Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈತ ನಾಯಿ ಮಾತ್ರೆ ತಿಂದು ಕ್ಯಾನ್ಸರ್ ರೋಗವನ್ನೇ ಓಡಿಸಿದ!!
ವಿಶ್ವದಲ್ಲಿ ಕೆಲವೊಂದು ಜನರು ತುಂಬಾ ವಿಚಿತ್ರ ಔಷಧಿಗಳನ್ನು ಬಳಕೆ ಮಾಡಿಕೊಂಡು ತಮ್ಮ ಕಾಯಿಲೆಗಳನ್ನು ಗುಣಪಡಿಸಿ ಕೊಂಡಿರುವ ಬಗ್ಗೆ ಕೇಳಿದ್ದೇವೆ. ಈ ಲೇಖನದಲ್ಲಿ ಕೂಡ ನಾವು ನಿಮಗೆ ಅಂತಹ ಒಂದು ಪ್ರಕರಣದ ಬಗ್ಗೆ ತಿಳಿಸಲಿದ್ದೇವೆ. ನಾಯಿಗೆ ಕೀಟಬಾಧೆ ತಪ್ಪಿಸಲು ಬಳಸುವಂತಹ ಔಷಧಿಯನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿರುವುದಾಗಿ ಹೇಳಿದ್ದಾರೆ. ಆತ 5 ಡಾಲರ್ ಗೆ ಸಿಗುವಂತಹ ನಾಯಿಗಳ ಮೇಲಿನ ಕೀಟಗಳನ್ನು ತೆಗೆಯಲು ಬಳಸುವ ಔಷಧಿ ತೆಗೆದುಕೊಂಡಿದ್ದಾನೆ. ಈ ವಿಚಿತ್ರ ಕಥೆ ಬಗ್ಗೆ ನೀವು ತಿಳಿಯಿರಿ.

ಆತ ಮೂರು ತಿಂಗಳು ಮಾತ್ರ ಬದುಕಲಿದ್ದ
ಒಕ್ಲಾಹೊಮಾದ ಜೋ ಟಿಪ್ಪೆನ್ಸ್ ಎಂಬ ವ್ಯಕ್ತಿಗೆ 2016ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬಂದಿತ್ತು. ಹೀಗಾಗಿ ಆತ ಮೂರು ತಿಂಗಳು ಮಾತ್ರ ಬದುಕುವುದಾಗಿ ವೈದ್ಯರು ಹೇಳಿದ್ದರು.

ಕ್ಯಾನ್ಸರ್ ದೇಹದ ಬೇರೆ ಭಾಗಗಳಿಗೂ ಪಸರಿಸಿತ್ತು
ಜೋ ಶ್ವಾಸಕೋಶದ ಕ್ಯಾನ್ಸರ್ ದೇಹದ ಇತರ ಭಾಗಗಳಾಗಿರುವಂತಹ ಹೊಟ್ಟೆ, ಕುತ್ತಿಗೆ, ಪಿತ್ತಕೋಶ ಮತ್ತು ಮೂಳೆಗಳಿಗೆ ಕೂಡ ಹರಡಿತ್ತು ಎಂದು ವೈದ್ಯರು ಕೆಲವು ತಿಂಗಳ ಪರೀಕ್ಷೆ ಬಳಿಕ ತಿಳಿಸಿದ್ದರು.

ಕುಟುಂಬ ಹಾಗೂ ಸ್ನೇಹಿತರಿಗೆ ಗುಡ್ ಬೈ ಹೇಳಲು ತಿಳಿಸಿದ್ದರು
ಈ ಕ್ಯಾನ್ಸರ್ ಪ್ರಾಣಹಾನಿಗೆ ಕಾರಣವಾಗುತ್ತಿತ್ತು ಮತ್ತು ವೈದ್ಯರು ಆತನಿಗೆ ತನ್ನ ಪ್ರೀತಿಪಾತ್ರರಿಗೆ ಅಂತಿಮ ವಿದಾಯ ಹೇಳಲು ಸೂಚಿಸಿದ್ದರು. ಆತನ ಬಳಿ ಕೇವಲ ಮೂರು ತಿಂಗಳು ಮಾತ್ರ ಬಾಕಿಯಿತ್ತು.

ಕೀಟಬಾಧೆಗೆ ತೆಗೆದುಕೊಳ್ಳುವ ಔಷಧಿ ತೆಗೆದುಕೊಳ್ಳಲು ನಿರ್ಧರಿಸಿದ
ಜೋ ಬದುಕುಳಿಯುವಂತಹ ಸಾಧ್ಯತೆಯು ಶೇ.1ರಷ್ಟು ಮಾತ್ರ ಇತ್ತು. ಏನಾದರೂ ಪವಾಡ ನಡೆದರೆ ಮಾತ್ರ ಆತ ಜೀವನ ಸಾಗಿಸಬಹುದಿತ್ತು. ಇದರಿಂದ ಆತ ನಾಯಿಗಳ ಕೀಟ ಓಡಿಸಲು ಬಳಸುವಂತಹ ಫೆನ್ಬೆಂಡಜೋಲ್ ಸೇವಿಸಲು ನಿರ್ಧಾರ ಮಾಡಿದ.

ಮೂರು ತಿಂಗಳ ಕಾಲ ಸೇವಿಸಿದ
ಆತ ಈ ಔಷಧಿಯನ್ನು ಮೂರು ತಿಂಗಳ ಕಾಲ ಸೇವನೆ ಮಾಡಿದ. ಇದರೊಂದಿಗೆ ವಿಟಮಿನ್ ಇ ಸಪ್ಲಿಮೆಂಟ್, ಸಿಬಿಡಿ ಮತ್ತು ಕರ್ಕ್ಯುಮಿನ್ ಸೇವನೆ ಮಾಡಿದ. ಆತ ಈಗ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿದ್ದಾರೆ. ಆದರೆ ಇದನ್ನು ಪ್ರಚಾರ ಮಾಡಲ್ಲವೆಂದು ಹೇಳುತ್ತಿದ್ದಾರೆ. ಆದರೆ ತನ್ನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಅದನ್ನು ನಮಗೆ ಬರೆದು ತಿಳಿಸಿ.



Click it and Unblock the Notifications
