ಈತ ಕಣ್ತಪ್ಪಿನಿಂದ ಶಾಂಪೂ ಬಾಟಲಿ ಬದಲಿಗೆ ಕೀಟನಾಶಕ ಬಾಟಲಿ ತೆಗೆದು ಅದನ್ನು ತಲೆಗೆ ಹಾಕಿಕೊಂಡ!

ಅವಸರವೇ ಅಪಾಯ ಎನ್ನುವ ಮಾತಿದೆ. ಆದರೂ ನಾವೆಲ್ಲರೂ ಅವಸರ ಮಾಡದೆ ಇರುವುದಿಲ್ಲ. ಎಲ್ಲಾ ಕಡೆಯಲ್ಲೂ ನಾವು ಅವಸರವಸರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಇರುತ್ತೇವೆ. ಇದರಿಂದಾಗಿಯೇ ಅನಾಹುತಗಳು ಸಂಭವಿಸುವುದು. ಅನಾಹುತಗಳು ಸಂಭವಿಸುವ ಮೊದಲು ಅದನ್ನು ತಡೆಯುವುದು ಒಳ್ಳೆಯದು. ಇದರಿಂದ ನಾವು ಅವಸರ ಮಾಡುವುದನ್ನು ಕಡಿಮೆ ಮಾಡಬೇಕು. ವಿಶ್ವದಲ್ಲಿ ಕೆಲವೊಂದು ಚಿತ್ರವಿಚಿತ್ರ ಘಟನೆಗಳು ನಡೆಯಲು ಇಂತಹ ಅವಸರವೇ ಕಾರಣವಾಗಿದೆ. ಇಲ್ಲೊಬ್ಬ ವ್ಯಕ್ತಿಯು ಶಾಂಪೂ ಬದಲಿಗೆ ಅವಸರದಲ್ಲಿ ಕೀಟನಾಶವನ್ನು ಬಳಸಿದ್ದಾನೆ. ಕೀಟನಾಶಕದ ಬಗ್ಗೆ ನಾವು ಯಾವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸುತ್ತೇವೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಆಕಸ್ಮಿಕವಾಗಿ ಶಾಂಪೂ ಬದಲಿಗೆ ಕೀಟನಾಶಕ ಬಳಸಿದ ವ್ಯಕ್ತಿಯ ಮುಂದಿನ ಸ್ಥಿತಿ ಏನಾಯಿತು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ...

Shampoo

ಶೌಚಾಲಯದಲ್ಲಿ ಕೀಟನಾಶವನ್ನು ಸಂಗ್ರಹಿಸಿಟ್ಟಿದ್ದ ಈ ವ್ಯಕ್ತಿಯು ಡಿಕ್ಲೋರೊವೊಸ್ ಅಥವಾ ಡಿಡಿವಿಪಿ ಎನ್ನುವ ಕೀಟನಾಶಕವನ್ನು ಶೌಚಾಲಯದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. ಇದರ ಬದಿಯಲ್ಲೇ ಶಾಂಪೂ ಬಾಟಲಿ ಕೂಡ ಇತ್ತು. ಆದರೆ ಆತ ಕಣ್ತಪ್ಪಿನಿಂದ ಶಾಂಪೂ ಬಾಟಲಿ ಬದಲಿಗೆ ಕೀಟನಾಶಕ ಬಾಟಲಿ ತೆಗೆದು ಅದನ್ನು ತಲೆಗೆ ಹಾಕಿಕೊಂಡ.

ಆತನಿಗೆ ಸ್ವಲ್ಪ ಸಮಯ ಬಳಿಕ ಇದು ಮನವರಿಕೆ ಆಯಿತು

ಆತನಿಗೆ ಸ್ವಲ್ಪ ಸಮಯ ಬಳಿಕ ಇದು ಮನವರಿಕೆ ಆಯಿತು

ತಲೆಗೆ ಕೀಟನಾಶಕವನ್ನು ಹಾಕಿಕೊಂಡ ಬಳಿಕ ಅದು ವಾಸನೆ ಬರಲು ಆರಂಭಿಸಿದ ವೇಳೆ ಆತನಿಗೆ ಇದು ವಾಸನೆ ಬರಲು ಆರಂಭಿಸಿತು. ಆಗ ಆತನಿಗೆ ತನ್ನ ತಪ್ಪಿನ ಮನವರಿಕೆ ಆಯಿತು.

ತನ್ನ ತಪ್ಪಿನ ಅರಿವಾದಾಗ ಆತ ಮನೆಮದ್ದನ್ನು ಪ್ರಯತ್ನಿಸಿದ

ತನ್ನ ತಪ್ಪಿನ ಅರಿವಾದಾಗ ಆತ ಮನೆಮದ್ದನ್ನು ಪ್ರಯತ್ನಿಸಿದ

ಕೀಟನಾಶವನ್ನು ಬಳಸಿಕೊಂಡ ಬಳಿಕ ಆ ವ್ಯಕ್ತಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಅವರಿಗೆ ಚಳಿ ಮತ್ತು ಬೆವರು ಕಾಣಿಸಿಕೊಂಡಿತು. ಆತ ಆ ಕೂಡಲೇ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ಕೀಟನಾಶವನ್ನು ತೊಳೆಯಲು ಪ್ರಯತ್ನಿಸಿದ. ಇದರ ಬಳಿಕ ಆತ ಚಿಕಿತ್ಸೆಗೆ ತೆರಳಿದ.

ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದರು

ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದರು

ವಿಷಕ್ಕಾಗಿ ಆ ವ್ಯಕ್ತಿಗೆ ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದರು ಮತ್ತು ಇದರ ಬಳಿಕ ಕೂದಲು ಕತ್ತರಿಸಿಕೊಂಡು ತಲೆಬುರುಡೆಯಲ್ಲಿದ್ದ ಕೀಟನಾಶಕ ತೆಗೆಯಲಾಯಿತು. ವೈದ್ಯರು ಎಸೆಯುವ ರೇಜರ್ ಬಳಸಿಕೊಂಡು ಕೂದಲು ಕತ್ತರಿಸಿದರು. ಕೆಲವು ದಿನಗಳ ಬಳಿಕ ಆತ ಚೇತರಿಸಿಕೊಂಡ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.

English summary

He Used Pesticide Instead Of Shampoo

A man mistook a bottle of pesticide for shampoo and washed his hair with the highly toxic substance. He only realised it when he got the smell. Instead of consulting a doctor immediately the man tried using home remedies only to worsen his condition.This is an accidental case of a man using pesticide instead of a shampoo during his shower.
X
Desktop Bottom Promotion