಬಣ್ಣದಿಂದ ಹೋಳಿ ಆಡಬೇಕು. ಹಸಿರು ಬಣ್ಣವು ಅದೃಷ್ಟ ಮತ್ತು ಸಮೃದ್ಧಿ ತರುವುದು. ಹಳದಿ ಬಣ್ಣವು ತುಂಬಾ ಪವಿತ್ರವೆಂದು ನಂಬಲಾಗಿದೆ. ಇದು ಮಿಥುನ ರಾಶಿಯವರ ಜೀವನದಲ್ಲಿ ಬರುವಂತಹ ಪ್ರೀತಿ ಹಾಗೂ ಸಂಭ್ರಮದ ಸೂಚಕವಾಗಿದೆ.

ಕರ್ಕಾಟಕ
ಕರ್ಕಾಟಕ ರಾಶಿಯವರು ಬಿಳಿ ಹಾಗೂ ಅದರ ಇತರ ವಿಧಗಳನ್ನು ಬಳಸಬಹುದು. ಇದರಿಂದ ಅವರಿಗೆ ಈ ಹೋಳಿ ಸಂದರ್ಭದಲ್ಲಿ ಶಾಂತಿ ಹಾಗೂ ಅಚಲತೆ ಸಿಗುವುದು. ಇದರಿಂದಾಗಿ ಅವರಿಗೆ ಈ ವರ್ಷದ ಹೋಳಿಯು ತುಂಬಾ ಸಂತೋಷ ನೀಡುವುದು.

ಸಿಂಹ
ಸಿಂಹ ರಾಶಿಯವರು ಈ ಹೋಳಿಗೆ ಕೇಸರಿ ಹಾಗೂ ಹಳದಿ ಬಣ್ಣ ಬಳಸಿಕೊಳ್ಳಬಹುದು. ಈ ಬಣ್ಣಗಳನ್ನು ಬಳಸುವ ಕಾರಣದಿಂದಾಗಿ ಆರೋಗ್ಯ ಹಾಗೂ ಜ್ಞಾನ ಸಿಗುವುದು. ಹಳದಿ ಬಣ್ಣವು ತುಂಬಾ ಪವಿತ್ರವೆಂಧು ಪರಿಗಣಿಸಲಾಗಿದೆ ಮತ್ತು ಇದು ಧಾರ್ಮಿಕ ವಿಧಿ ವಿಧಾನಗಳಿಗೂ ಬಳಸಲಾಗುತ್ತದೆ. ಇದು ಸಿಂಹ ರಾಶಿಯವರ ಜೀವಕ್ಕೆ ಶುಭವನ್ನು ಉಂಟು ಮಾಡಲಿದೆ.

ಕನ್ಯಾ
ಕನ್ಯಾ ರಾಶಿಯವರು ಈ ವರ್ಷ ಹಸಿರು ಬಣ್ಣದೊಂದಿಗೆ ಹೋಳಿ ಆಡಬೇಕು. ಇದರಿಂದಾಗಿ ಅವರಿಗೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ನೆರವಾಗುವುದು. ಇದರಿಂದ ಅವರ ಕಾರ್ಯಕ್ಷಮತೆಯು ಪರಿಣಾಮಕಾರಿಯಾಗಿ ಹೆಚ್ಚಾಗಲಿದೆ. ಯಾಕೆಂದರೆ ಇದು ಹೊಸ ಹಾಗೂ ತಾಜಾ ಶಕ್ತಿಯನ್ನು ತುಂಬಲಿದೆ.

ತುಲಾ
ತುಲಾ ರಾಶಿಯವರು ಹಳದಿ, ಅದೇ ರೀತಿಯಾಗಿ ಬಿಳಿ ಬಣ್ಣವನ್ನು ಬಳಸಬಹುದು. ಹಳದಿ ಬಣ್ಣವು ಇವರಿಗೆ ಸಮೃದ್ಧಿ ನೀಡುವುದು ಮತ್ತು ಅವರ ಜೀವನದಲ್ಲಿ ಅದೃಷ್ಟವನ್ನು ತರಲಿದೆ. ಬಿಳಿ ಬಣ್ಣವು ತುಲಾ ರಾಶಿಯವರ ಜೀವನದಲ್ಲಿ ಶಾಂತಿಯನ್ನು ಉಂಟು ಮಾಡಲಿದೆ.

