Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಚ್ಚರಿಯ ಜಗತ್ತು: ಸ್ಟ್ರಾಬೆರಿಯಂತೆ ಕಾಣಿಸುವ ಮಹಿಳೆಯ ಒಸಡುಗಳು!!
ಕೆಲವೊಂದು ರೋಗಗಳು ಹಾಗೂ ಕಾಯಿಲೆಗಳು ಅದು ತೀವ್ರ ಸ್ವರೂಪ ಪಡೆಯುವ ತನಕ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಅದರಲ್ಲೂ ನಾವು ಹೆಚ್ಚಾಗಿ ಕಡೆಗಣಿಸುವಂತಹ ಬಾಯಿಯ ಆರೋಗ್ಯವು ದೊಡ್ಡ ಮಟ್ಟದ ಸಮಸ್ಯೆಯನ್ನು ಉಂಟು ಮಾಡಬಲ್ಲದು. ಇಲ್ಲೊಬ್ಬರ ಮಹಿಳೆಯ ಒಸಡುಗಳು ಸ್ಟ್ರಾಬೆರಿ ರೂಪಕ್ಕೆ ತಿರುಗಿದ ಬಳಿಕ ಆಕೆ ಇದನ್ನು ವೈದ್ಯರ ಬಳಿಗೆ ತೋರಿಸಲು ಹೋಗಿದ್ದಾರೆ. ಪ್ರತಿರೋಧಕ ವ್ಯವಸ್ಥೆಯು ರಕ್ತನಾಳಗಳ ಮೇಲೆ ದಾಳಿ ಮಾಡುವುದು ಮತ್ತು ಅದು ಒಸಡುಗಳು ಸ್ಟ್ರಾಬೆರಿಯಂತೆ ಕಾಣುವಂತೆ ಮಾಡಿದೆ. ಈ ಪರಿಸ್ಥಿತಿ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ.

ವರದಿಗಳ ಪ್ರಕಾರ ಮಹಿಳೆಯ ಒಸಡುಗಳು ಸ್ಟ್ರಾಬೆರಿಯಂತೆ ಆಗಿರುವ ಪರಿಣಾಮದಿಂದಾಗಿ ಹಲ್ಲುಗಳು ಅದರೊಳಗೆ ಸಿಲುಕಿಕೊಂಡಿದೆ. ಮಹಿಳೆಯ ಗುರುತನ್ನು ಇಲ್ಲಿ ಗೌಪ್ಯವಾಗಿ ಇಡಲಾಗಿದೆ. ಆದರೆ ಈ ಸಮಸ್ಯೆಯು ಸುಮಾರು ಆರು ವಾರಗಳ ಮೊದಲು ಕಾಣಿಸಿಕೊಂಡಿದೆ ಎಂದು ಮಹಿಳೆಯರು ವೈದ್ಯರಿಗೆ ತಿಳಿಸಿರುವರು. ತನ್ನ ಪರಿಸ್ಥಿತಿ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಈ ಮಹಿಳೆಯು, ತನಗೆ ಮೂಗಿನಲ್ಲಿ ರಕ್ತವು ಕಂಡುಬಂದಿದೆ ಮತ್ತು ಮುಖದ ಮೇಲೆ ಮೂಡಿರುವಂತಹ ಬೊಕ್ಕೆಗಳಿಂದಾಗಿ ಅದು ಚರ್ಮವನ್ನು ತಿಂದು ಹಾಕಿದಂತೆ ಕಾಣಿಸುತ್ತಿದೆ. ವೈದ್ಯರು ಮಹಿಳೆಯ ಈ ಪರಿಸ್ಥಿತಿಯನ್ನು "ಸ್ಟ್ರಾಬೆರಿ ಜಿಂಜಿವಿಟಿಸ್''ಎಂದು ಗುರುತಿಸಿದ್ದಾರೆ.
ಈ ಪರಿಸ್ಥಿತಿಯ ವೈದ್ಯಕೀಯ ಹೆಸರು ಗ್ರ್ಯಾನುಲೋಮಾಟೋಸಿಸ್ ವಿತ್ ಪಾಲಿಯಾಂಗೈಟಿಸ್ ಎನ್ನುವುದಾಗಿದೆ. ಇದು ತುಂಬಾ ಅಪರೂಪದ ಕಾಯಿಲೆಯಾಗಿದ್ದು, ಇಲ್ಲಿ ಪ್ರತಿರೋಧಕ ವ್ಯವಸ್ಥೆಯು ರಕ್ತನಾಳಗಳ ಮೇಲೆ ದಾಳಿ ಮಾಡುವುದು. ವೈದ್ಯರು ಪ್ರತಿರೋಧಕ ವ್ಯವಸ್ಥೆ ಮತ್ತು ಉರಿಯೂತಕ್ಕೆ ಔಷಧಿಯನ್ನು ನೀಡಿದ್ದಾರೆ. ಆದರೆ ಈ ರೋಗವು ಒಂದು ರಹಸ್ಯವಾಗಿಯೇ ಉಳಿದುಕೊಂಡಿದೆ. ಯಾಕೆಂದರೆ ಮಹಿಳೆಯು ಮರಳಿ ಚಿಕಿತ್ಸೆಗೆ ಬರಲೇ ಇಲ್ಲ. ಈ ಪರಿಸ್ಥಿತಿ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