ವೃಶ್ಚಿಕ
ಮೇಷ ರಾಶಿಯವರಂತೆ ಅಗ್ನಿ ರಾಶಿಯಾಗಿರುವ ವೃಶ್ಚಿಕವು ಈ ಹೋಳಿ ಹಬ್ಬಕ್ಕೆ ಕೆಂಪು ಹಾಗೂ ಗುಲಾಬಿ ಬಣ್ಣ ಬಳಕೆ ಮಾಡಬೇಕು. ಈ ಬಣ್ಣದಿಂದ ಅವರ ಜೀವನದಲ್ಲಿ ಹೆಚ್ಚು ಪ್ರೀತಿ ಹಾಗೂ ಕಾಳಜಿಯು ಹರಿದು ಬರುವುದು. ಇದು ಆ ದಿನದಲ್ಲಿ ಅವರಿಗೆ ತುಂಬಾ ಶುಭವನ್ನು ಉಂಟು ಮಾಡಲಿದೆ.

ಧನು
ಈ ಹೋಳಿ ಸಂದರ್ಭದಲ್ಲಿ ಧನು ರಾಶಿಯವರು ಕೆಂಪು ಹಾಗೂ ಹಳದಿ ಬಣ್ಣವನ್ನು ಬಳಸಬಹುದು. ಹಳದಿ ಬಣ್ಣವು ಇವರ ಜೀವನದಲ್ಲಿ ಸಂಭ್ರಮ ತರಲಿದೆ. ಅದೇ ರೀತಿಯಾಗಿ ಪವಿತ್ರ ಬಣ್ಣವಾಗಿರುವ ಕೆಂಪು ಆ ದಿನ ಶುಭ ಹಾಗೂ ಅದೃಷ್ಟ ತರಲಿದೆ.

ಮಕರ
ಈ ಹೋಳಿ ಹಬ್ಬಕ್ಕೆ ಮಕರ ರಾಶಿಯವರು ನೀಲಿ ಮತ್ತು ಹಸಿರು ಬಣ್ಣವನ್ನು ಆಯ್ಕೆ ಮಾಡಬಹುದು. ಹಸಿರು ಬಣ್ಣವು ಆಧ್ಯಾತ್ಮಿಕ ಜ್ಞಾನ ಪಡೆಯಲು ನೆರವಾಗಲಿದೆ. ಅದೇ ನೀಲಿ ಬಣ್ಣವು ತಾಳ್ಮೆ ಯಿಂದ ಇರಲು ನೆರವಾಗಲಿದೆ. ಎರಡೂ ಕೂಡ ಈ ವರ್ಷ ಆಧ್ಯಾತ್ಮಿಕ ಇಚ್ಛೆಯನ್ನು ಪೂರೈಸಲಿದೆ.

ಕುಂಭ
ಕುಂಭ ರಾಶಿಯವರಿಗೆ ನೀಲಿ ಬಣ್ಣವು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಈ ಬಣ್ಣವು ಪ್ರಾಮಾಣಿಕತೆ ಮತ್ತು ನ್ಯಾಯವನ್ನು ಪ್ರತಿನಿಧಿಸುವುದು. ಇದು ಕುಂಭ ರಾಶಿಯವರ ನಡತೆಯಲ್ಲಿ ಕಂಡು ಬರುವುದು. ಇದು ಆರ್ಥಿಕ ಪ್ರಗತಿ ಮತ್ತು ಮುನ್ನಡೆಯನ್ನು ಸೂಚಿಸುವುದು.

ಮೀನ
ಮೀನ ರಾಶಿಯವರು ಹೋಳಿಗೆ ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಆಡುವುದು ಶುಭವಾಗಿರಲಿದೆ. ಹಳದಿ ಬಣ್ಣವು ಸಮೃದ್ಧಿ ಪಡೆಯಲು ನೆರವಾಗಲಿದೆ ಮತ್ತು ಭೌತಿಕ ಬದಕನ್ನು ಇದು ಉತ್ತಮಪಡಿಸಲಿದೆ. ಕೆಂಪು ಬಣ್ಣವು ಪ್ರತಿಯೊಂದಕ್ಕೂ ಶುಭವನ್ನು ತರಲಿದೆ.



Click it and Unblock the Notifications











